"ಯಾರೊಟ್ಟಿಗಾದರೂ ಡೇಟ್ ಮಾಡಿ" ಎಂದು ಅಭಿಮಾನಿ ಮನವಿ: ಸಮಂತಾ ಮನ ಮಿಡಿಯುವ ರಿಪ್ಲೇ ಹೀಗಿತ್ತು
ನಟಿ ಸಮಂತಾ ಮಯೋಸೈಟಿಸ್ ಸಮಸ್ಯೆಯಿಂದ ಚೇತರಿಸಿಕೊಂಡು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. 'ಶಾಕುಂತಲಂ' ಪ್ರಮೋಷನ್ ಜೊತೆಗೆ 'ಖುಷಿ' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಮತ್ತೊಂದು ಕಡೆ 'ಸಿಟಾಡೆಲ್' ಅನ್ನೋ ವೆಬ್ ಸೀರಿಸ್‌ನಲ್ಲೂ ನಟಿಸ್ತಿದ್ದಾರೆ. ಏಪ್ರಿಲ್ 14ಕ್ಕೆ ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾ ತೆರೆಗೆ ಬರ್ತಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸ್ಯಾಮ್ ಫ್ಯಾನ್ಸ್ ಜೊತೆ ಟಚ್‌ನಲ್ಲಿದ್ದಾರೆ.
ಸಮಂತಾ- ನಾಗಚೈತನ್ಯಾ ವಿಚ್ಛೇದನ ಪಡೆದು ದೂರಾಗಿದ್ದು ಗೊತ್ತೇಯಿದೆ. ಹಳೆಯದನ್ನೆಲ್ಲಾ ಮರೆತು ಮುಂದೆ ಸಾಗೋಣ ಎಂದುಕೊಂಡ ಸಮಯದಲ್ಲೇ ಸಮಂತಾಗೆ ಶಾಕ್ ಕಾದಿತ್ತು. ಮಯೋಸೈಟಿಸ್ ಎನ್ನುವ ಅಪರೂಪದ ಕಾಯಿಲೆಯಿಂದ ಆಕೆ ಬಳಲುವಂತಾಯಿತು. ಸತತ ಹೋರಾಟದಿಂದ ಸ್ಯಾಮ್ ಆ ಸಮಸ್ಯೆಯಿಂದ ಬಹುತೇಕ ಹೊರ ಬಂದಿದ್ದಾರೆ. ಇದೀಗ ನಿಧಾನವಾಗಿ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ನಾಗಚೈತನ್ಯಾನಿಂದ ದೂರಾದಾಗ ಮಾನಸಿಕವಾಗಿ ಸಾಕಷ್ಟು ಸಂಘರ್ಷ ಎದುರಸಬೇಕಾಯಿತು.

ಖಿನ್ನತೆ ಹಂತಕ್ಕೂ ಹೋಗಿದ್ದ ಸಮಂತಾ ಅಭಿಮಾನಿಗಳ ಹಾರೈಕೆಯಿಂದ ಧೈರ್ಯವಾಗಿ ಎಲ್ಲವನ್ನು ಎದುರಿಸಲು ಆರಂಭಿಸಿದರು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಆದರೆ ಈ ಎರಡು ವಿಚಾರಗಳಿಂದ ಸಮಂತಾ ಅಭಿಮಾನಿಗಳಿಗೆ ಹೆಚ್ಚು ಹೆಚ್ಚು ಹತ್ತಿರವಾಗುವಂತಾಯಿತು. ಸಾಕಷ್ಟು ಹೆಣ್ಣುಮಕ್ಕಳು ಆಕೆಯಿಂದ ಸ್ಫೂರ್ತಿ ಪಡೆದು ಮುನ್ನುಗ್ಗುತ್ತಿದ್ದಾರೆ. ಸಮಂತಾ ಮೇಲೆ ಪ್ರೀತಿ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಮಹಿಳಾ ಅಭಿಮಾನಿಯೊಬ್ಬರು ಸಮಂತಾಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಮನವಿ ಮಾಡಿದ್ದಾರೆ.
ಅಭಿಮಾನಿ "ಯಾರೊಟ್ಟಿಗಾದರೂ ಡೇಟ್ ಮಾಡಿ" ಎಂದು ಸಮಂತಾಗೆ ಸಲಹೆ ನೀಡಿದ್ದಾರೆ. ಇದಕ್ಕೆ ಸಮಂತಾ ಕೊಟ್ಟ ಉತ್ತರ ಅಭಿಮಾನಿಗಳ ಮನಗೆದ್ದಿದೆ. ಕೊಂಚ ಅಳುಕಿನಿಂದಲೇ ಅಭಿಮಾನಿ "ನಾನು ಇಲ್ಲಿ ಹೇಳಬಾರದು ಎಂದು ಗೊತ್ತು, ಆದ್ರೂ ಪ್ಲೀಸ್ ಯಾರೊಟ್ಟಿಗಾದರೂ ಡೇಟಿಂಗ್ ಮಾಡಿ" ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕಾಮೆಂಟ್ ಮಾಡಿರುವ ಸ್ಯಾಮ್ "ನಿಮ್ಮಂತೆ ನನ್ನನ್ನು ಯಾರು ಪ್ರೀತಿಸುತ್ತಾರೆ ಹೇಳಿ" ಎಂದು ಬರೆದು ಹಾರ್ಟ್ ಎಮೋಜಿ ಹಾಕಿದ್ದಾರೆ.

ಸಮಂತಾ ಕಾಮೆಂಟ್ ನೋಡಿ ಆ ಅಭಿಮಾನಿ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಕೆಲವರು "ನಾವು ಇದ್ದೀವಿ ಮೇಡಂ". "ನಾವು ಪ್ರೀತಿಸುತ್ತೇವೆ". "ನಮ್ಮೊಟ್ಟಿಗೆ ಡೇಟ್‌ಗೆ ಬನ್ನಿ." "ನಾನು ನಿಮ್ಮೊಟ್ಟಿಗೆ ಡೇಟ್‌ಗೆ ರೆಡಿ" ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. 'ಯೇ ಮಾಯ ಚೆಸಾವೆ' ಚಿತ್ರದಲ್ಲಿ ಮೊದಲ ಬಾರಿಗೆ ನಾಗಚೈತನ್ಯಾ- ಸಮಂತಾ ಒಟ್ಟಿಗೆ ನಟಿಸಿದ್ದರು. ಅಲ್ಲಿಂದಲೇ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಇಬ್ಬರು ಐದಾರು ವರ್ಷ ಪ್ರೀತಿಸಿ, ಪೋಷಕರ ಒಪ್ಪಿಗೆ ಪಡೆದು 2017ರಲ್ಲಿ ಹಸೆಮಣೆ ಏರಿದ್ದರು. ಆದರೆ 2021ರಲ್ಲಿ ಇಬ್ಬರು ದೂರಾಗಲು ತೀರ್ಮಾನಿಸಿದ್ದರು.
ಟಾಲಿವುಡ್ ಕ್ಯೂಟ್ ಜೋಡಿ ಅಂತಲೇ ಕರೆಸಿಕೊಂಡಿದ್ದ ಚೈ-ಸ್ಯಾಮ್ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದಾಗ ಯಾರು ನಂಬಲಿಲ್ಲ. ಆದರೆ 2021ರ ಅಕ್ಟೋಬರ್ 2ರಂದು ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದಾಗ ಅಚ್ಚರಿ ಕಾದಿತ್ತು. ನಂತರ ಈ ಬಗ್ಗೆ ಇಬ್ಬರು ಬಹಿರಂಗವಾಗಿ ಮಾತನಾಡುವ ಗೋಜಿಗೆ ಹೋಗಲಿಲ್ಲ. ಇಬ್ಬರು ತಮ್ಮ ತಮ್ಮ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. ಇನ್ನು 'ಮನಂ', 'ಆಟೋನಗರ್ ಸೂರ್ಯ' ಹಾಗೂ 'ಮಜಿಲಿ' ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದಾರೆ.

ವಿಚ್ಛೇದನದ ನಂತರ 'ಪುಷ್ಪ' ಸಿನಿಮಾದ ಐಟಂ ಸಾಂಗ್‌ಗೆ ಸಮಂತಾ ಬಿಂದಾಸ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದರು. ಕಳೆದ ವರ್ಷ 'ಯಶೋದ' ಆಗಿ ಸಮಂತಾ ಪ್ರೇಕ್ಷಕರ ಮುಂದೆ ಬಂದಿದ್ದರು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಇದೀಗ ಪೌರಾಣಿಕ ಕಥಾಹಂದರದ 'ಶಾಕುಂತಲಂ' ಸಿನಿಮಾ ಕೂಡ ಕನ್ನಡ ಸೇರಿ 5 ಭಾಷೆಗಳಲ್ಲಿ ರಿಲೀಸ್‌ಗೆ ರೆಡಿಯಾಗಿದೆ. ಟೈಟಲ್ ರೋಲ್‌ನಲ್ಲಿ ಸಮಂತಾ ಮಿಂಚಿದ್ದಾರೆ.


Click it and Unblock the Notifications











