ನ್ಯಾಷನಲ್ ಕ್ರಶ್ ಉಟ್ಟ ಈ ಸೀರೆ ದರ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ: ರಶ್ಮಿಕಾ ಸೀರೆ ಬೆಲೆ ಇಷ್ಟೊಂದಾ..?
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ವೃತ್ತಿ ಬದುಕಿನಲ್ಲಿ ಅತೀ ದೊಡ್ಡ ಯಶಸ್ಸು ಸಿಕ್ಕಿದೆ. ರಣ್‌ಬೀರ್ ಕಪೂರ್ ಜೊತೆ ನಟಿಸಿದ ರಶ್ಮಿಕಾ ಮಂದಣ್ಣ ಬಾಲಿವುಡ್‌ನ ಲಕ್ಕಿ ಹೀರೋಯಿನ್ ಆಗಬಿಟ್ಟಿದ್ದಾರೆ. ಹಿಂದಿ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭಿಸಿದ ಮೇಲಂತೂ ಅಭಿಮಾನಿಗಳ ಸಂಖ್ಯೆಯಲ್ಲಿ ಗಣನೀಯ ಮಟ್ಟದಲ್ಲಿ ಏರಿಕೆಯಾಗಿದೆ.
ಕನ್ನಡ ಚಿತ್ರರಂಗದಿಂದ ವೃತ್ತಿ ಬದುಕು ಆರಂಭಿಸಿದ ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ಸದ್ದು ಮಾಡಿದ್ದರು. ಟಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟು ಟಾಪ್ ಪಟ್ಟಕ್ಕೆ ಏರಿದ್ದರು. ಟಾಲಿವುಡ್‌ನಲ್ಲೂ ಗೆಲ್ಲುತ್ತಿದ್ದಂತೆ ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಮೊದಲ ಎರಡು ಸಿನಿಮಾ ಸದ್ದು ಮಾಡದೆ ಹೊರಟು ಹೋಯ್ತು. ಆದರೆ, ಮೂರನೇ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದೆ.

ಇಲ್ಲಿಂದ ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ರಶ್ಮಿಕಾ ಮಂದಣ್ಣ ಬಗ್ಗೆ ಕ್ರೇಜ್ ಹೆಚ್ಚಾಗಿದೆ. ಹೀಗಾಗಿ ರಶ್ಮಿಕಾ ಮಂದಣ್ಣರನ್ನು ಫಾಲೋ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಅವರ ಪ್ರತಿ ಹೆಜ್ಜೆಯನ್ನು ಫಾಲೋ ಮಾಡುತ್ತಿದ್ದಾರೆ. ಇನ್ನೊಂದು ಕಡೆ ರಶ್ಮಿಕಾ ಮಂದಣ್ಣ ಸಿನಿಮಾದಿಂದಷ್ಟೇ ಅಲ್ಲ, ಅವರ ಡ್ರೆಸ್ಸಿಂಗ್ ಸೆನ್ಸ್‌ನಿಂದಲೂ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ತಿಳಿ ಗುಲಾಬಿ ಬಣ್ಣದ ಸೀರೆಯುಟ್ಟ ಫೋಟೊವನ್ನು ಹಂಚಿಕೊಂಡಿದ್ದರು. ಆ ಮೇಲೆ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ. ಸೀರೆಯ ಬೆಲೆ ಎಷ್ಟು ಅಂತ ಹುಡುಕಾಡಿದ್ದಾರೆ. ಅಷ್ಟಕ್ಕೂ ಆ ಸೀರೆಯ ಬೆಲೆ ಎಷ್ಟು ಗೊತ್ತಾ?
ರಶ್ಮಿಕಾ ಮಂದಣ್ಣ ಗ್ಲಾಮರ್ ಡ್ರೆಸ್ ತೊಟ್ಟು ಕ್ಯಾಮರಾಗೆ ಪೋಸ್ ಕೊಡುವುದಕ್ಕೂ ಸೈ. ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಮಿಂಚುವುದಕ್ಕೂ ಸೈ. ಎರಡೂ ಬಗೆಯ ಕಾಸ್ಟ್ಯೂಮ್‌ಗಳಲ್ಲಿ ಅಭಿಮಾನಿಗಳ ಮನಗೆಲ್ಲುತ್ತಿರುವ ನಟಿ ರಶ್ಮಿಕಾ ಮಂದಣ್ಣ. ಈಗ 'ಪುಷ್ಪ' ನಟಿ ಹಂಚಿಕೊಂಡಿರುವ ಸೀರೆಯ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೆಣ್ಣು ಮಕ್ಕಳು ಸೀರೆಯ ಬೆಲೆಯನ್ನು ಹುಡುಕಾಡುವುದಕ್ಕೆ ಶುರು ಮಾಡಿದ್ದಾರೆ.

'ಅನಿಮಲ್' ನಟಿ ರಶ್ಮಿಕಾ ಮಂದಣ್ಣ ಡಿಸೈನರ್ ಸೀರೆಗೆ ಡೀಪ್ ನೆಕ್‌ಲೈನ್ ಇರುವ ಸ್ಲೀವ್ ಲೆಸ್ ಬ್ಲೌಸ್ ತೊಟ್ಟಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೊಟ್ಟ ಈ ಸೀರೆಯನ್ನು ಬಾಲಿವುಡ್‌ನ ಸೆಲೆಬ್ರೆಟಿ ಡಿಸೈನರ್ ಸಾವನ್ ಗಾಂಧಿ ಡಿಸೈನ್ ಮಾಡಿದ್ದಾರೆ. ಇದರ ಬೆಲೆ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ. ಈಗಾಗಲೇ ವರದಿಯಾಗಿರುವ ಪ್ರಕಾರ, ರಶ್ಮಿಕಾ ಮಂದಣ್ಣ ಧರಿಸಿದ್ದ ಈ ಡಿಸೈನರ್ ಸೀರೆಯ ಬೆಲೆ ಬರೋಬ್ಬರಿ 1,59,000 ರೂಪಾಯಿ. ಹೆಣ್ಣು ಮಕ್ಕಳಿಗೆ ಸೀರೆ ಮೇಲೆ ಏನೋ ಒಂದು ತರ ವ್ಯಾಮೋಹ. ಆದರೆ, ಈ ಸೀರೆಯ ದುಬಾರಿ ಬೆಲೆಯನ್ನು ಕೇಳಿದ ಬಳಿಕ ಮನಸ್ಥಿತಿ ಹೇಗಿರುತ್ತೋ.. ಗೊತ್ತಿಲ್ಲ.
ಇನ್ನು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಅಭಿಮಾನಿಯೊಬ್ಬರು ಈಕೆಯನ್ನು ಮದುವೆ ಆಗುವ ಹುಡುಗ 'VD'(ವೆರಿ ಡೇರಿಂಗ್) ಆಗಿರಬೇಕು ಎಂದು ಬರೆದು ಪೋಸ್ಟ್ ಮಾಡಿದ್ದರು. ಆ ಪೋಸ್ಟ್‌ಗೆ ರಶ್ಮಿಕಾ ಮಂದಣ್ಣ ಸತ್ಯವಾದ ಮಾತು ಎಂದು ಹೇಳಿದ್ದರು. ಹೀಗೆ ಪ್ರತಿಕ್ರಿಯೆ ನೀಡುತ್ತಿದ್ದಂತೆ ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್ ಆಗಿದ್ದರು. ಕೆಲವರು 'VD'ಅಂದರೆ, ವಿಜಯ ದೇವರಕೊಂಡ. ಅವರನ್ನೇ ಮದುವೆ ಆಗುವುದು ಅಂತೆಲ್ಲ ಕಮೆಂಟ್ ಮಾಡಿದ್ದರು.
ಇನ್ನು ರಶ್ಮಿಕಾ ಮಂದಣ್ಣ ಸಿನಿಮಾಗಳ ವಿಚಾರಕ್ಕೆ ಬರೋದಾದರೆ, ಕೈಯಲ್ಲಿ ಮೂರು ಸಿನಿಮಾಗಳನ್ನಿಟ್ಟುಕೊಂಡಿದ್ದಾರೆ. ಅಲ್ಲು ಅರ್ಜುನ್ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2' ದಲ್ಲಿ ಶ್ರೀವಲ್ಲಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಮತ್ತೊಂದು ತೆಲುಗು ಸಿನಿಮಾ 'ದಿ ಗರ್ಲ್‌ಫ್ರೆಂಡ್' ಹಾಗೂ ಹಿಂದಿಯಲ್ಲಿ 'ಛಾವ' ಅನ್ನೋ ಸಿನಿಮಾಗಳಿವೆ. ಸದ್ಯಕ್ಕೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ.


Click it and Unblock the Notifications











