ನಟಿ ಸಮಂತಾ ಹೊಸ ಪ್ರೀತಿ: ಪ್ರೇಮಿಗಳ ದಿನ ಆಚರಿಸಿದ್ದು ಇವರೊಂದಿಗೆ!
ಫೆಬ್ರವರಿ 14 ಪ್ರೇಮಿಗಳ ದಿನ. ಹಾಗಾಗಿ ಪ್ರೇಮಿಗಳೆಲ್ಲಾ ತಮ್ಮ ಪ್ರೀತಿ ಪಾತ್ರರೊಂದಿಗಿನ ಮಧುರ ಕ್ಷಣಗಳನ್ನು, ಫೋಟೊಗಳನ್ನು, ಸಿಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಹೆಚ್ಚು ಗಮನ ಸೆಳೆದಿದ್ದು ಸಿನಿಮಾ ತಾರೆಯರು. ಚಿತ್ರರಂಗದ ಹಲವು ಸೆಲೆಬ್ರಿಟಿಗಳು ತಮ್ಮ ಪ್ರೀತಿಪಾತ್ರರೊಂದಿಗಿರುವ ಫೋಟೊಗಳನ್ನು ಹಂಚಿಕೊಂಡಿದ್ದರು.
ಈ ಸಾಲಿಗೆ ನಟಿ ಸಮಂತಾ ಕೂಡ ಸೇರಿಕೊಂಡಿದ್ದಾರೆ. ಸಮಂತಾ ಅವರು ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ. ಹಾಗಂತ ಅವರು ಒಬ್ಬರೇ ಈ ಪ್ರೇಮಿಗಳ ದಿನವನ್ನು ಆಚರಣೆ ಮಾಡಿಲ್ಲ. ತಾನು ಹೆಚ್ಚು ಪ್ರೀತಿಸುವವರೊಂದಿಗೆ ವ್ಯಾಲೆಂಟೈನ್ ಡೇ ಆಚರಣೆ ಮಾಡಿದ್ದಾರೆ.
Recommended Video
ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆಸು ಸಮಂತಾ ದೂರ ಆಗಿದ್ದಾರೆ. ಆದರೆ ಹಾಗಂತ ವ್ಯಾಲೆಂನ್‌ಟೈನ್ ಡೇ ಆಚರಿಸುವುದನ್ನು ಮಿಸ್ ಮಾಡಿಲ್ಲ. ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಟೊ ಅದಕ್ಕೆ ಸಾಕ್ಷಿಯಾಗಿದೆ.

'ಪಪ್ಪಿ ಲವ್' ಎಂದು ಪೋಸ್ಟ್ ಹಾಕಿದ ಸಮಂತಾ!
ಸಮಂತಾ ಪ್ರೇಮಿಗಳ ದಿನದ ಪ್ರಯುಕ್ತ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಏನನ್ನು ಹಂಚಿಕೊಳ್ಳುತ್ತಾರೆ ಎನ್ನುವ ಕುತೂಹಲ ಇತ್ತು. ಸಮಂತಾ ಪೋಸ್ಟ್ ಹಂಚಿಕೊಂಡಿದ್ದಾರೆ. ಅದು ತಾನು ಹೆಚ್ಚಾಗಿ ಪ್ರೀತಿಸುವ ನಾಯಿಮರಿಯ ಪೋಸ್ಟ್. ಸದ್ಯ ಸಮಂತಾ ಹೆಚ್ಚಾಗಿ ಸಮಯ ಕಳೆಯುವುದು ತನ್ನ ಮುದ್ದು ನಾಯಿಮರಿಗಳ ಜೊತೆಗೆ. ಅವುಗಳನ್ನು ಸಮಂತಾ ಹೆಚ್ಚಾಗಿ ಪ್ರೀತಿಸುತ್ತಾರೆ. ಹಾಗಾಗಿ ಪಪ್ಪಿ ಲವ್ ಎಂದು ಬರೆದು ಫೊಟೋ ಹಂಚಿಕೊಂಡಿದ್ದಾರೆ.

ಕಳೆದ ಪ್ರೇಮಿಗಳ ದಿನದಂದು ಜೊತೆಗಿದ್ದ ಸಮಂತಾ, ನಾಗಚೈತನ್ಯ!
ನಟಿ ಸಮಂತಾ, ನಾಗಚೈತನ್ಯ ಕಳೆದ ವರ್ಷ ಪ್ರೇಮಿಗಳ ದಿನವನ್ನು ಒಟ್ಟಿಗೆ ಆಚರಿಸಿದ್ದರು. ಇಬ್ಬರು ಒಟ್ಟಿಗೆ ಇರುವ ಫೋಟೊ ಕೂಡ ಹಂಚಿಕೊಂಡಿದ್ದರು ಸಮಂತಾ. ತಮ್ಮ ಪೋಸ್ಟ್‌ಗೆ ಅವರು ಕ್ಯಾಪ್ಷನ್ ಬರೆದುಕೊಂಡಿದ್ದರು. "ನಾಗಚೈತನ್ಯ ಸಿಕ್ಕಿರುವುದು ಅದೃಷ್ಟ, ನಮ್ಮ ಫೋಟೊ ಕೇಳುತ್ತಿದ್ದವರಿಗೆ ಇದು. ಮುಂದಿನ ಫೋಟೋ ಕ್ರಿಸ್ಮಸ್ ಹಬ್ಬಕ್ಕೆ ಬರುತ್ತದೆ. ಬರ್ತ್ ಡೇ ಫೋಟೊ ಹಂಚಿಕೊಳ್ಳುವ ಬಗ್ಗೆ ಇನ್ನು ಅನುಮತಿ ಸಿಕ್ಕಿಲ್ಲ" ಎಂದು ಬರೆದುಕೊಂಡಿದ್ದರು.


Click it and Unblock the Notifications











