twitter
    For Quick Alerts
    ALLOW NOTIFICATIONS  
    For Daily Alerts

    ಪವರ್ ಸ್ಟಾರ್ ಎಂದು ಕರೆಯಬೇಡಿ ಎಂದ ಪವನ್ ಕಲ್ಯಾಣ್: ಕಾರಣ?

    |

    ನಟ ಪುನೀತ್ ರಾಜ್‌ಕುಮಾರ್‌ಗೆ ಪವರ್‌ ಸ್ಟಾರ್ ಎಂದು ಕರೆಯಲಾಗುತ್ತಿದೆ. ತೆಲುಗಿನಲ್ಲಿ ನಟ ಪವನ್ ಕಲ್ಯಾಣ್‌ಗೆ ಪವರ್ ಸ್ಟಾರ್ ಎಂದು ಕರೆಯಲಾಗುತ್ತದೆ.

    ಬಹಳ ವರ್ಷಗಳಿಂದಲೂ ಪವನ್ ಕಲ್ಯಾಣ್ 'ಪವರ್ ಸ್ಟಾರ್' ಬಿರುದಿನಿಂದಲೇ ಖ್ಯಾತರು. ಪವರ್‌ ಫುಲ್ ನಟನೆ, ಪವರ್‌ಫುಲ್ ಆಕ್ಷನ್‌ ದೃಶ್ಯಗಳನ್ನು ನೀಡುವ ಕಾರಣ ಪವನ್ ಕಲ್ಯಾಣ್‌ಗೆ 'ಪವರ್ ಸ್ಟಾರ್' ಎಂದು ಕರೆಯಲಾಗುತ್ತದೆ.

    ನಟರುಗಳಿಗೆ ಅಭಿಮಾನಿಗಳು ಬಿರುದು ನೀಡುವುದು ಸಾಮಾನ್ಯ, ಬಿರುದಿನ ಹೆಸರಿನೊಂದಿಗೆ ನಟರು ಗುರುತಿಸಿಕೊಳ್ಳುವುದು ಸಹ ಸಾಮಾನ್ಯ. ಅಭಿಮಾನಿಗಳು ಕೊಟ್ಟ ಬಿರುದುಗಳು ನಟರಿಗೆ ಅಚ್ಚು-ಮೆಚ್ಚು ಸಹ. ಆದರೆ ಇತ್ತೀಚೆಗೆ ನಟ ಪವನ್ ಕಲ್ಯಾಣ್, 'ಇನ್ನು ಮುಂದೆ ನನ್ನನ್ನು ಪವರ್ ಸ್ಟಾರ್ ಎಂದು ಕರೆಯಬೇಡಿ' ಎಂದು ಅಭಿಮಾನಿಗಳಲ್ಲಿ ಬಹಿರಂಗವಾಗಿ ಮನವಿ ಮಾಡಿದ್ದಾರೆ.

    ಇತ್ತೀಚೆಗಷ್ಟೆ ಅಪಘಾತಕ್ಕೆ ಈಡಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ನಟ ಸಾಯಿ ಧರಮ್ ತೇಜ್‌ರ ಹೊಸ ಸಿನಿಮಾ 'ರಿಪಬ್ಲಿಕ್'ನ ಪ್ರಿರಿಲೀಸ್ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಮಾತನಾಡಲು ಆಗಮಿಸಿದ ಕೂಡಲೇ ನೆರೆದಿದ್ದ ಅಭಿಮಾನಿಗಳು 'ಪವರ್ ಸ್ಟಾರ್, ಪವರ್ ಸ್ಟಾರ್' ಎಂದು ಕೂಗಲು ಆರಂಭಿಸಿದರು. ಇದು ಪವನ್ ಕಲ್ಯಾಣ್‌ಗೆ ಸಿಟ್ಟು ತರಿಸಿತು.

    ನನ್ನನ್ನು ಪವರ್ ಸ್ಟಾರ್ ಎಂದು ಕರೆಯಬೇಡಿ: ಪವನ್

    ನನ್ನನ್ನು ಪವರ್ ಸ್ಟಾರ್ ಎಂದು ಕರೆಯಬೇಡಿ: ಪವನ್

    ''ನನ್ನ ಏಕೆ ಪವರ್ ಸ್ಟಾರ್ ಎಂದು ಕರೆಯುತ್ತೀರಿ. ನನ್ನಲ್ಲಿ ಯಾವ ಪವರ್ (ಅಧಿಕಾರ) ಸಹ ಇಲ್ಲ. ನಿಮ್ಮಿಂದ ಪವರ್ ಸ್ಟಾರ್ ಎಂದು ಕರೆಸಿಕೊಳ್ಳಲು ಅಥವಾ ಸಿಎಂ ಎಂದು ಕರೆಸಿಕೊಳ್ಳಲು ನಾನಿಲ್ಲಿಗೆ ಬಂದಿಲ್ಲ. ನನ್ನನ್ನು ಇನ್ನು ಮುಂದೆ ಯಾರೂ ಪವರ್ ಸ್ಟಾರ್ ಎಂದು ಕರೆಯಬೇಡಿ'' ಎಂದು ಖಾರವಾಗಿಯೇ ನುಡಿದರು ಪವನ್ ಕಲ್ಯಾಣ್.

    ಟೈಟಲ್‌ ಕಾರ್ಡ್‌ಗಳಲ್ಲಿಯೂ ಹೆಸರು ಬಳಕೆ ಇಲ್ಲ

    ಟೈಟಲ್‌ ಕಾರ್ಡ್‌ಗಳಲ್ಲಿಯೂ ಹೆಸರು ಬಳಕೆ ಇಲ್ಲ

    ತಮ್ಮ ಮುಂದಿನ ಸಿನಿಮಾಗಳ ಟೈಟಲ್ ಕಾರ್ಡ್‌ಗಳಲ್ಲಿ ಸಹ ಪವರ್ ಸ್ಟಾರ್ ಎಂದು ಹಾಕಬಾರದು ಎಂದು ಪವನ್ ಕಲ್ಯಾಣ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ತಮ್ಮನ್ನು ಪವರ್ ಸ್ಟಾರ್ ಎಂದು ಕರೆಯಲಾಗುತ್ತದೆ ಆದರೆ ತಮಗೆ ಪವರ್ ಇಲ್ಲ (ಅಧಿಕಾರ) ಪವರ್ ಸ್ಟಾರ್ ಎಂದು ಕರೆಯುವ ಅಭಿಮಾನಿಗಳೇ ತಮಗೆ ಮತ ನೀಡಲಿಲ್ಲ ಎಂಬ ಕಾರಣದಿಂದ ಪವನ್ ಕಲ್ಯಾಣ್ ಹೀಗೆ ಮಾಡಿದ್ದಾರೆ ಎನ್ನಲಾಗಿದೆ. ಯಾರೊ ಜ್ಯೋತಿಷಿಗಳು ಹೇಳಿದ್ದಕ್ಕಾಗಿ ಹೀಗೆ ಮಾಡಿದ್ದಾರೆ ಎಂಬ ಗಾಳಿ ಸುದ್ದಿಯೂ ಹರಿದಾಡುತ್ತಿದೆ.

    ಎರಡು ಕ್ಷೇತ್ರದಲ್ಲಿ ಸೋತ ಪವನ್ ಕಲ್ಯಾಣ್

    ಎರಡು ಕ್ಷೇತ್ರದಲ್ಲಿ ಸೋತ ಪವನ್ ಕಲ್ಯಾಣ್

    ಕಳೆದ ಆಂಧ್ರ ಪ್ರದೇಶ ವಿಧಾನಸಭೆ ಚುನಾನವಣೆಯಲ್ಲಿ ಪವನ್ ಕಲ್ಯಾಣ್ ಎರಡು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಎರಡೂ ಕಡೆ ಸೋತು ಹೋದರು. ಅವರ ಜನಸೇನಾ ಪಕ್ಷ ಕೇವಲ ಒಂದು ಸೀಟು ಗೆಲ್ಲಲಷ್ಟೆ ಶಕ್ತವಾಯಿತು. ಲೋಕಸಭೆ ಚುನಾವಣೆಯಲ್ಲಿ ಸಹ ಪವನ್‌ ಕಲ್ಯಾಣ್‌ರ ಪಕ್ಷ ಒಂದು ಕಡೆ ಸಹ ಚುನಾವಣೆ ಗೆಲ್ಲಲಿಲ್ಲ. ಇದು ಪವನ್ ಕಲ್ಯಾಣ್‌ಗೆ ತೀವ್ರ ಬೇಸರ ತಂದಿದೆ. ಅದಕ್ಕಾಗಿಯೇ ಅಭಿಮಾನಿಗಳಿಗೆ ತಮ್ಮನ್ನು 'ಪವರ್ ಸ್ಟಾರ್' ಎಂದು ಕರೆಯಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಪವನ್ ಕಲ್ಯಾಣ್ ಮುಂದಿನ ಸಿನಿಮಾಗಳು

    ಪವನ್ ಕಲ್ಯಾಣ್ ಮುಂದಿನ ಸಿನಿಮಾಗಳು

    ಪವನ್ ಕಲ್ಯಾಣ್ ಈಗ ರಾಜಕೀಯದಿಂದ ಬಿಡುವು ಪಡೆದು ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪವನ್ ನಟನೆಯ 'ವಕೀಲ್ ಸಾಬ್' ಸಿನಿಮಾ ದೊಡ್ಡ ಹಿಟ್ ಆಯಿತು. ಇದೀಗ 'ಭೀಮ್ಲಾ ನಾಯಕ್' ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಅದು ಜನವರಿ 12ಕ್ಕೆ ಬಿಡುಗಡೆ ಆಗಲಿದೆ. 'ಭೀಮ್ಲಾ ನಾಯಕ್' ಸಿನಿಮಾವು ಮಲಯಾಳಂನ 'ಅಯ್ಯಪ್ಪನುಂ ಕೊಶೀಯುಂ' ಸಿನಿಮಾದ ರೀಮೇಕ್ ಆಗಿದ್ದು, ಸಿನಿಮಾದಲ್ಲಿ ರಾಣಾ ದಗ್ಗುಬಾಟಿ, ಕನ್ನಡತಿ ನಿತ್ಯಾ ಮೆನನ್, ಐಶ್ವರ್ಯಾ ರಾಜೇಶ್, ಸಮುದ್ರಕಿಣಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಚಿತ್ರಕತೆ, ಸಂಭಾಷಣೆಯನ್ನು ತ್ರಿವಿಕ್ರಮ್ ಬರೆದಿದ್ದಾರೆ. ಪ್ರಸ್ತುತ 'ಹರಿ ಹರ ವೀರಮಲ್ಲು' ಹೆಸರಿನ ಐತಿಹಾಸಿಕ ಕತೆಯುಳ್ಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ನಂತರ ಹರೀಶ್ ಶಂಕರ್ ನಿರ್ದೇಶನದ 'ಭಯದೀಯಡು ಭಗತ್‌ಸಿಂಗ್' ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಸುರೇಂದ್ರ ರೆಡ್ಡಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.

    English summary
    Star Telugu actor Pawan Kalyan said do not call me power star ever again, I do not have any power. so do not call me power star or CM.
    Monday, September 27, 2021, 9:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X