For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಮಣಿ ಬಿಕಿನಿ ಪುರಾಣ: ನಿರ್ಮಾಪಕರು ಹೇಳಿದ್ದೇನು?

  By ಫಿಲ್ಮೀಬೀಟ್ ಡೆಸ್ಕ್
  |

  ಕನ್ನಡತಿ ನಟಿ ಪ್ರಿಯಾಮಣಿ ಭಾರತದ ಪ್ರತಿಭಾವಂತ ನಟಿಯರಲ್ಲೊಬ್ಬರು. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರಿಯಾಮಣಿ ಗ್ಲಾಮರಸ್‌ ಪಾತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

  ದಕ್ಷಿಣ ಭಾರತದಲ್ಲಿ ಬಿಕಿನಿ ಧರಿಸಿ ನಟಿಸಿದ ಕೆಲವೇ ನಟಿಯರಲ್ಲಿ ಪ್ರಿಯಾಮಣಿ ಸಹ ಒಬ್ಬರು. 'ದ್ರೋಣ' ಸಿನಿಮಾದಲ್ಲಿ ಪ್ರಿಯಾಮಣಿ ಬಿಕಿನಿ ಧರಿಸಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಪ್ರಿಯಾಮಣಿ ಬಿಕಿನಿ ಧರಿಸುವುದಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡಿತ್ತು.

  ಪ್ರಿಯಾಮಣಿ ಬಿಕಿನಿ ಧರಿಸಿದ್ದು ಹಲವು ಸಿನಿಪ್ರಿಯರಿಗೆ ಆಶ್ಚರ್ಯ ಉಂಟು ಮಾಡಿತ್ತು. ಪ್ರಿಯಾಮಣಿಯಂಥಹಾ ಪ್ರತಿಭಾವಂತ ನಟಿಗೆ ಬಿಕಿನಿ ಧರಿಸುವಂಥಹಾ ಅವಶ್ಯಕತೆ ಏನಿತ್ತು? ಎಂಬು ಪ್ರಶ್ನೆಯೂ ಎದ್ದಿತ್ತು. ಆದರೆ ಈಗ ಅದಕ್ಕೆ 'ದ್ರೋಣ' ಸಿನಿಮಾದ ನಿರ್ಮಾಪಕ ಉತ್ತರ ನೀಡಿದ್ದಾರೆ.

  ''ಸಿನಿಮಾ ಬಗ್ಗೆ ಪ್ರೇಕ್ಷಕರ ಆಸಕ್ತಿ ಕೆರಳಿಸಲು ಹೀರೋಯಿನ್‌ಗಳಿಗೆ ಬಿಕಿನಿ ಹಾಕಿಸಲಾಗುತ್ತದೆ. ಬಿಕಿನಿ ಹಾಕುತ್ತೀರಾ ಎಂದು ಕೇಳಿದರೆ ನಟಿಯರು ಬಹಳ ಡಿಮ್ಯಾಂಡ್ ಮಾಡುತ್ತಾರೆ. ಆದರೆ ಪ್ರಿಯಾಮಣಿಗೆ ಸಿನಿಮಾದ ಪ್ರಚಾರಕ್ಕಾಗಿ ಬಿಕಿನಿ ಧರಿಸಿ ಎಂದು ಕೇಳಿಕೊಂಡಾಗ ಹೆಚ್ಚು ಯೋಚನೆ ಮಾಡದೆ ಅವರು ಬಿಕಿನಿ ಧರಿಸಲು ಒಪ್ಪಿಕೊಂಡರು ಯಾವುದೇ ಡಿಮ್ಯಾಂಡ್ ಸಹ ಮಾಡಲಿಲ್ಲ'' ಎಂದಿದ್ದಾರೆ ದ್ರೋಣ ಸಿನಿಮಾದ ನಿರ್ಮಾಪಕ ಶ್ರೀನಿವಾಸರಾವ್.

  'ದ್ರೋಣ' ಸಿನಿಮಾದಲ್ಲಿ ಬಿಕಿನಿ ಧರಿಸಲು ದೊಡ್ಡ ಮೊತ್ತದ ಸಂಭಾವನೆಯನ್ನು ಪ್ರಿಯಾಮಣಿ ಪಡೆದಿದ್ದಾರೆ ಎಂಬ ಗಾಳಿಸುದ್ದಿಯನ್ನು ಶ್ರೀನಿವಾಸ ರಾವ್ ಅಲ್ಲಗಳೆದಿದ್ದಾರೆ.

  ಕಿತ್ತಾಡೋದು ಬಿಟ್ಟು ಜನರ ಜೀವ ಉಳಿಸಿ ಸರ್ಕಾರಕ್ಕೆ ಇದು ದೊಡ್ಡ ಕೆಲಸ ಅಲ್ಲ | Filmibeat Kannada

  ಪ್ರಿಯಾಮಣಿ ಕೈಯಲ್ಲೀಗ ಸಾಲು-ಸಾಲು ಸಿನಿಮಾಗಳಿವೆ, ಪ್ರಿಯಾಮಣಿ ನಟಿಸಿರುವ ವಿರಾಟಪರ್ವಂ, ನಾರಪ್ಪ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಸಿರಿವೆನ್ನೆಲ, ಮೈದಾನ್, ಸೈನೈಡ್, ಕೈಮರ, ಕಾಶನ್ ಗ್ಯಾಂಗ್ ಸಿನಿಮಾಗಳಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ.

  English summary
  Telugu movie Drona's producer talked about Priyamani wearing bikini for that movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X