Filmibeat Exclusive: ಮದುವೆ ಸುದ್ದಿ ಬಗ್ಗೆ ಮೌನ ಮುರಿದ ಗಾಯಕಿ ಮಂಗ್ಲಿ: ಗರಂ ಆಗಿದ್ದೇಕೆ?

ತೆಲಂಗಾಣದ ಜನಪದ ಗಾಯಕಿ ಮಂಗ್ಲಿ ಕನ್ನಡ ಹಾಗೂ ತೆಲುಗು ಸಿನಿಮಾ ಗೀತೆಗಳನ್ನು ಹಾಡಿ ಗೆದ್ದಿದ್ದಾರೆ. ತಮ್ಮ ವಿಭಿನ್ನ ಕಂಠದಲ್ಲಿ ಹಲವು ಹಿಟ್ ಗೀತೆಗಳನ್ನು ಹಾಡಿ ಸಂಗೀತಪ್ರೇಮಿಗಳ ಮನಸೂರೆಗೊಂಡಿದ್ದಾರೆ. 'ರಾಬರ್ಟ್' ಚಿತ್ರದ 'ಕಣ್ಣೇ ಅದಿರಿಂದಿ' ತೆಲುಗು ಹಾಡು ಹಾಡಿ ಕರ್ನಾಟಕದಲ್ಲಿ ಮಂಗ್ಲಿ ಫೇಮಸ್ ಆಗಿದ್ದು ಗೊತ್ತೇಯಿದೆ.

ಜೋಗಿ ಪ್ರೇಮ್ ನಿರ್ದೇಶನದ 'ಏಕ್‌ ಲವ್‌ಯಾ' ಚಿತ್ರದಲ್ಲೂ ಮಂಗ್ಲಿ ಹಾಡು ಹಾಡಿ ಗಮನ ಸೆಳೆದರು. ಮಂಗ್ಲಿ ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಆಕೆ ತಮ್ಮ ಹತ್ತಿರದ ಸಂಬಂಧಿ ವರಸೆಯಲ್ಲಿ ಭಾವ ಆಗುವವರ ಕೈ ಹಿಡಿಯುತ್ತಾರೆ ಎನ್ನುವ ಗುಸುಗುಸು ಕೇಳಿ ಬಂದಿತ್ತು. ಈ ಸುದ್ದಿ ಟಾಲಿವುಡ್‌ನಲ್ಲಿ ಭಾರೀ ಸುದ್ದಿಯಾಗುತ್ತಿದೆ. ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಕಂಚಿನ ಕಂಠದ ಗಾಯಕಿಗೆ ಶುಭಾಶಯ ಕೋರುತ್ತಿದ್ದಾರೆ. ಈ ಬಗ್ಗೆ ಮಂಗ್ಲಿ ಫಿಲ್ಮಿಬೀಟ್‌ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ.

Singer-mangli-about-her-marriage

ಅಂದಹಾಗೆ ಗಾಯಕಿ ಮಂಗ್ಲಿ ಲಂಬಾಣಿ ಸಮುದಾಯಕ್ಕೆ ಸೇರಿದವರು. ಆಕೆಯ ನಿಜವಾದ ಹೆಸರು ಸತ್ಯವತಿ ರಾಥೋಡ್. ತಿರುಪತಿಯ ಶ್ರೀವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ಕರ್ನಾಟಿಕ್ ಮ್ಯೂಸಿಕ್‌ನಲ್ಲಿ ಡಿಪ್ಲೊಮಾ ಮುಗಿಸಿದರು. ನಂತರ ನಿರೂಪಕಿಯಾಗಿ ವೃತ್ತಿಜೀವನ ಪ್ರಾರಂಭಿಸಿದರು. ಸಂಗೀತದಲ್ಲಿ ಆಸಕ್ತಿ ಇದ್ದ ಅವರು ಗಾಯಕಿಯಾದರು.

ಜನಪದ ಗಾಯಕಿಯಾಗಿ ಮಂಗ್ಲಿ ಆರಂಭದಲ್ಲಿ ಗುರುತಿಸಿಕೊಂಡರು. ಖಾಸಗಿ ಆಲ್ಬಂಗಳಲ್ಲಿ ಹಾಡಿ ಗಮನ ಸೆಳೆದರು. ಇಂತಹ ಸಮಯದಲ್ಲೇ ತೆಲಂಗಾಣದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಆಲ್ಬಂಗಳನ್ನು ರೂಪಿಸಿದರು. ತೆಲಂಗಾಣದ ಪ್ರಮುಖ ಹಬ್ಬಗಳಾದ ಬತುಕಮ್ಮ, ಸಮ್ಮಕ್ಕಸರಕ ಮತ್ತು ಬೋನಾಳಗಳಲ್ಲಿ ಮಂಗ್ಲಿಯವರ ಸಂಗೀತ ಆಲ್ಬಂಗಳು ಹಿಟ್ ಆಯಿತು. ನಿಧಾನವಾಗಿ ಸಿನಿಮಾಗಳಿಗೆ ಹಾಡುವ ಅವಕಾಶ ಸಿಕ್ಕಿತು.

5 ವರ್ಷಗಳ ಹಿಂದೆ 'ಶೈಲಜಾ ರೆಡ್ಡಿ ಅಲ್ಲಡು' ಚಿತ್ರದ ಹಾಡೊಂದಕ್ಕೆ ಮಂಗ್ಲಿ ದನಿಯಾದರು. ಬಳಿಕ 'ಜಾರ್ಜ್ ರೆಡ್ಡಿ' ಚಿತ್ರದ 'ನೇನು ನಡಿಪೆ ಬಂಡಿ' ಹಾಡು ಸೆನ್ಸೇಷನ್ ಕ್ರಿಯೇಟ್ ಮಾಡಿತು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಹಾಡಲು ಶುರು ಮಾಡಿದರು. ಇಂತಹ ಸಮಯದಲ್ಲೇ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ತೆಲುಗಿಗೆ ಡಬ್ ಆಗಿ ಮಂಗ್ಲಿ ಹಾಡುವಂತಾಯಿತು. ಆ ಹಾಡು ಹಿಟ್ ಆಗಿ ಕನ್ನಡ ಅವಕಾಶಗಳು ಅರಸಿ ಬಂದವು.

Singer-mangli-about-her-marriage

'ಪುಷ್ಪ' ಚಿತ್ರದ 'ಊ ಅಂಟಾವಾ' ತೆಲುಗು ಹಾಡನ್ನು ಮಂಗ್ಲಿ ಸಹೋದರಿ ಇಂದ್ರವತಿ ಹಾಡಿದ್ದರು. ಆದರೆ ಕನ್ನಡ ವರ್ಷನ್ ಹಾಡನ್ನು ಮಂಗ್ಲಿ ಹಾಡಿ ಕೇಳುಗರನ್ನು ಕುಣಿಸಿದರು. ಬಳಿಕ 'ಏಕ್‌ ಲವ್‌ ಯಾ' ಚಿತ್ರದ 'ಎಣ್ಣೆಗೂ ಹೆಣ್ಣಿಗೂ' ಹಾಡಿನ ಮೂಲಕ ಮತ್ತೊಮ್ಮೆ ಕಮಾಲ್ ಮಾಡಿದರು. ಸದ್ಯ ತಮ್ಮ ಮದುವೆ ಬಗ್ಗೆ ಹರಿದಾಡುತ್ತಿರುವ ಸುದ್ದಿ ಬಗ್ಗೆ ಮಂಗ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಭಾರೀ ಚರ್ಚೆ ಆಗುತ್ತಿರುವ ಮಂಗ್ಲಿ ಮದುವೆ ವಿಚಾರವಾಗಿ ಫಿಲ್ಮೀಬೀಟ್ ಕನ್ನಡ ಆಕೆಯನ್ನು ಸಂಪರ್ಕಿಸಿತ್ತು. ಆದರೆ ಇದೆಲ್ಲಾ ಬರೀ ವದಂತಿ ಎಂದು ಆಕೆ ಹೇಳಿದ್ದಾರೆ. ಮದುವೆ ವಿಚಾರ ಕೇಳುತ್ತಿದ್ದಂತೆ "ನನ್ನ ಮದುವೆನಾ? ಅಯ್ಯೋ ನನ್ನ ಕರ್ಮ.. ಯಾವ ಮದುವೆನೂ ಇಲ್ಲ. ಇದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿಸುತ್ತಿರುವ ಸುಳ್ಳು ಸುದ್ದಿ ಅಷ್ಟೇ. ನನ್ನ ಭಾವನನ್ನು ನಾನು ಮದುವೆ ಆಗ್ತೀನಿ ಅಂತಿದ್ದಾರೆ. ಅದ್ಯಾರು ನನ್ನ ಭಾವ? ಆ ಸುದ್ದಿ ಹಬ್ಬಿಸಿದವರನ್ನೇ ತೋರ್ಸೋಕೆ ಹೇಳಿ ಎಂದು ಗರಂ ಆಗಿದ್ದಾರೆ. ಸದ್ಯಕ್ಕೆ ಮದುವೆ ಆಲೋಚನೆಯೇ ಇಲ್ಲ" ಎಂದು ಮಂಗ್ಲಿ ಹೇಳಿದ್ದಾರೆ.

ಇತ್ತೀಚೆಗೆ ಬಂದ ಸೂಪರ್ ಹಿಟ್ 'ಜವಾನ್' ಚಿತ್ರದ 3 ಹಾಡುಗಳಿಗೆ ಮಂಗ್ಲಿ ದನಿಯಾಗಿದ್ದಾರೆ. 2 ಹಿಂದಿ ಹಾಗೂ 1 ತಮಿಳು, ತೆಲುಗು ವರ್ಷನ್ ಗೀತೆ ಹಾಡಿದ್ದಾರೆ. ಮಂಗ್ಲಿ ಕನ್ನಡದ 'ಪಾದರಾಯ' ಚಿತ್ರಕ್ಕೆ ನಾಯಕಿಯಾಗಿ ನಟಿಸೋಕೆ ಆಯ್ಕೆ ಆಗಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿದೆ.

More from Filmibeat

English summary
Singer Mangli denies rumours of her getting married
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X