Kalki 2898 AD {Twitter} X Review ; ಪ್ರಭಾಸ್, ದೀಪಿಕಾ, ಬಿಗ್ ಬಿ ದೃಶ್ಯಕಾವ್ಯ ನೋಡಿ ಹೇಳಿದ್ದೇನು ಪ್ರೇಕ್ಷಕರು..?
ಕಲ್ಕಿ 2898 ಎಡಿ ಸಿನಿಮಾ ಪ್ರಭಾಸ್ ಹಣೆಬರಹ ಬದಲಿಸುತ್ತೆ ಅನ್ನುವ ನಂಬಿಕೆ ಅನೇಕರಲ್ಲಿದೆ. ಯಾಕೆಂದರೆ ಪ್ರಭಾಸ್ ಬಹುದೊಡ್ಡ ಗೆಲುವನ್ನೂ ಕಂಡು ವರ್ಷಾನು ವರ್ಷವಾಗಿದೆ. ಈ ಹಿಂದೆ ಬಂದ ಸಲಾರ್ ದಾಖಲೆಗಳನ್ನೆಲ್ಲ ಪುಡಿ ಪುಡಿ ಮಾಡುವ ವಿಶ್ವಾಸ ಇವರ ಅಭಿಮಾನಿಗಳಲ್ಲಿತ್ತಾದರೂ ಸಲಾರ್ ಸಾಧನೆ ಅಷ್ಟಕಷ್ಟೇ. ಈ ಕಾರಣಕ್ಕೆ ಖುದ್ದು ಪ್ರಭಾಸ್ ಪಾಲಿಗೂ ಕೂಡ ಕಲ್ಕಿ 2898 ಎಡಿ ತುಂಬಾನೇ ಮುಖ್ಯವಾದ ಸಿನಿಮಾ. ಇಂಥ ಕಲ್ಕಿ 2898 ಎಡಿ ಇಂದು ತೆರೆಗೆ ಬಂದಿದೆ. ಚಿತ್ರ ನೋಡಲು ನೂಕು ನುಗ್ಗಲಿನ ವಾತಾವರಣವೂ ಇದೆ. ಹಾಗಿದ್ದರೆ ಕಲ್ಕಿ ಹೇಗಿದೆ. ಚಿತ್ರವನ್ನ ಇಂದು ಬೆಳ್ಳಿಗ್ಗೆಯೇ ನೋಡಿದ ಪ್ರೇಕ್ಷಕರು ಹೇಳಿದ್ದೇನು, ಎಂದು ತಿಳಿಯಲು ಮುಂದೆ ಓದಿ
ಕಲ್ಕಿ 2898ಎಡಿ ಚಿತ್ರಕ್ಕೆ ಖರ್ಚಾಗಿದ್ದು ಬರೋಬ್ಬರಿ 600 ಕೋಟಿ ಅನ್ನುವ ಮಾತು ಇದೆ. ಪ್ರಭಾಸ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಅಭಿನಯದ ಈ ಸೈನ್ಸ್ ಫಿಕ್ಷನ್ ಚಿತ್ರದಲ್ಲಿ ಗ್ರಾಫಿಕ್ಸ್‌ಗೆ ತುಂಬಾನೇ ಮಹತ್ವ ನೀಡಲಾಗಿದೆ. ಅದು ತೆರೆಯ ಮೇಲೆ ಕಾಣುತ್ತೆ ಕೂಡ. ಹೀಗಾಗಿಯೇ ಕಲ್ಕಿಯ ದೃಶ್ಯ ವೈಭವವನ್ನ ಕಣ್ತುಂಬಿಕೊಂಡ ಪ್ರೇಕ್ಷಕರು ಚಿತ್ರದ ಡೈರೆಕ್ಟರ್ ನಾಗ್ ಅಶ್ವಿನ್ ಅವರಿಗೆ ಬಹುಪರಾಕ್ ಹಾಕುತ್ತಿದ್ದಾರೆ. ನಮ್ಮ ನಿರೀಕ್ಷೆಯನ್ನ ಈ ಚಿತ್ರ ಹುಸಿ ಮಾಡಲಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾನ್ಯ ಕಥೆಗಿಂತ ಭಿನ್ನವಾದ ಸಿನಿಮಾ ಇದು. ಇಂತಹ ಜಗತ್ತು ಮತ್ತು ಈ ತರಹದ ದೃಶ್ಯಗಳನ್ನ ಬೆಳ್ಳಿ ತೆರೆಯ ಮೇಲೆ ಕಟ್ಟಿಕೊಟ್ಟಿರೋದು ಇದೇ ಮೊದಲು ಎಂದು ಕೆಲವರು ಬರೆದುಕೊಂಡಿದ್ದರೆ, ಕಲ್ಕಿ 2898ಎಡಿ ಚಿತ್ರವನ್ನೂ ತಪ್ಪದೇ ಚಿತ್ರಮಂದಿರದಲ್ಲಿಯೇ ನೋಡಬೇಕು ಅಂದಿದ್ದಾರೆ. ಪ್ರಭಾಸ್ ನಮ್ಮ ಹೆಮ್ಮೆ, ಅಮಿತಾಭ್ ಬಚ್ಚನ್ ಲೆಜೆಂಡ್ ಎಂದು ಹಾಡಿ ಹೊಗಳುತ್ತಿದ್ದಾರೆ
ಇನ್ನೂ.. ಪ್ರಭಾಸ್ ಚಿತ್ರರಂಗದ ಅತ್ಯಂತ ಬ್ಯಾಂಕೆಬಲ್ ಸ್ಟಾರ್ ನಲ್ಲಿ ಯಾಕೆ ಒಬ್ಬರು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಎಂದಿರುವ ಇನ್ನೊಬ್ಬರು ಕಲ್ಕಿ 2898ಎಡಿಯ ದೃಶ್ಯಾವಳಿ ಹೃದಯದ ಬಡಿತವನ್ನೂ ಹೆಚ್ಚಿಸುತ್ತೆ ಎಂದಿದ್ದಾರೆ.
ಮತ್ತೊಬ್ಬರು ಇದು ಸಿನಿಮಾ ಅಲ್ಲ ಬೆಳ್ಳಿತೆರೆಯಲ್ಲಿ ಆದ ಕ್ರಾಂತಿ ಎಂದು ಹೇಳಿದ್ದಾರೆ. ಇದೊಂದು ಮಾಸ್ಟರ್ ಪೀಸ್ ಸಿನಿಮಾ ಎಂದು ಹೊಗಳಿದ್ದಾರೆ. ಕೆಲವು ನ್ಯೂನತೆಗಳ ಹೊರತಾಗಿಯೂ ಇದು ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ನೋಡಿರದಂತಹ ವಿಶಿಷ್ಟ ಅನುಭವ ನೀಡುವ ಸಿನಿಮಾ ಎಂದಿದ್ದಾರೆ.ಕಲ್ಕಿ 2898 ಎಡಿ ಚಿತ್ರದ ಸಿಕ್ವೆಲ್ ನ ಸುಳಿವು ಕೂಡ ಕೊಟ್ಟಿದ್ದಾರೆ.
ಇನ್ನೂ ಇದು ಪ್ರಭಾಸ್ ಅವರ ಸಾಮರ್ಥ್ಯವನ್ನ ಅತ್ಯುತ್ತಮವಾಗಿ ಬಳಿಸಿಕೊಂಡ ಸಿನಿಮಾ ಇದು ಎಂದು ಇನ್ನೊಬ್ಬರು ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಚಿತ್ರದ ದೃಶ್ಯಗಳು ಮತ್ತು ಚಿತ್ರದಲ್ಲಿನ ಸಾಹಸ ಸನ್ನಿವೇಶಗಳು ಅದ್ಭುತ ಎಂದು ವರ್ಣಿಸಿದ್ದಾರೆ.
ಒಟ್ನಲ್ಲಿ ಬಹುತೇಕರು ಕಲ್ಕಿ 2898 ಎಡಿ ಚಿತ್ರ ನಿರೀಕ್ಷೆಯನ್ನ ಹುಸಿ ಮಾಡದ ಸಿನಿಮಾ ಎಂದೇ ಅನೇಕರು ಹೇಳಿದ್ದಾರೆ. ನಾಗ್ ಅಶ್ವಿನ್ ಚಿತ್ರಕಥೆಯಲ್ಲಿ ಮಾಡಿದ ಕೆಲ ತಪ್ಪುಗಳನ್ನು ಹೊರತು ಪಡಿಸಿದರೆ ಸಿನಿಮಾ ಅದ್ಭುತವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ಸಿನಿಮಾಗಳನ್ನು ಬೆಳ್ಳಿತೆರೆಯ ಮೇಲೆಯೇ ಕಣ್ತುಂಬಿಕೊಳ್ಳಬೇಕು ಎಂದಿದ್ದಾರೆ


Click it and Unblock the Notifications











