ಪದೇ ಪದೇ ಸಿನಿಮಾ ಅಪ್‌ಡೇಟ್ ಅಂದ್ರೆ ಎಲ್ಲಿಂದ ಕೊಡೋದು ಹೇಳಿ.. ನೀವೇ ಅರ್ಥ ಮಾಡ್ಕೊಳ್ಳಿ: ಜ್ಯೂ. ಎನ್‌ಟಿಆರ್‌

RRR ಸಿನಿಮಾ ನಂತರ ಜ್ಯೂ. ಎನ್‌ಟಿಆರ್ ನಟನೆಯ ಯಾವುದೇ ಸಿನಿಮಾ ಸೆಟ್ಟೇರಿಲ್ಲ. ಕೊರಟಾಲ ಶಿವ ನಿರ್ದೇಶನದಲ್ಲಿ ನಟಿಸಬೇಕಿರುವ ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಿದೆ. ಅಭಿಮಾನಿಗಳು ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ನಟ ಜ್ಯೂ. ಎನ್‌ಟಿಆರ್ ಮಾತನಾಡಿದ್ದಾರೆ.

ಸಹೋದರ ಕಲ್ಯಾಣ್ ರಾಮ್ ನಟನೆಯ 'ಅಮಿಗೋಸ್' ಸಿನಿಮಾ ಪ್ರೀ ರಿಲೀಸ್ ಈವೆಂಟ್‌ಗೆ ಅತಿಥಿಯಾಗಿ ತಾರಕ್ ಬಂದಿದ್ದರು. ಈ ವೇಳೆ ನೆರೆದಿದ್ದ ಅಭಿಮಾನಿಗಳಿಂದ ಮುಂದಿನ ಸಿನಿಮಾ ಬಗ್ಗೆ ಹೇಳಿ, ಅಪ್‌ಡೇಟ್ ಕೊಡಿ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜ್ಯೂ. ಎನ್‌ಟಿಆರ್ "ಪ್ರತಿ ದಿನ, ಗಂಟೆ ಗಂಟೆಗೂ ಸಿನಿಮಾ ಅಪ್‌ಡೇಟ್‌ ಕೊಡಿ ಅಂದ್ರೆ ಏನು ಕೊಡೋದು. ನಿಮ್ಮ ಕುತೂಹಲ, ಉತ್ಸಾಹ ಅರ್ಥ ಆಗುತ್ತದೆ. ಆದರೆ ಇದರಿಂದ ನಿರ್ಮಾಪಕರ ಮೇಲೆ ಒತ್ತಡ ಬೀಳುತ್ತದೆ. ಬರೀ ನನ್ನ ಚಿತ್ರಕ್ಕೆ ಅಂತ ಅಲ್ಲ. ಎಲ್ಲಾ ನಟರ ಸಿನಿಮಾಗಳಿಗೂ ಇದೇ ರೀತಿ ಆಗಿತ್ತದೆ. ನೀವು ಸೋಶಿಯಲ್ ಮೀಡಿಯಾದಲ್ಲಿ ಏನೇನೇ ಓದಿಕೊಂಡು ಅದಕ್ಕೆ ಸಂಬಂಧಿಸಿದ ಅಪ್‌ಡೇಟ್ ಅಂದರೆ ಎಲ್ಲಿಂದ ಕೊಡೋದು."

don-t-pressurize-film-makers-to-give-updates-jr-ntr-makes-a-special-request-to-his-fans

"ದಯವಿಟ್ಟು ಅರ್ಥ ಮಾಡಿಕೊಳ್ಳಿ. ಯಾವುದಾದರೂ ಸಿನಿಮಾ ಅಪ್‌ಡೇಟ್ ಇದ್ದರೆ ನಾವೇ ಕೊಡುತ್ತದೆ. ಒಳ್ಳೆ ಅಪ್‌ಡೇಟ್ ಕೋಡೋಣ. ಯಾಕಂದರೆ ನೀವು ನಮಗೆ ಮುಖ್ಯ. ಆದರೆ ಒತ್ತಡ ಹಾಕಬೇಡಿ. ಏನೋ ಒಂದು ಅಪ್‌ಡೇಟ್ ಕೊಟ್ಟರೆ ನೀವು ಸುಮ್ಮನಿರುತ್ತೀರಾ? ಇಲ್ಲ. ಮತ್ತೆ ಚಿತ್ರತಂಡವನ್ನು ಬೈಯುತ್ತೀರಾ. ಯಾಕಂದರೆ ತೆಲುಗು ಚಿತ್ರರಂಗ ಈಗ ಗ್ಲೋಬ್‌ನಲ್ಲಿ ಬಹಳ ಎತ್ತರದಲ್ಲಿದೆ. ಸಿನಿಮಾ ಮಾಡಬೇಕು ಅಂದ್ರೆ ಬಹಳ ಶ್ರಮ ಹಾಕಬೇಕು ಒಳ್ಳೆ ರಿಸಲ್ಟ್ ಬರಬೇಕು. ಇದು ನನ್ನ ವಿನಂತಿ ಅಷ್ಟೇ. ದಯವಿಟ್ಟು ನಿರ್ಮಾಪಕರ ಮೇಲೆ ಅಪ್‌ಡೇಟ್, ಅಪ್‌ಡೇಟ್ ಅಂತ ಒತ್ತಡ ಹಾಕಬೇಡಿ."

don-t-pressurize-film-makers-to-give-updates-jr-ntr-makes-a-special-request-to-his-fans

ಇವತ್ತು ನಾನು ಹೇಳುತ್ತಿದ್ದೇನೆ. "ನನ್ನ ಮುಂದಿನ ಸಿನಿಮಾ ಕುರಿತು. ಇದೇ ತಿಂಗಳು ಸಿನಿಮಾ ಸೆಟ್ಟೇರಲಿದೆ. ಮುಂದಿನ ತಿಂಗಳು ಚಿತ್ರೀಕರಣ ಶುರುವಾಗಲಿದೆ. ಮುಂದಿನ ವರ್ಷ ಏಪ್ರಿಲ್ 5ರಂದು ಸಿನಿಮಾ ರಿಲೀಸ್ ಮಾಡುತ್ತೇವೆ" ಎಂದು ಜ್ಯೂ. ಎನ್‌ಟಿಆರ್ ಹೇಳಿದ್ದಾರೆ. 'ಆಚಾರ್ಯ' ಸಿನಿಮಾ ಸೋಲಿನ ನಂತರ ಕೊರಟಾಲ ಶಿವ ಮುಂದಿನ ಸಿನಿಮಾ ಬಗ್ಗೆ ಬಹಳ ಮುತುವರ್ಜಿ ವಹಿಸುತ್ತಿದ್ದಾರೆ. ಹಾಗಾಗಿ ಎನ್‌ಟಿಆರ್30 ಸಿನಿಮಾ ಶುರುವಾಗುವುದು ತಡವಾಗುತ್ತಿದೆ.

More from Filmibeat

English summary
Don’t pressurize makers to give updates: Jr NTR makes a special request to his fans. NTR30 Movie Launch In February, Shooting Will Start Before March 20th. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X