ಜಾಲಿ ರೆಡ್ಡಿ 'ಪುಷ್ಪ'ನ ಮಡದಿ ಶ್ರೀವಲ್ಲಿನ ಕೊಂದು ಬಿಟ್ನಾ? ಸೇಮ್ KGF- 2 ಸ್ಟೋರಿನೇ? ಫೋಟೊ ವೈರಲ್

ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ' ಸಿನಿಮಾ ಎರಡು ವರ್ಷಗಳ ಹಿಂದೆ ಬಾಕ್ಸಾಫೀಸ್ ಧೂಳೆಬ್ಬಿಸಿದ್ದು ಗೊತ್ತೇಯಿದೆ. ಚಿತ್ರದ ಪ್ರತಿಯೊಂದು ಪಾತ್ರವೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಇನ್ನು 'ಪುಷ್ಪ' ಕಥೆ ಥೇಟ್‌ 'KGF' ಸಿನಿಮಾ ರೀತಿಯೇ ಇದೆ ಎನ್ನುವ ವಾದವನ್ನು ಕೆಲವರು ಮುಂದಿಟ್ಟಿದ್ದರು. ಸದ್ಯ ಈ ಚಿತ್ರದ ಸೀಕ್ವೆಲ್‌ ಶೂಟಿಂಗ್ ಭರದಿಂದ ಸಾಗುತ್ತಿದೆ.

'ಪುಷ್ಪ'- 2 ಚಿತ್ರದಲ್ಲೂ ಬಹುತೇಕ ಅದೇ ಪಾತ್ರಗಳು ಮುಂದುವರೆಯಲಿವೆ. ಕ್ಲೈಮ್ಯಾಕ್ಸ್‌ನಲ್ಲಿ 'ಪುಷ್ಪ'ರಾಜ್ ಶ್ರೀವಲ್ಲಿನ ಮದುವೆ ಆಗಿದ್ದಾನೆ. ಇಬ್ಬರು ಸತಿ- ಪತಿಗಳಾಗಿ ಸೀಕ್ವೆಲ್ ಕತೆ ಸಾಗಲಿದೆ. ಇತ್ತೀಚಿಗೆ ಭನ್ವರ್ ಸಿಂಗ್ ಶೇಖಾವತ್ ಆಗಿ ಫಹಾದ್ ಫಾಸಿಲ್ ನಟಿಸಿರುವ ಶೆಡ್ಯೂಲ್ ಶೂಟಿಂಗ್ ಮುಕ್ತಾಯವಾಗಿದೆ. ಇದನ್ನು ಸ್ವತಃ ಚಿತ್ರತಂಡವೇ ಖಚಿತಪಡಿಸಿತ್ತು. ಇದೆಲ್ಲದರ ನಡುವೆ 'ಪುಷ್ಪ'- 2 ಚಿತ್ರದ ಸನ್ನಿವೇಶ ಎಂದು ಒಂದು ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

fake photo has gone viral claiming to be a leaked Srivallis Death scene From Pushpa- 2

ಶ್ರೀವಲ್ಲಿ ಸತ್ತು ಮಲಗಿದ್ದಾಳೆ ಎನ್ನುವಂತೆ ಕಾಣುವ ಫೋಟೊ ಇದು. ಕಳೆದೆರಡು ದಿನಗಳಿಂದ ಈ ಫೋಟೊ ಸಖತ್ ಸದ್ದು ಮಾಡ್ತಿದೆ. ಸೀಕ್ವೆಲ್‌ನಲ್ಲಿ ಜಾಲಿ ರೆಡ್ಡಿ(ಧನಂಜಯ್) ಶ್ರೀವಲ್ಲಿನ ಕೊಂದು ಬಿಟ್ಟಿದ್ದಾನೆ, ಆಕೆಯನ್ನು ಚಟ್ಟದಲ್ಲಿ ಮಲಗಿಸಿರುವ ಸೀನ್ ಇದು, ಎಂದು ಯಾರೋ ಫೋಟೊ ತೇಲಿಬಿಟ್ಟಿದ್ದಾರೆ. ಲೀಕ್ಡ್ ಫೋಟೊ ಎನ್ನುತ್ತಿದ್ದಂತೆ ಫುಲ್ ವೈರಲ್ ಆಗಿದೆ. ಇದನ್ನು ನೋಡಿದವರು ಅಯ್ಯೋ 'KGF' ಕಥೆ ಕಾಪಿ ಮಾಡಿ 'ಪುಷ್ಪ' ಸಿನಿಮಾ ಮಾಡಿದ್ದರು. ಈಗ 'KGF'- 2 ರೀತಿಯಲ್ಲೇ 'ಪುಷ್ಪ- 2' ಕಥೆ ಕೂಡ ಇದೆ, ಆ ಕಥೆಯಲ್ಲಿ ನಾಯಕಿ ರೀನಾ ಸತ್ತಿದ್ದಳು, ಈಗ ಈ ಕಥೆಯಲ್ಲಿ ಶ್ರೀವಲ್ಲಿ ಸತ್ತಿದ್ದಾಳೆ ಅಂತೆಲ್ಲಾ ಚರ್ಚಿಸಲು ಶುರು ಮಾಡಿದ್ದರು.

ರಶ್ಮಿಕಾ ಮಂದಣ್ಣ ಫೋಟೊ ಅಲ್ಲ

ಒಂದು ವೇಳೆ ನೀವು ಕೂಡ ಫೋಟೋ ನೋಡಿ ರಶ್ಮಿಕಾ ಎಂದುಕೊಂಡಿದ್ದರೆ ನೀವು ಮೋಸ ಹೋಗಿದ್ದೀರಾ ಎಂದೇ ಅರ್ಥ. ಫೋಟೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇದರ ಮೂಲ ಹುಡುಕಲು ಆರಂಭಿಸಿದ್ದಾರೆ. ಕೆಲವರು ಈ ಫೋಟೊದ ಅಸಲಿ ಕತೆ ರಿವೀಲ್ ಮಾಡಿದ್ದಾರೆ. ಅಂದಹಾಗೆ ಇದು 'ಪುಷ್ಪ'- 2 ಸಿನಿಮಾ ಲೀಕ್ಡ್ ಫೋಟೊ ಅಲ್ಲ. ನಿಜ ಹೇಳಬೇಕು ಅಂದ್ರೆ ಈ ಫೋಟೊದಲ್ಲಿ ಇರೋದು ಶ್ರೀವಲ್ಲಿ ಅಲ್ಲ, ಅಂದ್ರೆ ರಶ್ಮಿಕಾ ಮಂದಣ್ಣ ಅಲ್ಲ. ಆದರೆ ಒಂದು ಆಂಗಲ್‌ನಲ್ಲಿ ಥೇಟ್ ಶ್ರೀವಲ್ಲಿ ರೀತಿ ಕಾಣಿಸುತ್ತಿದೆ ಅಷ್ಟೆ.

fake photo has gone viral claiming to be a leaked Srivallis Death scene From Pushpa- 2

ಮರಾಠಿ ಸಿನಿಮಾ ದೃಶ್ಯ

ವೈರಲ್ ಆಗಿರುವ ಈ ಫೋಟೊ 'ನಯ್ ವರಣ್ ಭಟ್ ಲೋಂಚಾ ಕೋಣ್ ನಯ್ ಕೊಂಚಾ' ಎನ್ನುವ ಮರಾಠಿ ಚಿತ್ರದ್ದು. ಆ ಚಿತ್ರದ ಪಾತ್ರಧಾರಿ ಕ್ಲೈಮ್ಯಾಕ್ಸ್‌ನಲ್ಲಿ ಸತ್ತು ಮಲಗಿರುವಂತಹ ದೃಶ್ಯ ಇದು. ಆ ನಟಿ ಕೆಲವು ಆಂಗಲ್‌ಗಳಲ್ಲಿ ಕೊಂಚ ರಶ್ಮಿಕಾ ರೀತಿ ಕಾಣುತ್ತಾರೆ. ಸದ್ಯ ವೈರಲ್ ಆಗಿರುವ ಫೋಟೊದಲ್ಲೂ ಅದೇ ರೀತಿ ಕಂಡಿದ್ದಾರೆ. ಶ್ರೀವಲ್ಲಿ ಪಾತ್ರಧಾರಿ ರಶ್ಮಿಕಾ ಸತ್ತು ಮಲಗಿದಂತೆ ಅನ್ನಿಸುತ್ತದೆ. ಹಾಗಾಗಿ ಯಾರೋ ಇದರ ಸ್ಕ್ರೀನ್‌ಶಾಟ್ ತೆಗೆದು 'ಪುಷ್ಪ- 2' ಲೀಕ್ಡ್ ಫೋಟೊ ಎಂದು ತೇಲಿಬಿಟ್ಟಿದ್ದಾರೆ.

ಭರದಿಂದ ಸಾಗಿದೆ ಶೂಟಿಂಗ್

ಇನ್ನು ಫೋಟೊದಲ್ಲಿ ಒಂದು ಗಂಟೆ 41 ನಿಮಿಷದ ನಂತರ ಬರುವ ಸನ್ನಿವೇಶ ಎನ್ನುವಂತೆ ಕಾಣಿಸುತ್ತಿದೆ. ಆದರೆ ಇತ್ತೀಚೆಗಷ್ಟೆ 'ಪುಷ್ಪ- 2' ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಇಷ್ಟು ಬೇಗ ಒಂದೂವರೆ ಗಂಟೆ ಚಿತ್ರೀಕರಣ ನಡೆದಿಲ್ಲ. ಸುಖಾ ಸುಮ್ಮನೆ ಸುಳ್ಳು ಹೇಳಬೇಡಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

fake photo has gone viral claiming to be a leaked Srivallis Death scene From Pushpa- 2

ಐಶ್ವರ್ಯ ರಾಜೇಶ್ ಹೇಳಿಕೆ ವೈರಲ್

ಕಳೆದೆರಡು ದಿನಗಳಿಂದ ಶ್ರೀವಲ್ಲಿ ಪಾತ್ರದ ಸುತ್ತಾ ಒಂದು ವಿವಾದ ಭುಗಿಲೆದ್ದಿತ್ತು. ತಮಿಳು ನಟಿ ಐಶ್ವರ್ಯ ರಾಜೇಶ್ ಸಂದರ್ಶನದ ವೇಳೆ ನೀಡಿದ್ದ ಹೇಳಿಕೆ ತಪ್ಪಾಗಿ ವೈರಲ್ ಆಗಿದೆ. "ಐಶ್ವರ್ಯ ಮಾತನಾಡುತ್ತಾ ನನಗೆ ತೆಲುಗಿನಲ್ಲಿ 'ಪುಷ್ಪ' ಚಿತ್ರದ ಶ್ರೀವಲ್ಲಿ ರೀತಿಯ ಅವಕಾಶ ಬೇಕು. ಅಂತಹ ಪಾತ್ರದಲ್ಲಿ ನಾನು ಬಹಳ ಚೆನ್ನಾಗಿ ನಟಿಸುತ್ತೇನೆ. ರಶ್ಮಿಕಾ ಕೂಡ ಚೆನ್ನಾಗಿ ನಟಿಸಿದ್ದಾರೆ. ಅಂತಹ ಪವರ್‌ಫುಲ್ ಪಾತ್ರ ಸಿಕ್ಕರೆ ಚೆನ್ನಾಗಿರುತ್ತೆ" ಎಂದಿದ್ದರು. ಆದರೆ ಶ್ರೀವಲ್ಲಿ ಪಾತ್ರ ನನಗೆ ಸಿಕ್ಕಿದ್ದರೆ ರಶ್ಮಿಕಾಗಿಂತ ಚೆನ್ನಾಗಿ ನಟಿಸುತ್ತಿದ್ದೆ ಎಂದು ಐಶ್ವರ್ಯ ಹೇಳಿದಂತೆ ಅದು ಪ್ರಚಾರವಾಗಿತ್ತು. ಕೊನೆಗೆ ಐಶ್ವರ್ಯ ಸ್ಪಷ್ಟನೆ ನೀಡಿದ್ದರು. ರಶ್ಮಿಕಾ ಕೂಡ ಎಲ್ಲದ್ದಕ್ಕೂ ಫುಲ್‌ಸ್ಟಾಪ್ ಇಟ್ಟಿದ್ದರು.

More from Filmibeat

English summary
fake photo has gone viral claiming to be a leaked Srivalli's Death scene From Pushpa- 2. Netizens have found out that this is a Marathi movie scene. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X