"ನಿಮ್ಮ ನಟನೆ ಈ ಕ್ಷಣಕ್ಕೂ ನನಗೆ ಗೂಸ್‌ಬಂಪ್ಸ್ ತರುತ್ತಿದೆ"; ಪ್ಯಾನ್ ಇಂಡಿಯಾ ಸ್ಟಾರ್ ಟ್ವೀಟ್ ವೈರಲ್

ರಿಷಬ್ ಶೆಟ್ಟಿಗೆ ಮತ್ತೊಮ್ಮೆ ಸಿನಿಪ್ರೇಕ್ಷಕರು ಜೈಕಾರ ಹಾಕುತ್ತಿದ್ದಾರೆ. 'ಕಾಂತಾರ' ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡು ರಿಷಬ್ ಕಮಾಲ್ ಮಾಡಿದ್ದಾರೆ. ಸದ್ಯ ಚಿತ್ರದ ಸೀಕ್ವೆಲ್ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ 30ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದ್ದು ಮುಂದಿನ ವರ್ಷ ಸಿನಿಮಾ ತೆರೆಗೆ ತರುವುದಾಗಿ ವಿಜಯ್ ಕಿರಗಂದೂರ್ ಹೇಳಿದ್ದಾರೆ.

20022ರ ಸೆಪ್ಟೆಂಬರ್ 30ಕ್ಕೆ 'ಕಾಂತಾರ' ಸಿನಿಮಾ ತೆರೆಗೆ ಬಂದಿತ್ತು. ರಿಷಬ್ ಶೆಟ್ಟಿ ಸ್ವತಃ ಸಿನಿಮಾ ನಿರ್ದೇಶಿಸಿ ನಟಿಸಿದ್ದರು. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬೆಂಬಲವಾಗಿ ನಿಂತಿತ್ತು. ಆರಂಭದಲ್ಲಿ ಪುನೀತ್ ರಾಜ್‌ಕುಮಾರ್‌ಗಾಗಿ ಮಾಡಿದ್ದ ಕಥೆಯಲ್ಲಿ ಕೊನೆಗೆ ರಿಷಬ್ ನಟಿಸುವಂತಾಯಿತು. ಅದರಲ್ಲಿ ನೂರಕ್ಕೆ ನೂರರಷ್ಟು ಯಶಸ್ಸು ಕಂಡಿದ್ದರು. ಕನ್ನಡ ಮಾತ್ರವಲ್ಲದೇ ಪರಭಾಷಾ ಪ್ರೇಕ್ಷಕರು ಸಿನಿಮಾ ನೋಡಿ ಕೊಂಡಾಡಿದ್ದರು.

Famous actor hails National Award-winning actor rishab shetty as your well-deserved

ಮೊದಲಿಗೆ ಕನ್ನಡ ಸಿನಿಮಾ ಆಗಿಯೇ ತೆರೆಗೆ ಬಂದ 'ಕಾಂತಾರ' ಬಳಿಕ ಹಲವು ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಿತ್ತು. ಎಲ್ಲಾ ಭಾಷೆಗಳಲ್ಲೂ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಪರಭಾಷೆಯ ಸ್ಟಾರ್ ನಟರು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಮುಖ್ಯವಾಗಿ ರಿಷಬ್ ನಟನೆಗೆ ಹ್ಯಾಟ್ಸಾಫ್ ಎಂದಿದ್ದರು.

ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಮನೆಗೆ ರಿಷಬ್ ಶೆಟ್ಟಿಯವರನ್ನು ಆಹ್ವಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ಈ ಬಾರಿ ಮಮ್ಮುಟಿ, ವಿಕ್ರಾಂತ್ ಮೆಸ್ಸಿಯನ್ನು ಹಿಂದಿಕ್ಕಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಕ್ಟೋಬರ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ವಿಜೇತರಿಗೆ ಪ್ರಶಸ್ತಿ ವಿತರಿಸಿ ಗೌರವಿಸಲಿದ್ದಾರೆ.

ರಾಷ್ಟ್ರಪ್ರಶಸ್ತಿ ಪಡೆದ ರಿಷಬ್ ಶೆಟ್ಟಿಗೆ ಸಿನಿರಸಿಕರು ಮಾತ್ರವಲ್ಲ, ಸೆಲೆಬ್ರೆಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಕೆಲವರು ಫೋನ್ ಮಾಡಿ ಸಂತಸ ಹಂಚಿಕೊಂಡಿದ್ದರೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತೆಲುಗು ನಟ ಜ್ಯೂ. ಎನ್‌ಟಿಆರ್ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. ಸಿನಿಮಾ ಬಿಡುಗಡೆ ಆದಾಗಲೇ ತಾರಕ್ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರು. ಇದೀಗ ಮತ್ತೊಮ್ಮೆ ರಿಷಬ್ ಶೆಟ್ಟಿ ಅಭಿನಂದನೆ ತಿಳಿಸಿದ್ದಾರೆ.

"ಅತ್ಯುತ್ತಮ ನಟ ಪ್ರಶಸ್ತಿಗೆ ರಿಷಬ್ ಶೆಟ್ಟಿ ನೀವು ನಿಜಕ್ಕೂ ಅರ್ಹರು. ನಿಮ್ಮ ಅದ್ಭುತ ಅಭಿನಯ ಈಗಲೂ ನನಗೆ ಗೂಸ್‌ಬಂಪ್ಸ್ ತರುತ್ತಿದೆ. ಜನಪ್ರಿಯ ಸಿನಿಮಾ ವಿಭಾಗದಲ್ಲೂ ಪ್ರಶಸ್ತಿ ಪಡೆದ 'ಕಾಂತಾರ' ತಂಡಕ್ಕೆ ಅಭಿನಂದನೆ" ಎಂದು ತಾರಕ್ ಬರೆದುಕೊಂಡಿದ್ದಾರೆ.

ಇನ್ನು ಅತ್ಯುತ್ತಮ ಕನ್ನಡ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಪಡೆದ ಯಶ್, ಪ್ರಶಾಂತ್ ನೀಲ್ 'KGF' ತಂಡಕ್ಕೂ ಅಭಿನಂದನೆ ಎಂದು ಜ್ಯೂ. ಎನ್‌ಟಿಆರ್ ಟ್ವೀಟ್ ಮಾಡಿದ್ದಾರೆ. ರಿಷಬ್ ಶೆಟ್ಟಿ ನಟನೆ ಬಗ್ಗೆ ಈ ಕ್ಷಣಕ್ಕೂ ನನಗೆ ಗೂಸ್‌ಬಂಪ್ಸ್ ಬರ್ತಿದೆ ಎಂದು ತಾರಕ್ ಹೇಳಿರುವುದು ಗಮನ ಸೆಳೆದಿದೆ. ಟ್ವೀಟ್ ಸಖತ್ ವೈರಲ್ ಆಗುತ್ತಿದೆ.

ಹಿಂದೆ ಪ್ರಶಾಂತ್ ನೀಲ್ ಮನೆಯ ಕಾರ್ಯಕ್ರಮದಲ್ಲಿ ತಾರಕ್ ಭಾಗಿ ಆಗಿದ್ದರು. ಆಗ ಪತ್ನಿ ಸಮೇತ ರಿಷಬ್ ಶೆಟ್ಟಿ ಕೂಡ ಹೋಗಿದ್ದರು. ಈ ವೇಳೆ ಇಬ್ಬರೂ ಕ್ಲಿಕ್ಕಿಸಿಕೊಂಡಿದ್ದ ಫೋಟೊಗಳು ವೈರಲ್ ಆಗಿತ್ತು. ಇನ್ನು ಜ್ಯೂ. ಎನ್‌ಟಿಆರ್ ತಾಯಿ ಕುಂದಾಪುರ ಮೂಲದವರು. ಹಾಗಾಗಿ ತಾರಕ್ ಈ ಬಗ್ಗೆ ಮಾತನಾಡುತ್ತಿರುತ್ತಾರೆ. ಸೈಮಾ ಅವಾರ್ಡ್ಸ್ ವೇದಿಕೆಯಲ್ಲಿ ರಿಷಬ್ ಜೊತೆ ತೆಲುಗು ನಟ ಕನ್ನಡದಲ್ಲೇ ಮಾತನಾಡಿದ್ದು ಗಮನ ಸೆಳೆದಿತ್ತು.

More from Filmibeat

English summary
70th National Film Awards: Pan india actor congrats rishab shetty;
Read more about: ntr rishab shetty award
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X