For Quick Alerts
  ALLOW NOTIFICATIONS  
  For Daily Alerts

  ಇಟಲಿ ಮೀಡಿಯಾಗಳಲ್ಲಿ ಪ್ರಭಾಸ್‌ ಹವಾ: ರಾಧೆ-ಶ್ಯಾಮ್ ಚಿತ್ರೀಕರಣದ ಬಗ್ಗೆ ಸುದ್ದಿ

  |

  ಪ್ರಭಾಸ್-ಪೂಜಾ ಹೆಗ್ಡೆ ಅಭಿನಯದ ರಾಧೆ-ಶ್ಯಾಮ್ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿದೆ. ಇತ್ತೀಚೆಗಷ್ಟೆ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದು, ಸಖತ್ ವೈರಲ್ ಆಗಿದೆ.

  ರಾಧೆ-ಶ್ಯಾಮ್ ಸಿನಿಮಾದ ಚಿತ್ರೀಕರಣ ಇಟಲಿಯಲ್ಲಿ ಭರದಿಂದ ಸಾಗಿದ್ದು, ಗತ ಹಾಗೂ ಪ್ರಸ್ತುತ ನಡುವೆ ನಡೆವ ಕತೆ ಹೊಂದಿರುವ ಈ ಬಿಗ್ ಬಜೆಟ್ ಸಿನಿಮಾ ಇಟಲಿಯಲ್ಲಿ ಸಖತ್ ಕುತೂಹಲ ಕೆರಳಿಸಿದೆ.

  ರಾಧೆ-ಶ್ಯಾಂ ಟೀಸರ್: ರಗಡ್‌ ಲುಕ್‌ ನಿಂದ ಲವರ್ ಬಾಯ್ ಲುಕ್ ಕಡೆಗೆ ಪ್ರಭಾಸ್

  ರಾಧೆ-ಶ್ಯಾಮ್ ಸಿನಿಮಾದ ಬಗ್ಗೆ ಭಾರತದ ಪತ್ರಿಕೆಗಳು, ಸುದ್ದಿವಾಹಿನಿಗಳು, ಸುದ್ದಿ ವೆಬ್‌ಸೈಟ್‌ಗಳಲ್ಲಿ ಆಗಾಗ್ಗೆ ಸುದ್ದಿ ಬರುತ್ತಲೇ ಇರುತ್ತವೆ. ಆದರೆ ಪ್ರಭಾಸ್ ಹವಾ ಎಂಥಹುದ್ದೆಂದರೆ ಇಟಲಿಯ ಮಾಧ್ಯಮಗಳಲ್ಲಿಯೂ ಪ್ರಭಾಸ್ ನಟನೆಯ ರಾಧೆ-ಶ್ಯಾಮ್ ಸಿನಿಮಾದ ಚಿತ್ರೀಕರಣದ ಸುದ್ದಿ ಪ್ರಸಾರವಾಗಿದೆ.

  ಇಟಲಿಯ ಟಿಜಿಆರ್ ಟಿವಿಯಲ್ಲಿ ವರದಿ

  ಇಟಲಿಯ ಟಿಜಿಆರ್ ಟಿವಿಯಲ್ಲಿ ವರದಿ

  ಹೌದು, ಇಟಲಿಯ ಹೆಸರಾಂತ ಸುದ್ದಿ ವಾಹಿನಿ ಟಿಗಿಆರ್ ಸುದ್ದಿ ವಾಹಿನಿ ರಾಧೆ-ಶ್ಯಾಂ ಸಿನಿಮಾದ ಚಿತ್ರೀಕರಣದ ಬಗ್ಗೆ ವಿವರವಾಗಿ ವರದಿ ಮಾಡಿದೆ. ಚಿತ್ರೀಕರಣ ಸೆಟ್‌, ಚಿತ್ರೀಕರಣ ನಡೆಯುತ್ತಿರುವ ಸನ್ನಿವೇಶಗಳನ್ನು ಸುದ್ದಿಯನ್ನು ಪ್ರಸಾರ ಮಾಡಿದೆ.

  ಪ್ರಭಾಸ್-ಪೂಜಾ ಹೆಗ್ಡೆ ಬಗ್ಗೆ ಮಾತು

  ಪ್ರಭಾಸ್-ಪೂಜಾ ಹೆಗ್ಡೆ ಬಗ್ಗೆ ಮಾತು

  ಪ್ರಭಾಸ್, ಪೂಜಾ ಹೆಗ್ಡೆ, ನಿರ್ದೇಶಕ ರಾಧಾ ಕೃಷ್ಣ ಕುಮಾರ್ ಅವರ ಬಗ್ಗೆಯೂ ಮಾತನಾಡುವ ಸುದ್ದಿ ವಾಚಕಿ, ಬಾಲಿವುಡ್ ಸಿನಿಮಾದ ಚಿತ್ರೀಕರಣ ಎಂದು ಹೇಳುತ್ತಾಳೆ. ಆದರೆ ರಾಧೆ-ಶ್ಯಾಮ್ ಟಾಲಿವುಡ್ ಸಿನಿಮಾ ಆಗಿದೆ.

  'ಡಾರ್ಲಿಂಗ್' ಪ್ರಭಾಸ್ ಗೆ ವಿಶ್ ಮಾಡಿ ನಿಕ್ ನೇಮ್ ರಿವೀಲ್ ಮಾಡಿದ ಅನುಷ್ಕಾ ಶೆಟ್ಟಿ

  ರಾಧಾ ಕೃಷ್ಣ ಕುಮಾರ್ ಬೈಟ್ ಕೊಟ್ಟಿದ್ದಾರೆ

  ರಾಧಾ ಕೃಷ್ಣ ಕುಮಾರ್ ಬೈಟ್ ಕೊಟ್ಟಿದ್ದಾರೆ

  ಸಿನಿಮಾದ ನಿರ್ದೇಶಕ ರಾಧಾ ಕೃಷ್ಣ ಕುಮಾರ್ ಅವರು ಟಿಜಿಆರ್ ಟಿವಿಗೆ ಬೈಟ್ ಸಹ ನೀಡಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರತಂಡಕ್ಕೆ ಸಹಾಯ ಮಾಡುತ್ತಿರುವ ಅಲ್ಲಿನ ಸ್ಥಳೀಯರೊಬ್ಬರು ಸಹ ಟಿವಿಗೆ ಬೈಟ್ ನೀಡಿ, ಸಿನಿಮಾ ಬಗ್ಗೆ ಇಟಾಲಿಯನ್ ಭಾಷೆಯಲ್ಲಿ ವಿವರ ನೀಡಿದ್ದಾರೆ.

  Shivanna, Prabhudeva ಬಿಗ್ ಬಜೆಟ್ ಸಿನಿಮಾಗೆ ಭಟ್ಟರ ಸಾರಥ್ಯ | Filmibeat Kannada
  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

  ಟಿಜಿಆರ್ ಟಿವಿಯಲ್ಲಿ ಪ್ರಭಾಸ್ ಸಿನಿಮಾದ ಸುದ್ದಿ ಪ್ರಕಟವಾಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋವನ್ನು ಪ್ರಭಾಸ್ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ.

  English summary
  Italy's TGR news Chanel covered exclusive news about Prabhas-Pooja's Radhe-Shyam movie which shooting on going in Italy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X