ಜೂ.ಎನ್‌ಟಿಆರ್ ಮದುವೆ ಖರ್ಚು ₹100 ಕೋಟಿ: ಅಥಿತಿಗಳ ಲೆಕ್ಕ ಕೇಳಿದ್ರೆ ತಲೆ ತಿರುಗುತ್ತೆ!

ಸೌತ್ ಸಿನಿಮಾರಂಗದ ಸೂಪರ್ ಸ್ಟಾರ್ ನಟರಲ್ಲಿ ನಟ ಜೂ.ಎನ್‌ಟಿಆರ್ ಕೂಡ ಒಬ್ಬರು. ಜೂ.ಎನ್‌ಟಿಆರ್ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟು ಸೂಪರ್ ಸ್ಟಾರ್ ಪಟ್ಟದಲ್ಲಿ ಕೂತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ನಟರಲ್ಲಿ ಜೂ.ಎನ್‌ಟಿಆರ್ ಕೂಡ ಒಬ್ಬರು.

ಜೂ.ಎನ್‌ಟಿಆರ್ ಸಿನಿಮಾಗಳಿಗೆ ಕೋಟಿ ಕೋಟಿ ಬಂಡವಾಳ ಹಾಕಲಾಗುತ್ತದೆ. ಅದ್ಧೂರಿಯಾಗಿ ಜೂ.ಎನ್‌ಟಿಆರ್ ಸಿನಿಮಾಗಳು ನಿರ್ಮಾಣವಾಗುತ್ತವೆ. ಇನ್ನು ಜೂ.ಎನ್‌ಟಿಆರ್ ಸಿನಿಮಾವೊಂದು ಬರ್ತಿದೆ ಅಂತ ಹೇಳಿದರೆ ಅವರ ಅಭಿಮಾನಿ ಬಳಗ ಅದಕ್ಕಾಗಿ ಮುಗಿಬಿದ್ದು ಕಾಯುತ್ತಿರುತ್ತದೆ. ಈ ನಟನೆಗೆ ಅಷ್ಟು ದೊಡ್ಡ ಅಭಿಮಾನಿ ಬಳಗ ಇದೆ.

ಸದ್ಯ ಜೂ.ಎನ್‌ಟಿಆರ್ ಅಭಿಮಾನಿಗಳ ಬಗ್ಗೆ ಮಾತನಾಡುವುದಕ್ಕೆ ಕಾರಣ ಅವರ ಮದುವೆ ಸಮಾರಂಭ. ಹೌದು ಜೂ.ಎನ್‌ಟಿಆರ್ ಮದುವೆಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹರಿದು ಬಂದಿದ್ದರು. ಅದಕ್ಕಾಗಿ ಅವರು ಖರ್ಚು ಮಾಡಿದ ಹಣ ನೂರು ಕೋಟಿ. ಈ ಬಗ್ಗೆ ಸ್ವಾರಸ್ಯಕರ ಸಂಗತಿ ಇಲ್ಲಿದೆ ಮುಂದೆ ಓದಿ...

ಜೂ.ಎನ್‌ಟಿಆರ್ ಅವ್ರದ್ದು ₹100 ಕೋಟಿ ಮದುವೆ!

ಜೂ.ಎನ್‌ಟಿಆರ್ ಅವ್ರದ್ದು ₹100 ಕೋಟಿ ಮದುವೆ!

ನಟ ಜೂ.ಎನ್‌ಟಿಆರ್ ಎನ್‌ಟಿಆರ್ ಮದುವೆ ಆಗಿ ಹಲವು ವರ್ಷಗಳು ಕಳೆದು ಹೋಗಿವೆ. ಅದರೆ ಈಗ ಮದುವೆ ಬಗ್ಗೆ ಸ್ವಾರಸ್ಯಕರವಾದ ಸಂಗತಿ ಒಂದು ಹರಿದಾಡುತ್ತಿದೆ. ಮದುವೆ ಆದರೆ, ಅದರಲ್ಲೂ ಸ್ಟಾರ್ ನಟರ ಮದುವೆ ಅಂದರೆ ಅದು ಅದ್ಧೂರಿಯಾಗೇ ಇರುತ್ತೆ. ಹಾಗಾಗಿ ಅದ್ಧೂರಿ ಮದುವೆಗಳ ಖರ್ಚಿನ ಲೆಕ್ಕವೂ ಸರಿಯಾಗಿ ಸಿಗುವುದಿಲ್ಲ. ಆದರೆ ನಟ ಜೂ.ಎನ್‌ಟಿಆರ್ ಮದುವೆಗೆ ₹100 ಕೋಟಿ ಖರ್ಚು ಮಾಡಲಾಗಿದೆ ಎನ್ನವ ಸುದ್ದಿ ಈಗ ಹರಿದಾಡುತ್ತಿದೆ.

JrNTR ಮದುವೆಯಲ್ಲಿ 15 ಸಾವಿರ ಅತಿಥಿಗಳು!

JrNTR ಮದುವೆಯಲ್ಲಿ 15 ಸಾವಿರ ಅತಿಥಿಗಳು!

ಜೂ.ಎನ್‌ಟಿಆರ್ ಮದುವೆಯಲ್ಲಿ ಸಾವಿರಾರು ಮಂದಿ ಭಾಗಿ ಆಗಿದ್ದರು. ವರದಿಯ ಪ್ರಕಾರ, ಒಟ್ಟು 15 ಸಾವಿರ ಮಂದಿ ಭಾಗಿ ಆಗಿದ್ದರು. ಈ ಪೈಕಿ 12 ಸಾವಿರ ಜನ ಜೂ.ಎನ್‌ಟಿಆರ್ ಅಭಿಮಾನಿಗಳು ಎಂದರೆ ನಂಬಲೇ ಬೇಕು. ಜೂ.ಎನ್‌ಟಿಆರ್‌ಗೆ ಅಷ್ಟೊಂದು ದೊಡ್ಡ ಮಟ್ಟದ ಕ್ರೇಜ್ ಇದೆ. ಈ ಕಾರಣಕ್ಕೆ ಮದುವೆಯಲ್ಲಿ 12 ಸಾವಿರ ಅಭಿಮಾನಿಗಳು ಭಾಗಿಯಾಗಿದ್ದರು ಎನ್ನುವುದು ಕೂಡ ದಾಖಲೆ ಎನ್ನುತ್ತಿದೆ ಟಾಲಿವುಡ್.

2011ರಲ್ಲಿ JrNTR ಮದುವೆ!

2011ರಲ್ಲಿ JrNTR ಮದುವೆ!

2011ರಲ್ಲಿ ನಟ ಜೂ.ಎನ್‌ಟಿಆರ್ ಮದುವೆ ನೆರವೇರಿದೆ. ಲಕ್ಷ್ಮಿ ಪ್ರಣತಿ ಜೊತೆಗೆ ಜೂ.ಎನ್‌ಟಿಆರ್ ಮದುವೆ ಆಗಿದ್ದಾರೆ. ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಮದುವೆ ಮಾಡಲಾಯಿತು. ಈಗ ಈ ದಂಪತಿಗಳಿಗೆ ಇಬ್ಬರು ಮದ್ದಾದ ಮಕ್ಕಳು ಇದ್ದಾರೆ. 10 ವರ್ಷದ ಹಿಂದೆಯೇ ಮದುವೆಗಾಗಿ ₹100 ಕೋಟಿ ಖರ್ಚು ಮಾಡಲಾಗಿದೆ ಎಂದರೆ ಸಾಮಾನ್ಯ ವಿಚಾರ ಅಲ್ಲ.

ಪತ್ನಿ ವಿಚಾರದಲ್ಲಿ JrNTR ಮೇಲೆ ದೂರು!

ಪತ್ನಿ ವಿಚಾರದಲ್ಲಿ JrNTR ಮೇಲೆ ದೂರು!

ನಟ ಜೂ.ಎನ್‌ಟಿಆರ್ ಮದುವೆ ವಿಚಾರದಲ್ಲಿ ಕೂಡ ಸಾಕಷ್ಟು ಸುದ್ದಿಯಾಗಿದ್ದರು. ಒಮ್ಮೆ ಮದುವೆಗೆ ತಯಾರಿ ಮಾಡಿಕೊಂಡು, ಮದುವೆ ರದ್ದು ಮಾಡಿದ್ದರು. ಜೂ.ಎನ್‌ಟಿಆರ್ ಪತ್ನಿ ಲಕ್ಷ್ಮಿಗೆ 17 ವರ್ಷದವರಿದ್ದಾಗಲೇ ಮದುವೆ ತಯಾರಿ ನಡೆದಿತ್ತು. ಹಾಗಾಗಿ ವಕೀಲರೊಬ್ಬರು ಈ ಬಗ್ಗೆ ದೂರು ದಾಖಲಿಸಿದರು. ಬಳಿಕ ಒಂದು ವರ್ಷ ಬಿಟ್ಟು ಮದುವೆ ಆಯ್ತು ಈ ಜೋಡಿ.

More from Filmibeat

English summary
Shocking, Do You Junior NTR Wedding Cost Is Rs 100 Crore And 15,000 Guests Attended The Wedding
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X