ಫೋಟೋ ವೈರಲ್: ರಾಜಮೌಳಿ 'ರಾಮಾಯಣ'ದಲ್ಲಿ ಮಹೇಶ್ ಬಾಬು ರಾಮ
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅಭಿಮಾನಿಗಳು ರಾಜಮೌಳಿಗೆ ರಾಮಾಯಣ ಮತ್ತು ಮಹಾಭಾರತ ಸಿನಿಮಾ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಬಾಹುಬಲಿ ಸಿನಿಮಾ ನಂತರ ರಾಜಮೌಳಿ ಸಿನಿಮಾಗಳ ಮೇಲಿನ ನಿರೀಕ್ಷೆ ಹೆಚ್ಚಾಗಿದ್ದು, ಪೌರಾಣಿಕ ಸಿನಿಮಾಗಳನ್ನು ಅದ್ಭುತವಾಗಿ ಕಟ್ಟಿಕೊಡಲಿದ್ದಾರೆ ಎನ್ನುವುದು ಅಭಿಮಾನಿಗಳ ನಂಬಿಕೆ.
Recommended Video
ರಾಜಮೌಳಿ ರಾಮಾಯಣ ಸಿನಿಮಾ ಮಾಡಲಿದ್ದಾರೆ ಎನ್ನುವಷ್ಟೊತ್ತಿಗೆ ಆರ್ ಆರ್ ಆರ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಆದರೆ ರಾಮಾಯಣ ಸಿನಿಮಾ ಮಾಡ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಾಜಮೌಳಿ, ರಾಮಾಯಣ ಸಿನಿಮಾ ಮಾಡಿದರೆ ಪ್ರಿನ್ಸ್ ಮಹೇಶ್ ಬಾಬು ರಾಮನಾಗಿ ಕಾಣಿಸಿಕೊಳ್ಳಬೇಕು ಎನ್ನುವುದು ಅಭಿಮಾನಿಗಳ ಬೇಡಿಕೆ. ಮಹೇಶ್ ಬಾಬುಗೆ ರಾಮನ ಗೆಟಪ್ ಹಾಕಿ ಎಡಿಟ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ..

ರಾಮಾಯಣದಲ್ಲಿ ರಾಮ ಆಗ್ತಾರಾ ಮಹೇಶ್ ಬಾಬು
ರಾಜಮೌಳಿ, ರಾಮಾಯಣ ಸಿನಿಮಾ ಮಾಡಬೇಕೆನ್ನುವುದು ಅಭಿಮಾನಿಗಳ ದೊಡ್ಡ ಬೇಡಿಕೆ. ಒಂದು ವೇಳೆ ರಾಮಾಯಣ ಸಿನಿಮಾ ಮಾಡಿದರೆ ಮಹೇಶ್ ಬಾಬು ರಾಮ ಆಗಬೇಕು ಎನ್ನುವುದು ಅಭಿಮಾನಿಗಳ ಆಸೆ. ಈಗಾಗಲೆ ಫ್ಯಾನ್ಸ್ ರಾಜಮೌಳಿ ರಾಮಾಯಣದಲ್ಲಿ ಮಹೇಶ್ ಬಾಬು ರಾಮನಾಗಿ ಕಾಣಸಿಕೊಳ್ಳಲಿದ್ದಾರೆ ಎಂದು ವೈರಲ್ ಮಾಡುತ್ತಿದ್ದಾರೆ.

ಮಹೇಶ್ ಬಾಬು ರಾಮನ ಫೋಟೋ ವೈರಲ್
ಮಹೇಶ್ ಬಾಬು ಫೋಟೋಗೆ ರಾಮನ ಗೆಟಪ್ ಹಾಕಿ ಡಿಸೈನ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿ ಕಿರಣ್ ಎನ್ನುವವರು ಡಿಸೈನ್ ಮಾಡಿರುವ ಪೋಟೋ ಇದಾಗಿದೆ. ಪೋಸ್ಟರ್ ನಲ್ಲಿ ರಾಮಾಯಣಮ್ ಎಂದು ಟೈಟಲ್ ಹಾಕಿ ರಾಮಜೌಳಿ ನಿರ್ದೇಶನ ಎಂದು ಬರೆದಿದ್ದಾರೆ. ಮಹೇಶ್ ಬಾಬು ರಾಮನ ಫೋಟೋಗೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರಾಜಮೌಳಿ ಮತ್ತು ಮಹೇಶ್ ಬಾಬು ಸಿನಿಮಾ
ಆರ್ ಆರ್ ಆರ್ ಸಿನಿಮಾ ಮುಗಿಯುತ್ತಿದ್ದಂತೆ ರಾಜಮೌಳಿ, ಮಹೇಶ್ ಬಾಬುಗೆ ಆಕ್ಷನ್ ಕಟ್ ಹೇಳುವುದು ಖಚಿತವಾಗಿದೆ. ದುರ್ಗಾ ಆರ್ಟ್ಸ್ ಲಾಂಛನದಲ್ಲಿ ಕೆ ಎಲ್ ನಾರಾಯಣ ಎಂಬುವವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. RRR ಸಿನಿಮಾ ಮುಗಿಯುತ್ತಿದ್ದಂತೆ ಮಹೇಶ್ ಬಾಬು ಮತ್ತು ರಾಜಮೌಳಿ ಸಿನಿಮಾ ಪ್ರಾರಂಭವಾಗಲಿದೆ.

ಅಭಿಮಾನಿಗಳ ಟ್ರೆಂಡ್
ರಾಜಮೌಳಿ ರಾಮಾಯಣ ಸಿನಿಮಾ ಮಾಡುವಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಲಾಕ್ ಡೌನ್ ನಲ್ಲಿ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿ ಮರು ಪ್ರಸಾರ ಮಾಡತ್ತಿದ್ದಂತೆ, ಅಭಿಮಾನಿಗಳು ಟ್ರೆಂಡ್ ಮಾಡುತ್ತಿದ್ದಾರೆ. "ರಾಜಮೌಳಿ ಮೇಕ್ ರಾಮಾಯಣ" ಎಂದು ಹ್ಯಾಶ್ ಟ್ಯಾಗ್ ಹಾಕಿ ಟ್ರೆಂಡ್ ಮಾಡುತ್ತಿದ್ದಾರೆ. "ಶ್ರೀ ರಾಮ್ ನಿಮಗಾಗಿ ಕಾಯುತ್ತಿದ್ದಾರೆ. ದಯವಿಟ್ಟು ರಾಮಾಯಣ ನಿರ್ದೇಶನ ಮಾಡಿ" ಎಂದು ಕೇಳಿಕೊಳ್ಳುತ್ತಿದ್ದಾರೆ.

ರಾಮಾಯಣ ನಿರ್ದೇಶನ ಮಾಡುತ್ತಾರಾ ರಾಜಮೌಳಿ?
ಭಾರತೀಯ ಕಿರುತೆರೆ ಲೋಕದಲ್ಲಿ ದಾಖಲೆ ನಿರ್ಮಿಸಿದ ರಾಮಾಯಣವನ್ನು ದೊಡ್ಡ ಪರದೆ ಮೇಲೆ ನೋಡಲು ಭಾರತೀಯರು ಕಾತರರಾಗಿದ್ದಾರೆ. ಅದರಲ್ಲೂ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬರಲಿ ಎನ್ನುವುದು ಸಿನಿಮಾ ಅಭಿಮಾನಿಗಳ ಹೆಬ್ಬಯಕೆ. ಅಭಿಮಾನಿಗಳ ಆಸೆಯಂತೆ ರಾಜಮೌಳಿ ರಾಮಾಯಣ ಸಿನಿಮಾ ಮಾಡುತ್ತಾರಾ ಎನ್ನುವುದು ಕಾದು ನೋಡಬೇಕು.


Click it and Unblock the Notifications











