'ಕಾಂತಾರ' ಜೊತೆ ಬೆಳ್ಳಿತೆರೆಯಲ್ಲಿ ಧಗಧಗಿಸಲಿದೆ ಪ್ರಭಾಸ್ ಅಭಿನಯದ 'ರಾಜಾ ಸಾಬ್'
ಕಾಂತಾರ ಕಲರವ ಶುರುವಾಗಿದೆ. ದಂತಕತೆಯ ಮೊದಲ ಭಾಗವನ್ನು ಕಣ್ತುಂಬಿಕೊಳ್ಳುವ ಕಾತುರ- ಆತುರ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಕೇವಲ ಕನ್ನಡಿಗರಲ್ಲಿ ಮಾತ್ರ ಅಲ್ಲ. ಬೇರೆ ಬೇರೆ ಭಾಷೆಯಲ್ಲಿಯೂ ಕೂಡ ಕಾಂತಾರ ನೋಡುವ ಉತ್ಸಾಹ ಪ್ರೇಕ್ಷಕರಲ್ಲಿ ಕಂಡು ಬರುತ್ತಿದೆ. ಇನ್ನೂ ಈ ಬಾರಿ ಕಾಂತಾರದ ಕಥೆ ಒಂದಲ್ಲ.. ಎರಡಲ್ಲ..ಏಳು ಭಾಷೆಗಳಲ್ಲಿ ಅನಾವರಣವಾಗಲಿದೆ. ಈ ಹಿನ್ನೆಲೆ.. ಕಾಂತಾರದ ಅಲೆ ಈ ಬಾರಿ ಜೋರಾಗಿ ಎದ್ದಿದೆ.
ಆದರೆ ಇದೇ ಸಮಯದಲ್ಲಿ ಕಾಂತಾರ ಚಿತ್ರವನ್ನು ನೋಡಲು ಹೋದ ಪ್ರೇಕ್ಷಕರಿಗೆ ಬೆಳ್ಳಿ ತೆರೆಯಲ್ಲಿ ಪ್ರಭಾಸ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಹೀಗೊಂದು ಸುದ್ದಿ ಸದ್ಯ ಪ್ರಭಾಸ್ ಅವರ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದೆ. ಹೌದು.ಎಲ್ಲರಿಗೆ ಗೊತ್ತಿರುವಂತೆ ''ಬಾಹುಬಲಿ'' ಚಿತ್ರದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರೂಪಗೊಂಡವರು ಪ್ರಭಾಸ್. ಅದಕ್ಕೂ ಮುನ್ನ ತೆಲುಗು ಚಿತ್ರರಂಗದಲ್ಲಿಯೇ ಅಪಾರ ಯಶಸ್ಸನ್ನು ಕಂಡಿದ್ದ ಪ್ರಭಾಸ್‌ಗೆ ಈಗ ಭಾರತದೆಲ್ಲೆಡೆ ದೊಡ್ಡ ಲೆವಲ್‌ನಲ್ಲಿ ಪ್ಯಾನ್ ಬೇಸಿದೆ.

ನಿಜಾ.. ''ಬಾಹುಬಲಿ'' ನಂತರ ತೆರೆಗೆ ಬಂದ ಪ್ರಭಾಸ್ ಅಭಿನಯದ ಚಿತ್ರಗಳು ಅಂದುಕೊಂಡಂತೆ ಗೆಲ್ಲಲಿಲ್ಲ. ಹಣದ ಹೊಳೆ ಹರಿಯಲಿಲ್ಲ. ಇಂಥಾ ಪ್ರಭಾಸ್ ''ದಿ ರಾಜಾ ಸಾಬ್'' ಎಂಬ ಚಿತ್ರವನ್ನು ಮಾಡಿದ್ಧಾರೆ. ಈಗಾಗಲೇ ಪ್ರೇಕ್ಷಕರಲ್ಲಿ ಅತೀವ ಕುತೂಹಲ ಮೂಡಿಸಿರುವ ಈ ಚಿತ್ರದ ಟ್ರೇಲರ್ ''ಕಾಂತಾರ-ಚಾಪ್ಟರ್ 1'' ಪ್ರದರ್ಶನದ ವೇಳೆ ಪ್ರದರ್ಶನವಾಗಲಿದೆ ಎನ್ನುವುದೇ ಸದ್ಯದ ಲೇಟೆಸ್ಟ್ ನ್ಯೂಸ್.
ಈ ಕುರಿತು ''123ತೆಲುಗು'' ವರದಿಯನ್ನು ಮಾಡಿದ್ದು ''ಕಾಂತಾರ ಚಾಪ್ಟರ್ 1'' ಚಿತ್ರದ ಜೊತೆಯಲ್ಲಿ '' ದಿ ರಾಜಾ ಸಾಬ್'' ಟ್ರೇಲರ್‌ನ ನಿರ್ಮಾಣ ಸಂಸ್ಥೆ ಅಟ್ಯಾಚ್ ಮಾಡಲು ಮುಂದಾಗಿದೆ ಎಂದು ಹೇಳಿದೆ. ಈ ಮೂಲಕ ಪ್ರೇಕ್ಷಕರನ್ನು ತಮ್ಮ ಚಿತ್ರದತ್ತ ಸೆಳೆಯಲು ಚಿತ್ರತಂಡ ಮುಂದಾಗಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ.. ಈ ಕುರಿತು ''ದಿ ರಾಜಾ ಸಾಬ್'' ನಿರ್ಮಾಪಕರಾಗಲಿ ಅಥವಾ ಪ್ರಭಾಸ್ ಆಗಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಪ್ರಭಾಸ್‌ಗೆ ''ಕಾಂತಾರ'' ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಜೊತೆ ವಿಶೇಷ ಸಂಬಂಧ ಇದೆ. ರಿಷಬ್ ಕೂಡ ಪ್ರಭಾಸ್ ಅವರ ಆಪ್ತರು. ಈ ಹಿನ್ನೆಲೆ ''ಕಾಂತಾರ'' ಜೊತೆ ''ದಿ ರಾಜಾ ಸಾಬ್'' ಬೆಳ್ಳಿ ತೆರೆಯಲ್ಲಿ ದರ್ಶನ ನೀಡುವುದು ಖಚಿತ ಎಂದಕೊಂಡು ಪ್ರಭಾಸ್ ಅಭಿಮಾನಿಗಳು ಸದ್ಯ ಖುಷಿಯಾಗಿದ್ದಾರೆ.
ಇನ್ನುಳಿದಂತೆ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ''ದಿ ರಾಜಾ ಸಾಬ್'' ಈ ಡಿಸೆಂಬರ್ 5 ರಂದು ಬಿಡುಗಡೆ ಆಗಬೇಕಿತ್ತು. ತೆಲುಗು, ಕನ್ನಡ, ತಮಿಳು, ಮಲಯಾಳಂ ಸೇರಿ ಹಿಂದಿ ಭಾಷೆಗಳಲ್ಲಿ ತೆರೆಗೆ ಬರಬೇಕಿತ್ತು. ಆದರೆ. ಅವತ್ತೇ ದೀಪಿಕಾ ಪಡುಕೋಣೆಯ ಗಂಡ ರಣ್ವೀರ್ ಸಿಂಗ್ ಅಭಿನಯದ ''ಧುರಂಧರ್'' ಚಿತ್ರ ಕೂಡ ಬಿಡುಗಡೆಯಾಗಲಿದೆ.

ಕೇವಲ ಇಷ್ಟೇ ಅಲ್ಲ ''ಬಾಲಿವುಡ್ ಹಂಗಾಮಾ'' ವರದಿಯ ಪ್ರಕಾರ ಅದೇ ದಿನ ಶಾಹಿದ್ ಕಪೂರ್ ಮತ್ತು ವಿಶಾಲ್ ಭಾರದ್ವಾಜ್ ಜೋಡಿಯ ರೋಮಿಯೋ ಚಿತ್ರ ಕೂಡ ತೆರೆಗೆ ಬರಲಿದೆ. ಈ ಕಾರಣದಿಂದ ''ದಿ ರಾಜಾ ಸಾಬ್'' ಚಿತ್ರದ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದ್ದು ಸಂಕ್ರಾಂತಿಯಂದು ಅಂದರೆ ಜನವರಿ 9ರಂದು ''ದಿ ರಾಜಾ ಸಾಬ್'' ತೆರೆಗೆ ಬರಲಿದೆ.
ಪ್ರಭಾಸ್ ಜೊತೆ ಈ ಚಿತ್ರದಲ್ಲಿ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್, ಬ್ರಹ್ಮಾನಂದಂ, ರಿಧಿ ಕುಮಾರ್, ಯೋಗಿ ಬಾಬು, ಅನುಪಮ್ ಖೇರ್, ಜಿಸ್ಸು ಸೇನ್‌ಗುಪ್ತಾ, ಬೊಮನ್ ಇರಾನಿ ಮತ್ತು ಸಂಜಯ್ ದತ್ ಇದ್ಧಾರೆ.


Click it and Unblock the Notifications











