ಸಮಂತಾ ಬಳಿ ಇರುವ ಅತ್ಯಂತ ದುಬಾರಿ ವಸ್ತುಗಳಿವು: ಕಿವಿಯೋಲೆಗೆ ಲಕ್ಷ, ಲಕ್ಷ ಬೆಲೆ!

ಇತ್ತೀಚೆಗೆ ನಟಿ ಸಮಂತಾ ಸದಾ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ವಿಚ್ಛೇದನದ ಬಳಿಕ ಅಂತು ಸಮಂತಾ ಏನು ಮಾಡಿದರೂ ಸುದ್ದಿ ಆಗುತ್ತೆ. ಜನರಿಗೂ ಕೂಡ ಸಮಂತಾ ಬಗ್ಗೆ ತಿಳಿದುಕೊಳ್ಳುಲು ಎಲ್ಲಿಲ್ಲದ ಆಸಕ್ತಿ. ಸಮಂತಾ ಫ್ಯಾಷನ್ ಲೋಕದಲ್ಲಿ ಸದಾ ಒಂದಲ್ಲಾ ಒಂದು ಪ್ರಯೋಗ ಮಾಡುತ್ತಾ ಇರುತ್ತಾರೆ.

ಸಿನಿಮಾ ತಾರೆಯರಿಗೆ ಅಧಿಕ ಬೆಲೆಯ ಬಟ್ಟೆ ತೊಡುವುದು, ಅಧಿಕ ಬೆಲೆಯ ವಸ್ತುಗಳನ್ನು ಉಪಯೋಗಿಸುವುದು ಕೂಡ ಅವರಿಗೆ ಪ್ರತಿಷ್ಠೆಯ ವಿಚಾರ. ಹಾಗಾಗಿ ನಟಿಯರು ಆಗಾಗ ತಮ್ಮ ದುಬಾರಿ ಬಟ್ಟೆಗಳ ಮೂಲಕ ಸದ್ದು ಮಾಡುತ್ತಾ ಇರುತ್ತಾರೆ. ನಟಿ ಸಮಂತಾ ಸದ್ಯ ಹೆಚ್ಚು ಬೇಡಿಕೆ ಇರುವ ನಟಿಯಾಗಿದ್ದಾರೆ. ಹಾಲಿವುಡ್, ಬಾಲಿವುಡ್ ಸಿನಿಮಾಗಳನ್ನು ಮಾಡುತ್ತಾ ಇದ್ದಾರೆ.

ಸಮಂತಾ ಕ್ಯಾಮೆರಾ ಕಣ್ಣಿಗೆ ಬಿದ್ದಾಗಲೆಲ್ಲಾ ಹೊಸ, ಹೊಸ ಕಾಸ್ಟ್ಯೂಂ ಧರಿಸಿ ಮಿಂಚುತ್ತಾರೆ. ಸಮಂತಾ ಹೆಚ್ಚಾಗಿ ಅತಿ ದುಬಾರಿ ಬೆಲೆಯ ಕಾಸ್ಟ್ಯೂಂ ತೊಡುತ್ತಾರೆ. ಸಮಂತಾ ಹಾಕಿಕೊಳ್ಳುವ ಆ್ಯಕ್ಸಸರೀಸ್ ಕೂಡ ಅತ್ಯಂತ ದುಬಾರಿ ಬೆಲೆಯುಳ್ಳವು. ಅವುಗಳಲ್ಲಿ ಕೆಲವೊಂದು ದುಬಾರಿ ವಸ್ತುಗಳ ಬಗ್ಗೆ ಮಾಹಿತಿ ಇಲ್ಲಿ ಮುಂದೆ ಓದಿ...

ಅರ್ಧ ಲಕ್ಷ ಬೆಲೆಯ ಸರಳ ಉಡುಪು!

ಅರ್ಧ ಲಕ್ಷ ಬೆಲೆಯ ಸರಳ ಉಡುಪು!

ನಟಿ ಸಮಂತಾ ಅವರು ಹಸಿರು, ಹಳದಿ ಬಣ್ಣ ಮಿಶ್ರಣ ಸ್ಟ್ರಾಪಿ ಉಡುಪನ್ನು ಧರಿಸಿದ್ದರು. ಆ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸ್ಕರ್ಟ್ ಮತ್ತು ಎರಡು ಲೇಯರ್‌ನ ಟಾಪ್ ಇದು. ಈ ಡ್ರೆಸನ್ನು 'ಕೆಂದ್ರ ಡುಪ್ಲ್ಯಾಂಟಿಯರ್' ವಿನ್ಯಾಸಗೊಳಿಸಿದೆ. ಸರಳವಾಗಿ ಕಾಣುವ ಈ ಡ್ರೆಸ್ ಬೆಲೆ 50,837 ರೂ. ಸಮಂತಾಳ ಈ ಫೋಟೊ ಮತ್ತು ಡ್ರೆಸ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

ಲಕ್ಷ, ಲಕ್ಷ ಬೆಲೆಯ ಕಿವಿಯೋಲೆ!

ಲಕ್ಷ, ಲಕ್ಷ ಬೆಲೆಯ ಕಿವಿಯೋಲೆ!

ಸಮಂತಾ ಹಾಕಿರುವ ಬಟ್ಟೆಗಳು ಮಾತ್ರ ದುಬಾರಿ ಅಲ್ಲ. ಅವರು ಹಾಕುವ ಕಿವಿಯೋಲೆ ಕೂಡ ಅಷ್ಟೆ ದುಬಾರಿ. ದುಬಾರಿ ಅಂದರೆ ಸಾವಿರ ಅಲ್ಲ, ಲಕ್ಷ, ಲಕ್ಷ ಬೆಲೆ. ಆದರೆ ಅದು ಚಿನ್ನದ, ವಜ್ರದ ಕಿವಿಯೋಲೆ ಅಲ್ಲ. ಸಹಜವಾದ ಬ್ರ್ಯಾಂಡೆಡ್ ಈ ಕಿವಿಯೋಲೆಯೇ ಬಲು ದುಬಾರಿ. ಚಾನೆಲ್ ಕಂಪನಿಯ ಈ ಕಿವಿಯೋಲೆಗಳ ಬೆಲೆ ಸುಮಾರು 2 ಲಕ್ಷದ 30 ಸಾವಿರ ರೂ. ಇನ್ನು ಬೆಲ್ಟ್‌ಗೂ ಸಮಂತಾ ದುಬಾರಿ ಬೆಲೆ ತೆರುತ್ತಾರೆ. ಈ ಫೊಟೋದಲ್ಲಿ ಸಮಂತಾ ಧರಿಸಿರುವ ಗುಚ್ಚಿ ಕಂಪನಿಯ ಮಿಷನ್ ವ್ಯಾಲೆಂಟಿನೋ ಬೆಲ್ಟ್ ಬೆಲೆ ಸುಮಾರು ರೂ. 72,000.

ದುಬಾರಿ ಬ್ಯಾಗ್‌ಗಳನ್ನು ಹೊಂದಿರುವ ನಟಿ ಸಮಂತಾ!

ದುಬಾರಿ ಬ್ಯಾಗ್‌ಗಳನ್ನು ಹೊಂದಿರುವ ನಟಿ ಸಮಂತಾ!

ಇನ್ನು ಸಮಂತಾ ಬಳಿ ಇರುವ ಬ್ಯಾಗ್‌ಗಳ ಬೆಲೆ ಕೂಡ ಲಕ್ಷ, ಲಕ್ಷ. ಲೂಯಿಸ್ ವಿಟಾನ್ ಕಂಪನಿಯ ಈ ಸೈಡ್ ಬ್ಯಾಗ್ ನಲ್ಲಿ ಸಮಂತಾ ಹೆಚ್ಚು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ನೋಡಲು ಸರಳವಾಗಿ ಸರಳವಾಗಿ ಕಾಣುವ ಈ ಬ್ರ್ಯಾಂಡೆಡ್ ಬ್ಯಾಗ್ ಬೆಲೆ 2 ಲಕ್ಷದ 17 ಸಾವಿರ ಎಂದರೆ ನಂಬಲೇ ಬೇಕು. ಇನ್ನು ಈ ಗುಲಾಬಿ ಬಣ್ಣದ ಸ್ಲಿಂಗ್ ಬ್ಯಾಗ್ ಬೆಲೆ 1 ಲಕ್ಷದ 95 ಸಾವಿರ. ಇದು ಗುಚ್ಚಿ ಕಂಪನಿಯ ಬ್ಯಾಗ್.

ಸದ್ದು ಮಾಡಿತ್ತು ಸಮಂತಾ ಲಕ್ಷ ಬೆಲೆಯ ಶೂ!

ಸದ್ದು ಮಾಡಿತ್ತು ಸಮಂತಾ ಲಕ್ಷ ಬೆಲೆಯ ಶೂ!

ನಟಿ ಸಮಂತಾ ಬಳಿ ಲಕ್ಷ, ಲಕ್ಷ ಬೆಲೆಯ ಶೂಗಳು ಕೂಡ ಇವೆ. ಅವುಗಳಲ್ಲಿ ಕೆಲವು ಕ್ಯಾಮೆರಾ ಕಣ್ಣಿಗೆ ಬಿದ್ದಿವೆ. ಕಲೆದ ಬಾರಿ ಸಮಂತಾ ತಮ್ಮ ಅತ್ಯಂತ ದುಬಾರಿ ಬೆಲೆಯ ಶೂ ಒಂದರ ಪೋಟೊವನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಡಿಯೋರ್ ಸ್ಲಿಂಗ್ ಬ್ಯಾಕ್ ಶೂ ಫೋಟೋ ಹಂಚಿಕೊಂಡಿದ್ದರು. ಈ ಶೂ ಬೆಲೆ ಸುಮಾರು ರೂ. 1,23,000.

More from Filmibeat

English summary
Do You Know Samantha's Costliest Dress, Bag, And Accessories, She Spent Lakhs For Simple Dress,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X