Rashmika Mandanna: ರಶ್ಮಿಕಾ ಮಂದಣ್ಣ ಹೆಸರಲ್ಲಿ ವೈರಲ್ ಆಯ್ತು ಫೇಕ್ ವಿಡಿಯೋ: ಇಲ್ಲಿದೆ ಅಸಲಿ ಮ್ಯಾಟರ್

ಸೋಶಿಯಲ್ ಮೀಡಿಯಾದಲ್ಲಿ ಯಾವ್ದು ನಿಜ? ಯಾವ್ದು ಸುಳ್ಳು? ಅನ್ನೋದೇ ಗೊತ್ತಾಗಲ್ಲ. ಫೇಕ್ ಕ್ರಿಯೇಟ್ ಮಾಡುವವರ ಸಂಖ್ಯೆ ಹೆಚ್ಚಾಗ್ತಿದೆ. ಅದರಲ್ಲೂ ಸೆಲೆಬ್ರೆಟಿಗಳ ಬಗ್ಗೆ ಸುಳ್ಳು ಸುದ್ದಿ, ಫೇಕ್ ಫೋಟೊ, ವಿಡಿಯೋ ತೇಲಿ ಬಿಡುವವರ ಸಂಖ್ಯೆ ದೊಡ್ಡದಿದೆ. ನಟಿ ರಶ್ಮಿಕಾ ಮಂದಣ್ಣಗೂ ಈ ಸಮಸ್ಯೆ ಪದೇ ಪದೆ ಎದುರಾಗುತ್ತಿರುತ್ತದೆ.

ಸದ್ಯ ರಶ್ಮಿಕಾ ಮಂದಣ್ಣ ಡೀಪ್ ನೆಕ್ ಬ್ಲಾಕ್‌ಕಲರ್‌ ಡ್ರೆಸ್‌ನಲ್ಲಿ ಲಿಫ್ಟ್ ಒಳಗೆ ಬಂದು ನಿಲ್ಲುವಂತೆ ಕಾಣುವ ವಿಡಿಯೋವೊಂದರು ವೈರಲ್ ಆಗುತ್ತಿದೆ. ಸಾಕಷ್ಟು ಜನ ಇದು ರಶ್ಮಿಕಾ ಮಂದಣ್ಣ ಅಂತ್ಲೇ ಭಾವಿಸಿದ್ದಾರೆ. ಏನಪ್ಪಾ ಇದು ರೋಶ್ ಇಷ್ಟೊಂದು ಬೋಲ್ಡ್ ಆಗಬಿಟ್ರಾ? ಇಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಾರಾ? ಅಂತೆಲ್ಲಾ ಹುಬ್ಬೇರಿಸಿದ್ದಾರೆ. ಆದರೆ ಮೇಲ್ನೋಟಕ್ಕೆ ಈ ವಿಡಿಯೋದಲ್ಲಿ ಇರೋದು ರಶ್ಮಿಕಾ ರೀತಿ ಕಂಡರೂ ಅದು ರಶ್ಮಿಕಾ ಅಲ್ಲ.

Fact Check: Rashmika Mandannas Deep fake video Goes viral

ಹೌದು. ಈಗೊಂದು ಫೇಕ್ ವಿಡಿಯೋ ಡೀಪ್ ಫೇಕ್ ವಿಡಿಯೋ ಕ್ರಿಯೇಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ತೇಲಿಬಿಟ್ಟಿದ್ದಾರೆ. ಕೆಲವರು ಇದು ನಿಜ ಅಂತ್ಲೇ ನಂಬಿದ್ದಾರೆ. ಪತ್ರಕರ್ತ ಅಭಿಷೇಕ್ ಎಂಬುವವರು ಈ ವಿಡಿಯೋದ ಸತ್ಯಾಸತ್ಯತೆಯನ್ನು ಬಯಲು ಮಾಡಿದ್ದಾರೆ. ಅಂದಹಾಗೆ ಈ ವಿಡಿಯೋದಲ್ಲಿ ಇರೋದು ಝರಾ ಪಟೇಲ್. ಆದರೆ ಆಕೆಯ ಮುಖಕ್ಕೆ ರಶ್ಮಿಕಾ ಮುಖವನ್ನು ಮಾರ್ಪ್ ಮಾಡಿ ಕಿಡಿಗೇಡಿಗಳು ವೈರಲ್ ಮಾಡಿದ್ದಾರೆ.

ಈ ಹಿಂದೆ ರಶ್ಮಿಕಾ ಮಂದಣ್ಣ ಇದೇ ರೀತಿಯಲ್ಲೇ ಶಾರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದ ಫೋಟೊ, ಜಿಮ್ ವಿಡಿಯೋಗಳು ವೈರಲ್ ಆಗಿತ್ತು. ಕೆಲವರು ಒಂದಕ್ಕೊಂದು ಹೋಲಿಕೆ ಮಾಡಿಕೊಂಡು ಸದ್ಯ ವೈರಲ್ ಆಗಿರುವ ವಿಡಿಯೋ ರಶ್ಮಿಕಾರದ್ದೇ ಎಂದು ಭಾವಿಸಿದ್ದಾರೆ. ಈ ಬಗ್ಗೆ ಅಭಿಷೇಕ್ ಮಾಹಿತಿ ನೀಡಿದ್ದಾರೆ. ಎರಡೂ ವಿಡಿಯೋಗಳನ್ನು ಶೇರ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಸದ್ಯ ವೈರಲ್ ಆಗಿರುವ ಫೇಕ್ ವಿಡಿಯೋ ಬಗ್ಗೆ ರಶ್ಮಿಕಾ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣರಾದವರಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಹಿಂದೆ ಸಾಕಷ್ಟು ನಟ, ನಟಿಯರಿಗೆ ಇಂತಹ ಫೇಕ್ ಫೋಟೊ, ವಿಡಿಯೋಗಳಿಂದ ಮುಜುಗರ ಉಂಟಾಗಿತ್ತು. ತಂತ್ರಜ್ಞಾನ ಬೆಳೆದಂತೆ ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವುದಕ್ಕಿಂತ ತಪ್ಪಾದ ರೀತಿಯಲ್ಲಿ ಬಳಸಿಕೊಳ್ಳುವವರು ಹೆಚ್ಚಾಗುತ್ತಿದ್ದಾರೆ. ಇದು ಮುಂದೆ ಯಾವ ಹಂತಕ್ಕೆ ಹೋಗಿ ತಲುಪುತ್ತದೆ ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ರಶ್ಮಿಕಾ ಮಂದಣ್ಣ ನಟನೆಯ 'ಅನಿಮಲ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ರಣ್‌ಬೀರ್ ಕಪೂರ್ ಜೋಡಿಯಾಗಿ ರಶ್ಮಿಕಾ ನಟಿಸಿರುವ ಈ ಸಿನಿಮಾ ಡಿಸೆಂಬರ್ 1ಕ್ಕೆ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಲಿಪ್‌ಲಾಕ್ ಸೀನ್‌ಗಳು ವೈರಲ್ ಆಗಿದೆ. ಸಂದೀಪ್ ರೆಡ್ಡಿ ವಂಗಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬಾಬಿ ಡಿಯೋನ್, ಅನಿಲ್ ಕಪೂರ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. 2 ಬಾಲಿವುಡ್ ಚಿತ್ರದಲ್ಲಿ ನಟಿಸಿದರೂ ರಶ್ಮಿಕಾಗೆ ಸಕ್ಸಸ್ ಸಿಗಲಿಲ್ಲ. 'ಅನಿಮಲ್' ಕೈ ಹಿಡಿಯುತ್ತಾ ಕಾದು ನೋಡಬೇಕಿದೆ.

ಸೂಪರ್ ಹಿಟ್ 'ಪುಷ್ಪ' ಸೀಕ್ವೆಲ್‌ನಲ್ಲೂ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಸುಕುಮಾರ್ ನಿರ್ದೇಶನದ ಈ ಸಿನಿಮಾ ಮುಂದಿನ ವರ್ಷ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಜೋಡಿ ಶ್ರೀವಲ್ಲಿಯಾಗಿ ರಶ್ಮಿಕಾ ತಮ್ಮ ಪಾತ್ರ ಮುಂದುವರೆದಿದ್ದಾರೆ. ಇನ್ನು 'ರೈನ್‌ಬೋ' ಎನ್ನುವ ಒಂದು ಮಹಿಳಾ ಪ್ರಧಾನ ಚಿತ್ರದಲ್ಲೂ ಕಿರಿಕ್ ಬೆಡಗಿ ಮಿಂಚಿದ್ದಾರೆ. ತೆಲುಗು, ತಮಿಳಿನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಧನುಷ್ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

More from Filmibeat

English summary
Rashmika Mandanna's morphed video trending in instagram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X