ನಟ ಜ್ಯೂ. ಎನ್‌ಟಿಆರ್ ಹೈಟ್ ಬಗ್ಗೆ ಖ್ಯಾತ ಛಾಯಾಗ್ರಾಹಕ ಕಾಮೆಂಟ್; ಫ್ಯಾನ್ಸ್ ಕೆಂಡಾಮಂಡಲ
ಸ್ಟಾರ್ ನಟರ ಫ್ಯಾನ್ಸ್ ವಾರ್‌ಗಳಿಗೆ ಕಾರಣ ಬೇಕಿಲ್ಲ. ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಆಗಾಗ್ಗೆ ಕಿರಿಕ್, ಕೆಸರೆರಚಾಟ ನಡೆಯುತ್ತಲೇ ಇರುತ್ತದೆ. ತೆಲುಗು ಚಿತ್ರರಂದಲ್ಲಿ ಮೆಗಾ ಫ್ಯಾನ್ಸ್ ಹಾಗೂ ನಂದಮೂರಿ ಫ್ಯಾಮಿಲಿ ಫ್ಯಾನ್ಸ್ ನಡುವಿನ ತಿಕ್ಕಾಟ ಹೊಸದೇನು ಅಲ್ಲ. 'ಪೆದ್ದಿ' ಸಿನಿಮಾ ರಿಲೀಸ್ ಸಮಯದಲ್ಲಿ ಅದು ತಾರಕಕ್ಕೇರಿದೆ. ಛಾಯಾಗ್ರಾಹಕ ರತ್ನವೇಲು ಹೇಳಿಕೆವೊಂದು ಈ ಕೆಸರೆರಚಾಟಕ್ಕೆ ಮತ್ತಷ್ಟು ತುಪ್ಪ ಸುರಿದಿದೆ.
ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಚಿತ್ರದಲ್ಲಿ ನಾಯಕಿ ಜಾನ್ವಿ ಕಪೂರ್ ಪಾತ್ರದ ಬಗ್ಗೆ ವಿವಾದ ಸೃಷ್ಟಿಯಾಗಿರುವುದು ಗೊತ್ತೇಯಿದೆ. ಮುಖ್ಯವಾಗಿ ಕ್ಯಾಮರಾ ಆಂಗಲ್ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ನಾಯಕ ನಾಯಕಿಯ ಮುಖವನ್ನು ವರ್ಣಿಸುವಾಗ ಕ್ಯಾಮರಾ ಮಾತ್ರ ಆಕೆಯ ಸೊಂಟ, ಎದೆ ಮೇಲೆ ಫೋಕಸ್ ಆಗಿರುತ್ತದೆ. ಇದೇ ವಿಚಾರದ ಬಗ್ಗೆ ಭಾರೀ ಟ್ರೋಲ್ ಆಗ್ತಿದೆ. ಜ್ಯೂ. ಎನ್‌ಟಿಆರ್ ಫ್ಯಾನ್ಸ್ ಇದನ್ನು ಅಸ್ತ್ರವಾಗಿ ತೆಗೆದುಕೊಂಡು ಕಾಮೆಂಟ್ ಮಾಡುತ್ತಿದ್ದಾರೆ.

ಸದ್ಯ ಛಾಯಾಗ್ರಾಹಕ ರತ್ನವೇಲು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಮುಖ್ಯವಾಗಿ ಕ್ಯಾಮರಾ ಆಂಗಲ್‌ಗಳ ಬಗ್ಗೆ ಪ್ರಶ್ನೆ ಎದುರಾಗಿದೆ. 'ಪೆದ್ದಿ' ಚಿತ್ರದಲ್ಲಿ ರಾಮ್‌ಚರಣ್ ದೃಶ್ಯಗಳನ್ನ ಸೆರೆಹಿಡಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ 'ದೇವರ' ಚಿತ್ರದ ವಿಚಾರವನ್ನು ರತ್ನವೇಲು ಪ್ರಸ್ತಾಪಿಸಿದ್ದಾರೆ. ಮುಖ್ಯವಾಗಿ ನಟ ಜ್ಯೂ. ಎನ್‌ಟಿಆರ್ ಹೈಟ್ ಬಗ್ಗೆ ಅವರ ಕಾಮೆಂಟ್ ವೈರಲ್ ಆಗ್ತಿದೆ. ಇದು ಮೆಗಾ ಫ್ಯಾನ್ಸ್‌ಗೆ ದೊಡ್ಡ ಅಸ್ತ್ರವಾಗಿದೆ. ಮತ್ತೊಂದು ಕಡೆ ತಾರಕ್ ಅಭಿಮಾನಿಗಳ ಬೇಸರಕ್ಕೆ ಕಾರಣಾವಾಗಿದೆ.
ಸಾಮಾನ್ಯವಾಗಿ ನಟ ಅಥವಾ ನಟಿ ಎತ್ತರ ಕಮ್ಮಿ ಇದ್ದಾಗ ಕ್ಯಾಮರಾ ಆಂಗಲ್‌ಗಳಲ್ಲಿ ಒಂದಷ್ಟು ಟ್ರಿಕ್ ಬಳಸಿ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತದೆ. ನಾಯಕಿ ಅಥವಾ ನಾಯಕ ಕುಳ್ಳಗಿದ್ದರೆ ಕ್ಲೋಸ್ ಅಪ್ ಶಾಟ್ಸ್ ತೆಗೆಯುವಾಗ ಕೆಳಗೆ ಪೀಠ, ಸ್ಟೂಲ್ ಮೇಲೆ ನಿಲ್ಲಿಸಿ ಫ್ರೇಮ್ ಇಡುತ್ತಾರೆ. ಇದು ಹೊಸದೇನು ಅಲ್ಲ. ಅದೇ ರೀತಿ ಜ್ಯೂ. ಎನ್‌ಟಿಆರ್ ಎತ್ತರ ಕಮ್ಮಿ ಇರುವುದರಿಂದ ಕೆಲ ವಿಭಿನ್ನ ಆಂಗಲ್ಸ್ ಫಾಲೊ ಆಗಬೇಕಾಯತು. ಅಂತಹ ಸಮಯದಲ್ಲಿ ವೈಟ್ ಶಾಟ್ಸ್ ಇಟ್ಟರೆ ಹೀರೊ ಇರುವ ಎತ್ತರಕ್ಕಿಂತ ಕುಳ್ಳಗೆ ಕಾಣಿಸುವ ಅವಕಾಶ ಇರುತ್ತೆ. ಇನ್ನು ಅವರ ಅಕ್ಕ ಪಕ್ಕ ಇರುವವರ ಬಹಳ ಎತ್ತರ ಇರದಂತೆ ನೋಡಿಕೊಳ್ಳಬೇಕು ಎಂದು ರತ್ನವೇಲು ಹೇಳಿದ್ದಾರೆ.
'ದೇವರ' ಚಿತ್ರದಲ್ಲಿ ಕೆಲ ವೈಡ್ ಶಾಟ್ಸ್‌ಗಳಲ್ಲಿ ತಾರಕ್ ಅಕ್ಕ ಪಕ್ಕ ಇದ್ದ ಜ್ಯೂನಿಯರ್ ಆರ್ಟಿಸ್ಟ್ ಬಹಳ ದೈತ್ಯದೇಹಿಗಳಾಗಿದ್ದರು. ಅವರಿಗಿಂತ ಭಾರೀ ಮೈಕಟ್ಟು ಹೊಂದಿದ್ರು. ನಾನು ಬೇಡ ಅಂದ್ರು ಕೇಳಲಿಲ್ಲ. ಅದೇ ಕಾರಣಕ್ಕೆ ಆ ದೃಶ್ಯಗಳು ಅಭಾಸ ಎನಿಸುತ್ತದೆ ಎಂದು ಛಾಯಾಗ್ರಾಹಕ ರತ್ನವೇಲು ಹೇಳಿದ್ದಾರೆ. ಇದು ತಾರಕ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ತಮ್ಮ ಹೀರೊ ಹೈಟ್ ಬಗ್ಗೆ ಹೀಗೆ ಮಾತನಾಡಿದ್ದು ಸರಿಯಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಮೆಗಾ ಫ್ಯಾನ್ಸ್ ಇದೇ ವಿಡಿಯೋ ತೋರಿಸಿ ಎನ್‌ಟಿಆರ್ ಅಭಿಮಾನಿಗಳನ್ನು ಟ್ರೋಲ್ ಮಾಡುತ್ತಿದ್ದಾರೆ.
ಎರಡು ವರ್ಷಗಳ ಹಿಂದೆ ಬಂದಿದ್ದ 'ದೇವರ' ಸಿನಿಮಾ ನಿರಾಸೆ ಮೂಡಿಸಿತ್ತು. ಕೊರಟಾಲ ಶಿವ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಸೀಕ್ವೆಲ್ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ ಯಾರಿಗೂ ಅದು ಇಷ್ಟವಿಲ್ಲ ಎನ್ನುವಂತಾಗಿದೆ. ಅಭಿಮಾನಿಗಳು ಕೂಡ ಸೋತ ಸಿನಿಮಾ ಸೀಕ್ವೆಲ್ ಮಾಡುವ ಬದಲು ಬೇರೆ ಸಿನಿಮಾ ಮಾಡಿ ಎನ್ನುತ್ತಿದ್ದಾರೆ. ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ 'ಡ್ರ್ಯಾಗನ್' ಚಿತ್ರದ ಚಿತ್ರೀಕರಣದಲ್ಲಿ ತಾರಕ್ ಬ್ಯುಸಿಯಾಗಿದ್ದಾರೆ.


Click it and Unblock the Notifications