twitter
    For Quick Alerts
    ALLOW NOTIFICATIONS  
    For Daily Alerts

    'ಈಗ' ಚಿತ್ರಕ್ಕೆ 9 ವರ್ಷದ ಸಂಭ್ರಮ: ಸೂಪರ್ ಹಿಟ್ ಚಿತ್ರದ ಸೀಕ್ವೆಲ್ ಬಗ್ಗೆ ಅಪ್‌ಡೇಟ್

    |

    ಜುಲೈ 6 ಕಿಚ್ಚ ಸುದೀಪ್ ಪಾಲಿಗೆ ತುಂಬಾ ವಿಶೇಷವಾದ ದಿನ. ಇದೇ ದಿನ ಸುದೀಪ್ ಕಿಚ್ಚ ಆಗಿ ಅಭಿಮಾನಿಗಳಿಗೆ ಸಿಕ್ಕಿದ್ದು. ಸುದೀಪ್ ನಟನೆಯ ಹುಚ್ಚ ಸಿನಿಮಾ ಬಿಡುಗಡೆಯಾದ ದಿನ. ಇದೇ ದಿನ ಸರಿಯಾಗಿ 20 ವರ್ಷಗಳ ಹಿಂದೆ ಸುದೀಪ್ ನಟನೆಯ ಹುಚ್ಚ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಸುದೀಪ್ ವೃತ್ತಿ ಜೀವನವನ್ನೇ ಬದಲಾಯಿಸಿತು. ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್‌ಗೆ ಮತ್ತೊಬ್ಬ ಸ್ಟಾರ್ ಎಂಟ್ರಿಯಾಯಿತು.

    ಹುಚ್ಚ ಚಿತ್ರದ ಬಳಿಕ ಕನ್ನಡ ಸಿನಿಮಾರಂಗದಲ್ಲಿ ರಾರಾಜಿಸುತ್ತಿದ್ದ ಸುದೀಪ್ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು ಇದೇ ದಿನ. 2012 ಜುಲೈ 6ರಂದು ಸುದೀಪ್ ಈಗ ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಿತರಾದರು. ಸುದೀಪ್ ವೃತ್ತಿ ಜೀವನದ ಮತ್ತೊಂದು ಅದ್ಭುತ ಘಳಿಗೆ ಎಂದರು ತಪ್ಪಾಗಲ್ಲ. ಕೇವಲ ಕನ್ನಡ ಸಿನಿಮಾರಂಗದಲ್ಲಿ ಮಾತ್ರ ಮಿಂಚುತ್ತಿದ್ದ ಕಿಚ್ಚ 'ಈಗ' ಚಿತ್ರದ ಬಳಿಕ ತೆಲುಗು ಸಿನಿಮಾರಂಗದಲ್ಲೂ ಸ್ಟಾರ್ ಆಗಿ ಗುರುತಿಸಿಕೊಂಡರು. ಮುಂದೆ ಓದಿ..

    ರಾಜಮೌಳಿ ನಿರ್ದೇಶನದಲ್ಲಿ ಬಂದ 'ಈಗ'

    ರಾಜಮೌಳಿ ನಿರ್ದೇಶನದಲ್ಲಿ ಬಂದ 'ಈಗ'

    ಸ್ಟಾರ್ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಬಂದ ಈಗ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅದ್ಭುತ ಸಿನಿಮಾಗೆ ಫಿದಾ ಆಗದ ಚಿತ್ರಪ್ರಿಯರಿಲ್ಲ. ಈ ಸಿನಿಮಾ ಸಕ್ಸಸ್ ಜೊತೆಗೆ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಈ ಸಿನಿಮಾ ರಾಜಮೌಳಿ ಸೃಜನಶೀಲತೆಗೆ ಮತ್ತೊಂದು ದೊಡ್ಡ ಉದಾಹರಣೆಯಾಗಿತ್ತು.

    9 ವರ್ಷದ ಸಂಭ್ರಮದಲ್ಲಿ 'ಈಗ'

    9 ವರ್ಷದ ಸಂಭ್ರಮದಲ್ಲಿ 'ಈಗ'

    ತೆಲುಗು ಸಿನಿಮಾರಂಗದಲ್ಲಿ ಸ್ಟಾರ್ ಪವರ್ ಇಲ್ಲದೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಮಾಡಬಹುದು ಎಂದು ಸಾಬೀತುಪಡಿಸಿದ ಚಿತ್ರವಿದು. ಇಂಥಹ ಸಾಕಷ್ಟು ದಾಖಲೆಗಳನ್ನು ಮಾಡಿರುವ 'ಈಗ' ಸಿನಿಮಾ ಗೆ 9 ವರ್ಷದ ಸಂಭ್ರಮ.

    ಸೇಡು ತೀರಿಸಿಕೊಳ್ಳುವ ಕಥೆ

    ಸೇಡು ತೀರಿಸಿಕೊಳ್ಳುವ ಕಥೆ

    'ಈಗ' ಇದೊಂದು ಪಕ್ಕ ಸೇಡು ತೀರಿಸಿಕೊಳ್ಳುವ ಕಥೆ. ನೊಣ ಚಿತ್ರದ ಹೀರೋ ಎನ್ನುವುದೇ ವಿಶೇಷ. ವಿಲನ್ ಶೇಡ್ ನಲ್ಲಿ ಕಿಚ್ಚ ಅಬ್ಬರಿಸಿದ್ದರು. ಸುದೀಪ್ ಅದ್ಭುತ ನಟನೆಗೆ ಇಡೀ ಭಾರತೀಯ ಸಿನಿಮಾರಂಗ ಫಿದಾ ಆಗಿತ್ತು. ನಟ ನಾಣಿ ಮತ್ತು ಸಮಂತಾ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.

    'ಈಗ' ಸೀಕ್ವೆಲ್ ಗೆ ಪ್ಲಾನ್?

    'ಈಗ' ಸೀಕ್ವೆಲ್ ಗೆ ಪ್ಲಾನ್?

    9 ವರ್ಷದ ಸಂಭ್ರಮದ ಈ ಸಮಯದಲ್ಲಿ ಈಗ ಚಿತ್ರದ ಸೀಕ್ವೆಲ್ ಮತ್ತೆ ಸದ್ದು ಮಾಡುತ್ತಿದೆ. ಅಂದಹಾಗೆ ಈಗ ಪಾರ್ಟ್-2 ಬರಲಿದೆ ಎನ್ನುವ ಮಾತು ಇಂದು ನಿನ್ನೆಯದಲ್ಲ. ಕಳೆದ ಎರಡು ವರ್ಷಗಳಿಂದ ಸುದ್ದಿ ಹರಿದಾಡುತ್ತಿದೆ. ಪಾರ್ಟ್-2 ಮಾಡಲು ಬರಹಗಾರ ವಿಜಯೇಂದ್ರ ಪ್ರಸಾದ್ ಪ್ಲಾನ್ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಯಾವಾಗ ಪ್ರಾರಂಭವಾಗಲಿದೆ ಎನ್ನುವುದು ಇನ್ನು ಅಧಿಕೃತವಾಗಿಲ್ಲ. ಈ ಬಗ್ಗೆ ಸ್ವತಃ ವಿಜಯೇಂದ್ರ ಪ್ರಸಾದ್ ಅವರೇ ಉತ್ತರ ನೀಡಬೇಕಿದೆ.

    Recommended Video

    ಚಪ್ಪಲಿಯಲ್ಲಿ ಹೊಡೆದೆ ಅಂತ ಜಗ್ಗೇಶ್ ಅಪಪ್ರಚಾರ ಮಾಡಿ ನನ್ನ ತೇಜೋವಧೆ ಮಾಡಿದ್ರು!! | Filmibeat Kannada
    'ಆರ್ ಆರ್ ಆರ್' ಚಿತ್ರದಲ್ಲಿ ರಾಜಮೌಳಿ ಬ್ಯುಸಿ

    'ಆರ್ ಆರ್ ಆರ್' ಚಿತ್ರದಲ್ಲಿ ರಾಜಮೌಳಿ ಬ್ಯುಸಿ

    ನಿರ್ದೇಶಕ ರಾಜಮೌಳಿ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಕೊನೆಯ ಹಂತದ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ಸಿನಿಮಾ ಬಳಿಕ ರಾಜಮೌಳಿ ಪ್ರಿನ್ಸ್ ಮಹೇಶ್ ಬಾಬು ಜೊತೆ ಹೊಸ ಸಿನಿಮಾ ಪ್ರಾರಂಭ ಮಾಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

    English summary
    Eega Movies Completes 9 years: Here’s an update on Eega sequel.
    Tuesday, July 6, 2021, 16:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X