ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ; ವೈದ್ಯನ ಹೇಳಿಕೆಗೆ ಫ್ಯಾನ್ಸ್ ಗರಂ

ತೆರೆಮೇಲೆ ತಾರೆಯರು ಚೆನ್ನಾಗಿ ಕಾಣಬೇಕು ಎಂದು ಪ್ರೇಕ್ಷಕರು ಬಯಸುತ್ತಾರೆ ಎನ್ನುವ ವಾದ ಇದೆ. ಇದೇ ಕಾರಣಕ್ಕೆ ಸಾಕಷ್ಟು ನಟ, ನಟಿಯರು ತಮ್ಮ ದೇಹದ ವಿವಿಧ ಭಾಗಗಳಿಗೆ ಪ್ಲಾಸ್ಟಿಕ್ ಸರ್ಜರಿ ಮೊರೆ ಹೋಗುತ್ತಾರೆ. ಕೆಲವರು ಇದನ್ನು ಬಹಿರಂಗವಾಗಿ ಒಪ್ಪಿಕೊಂಡರೆ ಮತ್ತೆ ಕೆಲವರು ಈ ಬಗ್ಗೆ ಮಾತನಾಡಲ್ಲ.

ದೇಹದ ಅಂಡುಕೊಂಡು ಸರಿ ಮಾಡಿಕೊಂಡು ತೆರೆಮೇಲೆ ಚೆನ್ನಾಗಿ ಕಾಣಬೇಕು ಎಂದು ಕೆಲವರು ಬಯಸುತ್ತಾರೆ. ಮೂಗು, ತುಟಿ ಸೇರಿದಂತೆ ದೇಹದ ಕೆಲ ಭಾಗಗಳಿಗೆ ಶಸ್ತ್ರ ಚಿಕಿತ್ಸೆ ಮೂಲಕ ಹೊಸ ಶೇಪ್ ಕೊಡುವ ಪ್ರಯತ್ನ ಮಾಡುತ್ತಾರೆ. ಇದು ಕಲವರಿಗೆ ಪ್ಲಸ್ ಆಗಿದೆ ಎನ್ನುವವರು ಇದ್ದಾರೆ. ಸರ್ಜರಿ ಮೂಲಕ ಸ್ತನಗಳ ಗಾತ್ರ ಹೆಚ್ಚಿಸಿಕೊಳ್ಳುವಂತೆ ನನಗೆ ಕೆಲವರು ಸಲಹೆ ನೀಡಿದ್ದರು ಎಂದು ನಟಿ ಸಮೀರಾ ರೆಡ್ಡಿ ಹೇಳಿದ್ದು ವೈರಲ್ ಆಗಿತ್ತು.

famous cosmetic surgeon on Allu arjun deepika padukone s facial transformation

ಇನ್ನು ಕೆಲ ನಟ, ನಟಿಯರು ಮೊದಲು ಇದ್ದ ಲುಕ್‌ಗಿಂತ ಈಗ ಹೊಸ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುವುದನ್ನು ನೋಡಬಹುದು. ಇದಕ್ಕೆಲ್ಲಾ ಸರ್ಜರಿಯೇ ಕಾರಣ ಎನ್ನುವವರು ಇದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಒಪ್ಪಲು ಸಿದ್ಧರಿಲ್ಲ. ಈ ಹಿಂದೆ ರಾಮ್‌ಚರಣ್ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಿದ್ದರು ಎಂದು ಬರಹಗಾರ ಯೆಂಡಮೂರಿ ಹೇಳಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಮೆಗಾ ಫ್ಯಾನ್ಸ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ನಟ ಅಲ್ಲು ಅರ್ಜುನ್ ಸಹ ದೇಹದ ಕೆಲ ಭಾಗಳಿಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ನಡೆಯುತ್ತಿರುತ್ತದೆ. 'ಗಂಗೋತ್ರಿ' ಚಿತ್ರದ ಬನ್ನಿ ಲುಕ್ಸ್ ನೋಡಿದ ಕೆಲವರು ಇವನು ಹೀರೋನಾ? ಚಿರಂಜೀವಿ ಸೋದರಳಿಯ ಎನ್ನುವ ಕಾರಣಕ್ಕೆ ಹೀರೊ ಆಗಿದ್ದಾನೆ ಅಷ್ಟೆ ಎಂದಿದ್ದರು. ಆದರೆ ನೋಡ ನೋಡುತ್ತಾ ಅಲ್ಲು ಅರ್ಜುನ್ ಸ್ಟೈಲಿಶ್ ಸ್ಟಾರ್ ಬಿರುದು ಪಡೆದುಕೊಂಡುಬಿಟ್ಟರು.

famous cosmetic surgeon on Allu arjun deepika padukone s facial transformation

'ಗಂಗೋತ್ರಿ' ಚಿತ್ರದ ಅಲ್ಲು ಅರ್ಜುನ್ ಲುಕ್ಸ್‌ಗೂ ಈಗಿನ ಅವತಾರಕ್ಕೂ ಬಹಳ ವ್ಯತ್ಯಾಸವಿದೆ. ಇದಕ್ಕೆಲ್ಲಾ ಕಾರಣ ಸರ್ಜರಿ ಎನ್ನುವುದು ಕೆಲವರ ವಾದ. ಆದರೆ ಅಭಿಮಾನಿಗಳು ಇದನ್ನು ಒಪ್ಪಲು ಸಿದ್ಧರಿಲ್ಲ. ಇದೀಗ ಆಂಧ್ರದ ಕಾಸ್ಮೆಟಿಕ್ ಸರ್ಜನ್ ಡಾ. ರಾಜಶೇಖರ್ ಗೊಲ್ಲು ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ. ದೀಪಿಕಾ ಪಡುಕೋಣೆ, ದುಲ್ಕರ್ ಸಲ್ಮಾನ್ ಸೇರಿ ಹಲವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವ ಬಗ್ಗೆ ಮಾತನಾಡಿದ್ದಾರೆ.

ಡಾ. ರಾಜಶೇಖರ್ ಗೊಲ್ಲು ಫೋಟೊಗಳನ್ನು ನೋಡಿ ಯಾರೆಲ್ಲಾ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಹೇಳುತ್ತಾರೆ. ತಾರೆಯರ ಹಳೆಯ ಹಾಗೂ ಹೊಸ ಫೋಟೊಗಳನ್ನು ನೋಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ದುಲ್ಕರ್ ಸಲ್ಮಾನ್ ಫೋಟೊ ನೋಡಿ ಅವರು ಮೂಗಿಗೆ ರೈನೋಪ್ಲ್ಯಾಸ್ಟಿ ಮಾಡಿಸಿಕೊಂಡಿರುವುದು ಗೊತ್ತಾಗುತ್ತಿದೆ ಎಂದಿದ್ದಾರೆ. ದೀಪಿಕಾ ಪಡುಕೋಣೆ ಕೂಡ ಮೂಗಿಗೆ ರೈನೋಪ್ಲ್ಯಾಸ್ಟಿಯೇ ಮಾಡಿಸಿರಬಹುದು ಎಂದಿದ್ದಾರೆ.

ಅಲ್ಲು ಅರ್ಜುನ್ ಫೋಟೊ ನೋಡಿ ಅವರ ಮೂಗಿಗೆ ಸರ್ಜರಿ ಮಾಡಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ತುಟಿಗೂ ಸರ್ಜರಿ ಮಾಡಿಸಿರುವುದು ಗೊತ್ತಾಗುತ್ತಿದೆ. ಬಹುಶಃ ಅವರು ಸರ್ಜರಿ ಮಾಡಿಸಿಕೊಂಡಿರಬಹುದು ಎಂದಿದ್ದಾರೆ. ಇನ್ನು ನಟಿ ಶೋಭಿತಾ ದುಲಿಪಾಲ, ಆಮಿ ಜಾಕ್ಸನ್ ಕೂಡ ಮುಖದ ಭಾಗಗಳಿಗೆ ಸರ್ಜರಿ ಮಾಡಿಸಿಕೊಂಡಿರುವ ಸಾಧ್ಯತೆಯಿದೆ ಎಂದಿದ್ದಾರೆ.

ಸದ್ಯ ಅಲ್ಲು ಅರ್ಜುನ್ ಕುರಿತು ಡಾ. ರಾಜಶೇಖರ್ ಗೊಲ್ಲು ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ ಸ್ಟೈಲಿಶ್ ಸ್ಟಾರ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು 'ಪುಷ್ಪ-2' ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದು ಈ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಡಿಸೆಂಬರ್ 6ಕ್ಕೆ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಹೇಳಿದೆ. ಆದರೆ ಈ ಬಗ್ಗೆ ಇನ್ನು ಅನುಮಾನವಿದೆ.

More from Filmibeat

English summary
Cosmetic surgeon Dr. Rajasekhar Gollu talks about celebs transformation;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X