For Quick Alerts
  ALLOW NOTIFICATIONS  
  For Daily Alerts

  ಭಾರತ ದೇಶದ ಬಗ್ಗೆ ಕೇವಲವಾಗಿ ಮಾತನಾಡಿದ ರಶ್ಮಿಕಾ: ಡಿಲೀಟೆಡ್ ಸೀನ್ ವೈರಲ್!

  |

  ಹನು ರಾಘವಪುಡಿ ನಿರ್ದೇಶನದ 'ಸೀತಾರಾಮಂ' ಸಿನಿಮಾ ಸೂಪರ್ ಹಿಟ್ ಆಗಿದೆ. ಹಿಂದಿಗೂ ಡಬ್ ಆಗಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಮಲಯಾಳಂ ನಟ ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಮತ್ತೊಂದು ಮುಖ್ಯ ಪಾತ್ರದಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದಾರೆ. ಸಿನಿಮಾ ಓಟಿಟಿ ರಿಲೀಸ್‌ಗೆ ಸಿದ್ಧವಾಗಿದ್ದು, ಇಂತಹ ಹೊತ್ತಲ್ಲೇ ಚಿತ್ರದ ಡಿಲೀಟೆಡ್‌ ಸೀನ್‌ಗಳನ್ನು ರಿಲೀಸ್ ಮಾಡಲಾಗ್ತಿದೆ.

  ಭಾರತೀಯ ಚಿತ್ರರಂಗದಲ್ಲಿ ಈಗ ರಶ್ಮಿಕಾ ಮಂದಣ್ಣ ಕಾರುಬಾರು ಜೋರಾಗಿದೆ. ಟಾಲಿವುಡ್, ಕಾಲಿವುಡ್, ಬಾಲಿವುಡ್ ಎಲ್ಲಾ ಕಡೆ ಸಾನ್ವಿ ಮಿಂಚುತ್ತಿದ್ದಾರೆ. 'ಸೀತಾರಾಮಂ' ಚಿತ್ರದಲ್ಲಿ ಪಾಕಿಸ್ತಾನದ ಯುವತಿ ಅಫ್ರಿನ್ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಸಿನಿಮಾ ಪ್ರೇಕ್ಷಕರ ಮನಗೆದ್ದಿದ್ದು, ಕೊಡಗಿನ ಚೆಲುವೆ ನಟನೆಗೂ ಒಳ್ಳೆ ಅಂಕ ಸಿಕ್ಕಿದೆ. ಸದ್ಯ ಚಿತ್ರದ ಡಿಲೀಟೆಡ್ ಸೀನ್‌ನಲ್ಲಿ ರಶ್ಮಿಕಾ ಡೈಲಾಗ್‌ವೊಂದು ಸಖತ್ ಸದ್ದು ಮಾಡ್ತಿದೆ. ವಿವಾದ ಸೃಷ್ಟಿಯಾಗುವ ಕಾರಣಕ್ಕೋ ಏನೋ ಈ ದೃಶ್ಯಕ್ಕೆ ಚಿತ್ರತಂಡ ಕತ್ತರಿ ಹಾಕಿತ್ತು.

  ಹಿಂದಿ ಸಿನಿಮಾ 'ಬ್ರಹ್ಮಾಸ್ತ್ರ'ಗಾಗಿ ರಾಜಮೌಳಿ ತಲೆಕೆಡಿಸಿಕೊಳ್ಳುತ್ತಿರುವುದೇಕೆ?ಹಿಂದಿ ಸಿನಿಮಾ 'ಬ್ರಹ್ಮಾಸ್ತ್ರ'ಗಾಗಿ ರಾಜಮೌಳಿ ತಲೆಕೆಡಿಸಿಕೊಳ್ಳುತ್ತಿರುವುದೇಕೆ?

  'ಸೀತಾರಾಮಂ' ಚಿತ್ರದಲ್ಲಿ ಪಾಕಿಸ್ತಾನ ಮೂಲದ ಯುವತಿಯಾಗಿ ಕಾಣಿಸಿಕೊಂಡಿರುವ ರಶ್ಮಿಕಾಗೆ ಭಾರತ ಅಂದರೆ ಇಷ್ಟ ಇರುವುದಿಲ್ಲ. ಆದರೆ ತನ್ನ ತಾತಾನ ಕೋರಿಕೆಯಂತೆ ಸೀತಾ- ರಾಮ್‌ರನ್ನಿ ಒಂದು ಮಾಡುವ ಜವಾಬ್ದಾರಿಯನ್ನು ಅಫ್ರಿನ್ ವಹಿಸಿಕೊಳ್ಳುತ್ತಾಳೆ. ಸೀತಾಗಾಗಿ ನೂರ್‌ಜಹಾನ್ ಕಾಲೇಜ್‌ಗೆ ಹೋಗುವ ಅಫ್ರಿನ್, ಆಕೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾಳೆ. ಇದ್ದಕ್ಕಿದಂತೆ ಏನೇ ಕಳೆದುಕೊಂಡಂತೆ ಹೊರಬಂದು ಭಾರತ ದೇಶವನ್ನು ಕೇವಲ ಮಾಡಿ ಕ್ಯಾಬ್‌ಡ್ರೈವರ್ ಜೊತೆ ಅಫ್ರಿನ್ ಮಾತನಾಡುತ್ತಾಳೆ. ಆದರೆ ಈ ದೃಶ್ಯ ಸಿನಿಮಾದಲ್ಲಿ ಇಲ್ಲ.

  "ಪರವಾಗಿಲ್ಲ, ಇಂಡಿಯಾದಲ್ಲೂ ನಿನ್ನಂತಹವರು ಇದ್ದಾರೆ ಎಂದು ಅಫ್ರಿನ್ ಧಿಮಾಕಿನಿಂದ ಮಾತನಾಡುತ್ತಾಳೆ. ಅದಕ್ಕೆ ಕ್ಯಾಬ್‌ ಡ್ರೈವರ್ ಇಲ್ಲಿ ನನ್ನಂತಹವರೇ ಇರ್ತಾರೆ. ನಿಮ್ಮ ಬ್ಯಾಗ್‌ ತಗೊಂಡು ಹೋಗಿ ನಮ್ಮ ದೇಶದ ಮರ್ಯಾದೆಯನ್ನು ನಿಮ್ಮ ಜೊತೆ ಕಳಿಸೋಕೆ ಆಗುವುದಿಲ್ಲ. ನಿಮ್ಮ ವಸ್ತುಗಳೆಲ್ಲಾ ಸರಿಯಾಗಿ ಇದ್ಯಾ ಚೆಕ್ ಮಾಡಿಕೊಳ್ಳಿ" ಎಂದು ಆಕೆಯ ಬ್ಯಾಗ್‌ನ ಕೈಗಿಡುತ್ತಾನೆ. ಅಲ್ಲಿಗೆ ಸೀನ್‌ ಮುಕ್ತಾಯವಾಗುತ್ತದೆ. ನಿಜಕ್ಕೂ ಈ ಸೀನ್ ಸಿನಿಮಾದಲ್ಲಿ ಇದ್ದಿದ್ದರೆ ವಿವಾದ ಸೃಷ್ಟಿಯಾಗುವ ಸಾಧ್ಯತೆ ಇತ್ತು. ಅದೇ ಕಾರಣಕ್ಕೆ ಇದಕ್ಕೆ ಕತ್ತರಿ ಹಾಕಿದ್ದಾರೆ ಅನ್ನಿಸ್ತಿದೆ.

  Even Deleted Scene Of Sita Ramam Goes Viral

  ರಶ್ಮಿಕಾ ಮಂದಣ್ಣ ನಟನೆಯ 'ಗುಡ್‌ಬೈ' ಸಿನಿಮಾ ಟ್ರೈಲರ್ ಇತ್ತೀಚೆಗೆ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಬಾಲಿವುಡ್ ಬಿಗ್‌ಬಿ ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ಸಾನ್ವಿ ನಟಿಸಿದ್ದು, ಆಕೆಯ ನಟನೆ ಎಲ್ಲರ ಗಮನ ಸೆಳೆದಿದೆ. ಸಿದ್ಧಾರ್ಥ್‌ ಮಲ್ಹೋತ್ರಾ ಜೋಡಿಯಾಗಿ 'ಮಿಷನ್ ಮಜ್ನು' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತಮಿಳಿನ 'ವಾರಿಸು' ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಸ್ಕ್ರೀನ್‌ ಶೇರ್ ಮಾಡಿಕೊಂಡಿದ್ದಾರೆ. ಇನ್ನು 'ಅನಿಮಲ್', 'ಪುಷ್ಪ- 2' ಹೀಗೆ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳು ಕಿರಿಕ್ ಬೆಡಗಿ ಕೈಯಲ್ಲಿದೆ. ರಶ್ಮಿಕಾ ಕನ್ನಡದಲ್ಲಿ ಯಾವಾಗ ನಟಿಸ್ತಾರೆ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಚೆಲುವೆ ಸದ್ಯಕ್ಕೆ ಕನ್ನಡದಲ್ಲಿ ನಟಿಸಲು ಸಮಯ ಇಲ್ಲ, ಬೇರೆ ಭಾಷೆಯ ಸಿನಿಮಾಗಳಲ್ಲಿ ಹೆಚ್ಚು ಹೆಚ್ಚು ನಟಿಸ್ತಿದ್ದೀನಿ ಎಂದಿದ್ದರು.

  English summary
  Even Deleted Scene Of Sita Ramam Goes Viral. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X