ವಿಜಯ್ ದೇವರಕೊಂಡಗೆ ಕೈ ಕೊಟ್ಟ ಅದೃಷ್ಟ ; ''ಫ್ಯಾಮಿಲಿ ಸ್ಟಾರ್'' ಢಮಾರ್..!

''ಅದೃಷ್ಟ'' ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ರಾತ್ರೋರಾತ್ರಿ ''ಆರಕ್ಕೇರಿದವರು'' ಮಾರನೇ ದಿನವೇ ''ಮೂರಕ್ಕಿಳಿದು'' ಬಿಡುತ್ತಾರೆ. ''ಲಕ್'' ಅನ್ನುವ ''ಕಿಕ್'' ಅಷ್ಟು ಸುಲಭಕ್ಕೆ ಯಾರಿಗೂ ಹತ್ತಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ವಿಜಯ್ ದೇವರಕೊಂಡ.

ಹೌದು.. ಹೆಚ್ಚೇನ್ ಇಲ್ಲ. ''ಆರು ವರ್ಷ''ದ ಹಿಂದೆ ವಿಜಯ್ ದೇವರಕೊಂಡ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ, ಆಂಧ್ರದಲ್ಲಿ ''ಕಂಪನ''ವಾಗುತ್ತಿತ್ತು.ಕಾಲೇಜ್ ನ ಯುವಕ-ಯುವತಿಯರ ದಂಡು ''ಚಿತ್ರಮಂದಿರ''ದ ಮುಂದೆ ಕಾಣ್ತಿತ್ತು. ''ಅರ್ಜುನ್ ರೆಡ್ಡಿ'' ಇಂಥಹದ್ದೊಂದು ವಾತಾವರಣವನ್ನ, ವಿಜಯ್ ದೇವರಕೊಂಡ ಪಾಲಿಗೆ ನಿರ್ಮಿಸಿ ಕೊಟ್ಟಿತ್ತು. ''ಗೀತಾ ಗೋವಿಂದಂ'' ಚಿತ್ರದಿಂದ ಆ ವಾತಾವರಣ ಇನ್ನಷ್ಟು ಕಳೆಗಟ್ಟಿತ್ತು.

Family Star Box Office Day 1 The Film Marks Vijay Deverakonda s lowest opening in recent years

ಆದರೆ ಈಗ ''ಬರಗಾಲ''. ವಿಜಯ್ ದೇವರಕೊಂಡ ಚಿತ್ರಕ್ಕೆ ''ಕ್ಯಾರೆ'' ಅನ್ನುವುವರು ಯಾರು ಇಲ್ಲ. ''ನ್ಯಾಷನಲ್ ಸ್ಟಾರ್'' ಆಗುವ ಹುಚ್ಚು, ಚಿತ್ರದ ''ಆಯ್ಕೆ'' ವಿಚಾರದಲ್ಲಿ ಮಾಡಿದ ''ತಪ್ಪು''.. ವಿಜಯ್ ದೇವರಕೊಂಡ ''ಮಾರ್ಕೆಟ್ ವ್ಯಾಲ್ಯೂ'' ಕುಸಿಯುವಂತೆ ಮಾಡಿವೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ನಿನ್ನೆ ತೆರೆಗೆ ಬಂದ ''ಫ್ಯಾಮಿಲಿ ಸ್ಟಾರ್'' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮುಗ್ಗರಿಸುವ ಮೂಲಕ
ಹೊಸದೊಂದು ದಾಖಲೆಯನ್ನ ಬರೆದಿದೆ.

Family Star Box Office Day 1 The Film Marks Vijay Deverakonda s lowest opening in recent years

ಹೌದು, ಸಿಕ್ಕಾಪಟ್ಟೆ ನಿರೀಕ್ಷೆಯನ್ನ ಮೂಡಿಸಿದ್ದ ಫ್ಯಾಮಿಲಿ ಸ್ಟಾರ್, ವಿಜಯ್ ದೇವರಕೊಂಡ ಪಾಲಿಗೆ ಭರವಸೆಯ ಬೆಳಕಾಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ.. ಬೆಳಕಿನ ದರ್ಶನದ ಭಾಗ್ಯ ಮಾತ್ರ ಆಗಲಿಲ್ಲ. ಚಿತ್ರದ ಗಳಿಕೆ ''ಆರು ಕೋಟಿ''ಯನ್ನೂ ತಲುಪಲಿಲ್ಲ. ನಿಮಗೆ ಗೊತ್ತಿರಲಿ.. ವಿಜಯ್ ದೇವರಕೊಂಡ ವೃತ್ತಿ ಬದುಕಿನ ಅತೀ ''ಕೆಟ್ಟ ಸಿನಿಮಾ'' ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ''ಲೈಗರ್'' ಮೊದಲ ದಿನ ಹತ್ ಹತ್ರ ''ಹದಿನಾರು ಕೋಟಿ'' ಗಳಿಸಿತ್ತು. ಆ ನಂತರ ಬಂದ ''ಖುಷಿ'' ''ಹದಿನೈದು ಕೋಟಿ''ಯನ್ನ ಕೊಳ್ಳೆ ಹೊಡೆದಿತ್ತು.

Family Star Box Office Day 1 The Film Marks Vijay Deverakonda s lowest opening in recent years

ಇನ್ನೂ ಫ್ಯಾಮಿಲಿ ಸ್ಟಾರ್ ಚಿತ್ರವನ್ನ ನಿರ್ದೇಶಿಸಿರುವುದು ''ಪರಶುರಾಮ''. ವಿಜಯ್ ದೇವರಕೊಂಡ ಪಾಲಿಗೆ ಮರೆಯಲಾಗದ ಸಿನಿಮಾ ಎಂದೇ ಪರಿಗಣಿಸಲ್ಪಟ್ಟಿರುವ ''ಗೀತಾ ಗೋವಿಂದಂ'' ಚಿತ್ರವನ್ನ 'ನಿರ್ದೇಶಿಸಿದ್ದ'ವರು ಇದೇ ಪರಶುರಾಮ. ಈ ಎಲ್ಲ ಕಾರಣಕ್ಕೆ.. ಫ್ಯಾಮಿಲಿ ಸ್ಟಾರ್ ಸಿನಿಮಾ ಕೊನೆ ಪಕ್ಷ ''ಹನ್ನೆರಡು-ಹದಿಮೂರು ಕೋಟಿ''ಯನ್ನಾದರು ಲೂಟಿ ಮಾಡುತ್ತೆ ಎಂದು ಟಾಲಿವುಡ್ ನ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೆ ಈಗ ಲೆಕ್ಕ ತಪ್ಪಿದೆ. ಆರು ಕೋಟಿಯನ್ನ ಗಳಿಸುವ ಮೂಲಕ ವಿಜಯ್ ದೇವರಕೊಂಡ ವೃತ್ತಿ ಬದುಕಲ್ಲಿ ''ಅತ್ಯಂತ ಕಡಿಮೆ ಹಣ''ವನ್ನ ಗಳಿಸಿದ ಮೊದಲ ಸಿನಿಮಾ ಅನ್ನುವ ಕುಖ್ಯಾತಿಗೆ ಫ್ಯಾಮಿಲಿ ಸ್ಟಾರ್ ಸಿನಿಮಾ ಪಾತ್ರವಾಗಿದೆ.

ಅಂದ್ಹಾಗೇ ಫ್ಯಾಮಿಲಿ ಸ್ಟಾರ್ ನಲ್ಲಿ ಮೃಣಾಲ್ ಠಾಕೂರ್ ನಾಯಕಿ. ಆಂಧ್ರದ ಪಡ್ಡೆ ಹುಡುಗರ ಕನಸಿನ ರಾಣಿಯಾಗಿರುವ ಮೃಣಾಲ್ ಒಂದಾದ ಮೇಲೊಂದು ಗೆಲುವನ್ನ ಕಂಡಿದ್ದಾರೆ. ಹೀಗಾಗಿ ಮೃಣಾಲ್ ಠಾಕೂರ್ ಅವರ ''ಚಾರ್ಮ್‌''ನಿಂದಾದರೂ ವಿಜಯ್ ದೇವರಕೊಂಡ ಮರಳಿ ''ಫಾರ್ಮ್'' ಗೆ ಬರಬಹುದು ಎಂದು ಎಲ್ಲರು ಆಸೆಯನ್ನ ಇಟ್ಟುಕೊಂಡಿದ್ದರು. ಆದರೆ .. ಅದು ಕೂಡ ಆಗಲಿಲ್ಲ . ಇದರಿಂದ ತೆಲುಗು ಉದ್ಯಮ ಬೇಸರದಲ್ಲಿದೆ. ''ಫ್ಯಾಮಿಲಿ ಸ್ಟಾರ್''ಕ್ಕಿಂತ ಯಾವುದಾದರೂ ''ಧಾರಾವಾಹಿ''ಯನ್ನ ನೋಡಿ ಅದೇ ಚೆನ್ನಾಗಿರುತ್ತೆ ಎಂದು ವ್ಯಕ್ತವಾಗ್ತಿರುವ ಅಭಿಪ್ರಾಯ ಟಾಲಿವುಡ್ ಸಂಕಟವನ್ನ ಇನ್ನೂ ಹೆಚ್ಚಿಸಿದೆ.

ಒಟ್ನಲ್ಲಿ ಒಂದಾದ ಮೇಲೊಂದು ಹಿಟ್ ಸಿನಿಮಾಗಳನ್ನ ಕೊಟ್ಟು, ಸ್ಟಾರ್ ಪಟ್ಟಕ್ಕೇರಿದ್ದ ವಿಜಯ್ ದೇವರಕೊಂಡ ಅವರ ''ಸ್ಟಾರ್ ಡಂ'' ಈಗ ಅಪಾಯದಲ್ಲಿದೆ. ಇನ್ನೂ ವಿಜಯ್ ದೇವರಕೊಂಡ
ತಮ್ಮ ಚಿತ್ರಗಳತ್ತ.. ಪಾತ್ರಗಳತ್ತ.. ಗಮನ ಕೊಡದೇ ಇದ್ದರೆ ಪರ್ಮನೆಂಟ್ ಆಗಿ ''ದುಬೈ''ಗೆ ಶಿಫ್ಟ್ ಆಗಬೇಕಾಗುತ್ತೆ ಅನ್ನುವ ಮಾತು ಕೂಡ ಇದೇ ಸಮಯದಲ್ಲಿ ಕೇಳಿ ಬರುತ್ತಿದೆ. ಹಾಗಾಗದೇ ಇರಲಿ

More from Filmibeat

English summary
Family Star Box Office Collection Day 1: Tollywood Star Vijay Deverakonda Delivers One Of His Lowest Openings In Years, Film Earns Less Than Liger. Vijay Deverakonda-Mrunal Thakur Film Earned Rs 5.75 cr All India Nett.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X