'ಕೆಜಿಎಫ್', 'ಸಲಾರ್' ಹಾಗೂ 'ಡ್ರ್ಯಾಗನ್' ಎಲ್ಲಾ ಒಂದೇ ತರ ಇದೆ.. ಹೌದು ಏನಿವಾಗ?; ಪ್ರಶಾಂತ್ ನೀಲ್

ಜ್ಯೂ. ಎನ್‌ಟಿಆರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಡ್ರ್ಯಾಗನ್' ಸಿನಿಮಾ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಅಫ್ಘನ್ ಮಾಫಿಯಾ ಸಾಮಾಜ್ಯದ ಕಥೆಯನ್ನು ಪ್ರಶಾಂತ್ ನೀಲ್ ಚಿತ್ರದಲ್ಲಿ ಕಟ್ಟಿಕೊಡುತ್ತಿದ್ದಾರೆ. ಮುಂದಿನ ವರ್ಷ ಜೂನ್ 11ರಂದು ಸಿನಿಮಾ ತೆರೆಗೆ ಬರಲಿದೆ.

ಅನಿಲ್ ಕಪೂರ್, ಖುಷ್ಬು ಸುಂದರ್, ರುಕ್ಮಿಣಿ ವಸಂತ್ ಸೇರಿ ದೊಡ್ಡ ತಾರಾಗಣ 'ಡ್ರ್ಯಾಗನ್' ಚಿತ್ರದಲ್ಲಿದೆ. ಚಿತ್ರಕ್ಕಾಗಿ ಹೊಸ ಪ್ರಪಂಚವನ್ನೇ ಪ್ರಶಾಂತ್ ನೀಲ್ ಸೃಷ್ಟಿಸಿದ್ದಾರೆ. ಅದರ ಸಂಪೂರ್ಣ ಚಿತ್ರಣವನ್ನು ಅನಾವರಣ ಮಾಡಿದ್ದಾರೆ. ಫಸ್ಟ್ ಗ್ಲಿಂಪ್ಸ್ ಅಭಿಮಾನಿಗಳ ಮನಗೆದ್ದಿದೆ. 'ಕೆಜಿಎಫ್' ಹಾಗೂ 'ಸಲಾರ್' ಸಿನಿಮಾಗಳನ್ನೇ ನೆನಪಿಸುತ್ತಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್ ಯಾಕೋ ಆ ಡಾರ್ಕ್ ಫ್ರೇಮ್, ಹೊಗೆ, ಸ್ಲೋ ಮೋಷನ್ ಶಾಟ್ಸ್, ಹತ್ತಾರು ಮಂದಿ ವಿಲನ್ಸ್, ಇಂಗ್ಲೀಷ್ ಡೈಲಾಗ್ಸ್ ಬಿಟ್ಟು ಹೊರ ಬರುವಂತೆ ಕಾಣ್ತಿಲ್ಲ. 'ಡ್ರ್ಯಾಗನ್' ಗ್ಲಿಂಪ್ಸ್‌ನಲ್ಲೂ ಅದೇ ಎದ್ದು ಕಾಣ್ತಿದೆ.

Dragon Glimpse Compared to KGF Salaar Prashanth Neel says Only Entertainment Matters

ಒಬ್ಬ ಸ್ಟೋರಿ ನರೇಟರ್, ವಿಲನ್‌ಗಳ ಲುಕ್, ಕಾಸ್ಟ್ಯೂಮ್ಸ್, ಎಲಿವೇಷನ್ಸ್, ಯುದ್ಧ ಎಲ್ಲವೂ ಸೇಮ್ ಸೇಮ್ ಅನಿಸುತ್ತದೆ. 'ಕೆಜಿಎಫ್' ಚಿತ್ರದಲ್ಲಿ ನರಾಚಿ, 'ಸಲಾರ್' ಚಿತ್ರದಲ್ಲಿ ಖಾನ್ಸರ್ ರೀತಿಯಲ್ಲೇ 'ಡ್ರ್ಯಾಗನ್' ಚಿತ್ರದಲ್ಲಿ ಅಘ್ಘನ್ ಕಂಪನಿ ಹಾಗೂ ಗೋಲ್ಡನ್ ಕಂಪನಿ ಸುತ್ತಾ ಕಾದಾಟ ನಡೆಯಲಿದೆ. ಎಲ್ಲಾ ಒಂದೇ ತರ ಇದೆಯಲ್ಲ. ಇದರಲ್ಲಿ ಹೊಸದು ಏನಿದೆ? ಹೀರೊ, ಪಾತ್ರವರ್ಗ ಮಾತ್ರ ಬೇರೆ ಎನಿಸುತ್ತದೆ. ಅರೇ, ಪ್ರಶಾಂತ್ ನೀಲ್ ವಿಭಿನ್ನವಾಗಿ ಸಿನಿಮಾ ಮಾಡಲ್ವಾ? ಎನ್ನುವ ಚರ್ಚೆ ಜೋರಾಗಿದೆ. ಆದರೆ ಇಂತಹ ಹೋಲಿಕೆ ಬಗ್ಗೆ ಪ್ರಶಾಂತ್ ನೀಲ್ ಅಭಿಪ್ರಾಯವೇ ಬೇರೆ.

'ಕೆಜಿಎಫ್' ಹಾಗೂ 'ಸಲಾರ್' ಸಿನಿಮಾಗಳ ನಡುವೆ ಹೋಲಿಕೆ ಮಾಡಿ ಮಾತನಾಡಿದಾಗಲೇ ಈ ಬಗ್ಗೆ ಪ್ರಶಾಂತ್ ನೀಲ್ ಕಾಮೆಂಟ್ ಮಾಡಿದ್ದರು. ಕೈರಂ ವಾಶಿ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದರು. ನಿರ್ಮಾಪಕರು ಹಾಕಿದ ಹಣ ವಾಪಸ್ ತಂದುಕೊಡಬೇಕು ಎನ್ನುವುದು ನನ್ನ ಮೊದಲ ಉದ್ದೇಶ ಎಂದು ಪ್ರಶಾಂತ್ ನೀಲ್ ಸದಾ ಹೇಳುತ್ತಿರುತ್ತಾರೆ. ನನ್ನನ್ನು ನಂಬಿ ಕೋಟಿ ಕೋಟಿ ಹಣ ಹಾಕಿದಾಗ ನನ್ನ ಮೇಲೆ ನಂಬಿಕೆ ಇರುತ್ತದೆ. ಅದನ್ನು ಉಳಿಸಿಕೊಳ್ಳಬೇಕು. ಖ್ಯಾತಿ ಅಥವಾ ಪದೇ ಪದೆ ಅದೇ ಮಾಡ್ತಿದ್ದೀನಿ ಎನ್ನುವ ಭಯ ಇಲ್ಲ ಎಂದು ಪ್ರಶಾಂತ್ ಹೇಳಿದ್ದರು.

'ಉಗ್ರಂ' ಅಲ್ಲಿ ಮಾಡಿದ್ದನ್ನು 'ಕೆಜಿಎಫ್' ಅಲ್ಲಿ ಮಾಡಿದ್ದಾನೆ, 'ಕೆಜಿಎಫ್' ಅಲ್ಲಿ ಮಾಡಿದ್ದನ್ನೆ 'ಸಲಾರ್' ಅಲ್ಲಿ ಮಾಡಿದ್ದಾನೆ ಅಂತಾರೆ ಎನ್ನುವುದನ್ನು ನಾನು ಕೇರ್ ಮಾಡಲ್ಲ. ನಾನು ಇಲ್ಲಿರುವುದು ಪ್ರೇಕ್ಷಕರನ್ನು ರಂಜಿಸಲು ಮಾತ್ರ. ಪ್ರಶಾಂತ್ ನೀಲ್ ಬ್ರ್ಯಾಂಡ್ ಎನ್ನುವ ಭಯ ಇಲ್ಲ. ಸಿನಿಮಾ ಗೆದ್ದರೆ, ಬಾಕ್ಸಾಫೀಸ್‌ನಲ್ಲಿ ಒಳ್ಳೆ ಹಣ ಮಾಡಿದ್ರೆ, ನಾನು ಯಾಕೆ ತಲೆ ಕೆಡಿಸಿಕೊಳ್ಳಬೇಕು. ಅದೇ ನನಗೆ ಮೊದಲ ಪ್ರಶಸ್ತಿ. ನಾನು ಹಿಂಗೆ ಸಿನಿಮಾ ಮಾಡಬೇಕು, ಹಂಗೆ ಮಾಡಬೇಕು ಅಂದುಕೊಂಡ್ರೆ ತಪ್ಪಾಗತ್ತೆ. ಜನ ನನ್ನ ಜಡ್ಜ್ ಮಾಡೋಕೆ ಬರಲ್ಲ, ಅವರಿಗೆ ಅಷ್ಟು ಟೈಮ್ ಕೂಡ ಇಲ್ಲ. ನಾನು ಮನರಂಜನೆ ಕೊಡ್ತಿನೋ ಇಲ್ವೋ ಅಂತ ನೋಡೊಕೆ ಬರ್ತಾರೆ. ಅದು ಮುಖ್ಯ ಎಂದು ಪ್ರಶಾಂತ್ ನೀಲ್ ಹೇಳಿದ್ದರು.

ಖ್ಯಾತಿ ಬಗ್ಗೆ ಯೋಚಿಸಲ್ಲ. ಕೆಜಿಎಫ್ ತರ ಸಲಾರ್ ಇದೆ ಅಂದ್ಕೊತ್ತಾರೆ ಎಂದು ಚಿಂತೆ ಮಾಡಲ್ಲ. ಸಿನಿಮಾ ನೋಡಿ ಬಂದಮೇಲೆ ಅದು ನಿಮ್ಮನ್ನು ರಂಜಿಸ್ತಾ ಇಲ್ವಾ ಅಷ್ಟೇ ಬೇಕಿರೋದು. ಸಿನಿಮಾ ಸೂಪರ್, ಆದ್ರೆ ಕೊಂಚ 'ಕೆಜಿಎಫ್' ತರ ಇತ್ತು ಅಂದ್ರು ಪರವಾಗಿಲ್ಲ. ನಾನೇ ಅಲ್ವಾ ಕೆಜಿಎಫ್ ಮಾಡಿದ್ದು. ನನ್ನದೇ ಚಿತ್ರಕ್ಕೆ ಹೋಲಿಸಿದರೆ ಯಾಕೆ ತಲೆ ಕೆಡಿಸಿಕೊಳ್ಳಲಿ ಎಂದು ನೀಲ್ ಹೇಳಿದ್ದರು. ಸದ್ಯ Galatta Plus ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಮತ್ತೆ ಇದೇ ಮಾತು ಪುನರುಚ್ಚರಿಸಿದ್ದಾರೆ.

'ಡ್ರ್ಯಾಗನ್' ಗ್ಲಿಂಪ್ಸ್ ನೋಡಿ 'ಕೆಜಿಎಫ್' ಹಾಗೂ 'ಸಲಾರ್' ಚಿತ್ರಗಳಿಗೆ ಹೋಲಿಸಿ ಮಾತನಾಡುವವರಿಗೆ ಅಭಿಮಾನಿಗಳು ಈ ವಿಡಿಯೋ ತೋರಿಸುತ್ತಿದ್ದಾರೆ. ಹೌದು, ಎಲ್ಲಾ ಒಂದೇ ತರ ಇದೆ. ಸಿನಿಮಾ ತೆರೆಗೆ ಬಂದ್ಮೇಲೆ ಚೆನ್ನಾಗಿದ್ಯಾ? ಚೆನ್ನಾಗಿಲ್ವಾ? ಅಷ್ಟು ಮಾತ್ರ ಹೇಳಿ ಎನ್ನುತ್ತಿದ್ದಾರೆ.

Read more about: prashanth neel kgf salaar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X