For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಧರಿಸಿರುವ ಈ ಶೂ ದುಡ್ಡಲ್ಲಿ ಒಂದು ಮನೆ ತಗೋಬೋದು!

  |

  ಸೂಪರ್‌ ಸ್ಟಾರ್ ನಟರು ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೀತ್ತಾರೆ. ಅದಕ್ಕೆ ತಕ್ಕಂತೆ ಐಷಾರಾಮಿ ಜೀವನ ನಡೆಸುತ್ತಾರೆ. ಟಾಲಿವುಡ್ ಪವರ್ ಸ್ಟಾರ್ ಪವನ್‌ ಕಲ್ಯಾನ್ ಕ್ರೇಜ್, ಚಿತ್ರವೊಂದಕ್ಕೆ ಜನಸೇನಾನಿ ಪಡೆಯುವ ಸಂಭಾವನೆ ಎಷ್ಟು ಎನ್ನುವುದೇ ಗೊತ್ತೇಯಿದೆ. 'ಹರಿಹರ ವೀರಮಲ್ಲು' ಚಿತ್ರದ ಶೂಟಿಂಗ್‌ನಲ್ಲಿ ಪವನ್ ಭಾಗಿಯಾಗಿದ್ದಾರೆ. ಸಿನಿಮಾ ಚರ್ಚೆಯ ವೇಳೆ ರೆಡ್ ಟೀ ಶರ್ಟ್ ಹಾಗೂ ಜೀನ್ಸ್‌ನಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್‌ ಆಗಿ ಪವರ್ ಸ್ಟಾರ್ ಕಾಣಿಸಿಕೊಂಡಿದ್ದಾರೆ.

  ಪವನ್ ಕಲ್ಯಾನ್ ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟಮೇಲೆ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಕಮ್ಮಿ ಆಗಿದೆ. ಸದಾ ಬಿಳಿ ಬಣ್ಣದ ಜುಬ್ಬಾ ಪೈಜಾಮದಲ್ಲೇ ಹೆಚ್ಚು ಕಾಣಿಸಿಕೊಳ್ತಾರೆ. ಆದರೆ ಈ ಹೊಸ ಲುಕ್ ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ. ಬಹಳ ಹ್ಯಾಂಡಮ್‌ ಆಗಿ ಇದ್ಧೀರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದೇ ಗೆಟಪ್‌ನಲ್ಲಿ ಒಂದು ಸಿನಿಮಾ ಮಾಡಿ, 'ಭವದೀಯುಡು ಭಗತ್‌ಸಿಂಗ್' ಇದೇ ಲುಕ್‌ನಲ್ಲಿ ತೋರಿಸಿ ಎಂದು ನಿರ್ದೇಶಕ ಹರೀಶ್ ಶಂಕರ್‌ಗೆ ಮನವಿ ಮಾಡ್ತಿದ್ದಾರೆ.

  ಇನ್ನು ಪವನ್ ಕಲ್ಯಾಣ್ ಧರಿಸಿರುವ ಡ್ರೆಸ್ ಓಕೆ, ಆದರೆ ಅವರು ಧರಿಸಿರುವ ಶೂ ಈಗ ಎಲ್ಲರ ಗಮನ ಸೆಳೀತಿದೆ. ಕಾರಣ ಅದರ ಬೆಲೆ. ಸದ್ಯ ಆ ಶೂ ಬ್ರ್ಯಾಂಡ್ ಹೆಸರು ಏನು ಎನ್ನುವುದನ್ನು ಅಭಿಮಾನಿಗಳು ಪತ್ತೆ ಹಚ್ಚಿದ್ದಾರೆ. ಅದರ ಬೆಲೆ ಗೊತ್ತಾಗಿ ಶಾಕ್ ಆಗಿದ್ದಾರೆ. ಕೋಪನ್ ಹ್ಯಾಗನ್ (ಕೋಪನ್ ಹ್ಯಾಗನ್ CPH460M MMCM) ಬ್ರ್ಯಾಂಡ್‌ನ ಈ ಮಾದರಿ ಶೂ ಬೆಲೆ 11994 ಯುರೋಗಳು. ಅಂದರೆ ಭಾರತದ ರೂಪಾಯಿಗಳಲ್ಲಿ ರೂ. 9.6 ಲಕ್ಷ. ಹೆಚ್ಚು ಕಡಿಮೆ 10 ಲಕ್ಷ ರೂ. ಎನ್ನುತ್ತಿದ್ದಾರೆ. ಈ ಹಣದಲ್ಲಿ ಮಧ್ಯಮ ವರ್ಗದವರು ಒಂದು ಮನೆ ಖರೀದಿಸಬಹುದು ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡ್ತಿದ್ದಾರೆ.

  do-you-know-the-price-of-shoes-pawan-kalyan-wore-at-hari-hara-veera-mallu-film-discussion

  ಚಿತ್ರವೊಂದಕ್ಕೆ ಪವನ್ ಕಲ್ಯಾಣ್ ಅಂದಾಜು 50 ಕೋಟಿ ರೂ. ಸಂಭಾವನೆ ಪಡೀತಾರೆ. ಅದಕ್ಕೆ ತಕ್ಕಂತೆ ಅವರ ಲೈಫ್‌ಸ್ಟೈಲ್ ಇದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಒಂದ್ಕಡೆ ಪಕ್ಷ ಸಂಘಟನೆ ಮಾಡಿ ಮುಂದಿನ ಚುನಾವಣೆಗೆ ತಯಾರಿ ನಡೆಸುತ್ತಿರುವ ಪವರ್ ಸ್ಟಾರ್ ಮತ್ತೊಂದು ಕಡೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಭೀಮ್ಲಾ ನಾಯಕ್' ನಂತರ ಪವನ್ 'ಹರಿಹರ ವೀರಮಲ್ಲು' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ಭವದೀಯುಡು ಭಗತ್‌ಸಿಂಗ್' ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ದಸರಾ ಸಂಭ್ರಮದಲ್ಲಿ ಮತ್ತೊಂದು ಚಿತ್ರಕ್ಕೆ ಅನೌನ್ಸ್ ಆಗುವ ಸಾಧ್ಯೆತೆಯಿದೆ.

  English summary
  Do You Know the Price of shoes Pawan Kalyan Wore at Hari Hara Veera Mallu Film Discussion
  Saturday, October 1, 2022, 19:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X