For Quick Alerts
  ALLOW NOTIFICATIONS  
  For Daily Alerts

  ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಬಯೋಪಿಕ್ ಘೋಷಣೆ

  |

  ಭಾರತದ ಮಾಜಿ ಪ್ರಧಾನಮಂತ್ರಿ ಪಿವಿ ನರಸಿಂಹರಾವ್ ಅವರ 100ನೇ ಜನುಮದಿನದ ಪ್ರಯುಕ್ತ ಅವರ ಬಯೋಪಿಕ್ ಸಿನಿಮಾ ಘೋಷಣೆಯಾಗಿದೆ.

  'ಎರ್ರ ಮಲ್ಲೆಲು' ಹಾಗೂ 'ಯುವರತ್ನ ಕದಿಲಿಂದಿ' ಅಂತಹ ಸಿನಿಮಾಗಳನ್ನು ನಿರ್ದೇಶಿಸಿದ್ದ ಧವಳ ಸತ್ಯಂ ಪಿವಿ ನರಸಿಂಹರಾವ್ ಜೀವನ ಆಧರಿಸಿ ಸಿನಿಮಾ ಮಾಡಲು ಮುಂದಾಗಿದ್ದಾರೆ.

  ಆಧುನಿಕ ಭಾರತ ನಿರ್ಮಾತೃ ಪಿ.ವಿ.ನರಸಿಂಹ ರಾವ್‌ಗೆ 100

  ತಡಿವಾಕ ರಮೇಶ್ ನಾಯ್ಡು ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದು, ಏಕಕಾಲದಲ್ಲಿ ತೆಲುಗು ಮತ್ತು ಹಿಂದಿಯಲ್ಲಿ ಈ ಸಿನಿಮಾ ತಯಾರಾಗಲಿದೆ. ತದನಂತರ ಉಳಿದ ಭಾಷೆಗಳಿಗೆ ಡಬ್ ಮಾಡಲಾಗುವುದು ಎಂದು ತಿಳಿದು ಬಂದಿದೆ.

  ಪಿವಿ ನರಸಿಂಹರಾವ್ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಸದ್ಯದ ವರದಿ ಪ್ರಕಾರ, ಹಿಂದಿ ಚಿತ್ರರಂಗದ ಖ್ಯಾತ ಕಲಾವಿದರೊಬ್ಬರು ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಆ ಕಲಾವಿದ ರಾಷ್ಟ್ರಮಟ್ಟದಲ್ಲಿ ಉತ್ತಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ ಎಂದು ಸಿನಿಮಾ ಎಕ್ಸ್‌ಪ್ರೆಸ್ ವರದಿಯಲ್ಲಿ ಉಲ್ಲೇಖವಾಗಿದೆ.

  ಸದ್ಯ ಪ್ರಿ-ಪ್ರೊಡಕ್ಷನ್ ಹಂತದ ಕೆಲಸ ನಡೆಯುತ್ತಿದ್ದು, ಸ್ಕ್ರಿಪ್ಟ್, ಕಲಾವಿದರ ಆಯ್ಕೆ ಮಾಡಲಾಗುತ್ತಿದೆ. ಸದ್ಯದಲ್ಲೇ ಚಿತ್ರದ ಫೋಟೋಶೂಟ್ ಸಹ ಮಾಡುವ ತಯಾರಿ ಸಾಗಿದೆ.

  ಭಾರತದ ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಿದ್ದು, 2022ರ ಜೂನ್ 28 ರಂದು ಈ ಸಿನಿಮಾ ತೆರೆಗೆ ತರಲು ಯೋಜಿಸಲಾಗಿದೆ. ಇದಕ್ಕೂ ಮುಂಚೆ ಮನಮೋಹನ್ ಸಿಂಗ್ ಹಾಗೂ ಪಿಎಂ ನರೇಂದ್ರ ಮೋದಿ ಅವರ ಕುರಿತು ಸಿನಿಮಾಗಳು ಬಂದಿದ್ದವು.

  ಪಿವಿ ನರಸಿಂಹರಾವ್ ಕುರಿತು

  ನಯನತಾರ ಮದುವೆ ವಿಳಂಬಕ್ಕೆ ಕಾರಣ ಕೊಟ್ಟ ಬಾಯ್ ಫ್ರೆಂಡ್ | Filmibeat Kannada

  ಪಾಮುಲಪರ್ತಿ ವೆಂಕಟ ನರಸಿಂಹರಾವ್ ಭಾರತದ 9ನೇ ಪ್ರಧಾನಮಂತ್ರಿ ಆಗಿದ್ದರು. 1991 ರಿಂದ 1996ರವರೆಗೂ ಪೂರ್ಣಾವಧಿ ಅಧಿಕಾರ ನಡೆಸಿದ್ದರು. ಪಿ.ವಿ.ನರಸಿಂಹ ರಾವ್ ಅವರು ಜೂನ್ 28, 1921ರಲ್ಲಿ ಕರೀಂನಗರದ ವಂಗಾರ ಎಂಬ ಊರಲ್ಲಿ ಜನಿಸಿದರು. ಬಿಎಸ್ಸಿ, ಎಲ್‌ಎಲ್‌ಬಿ ಪದವಿ ಪಡೆದ ಪಿ.ವಿ.ನರಸಿಂಹ ರಾವ್ ಓರ್ವ ವಕೀಲನಾಗಿ ವೃತ್ತಿ ಮಾಡಿದ್ದರು. ನಂತರ ರಾಜಕೀಯ ಪ್ರವೇಶಿಸಿ ಸಚಿವರಾಗಿ ಮುಖ್ಯ ಖಾತೆಗಳನ್ನು ನಿರ್ವಹಿಸಿದರು.

  English summary
  Indian Ex Prime minister PV Narasimha Rao's biopic announced. bollywood top hero consider to do Lead role says Report.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X