ಪ್ರಭಾಸ್ ಲವ್ ಫೇಲ್ಯೂರ್; ಯಂಗ್ ರೆಬಲ್ ಸ್ಟಾರ್ ಪ್ರಪೋಸ್ ರಿಜೆಕ್ಟ್ ಮಾಡಿದ್ಯಾರು?
ತೆಲುಗು ನಟ ಪ್ರಭಾಸ್‌ಗೆ ದೇಶ, ವಿದೇಶಗಳಲ್ಲಿ ಅಭಿಮಾನಿಗಳಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಉತ್ತರಭಾರತದಲ್ಲಿ ಕೂಡ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಪ್ರಭಾಸ್ ಜೊತೆ ನಟಿಸೋಕೆ ಸ್ಟಾರ್ ನಟಿಯರು ಕಾಯುತ್ತಿದ್ದಾರೆ. ವಯಸ್ಸು 40 ದಾಟಿದ್ರು ಬಾಹುಬಲಿ ನಟ ಮದುವೆ ಬಗ್ಗೆ ಮಾತ್ರ ಯೋಚಿಸಿದಂತೆ ಕಾಣುತ್ತಿಲ್ಲ.
ಪ್ರಭಾಸ್ ಮದುವೆಗಾಗಿ ದೊಡ್ಡಪ್ಪ ಕೃಷ್ಣಂರಾಜು ಸಾಕಷ್ಟು ಸಂಬಂಧಗಳನ್ನು ನೋಡುವ ಪ್ರಯತ್ನ ಮಾಡಿದ್ದರು. 'ಬಾಹುಬಲಿ' ಸರಣಿ ಸಿನಿಮಾ ಮುಗಿದ ಬಳಿಕ ಮದುಚೆ ಆಗುತ್ತೇನೆ ಎಂದು ಡಾರ್ಲಿಂಗ್ ಹೇಳಿದ್ದರು. ಆದರೆ ಅದು ಸಾಧ್ಯವಾಗಲೇಯಿಲ್ಲ. ಇನ್ನು ಪ್ರಭಾಸ್- ಅನುಷ್ಕಾ ಶೆಟ್ಟಿ ಮದುವೆ ಆಗುತ್ತಾರೆ ಎಂದು ಸಾಕಷ್ಟು ಬಾರಿ ಗುಲ್ಲಾಗಿತ್ತು. ಆದರೆ ಅದು ನಿಜವಾಗಲೇ ಇಲ್ಲ.

ಟಾಲಿವುಡ್ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪ್ರಭಾಸ್‌ಗೆ ಸಾಕಷ್ಟು ಮದುವೆ ಪ್ರಪೋಸಲ್ ಬಂದಿತ್ತು ಎಂದು ಹಿಂದೆ ವರದಿಯಾಗಿತ್ತು. ಹಲವು ಮದುವೆ ಪ್ರಪೋಸಲ್‌ಗಳು ಬರುತ್ತಿವೆ, ನಾವು ನೋಡುತ್ತಿದ್ದೇವೆ, ಆದಷ್ಟು ಬೇಗ ಮದುವೆ ಅಂತ ಕೃಷ್ಣಂರಾಜು ಸಹ ಹೇಳಿದ್ದರು. ಆದರೆ ಅವರ ಅಗಲಿಕೆ ಬಳಿಕ ಮತ್ತೆ ಪ್ರಭಾಸ್ ಮದುವೆ ವಿಚಾರ ಗೌಣವಾಯಿತು. ಬರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಯಂಗ್ ರೆಬಲ್ ಸ್ಟಾರ್ ಬ್ಯುಸಿಯಾಗಿಬಿಟ್ಟರು.
ಪ್ರಭಾಸ್ ಜಾತಕದ ಪ್ರಕಾರ ಮದುವೆ ಸಾಧ್ಯವಿಲ್ಲ ಎಂದು ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿ ಹೇಳಿಕೆ ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಅಭಿಮಾನಿಗಳು ಕೂಡ ನೆಚ್ಚಿನ ನಟನ ಮದುವೆ ಯಾವಾಗ? ಎಂದು ಕೇಳಿ ಕೇಳಿ ಸುಸ್ತಾಗಿದ್ದಾರೆ. ಪ್ರಭಾಸ್‌ಗೆ ಸಾಕಷ್ಟು ಮದುವೆ ಪ್ರಪೋಸಲ್‌ಗಳು ಬಂದಿರುವುದು ಗೊತ್ತು. ಆದರೆ ಪ್ರಭಾಸ್‌ಗೆ ಲವ್ ಫೇಲ್ಯೂರ್ ಕೂಡ ಆಗಿತ್ತು. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದರು.

ಕಾಲೇಜು ದಿನಗಳಲ್ಲಿ ನಾನು ಒಂದು ಹುಡುಗಿಗೆ ಪ್ರಪೋಸ್ ಮಾಡಿದ್ದೆ. ಆದರೆ ಆಕೆ ಒಪ್ಪಲಿಲ್ಲ ಎಂದು ಪ್ರಭಾಸ್ ಹಳೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಆಕೆ ಯಾರು? ಹೆಸರೇನು? ಎನ್ನುವುದು ಬೇಡ. ನಾನು ಕೆಟ್ಟದಾಗಿ ಪ್ರಪೋಸ್ ಮಾಡಿದ್ದೆ ಬಿಡಿ ಎಂದು ಹೇಳಿಕೊಂಡಿದ್ದರು. ಮತ್ತೊಂದು ಸಂದರ್ಶನದಲ್ಲಿ ಸಾಕಷ್ಟು ಹುಡುಗಿಯರು ನನ್ನನ್ನು ರಿಜೆಕ್ಟ್ ಮಾಡಿದ್ದರು ಎಂದು ಪ್ರಭಾಸ್ ನೆನಪಿಸಿಕೊಂಡಿದ್ದರು.
ನೀವು ಸೆಲೆಬ್ರಿಟಿ ಆದ ನಂತರ ಯಾರೂ ತಿರಸ್ಕರಿಸುತ್ತಿರಲಿಲ್ಲ ಅಲ್ಲವೇ? ಎಂದು ಕೇಳಿದ ಪ್ರಶ್ನೆಗೆ ಪ್ರಭಾಸ್ ಪ್ರತಿಕ್ರಿಯಿಸಿದ್ದು. ಹಾಗೇನು ಇಲ್ಲ. ಯಾವಾಗ ಆದರೂ ಅದು ಸಹಜ ಎಂದಿದ್ದರು. ಈಗ ಏನೇ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎನಿಸಿಕೊಂಡರೂ ಪ್ರಭಾಸ್ ಲವ್ ಪ್ರಪೋಸ್‌ಗಳನ್ನು ಹುಡುಗಿಯರು ತಿರಸ್ಕರಿಸಿದ್ದರು ಎಂದು ಆ ವೀಡಿಯೊ ವೈರಲ್ ಮಾಡಲಾಗುತ್ತಿದೆ.
ಅನುಷ್ಕಾ ಶೆಟ್ಟಿ- ಪ್ರಭಾಸ್ ಮದುವೆ ಆಗಬೇಕು ಎಂದು ಕೆಲ ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. 'ಮಿರ್ಚಿ' ಹಾಗೂ 'ಬಾಹುಬಲಿ' ಸರಣಿಯಲ್ಲಿ ಈ ಜೋಡಿ ಕ್ಲಿಕ್ ಆಗಿತ್ತು. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಗುಸುಗುಸು ಪದೇ ಪದೆ ಕೇಳಿ ಬರುತ್ತಲೇ ಇರುತ್ತದೆ. ಇಬ್ಬರು ಮದುವೆ ಆದರೆ ಹೇಗಿರುತ್ತದೆ ಎಂದು AI ಇಮೇಜ್‌ಗಳು ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು.
ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ಪ್ರಭಾಸ್ ನಟನೆಯ 'ಕಲ್ಕಿ' ಬಿಡುಗಡೆಗೆ ಸಜ್ಜಾಗಿದೆ. ಜೂನ್ 27ಕ್ಕೆ ಸಿನಿಮಾ ತೆರೆಗಪ್ಪಳಿಸುವ ನಿರೀಕ್ಷೆಯಿದೆ. 'ರಾಜಾ ಸಾಬ್' ಎನ್ನುವ ಮತ್ತೊಂದು ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ 'ಸಲಾರ್'-2, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ 'ಸ್ಪಿರಿಟ್' ಚಿತ್ರಗಳಲ್ಲಿ ಯಂಗ್ ರೆಬಲ್ ಸ್ಟಾರ್ ನಟಿಸಲಿದ್ದಾರೆ. 'ಸೀತಾ ರಾಮಂ' ಚಿತ್ರದ ನಿರ್ದೇಶಕ ಹನು ರಾಘವಪುಡಿ ನಿರ್ದೇಶನದಲ್ಲೂ ನಟಿಸಲು ಸೈ ಎಂದಿದ್ದಾರೆ.


Click it and Unblock the Notifications











