twitter
    For Quick Alerts
    ALLOW NOTIFICATIONS  
    For Daily Alerts

    'ಲೈಗರ್' ಸೋಲು: ನಿಂತೇ ಹೋಯ್ತು ಪುರಿ- ದೇವರಕೊಂಡ 'ಜನ ಗಣ ಮನ'!

    |

    ಒಂದು ಗೆಲುವು ನಾಲ್ಕೈದು ಹೊಸ ಸಿನಿಮಾಗಳ ನಿರ್ಮಾಣಕ್ಕೆ ಶಕ್ತಿ ತುಂಬುತ್ತದೆ. ಅದೇ ರೀತಿ ಒಂದು ಸೋಲು ದೊಡ್ಡ ದೊಡ್ಡ ಕನಸುಗಳನ್ನು ನುಚ್ಚು ನೂರು ಮಾಡುತ್ತದೆ. ಟಾಲಿವುಡ್‌ನಲ್ಲಿ ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ 'ಲೈಗರ್' ಸಿನಿಮಾ ಸೋಲು ಈ ಜೋಡಿಯ 'ಜನ ಗಣ ಮನ' ಚಿತ್ರ ನಿಂತೇ ಹೋಗಲು ಕಾರಣವಾಗಿದೆ.

    ದೊಡ್ಡ ಸಿನಿಮಾಗಳು ಶುರುವಾಗಿ ನಿಂತು ಹೋಗುವುದು, ಅರ್ಧಕ್ಕೆ ನಿಂತು ಹೋಗುವುದು ಹೊಸದೇನು ಅಲ್ಲ. ಅದರೆ 'ಜನ ಗಣ ಮನ' ಪುರಿ ಜಗನ್ನಾಥ್ ಡ್ರೀಮ್ ಪ್ರಾಜೆಕ್ಟ್. ಹಲವು ವರ್ಷಗಳಿಂದ ಈ ಸಿನಿಮಾ ಮಾಡಬೇಕು ಎಂದು ಕೊಂಡಿದ್ದರು. ಸೂಪರ್ ಸ್ಟಾರ್ ಮಹೇಶ್‌ ಬಾಬುನ ಹೀರೋ ಮಾಡಿ ಸಿನಿಮಾ ಕಟ್ಟಿಕೊಡುವ ಸಾಹಸ ಮಾಡಿದ್ದರು. ಆದರೆ ಯಾಕೋ ಟಾಲಿವುಡ್ ಪ್ರಿನ್ಸ್ ಈ ಚಿತ್ರಕ್ಕೆ ಪುರಿ ಜೊತೆ ಕೈ ಜೋಡಿಸಲಿಲ್ಲ. 'KGF' ಸಿನಿಮಾ ಸಕ್ಸಸ್ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದಲ್ಲಿ ನಟಿಸ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಕೊನೆಗೆ ವಿಜಯ್ ದೇವರಕೊಂಡು ಹೀರೊ ಸಿನಿಮಾ ಮುಹೂರ್ತ ಕೂಡ ನಡೆದಿತ್ತು. ಆದರೆ ಈಗ ಸಿನಿಮಾ ನಿಂತು ಹೋಗುತ್ತಿರುವ ಮಾತುಗಳು ಕೇಳಿಬರ್ತಿದೆ.

    'ಲೈಗರ್' ಸೋಲು, ಸಂಭಾವನೆಯ ಹಿಂದಿರುಗಿಸಿದ ವಿಜಯ್ ದೇವರಕೊಂಡ!'ಲೈಗರ್' ಸೋಲು, ಸಂಭಾವನೆಯ ಹಿಂದಿರುಗಿಸಿದ ವಿಜಯ್ ದೇವರಕೊಂಡ!

    ಟಾಲಿವುಡ್ ಮೂಲಗಳ ಪ್ರಕಾರ 'ಲೈಗರ್' ಸೋಲಿನ ಹಿನ್ನೆಲೆ 'ಜನ ಗಣ ಮನ' ಸಿನಿಮಾ ನಿಂತಿದೆ. ಬಹುಕೋಟಿ ವೆಚ್ಚದ ಸಿನಿಮಾ ಇದು. ಸದ್ಯ ವಿಜಯ್ ದೇವರಕೊಂಡ ಮೇಲೆ ಇಷ್ಟು ಬಂಡವಾಳ ಹಾಕಿದರೆ ವಾಪಸ್ ಬರುವ ಸಾಧ್ಯತೆ ಕಮ್ಮಿ ಎನ್ನುವ ಕಾರಣಕ್ಕೆ ನಿರ್ಮಾಪಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಇನ್ನು 'ಲೈಗರ್' ಚಿತ್ರದಿಂದ ನಷ್ಟ ಅನುಭವಿಸಿದ ವಿತರಕರಿಗೂ ನಷ್ಟಭರಿಸಿಕೊಡಲು ಪುರಿ ಜಗನ್ನಾಥ್ ಮನಸ್ಸು ಮಾಡಿದ್ದಾರೆ ಎನ್ನುವ ಚರ್ಚೆ ನಡೀತಿದೆ.

    'ಜನ ಗಣ ಮನ' ಅದ್ಧೂರಿ ಮುಹೂರ್ತ

    'ಜನ ಗಣ ಮನ' ಅದ್ಧೂರಿ ಮುಹೂರ್ತ

    'ಲೈಗರ್' ಸಿನಿಮಾ ಶೂಟಿಂಗ್ ನಡುವೆಯೇ ಪುರಿ ಜಗನ್ನಾಥ್ ಸಿಕ್ಕಾಪಟ್ಟೆ ಕಾನ್ಫಿಡೆಂಟ್‌ನಿಂದ 'ಜನ ಗಣ ಮನ' ಸಿನಿಮಾ ಆರಂಭಿಸಿದ್ದರು. ಭಾರೀ ವೆಚ್ಚದಲ್ಲಿ ಮುಹೂರ್ತ ನೆರವೇರಿಸಿ ಸಣ್ಣ ಟೀಸರ್ ಕೂಡ ರಿಲೀಸ್ ಮಾಡಿದ್ದರು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಆಗಬೇಕಿತ್ತು. ಮುಂಬೈನಲ್ಲಿ ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ಸುದ್ದಿಗೋಷ್ಠಿ ನಡೆಸಿ ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಪುರಿ ಕನೆಕ್ಟ್ ಹಾಗೂ ಶ್ರೀಕರ ಸ್ಟುಡಿಯೋ ಪ್ರೊಡಕ್ಷನ್ ಅಡಿಯಲ್ಲಿ ಚಾರ್ಮಿ ಕೌರ್, ವಂಶಿ ಪಡಿಪೆಲ್ಲಿ ಬಂಡವಾಳ ಹೂಡಲು ಮುಂದಾಗಿದ್ದರು. ಆದರೆ ಈಗ ಸಿನಿಮಾ ನಿಂತು ಹೋಗಿರುವ ಸುಳಿವು ಸಿಗುತ್ತಿದೆ.

    ದೇಶಪ್ರೇಮದ 'ಜನ ಗಣ ಮನ' ಕಥೆ

    ದೇಶಪ್ರೇಮದ 'ಜನ ಗಣ ಮನ' ಕಥೆ

    ಟೈಟಲ್ಲೇ ಹೇಳುವಂತೆ 'ಜನ ಗಣ ಮನ' ದೇವಪ್ರೇಮದ ಕಥೆ ಆಧರಿಸಿದೆ. ಚಿತ್ರದಲ್ಲಿ ವಿಜಯ್ ಆರ್ಮಿ ಆಫೀಸರ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. "ವಿಜಯ್ ದೇವರಕೊಂಡ ಜೊತೆ ಮತ್ತೆ ಕೈ ಜೋಡಿಸಿದ್ದೇನೆ. ಇದು ಫಿಕ್ಷನ್ ಕಥೆ. ತನ್ನ ದೇಶಕ್ಕಾಗಿ, ದೇಶನ ಜನರಿಗಾಗಿ ಒಬ್ಬ ಸೈನಿಕ ಕಾಣುವ ಕನಸೇ ಈ ಸಿನಿಮಾ. ಇದು ಪಕ್ಕಾ ಆಕ್ಷನ್ ಎಂಟರ್‌ಟೈನರ್ ಎಂದು ಪುರಿ ಜಗನ್ನಾಥ್ ಹೇಳಿಕೊಂಡಿದ್ದರು. "ಪುರಿ ಜಗನ್ನಾಥ್ ಜೊತೆ ಸಿನಿಮಾ ಮಾಡುತ್ತಿರುವುದು ಖುಷಿಯಾಗುತ್ತಿದೆ. ಇದು ಪ್ರತಿಯೊಬ್ಬ ಭಾರತೀಯನ ಮನಮುಟ್ಟುವ ಸಿನಿಮಾ. ಸವಾಲಿನ ಕಥೆ. ಚಾರ್ಮಿ ಹಾಗೂ ತಂಡದ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ" ಎಂದು ವಿಜಯ್ ಹೇಳಿದ್ದರು.

    ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ 'ಲೈಗರ್'

    ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ 'ಲೈಗರ್'

    ಆಗಸ್ಟ್ 25ಕ್ಕೆ ತೆರೆಗಪ್ಪಳಿಸಿದ 'ಲೈಗರ್' ಸಿನಿಮಾ ಹೀನಾಯವಾಗಿ ಸೋಲುಂಡಿದೆ. ಪುರಿ- ದೇವರಕೊಂಡ ಕಾಂಬಿನೇಷನ್‌, ಭಾರೀ ಹೈಪ್ ಕ್ರಿಯೇಟ್ ಮಾಡಿದ್ದ ಚಿತ್ರಕ್ಕೆ ಮೊದಲ ಶೋನಿಂದಲೇ ನೆಗೆಟಿವ್ ಟಾಕ್ ಶುರುವಾಗಿತ್ತು. ದೇಶ್ಯಾದ್ಯಂತ ವಿಜಯ್ ದೇವರಕೊಂಡ ಕ್ರೇಜ್ ಜೋರಾಗಿತ್ತು. ಸಿನಿಮಾ ಪ್ರಮೋಷನ್‌ಗೆ ಹೋದಾಗಲೂ ಅದೇ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಸಿನಿಮಾ ಮಾತ್ರ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಗೆಲ್ಲಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಟ್ರೋಲ್ ಆಯಿತು. ಪರಿಣಾಮ ಪ್ರೇಕ್ಷಕರು ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಲೇಯಿಲ್ಲ.

    'ಲೈಗರ್' ನಷ್ಟ ಕಟ್ಟಿಕೊಡುತ್ತಾರಾ ಪುರಿ?

    'ಲೈಗರ್' ನಷ್ಟ ಕಟ್ಟಿಕೊಡುತ್ತಾರಾ ಪುರಿ?

    ನಿರ್ದೇಶನದ ಜೊತೆ ಪುರಿ ಜಗನ್ನಾಥ್ ನಿರ್ಮಾಪಕರಾಗಿಯೂ 'ಲೈಗರ್' ಚಿತ್ರದಲ್ಲಿ ತೊಡಗಿಸಿಕೊಂಡಿದ್ದರು. ಬಾಲಿವುಡ್‌ ಕರಣ್‌ ಜೋಹರ್ ಹಾಗೂ ಚಾರ್ಮಿ ಜೊತೆ ಸೇರಿ ಕೋಟಿ ಕೋಟಿ ಹಣ ಸುರಿದಿದ್ದರು. ಬಾಕ್ಸಿಂಗ್ ಲೋಕದ ದಿಗ್ಗಜ ಮೈಕ್ ಟೈಸನ್‌ನ ಕರೆದುಕೊಂಡು ಬಂದಿದ್ದರು. ಹಾಗಾಗಿ ಬಜೆಟ್ 100 ಕೋಟಿ ರೂ. ದಾಟಿತ್ತು. ಸಿನಿಮಾ 90 ಕೋಟಿ ರೂ. ವರೆಗೆ ಬಿಸಿನೆಸ್ ಮಾಡಿತ್ತು. ಆದರೆ ಬ್ರೇಕ್‌ ಈವೆನ್ ಆಗುವಲ್ಲಿ 'ಲೈಗರ್' ಸೋತಿತ್ತು. ಚಿತ್ರದಿಂದ ಅಂದಾಜು 50 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗುತ್ತಿದೆ. ಶೀಘ್ರದಲ್ಲೇ ಪುರಿ ಜಗನ್ನಾಥ್ ವಿತರಕರನ್ನು ಭೇಟಿ ಮಾಡಿ ನಷ್ಟಭರಿಸಿಕೊಡುವ ಸಾಧ್ಯತೆ ಇದೆ. ವಿಜಯ್ ದೇವರಕೊಂಡ ಕೂಡ ಸಂಭಾವನೆಯಲ್ಲಿ 6 ಕೋಟಿ ರೂ. ವಾಪಸ್ ನೀಡಿರುವುದಾಗಿದೆ ಚರ್ಚೆ ನಡೀತಿದೆ.

    English summary
    Due to Disaster Verdict of Liger Vijay Devarakonda and Puri jagannadh Upcoming Movie Jana Gana Mana is Shelved. Know More.
    Monday, September 5, 2022, 10:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X