ರೌಡಿ ಬೇಬಿ ಸಾಯಿ ಪಲ್ಲವಿ ಬದಲು ವಿಜಯ್ ದೇವರಕೊಂಡ, ಮೃಣಾಲ್ ಗೆ 'ಮಣೆ' ಹಾಕಿದ್ದು ಯಾಕೆ..?
ಮಾತು, ಹಾವ ಭಾವಗಳಿಂದ್ಲೇ ಹೃದಯಕ್ಕೆ ಹತ್ತಿರವಾಗಬಲ್ಲ ಸೌಂದರ್ಯ ಸಾಯಿ ಪಲ್ಲವಿ ಅವರದ್ದು. ಆ ಮುಗ್ದ ನಗು ಪಡ್ಡೆ ಹೈಕ್ಳ ನಿದ್ದೆ ಕೆಡ್ಸೋ 'ನಾಕೌಟ್' ಇದ್ದಂಗೆ. ಹೆಚ್ಚು ಕಡಿಮೆ ಕಳೆದ ಎರಡು ದಶಕಗಳಿಂದ ಸಿನಿ ಜಗತ್ತಿನಲ್ಲಿ ತನ್ನದೇ ಆದ ಕ್ರೇಝ್ ಹುಟ್ಟು ಹಾಕಿರುವ 'ಮಾಯಾಂಗನೆ' ಇವರು. ತಮ್ಮ ಮೋಹಕ ಅಭಿನಯದಿಂದ ಸಿನಿಪ್ರಿಯರ ಹೃದಯಕ್ಕೆ ಲಗ್ಗೆ ಇಟ್ಟಿರುವ ಸಾಯಿ ಪಲ್ಲವಿ ಎಲ್ಲವೂ ಅಂದುಕೊಂಡತೆ ಆಗಿದ್ದರೆ, ವಿಜಯ್ ದೇವರಕೊಂಡಗೆ ನಾಯಕಿಯಾಗಬೇಕಿತ್ತು. ಆದರೆ.. ಅದಾಗಲಿಲ್ಲ. ಕಾರಣ ಬೇರೆ ಯಾರು ಅಲ್ಲ ಬದಲಿಗೆ ಖುದ್ದು ವಿಜಯ್ ದೇವರಕೊಂಡ. ಇಂಥಹದ್ದೊಂದು ಸುದ್ದಿ ಸದ್ಯಕ್ಕೆ ಆಂಧ್ರದೆಲ್ಲೆಡೆ ಕೇಳಿ ಬರುತ್ತಿದೆ.
ಹೌದು, ನಿಮಗೆ ಗೊತ್ತು.. ಹಣ ಅಂದರೆ ಹೆಣ ಕೂಡ ಬಾಯಿ ಬಿಡುವ ಕಾಲ ಇದು. ಈ ಕಾಲದಲ್ಲಿ ಹಣಕ್ಕಿಂತ ಗುಣ ಮುಖ್ಯ ಅನ್ನುವುದು ಸಾಯಿ ಪಲ್ಲವಿಯ ವಾದ. 'ದುಡ್ಡು' ಸಿಗುತ್ತೆ ಅಂತ ಜನರನ್ನ 'ದಡ್ಡ'ರನ್ನಾಗಿಸುವುದು ಎಷ್ಟು ಸರಿ ಅನ್ನುವ ಸಾಯಿ ಪಲ್ಲವಿ 'ಕೋಟಿ' ಹಣ ಕೊಡ್ತೀವಿ ಎಂದರೂ ಕೂಡ 'ಸೌಂದರ್ಯ'ವರ್ಧಕ ಜಾಹೀರಾತನ್ನು ಸಾರಸಗಟಾಗಿ ತಿರಸ್ಕರಿಸಿದ ಉದಾಹರಣೆ ಇದೆ. ಇನ್ನೂ ಚಿತ್ರರಂಗದ ವಿಚಾರಕ್ಕೆ ಬಂದರೆ ಅಲ್ಲಿಯೂ ಸಾಯಿ ಪಲ್ಲವಿ ಕೆಲ 'ಷರತ್ತು'ಗಳ ಅಡಿಯಲ್ಲಿ ಕೆಲಸ ಮಾಡ್ತಾರೆ. ರೊಮ್ಯಾಂಟಿಕ್ ಸನ್ನಿವೇಶಗಳಿದ್ದರೆ, ಲಿಪ್ ಲಾಕ್ ಮಾಡ್ಲೇಬೇಕು ಅಂತ ದೃಶ್ಯವನ್ನ ಪೋಣಿಸಿದ್ದರೆ ಸಾಯಿ ಪಲ್ಲವಿ ನೇರಾ ನೇರವಾಗಿ 'ನೋ' ಎಂದು ಬಿಡುತ್ತಾರೆ. ಸ್ಟಾರ್ ಯಾರೇ ಇದ್ದರೂ ಸಾಯಿ ಪಲ್ಲವಿ ತಲೆ ಕೆಡಸಿಕೊಳ್ಳುವುದಿಲ್ಲ. ಇದಕ್ಕೆ ಪೂರಕವಾಗಿ ಅನೇಕ ಸಿನಿಮಾಗಳು ಸಾಯಿ ಪಲ್ಲವಿ ಅವರ ಕೈ ತಪ್ಪಿದ್ದು ಇದೆ. ಆ ಸಾಲಿಗೀಗ ವಿಜಯ್ ದೇವರಕೊಂಡ ಅಭಿನಯದ ಫ್ಯಾಮಿಲಿ ಸ್ಟಾರ್ ಹೊಸ ಸೇರ್ಪಡೆ.

ಹೌದು, ಅಸಲಿಗೆ ಮೃಣಾಲ್ ಠಾಕೂರ್ ಬದಲು, ಫ್ಯಾಮಿಲಿ ಸ್ಟಾರ್ ಚಿತ್ರಕ್ಕೆ ಸಾಯಿ ಪಲ್ಲವಿ ಅವರನ್ನ ಆಯ್ಕೆ ಮಾಡಬೇಕೆಂಬ ಆಲೋಚನೆ ಚಿತ್ರತಂಡಕ್ಕೆ ಮೊದಲಿತ್ತು. ಇನ್ನೂ ವಿಜಯ್ ದೇವರಕೊಂಡ ಸಿನಿಮಾ ಅಂದರೆ, ಅಲ್ಲಿ ಲಿಪ್ ಲಾಕ್ ಹಾಗೂ ಒಂದೆರಡು ಹಸಿ ಬಿಸಿ ದೃಶ್ಯಗಳಾದರೂ ಇರಬೇಕೆಂಬ ಅಲಿಖಿತ ನಿಯಮ ಇದೆ. ಇನ್ನೂ ಆಗಲೇ ಹೇಳಿದಂತೆ ಈ ಸನ್ನಿವೇಶಗಳಿದ್ದರೆ ಸಾಯಿ ಪಲ್ಲವಿ ಚಿತ್ರವನ್ನ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿಯೇ ಸಾಯಿ ಪಲ್ಲವಿ ಬದಲು ಬೇರೆ ನಾಯಕಿಯರನ್ನ ಹುಡುಕುವಂತೆ ಖುದ್ದು ವಿಜಯ್ ದೇವರಕೊಂಡ ಚಿತ್ರತಂಡಕ್ಕೆ 'ಫರ್ಮಾನು' ಹೊರಡಿಸಿದ್ದರು ಅನ್ನುವ ಸುದ್ದಿ ಸದ್ಯಕ್ಕೆ ಗುಲ್ಲಾಗಿದೆ.

ಅಂದ್ಹಾಗೇ ವಿಜಯ್ ದೇವರಕೊಂಡ ತಮ್ಮ ಚಿತ್ರಕ್ಕೆ ಸಾಯಿ ಪಲ್ಲವಿ ಬೇಡ ಎಂದು ಹೇಳಿದ್ದು ಇದು ಮೊದಲೇನಲ್ಲ. ಹಿಂದೆ ಡಿಯರ್ ಕಾಮ್ರೇಡ್ ಚಿತ್ರದ ಸಮಯದಲ್ಲಿ ಕೂಡ ಇಂಥಹದ್ದೇ ಮಾತು ಕೇಳಿ ಬಂದಿತ್ತು. ಡಿಯರ್ ಕಾಮ್ರೇಡ್ ಸಿನಿಮಾ ನಿರ್ದೆಶಕರು ಚಿತ್ರದ ನಾಯಕಿಯ ಪಾತ್ರಕ್ಕೆ ರಶ್ಮಿಕಾ ಅಥವಾ ಸಾಯಿ ಪಲ್ಲವಿ ಎಂಬ ಆಯ್ಕೆಯನ್ನು ಇಟ್ಟುಕೊಂಡಿದ್ದರಂತೆ. ಅಲ್ಲದೇ ಇಬ್ಬರೂ ಪಾತ್ರಕ್ಕೆ ಫಿಟ್ ಆಗುತ್ತಾರೆ ಎಂಬ ಭರವಸೆಯನ್ನು ಅವರು ಹೊಂದಿದ್ದರಂತೆ. ಆದರೆ ನಾಯಕ ವಿಜಯ್ ದೇವರಕೊಂಡ ಅವರೇ ಸ್ವತಃ ಸಾಯಿಪಲ್ಲವಿಯನ್ನು ರಿಜೆಕ್ಟ್ ಮಾಡಿ ರಶ್ಮಿಕಾ ಮಂದಣ್ಣ ಅವರನ್ನು ಚ್ಯೂಸ್ ಮಾಡಿದ್ದು ಎಂಬ ಗಾಸಿಪ್ ಗಳು ಹರಿದಾಡಿದ್ದವು.

ಆಗ ಈ ಅಂತೆ ಕಂತೆಗಳಿಗೆ ಪ್ರತಿಕ್ರಿಯಿಸಿದ್ದ ವಿಜಯ್ ದೇವರಕೊಂಡ ಇದೆಲ್ಲ ಸುಳ್ಳು.. ರಶ್ಮಿಕಾ ನನ್ನ ಫ್ರೆಂಡ್ ಎಂಬ ಮಾತ್ರಕ್ಕೆ ಆಕೆಯನ್ನು ನಾನು ಆಯ್ಕೆ ಮಾಡಲು ಹೇಗೆ ಸಾಧ್ಯ. ಫ್ರೆಂಡ್ ಶಿಪ್ ಬೇರೆ. ಸಿನಿಮಾನೇ ಬೇರೆ ಅಂದಿದ್ದರು. ನಾನು ಸಾಯಿ ಪಲ್ಲವಿಯನ್ನೇಕೆ ರಿಜೆಕ್ಟ್ ಮಾಡಲಿ. ಅದೆಲ್ಲವೂ ನಿರ್ದೇಶಕರಿಗೆ ಬಿಟ್ಟ ವಿಚಾರ ಎಂದು ಹೇಳಿ ಜಾರಿಕೊಂಡಿದ್ದರು

ಅದೆಲ್ಲ ಏನೆ ಇರಲಿ ಸದ್ಯಕ್ಕೆ ಫ್ಯಾಮಿಲಿ ಸ್ಟಾರ್ ಸಿನಿಮಾ ಏಪ್ರಿಲ್ 05ಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರದ ಮೇಲೆ ವಿಜಯ್ ದೇವರಕೊಂಡ ಬೆಟ್ಟದಷ್ಟು ನಿರೀಕ್ಷೆಗಳಿವೆ. ಇನ್ನೂ ಸಾಯಿ ಪಲ್ಲವಿ ವಿಚಾರಕ್ಕೆ ಬಂದರೆ, ಹರಿದಾಡ್ತಿರುವ ಈ ಸುದ್ದಿಗಳಿಗೆ ವಿಜಯ್ ದೇವರಕೊಂಡ ರಿಯ್ಯಾಕ್ಟ್ ಮಾಡಿಲ್ಲ. ಸಾಯಿ ಪಲ್ಲವಿ ಕೂಡ ಮಾತನಾಡಿಲ್ಲ. ನಿಜಕ್ಕೂ ಸತ್ಯಾಂಶ ಏನು, ಉತ್ತರ ಚಿತ್ರ ತೆರೆಗೆ ಬಂದ ನಂತರವಷ್ಟೇ ಗೊತ್ತಾಗಲಿದೆ


Click it and Unblock the Notifications











