ಸಾವಿತ್ರಿ, ಸೌಂದರ್ಯ ಅಂದುಕೊಂಡಿದ್ವಿ, ಆದ್ರೆ ನೀನು ಮಾಡುತ್ತಿರುವುದು ಸರೀನಾ? ಆಟೋ ಡ್ರೈವರ್ ಬೇಸರ

ಮಾಲಿವುಡ್ ಬೆಡಗಿ ಅನುಪಮಾ ಪರಮೇಶ್ವರನ್ 'ಟಿಲ್ಲು ಸ್ಕೇರ್' ಸಿನಿಮಾ ಮೂಲಕ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಕಾರಣ ಅನುಪಮಾ ಬೋಲ್ಡ್ ಅವತಾರ. ಸ್ಕಿನ್ ಶೋ ಮಾತ್ರವಲ್ಲೇ ಲಿಪ್‌ಲಾಕ್ ದೃಶ್ಯಗಳಿಂದ ಅಭಿಮಾನಿಗಳ ಹುಬ್ಬೇರಿಸಿದ್ದಾರೆ.

ಅಂದಕ್ಕೆ ಅಭಿನಯ ಎನ್ನುವ ಬಟ್ಟೆ ತೊಡಿಸಿದಂತಿರುವ ನಟಿ ಅನುಪಮಾಗೆ ದೊಡ್ಡ ಅಭಿಮಾನಿ ಬಳಗ ಇದೆ. 'ನಟಸಾರ್ವಭೌಮ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೋಡಿಯಾಗಿ ಕೂಡ ಕೇರಳ ಕುಟ್ಟಿ ನಟಿಸಿ ಕನ್ನಡ ಸಿನಿರಸಿಕರ ಮನಗೆದ್ದಿದ್ದರು. ಕೇರಳದಲ್ಲಿ ಮಾತ್ರವಲ್ಲದೇ ಆಂಧ್ರ, ತೆಲಂಗಾಣ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಅನುಪಮಾಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ.

Fan upset with Anupama Parameswarans bold show for Tillu-2

'ಪ್ರೇಮಂ', 'ಅಆ', 'ಶತಮಾನಂಭವತಿ' ರೀತಿಯ ಸಿನಿಮಾಗಳಲ್ಲಿ ನಟಿಸಿ ಅನುಪಮಾ ತೆಲುಗು ಪ್ರೇಕ್ಷಕರಿಗೆ ಹೆಚ್ಚು ಹತ್ತಿರವಾಗಿದ್ದರು. ಪಕ್ಕದ ಮನೆಯ ಹುಡುಗಿ ರೀತಿ ಕಾಣುತ್ತಾಳೆ ಎಂದು ಇಷ್ಟಪಡುತ್ತಿದ್ದರು. ಆದರೆ ಇತ್ತೀಚೆಗೆ ಅನುಪಮಾ ಬೋಲ್ಡ್ ಅವತಾರ ಕಂಡು ಕೆಲವರು ದಂಗಾಗಿದ್ದಾರೆ. ತೆರೆಮೇಲೆ ಮಾತ್ರವಲ್ಲ ಸೋಶಿಯಲ್ ಮೀಡಿಯಾದಲ್ಲೂ ಹಾಟ್ ಹಾಟ್ ಫೋಟೊಶೂಟ್‌ಗಳಿಂದ ಅನು ಗಮನ ಸೆಳೆಯುತ್ತಿದ್ದಾರೆ.

ಇತ್ತೀಚೆಗೆ ಅನುಪಮಾ ಪರಮೇಶ್ವರನ್ ಮೈಮಾಟ ಪ್ರದರ್ಶನ ಹೆಚ್ಚಾಗಿದೆ. ಇದನ್ನು ನೋಡಿ ಆಕೆಯ ಅಭಿಮಾನಿಗಳ ಬಹಳ ಫೀಲ್ ಆಗುತ್ತಿದ್ದಾರೆ. ಅಯ್ಯೋ ಯಾಕೀಗೆ ಮಾಡುತ್ತಿದ್ದೀಯಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿ ಕೇಳುತ್ತಿದ್ದಾರೆ. ನೀನು ಇಷ್ಟು ಹಾಟ್ ಆಗಿ ಕಾಣಿಸಿಕೊಳ್ಳುವುದು ನಮಗೆ ಇಷ್ಟವಿಲ್ಲ ಎಂದು ಹೇಳುತ್ತಿದ್ದಾರೆ. ಸದ್ಯ 'ಟಿಲ್ಲು ಸ್ಕೇರ್' ಸಿನಿಮಾ ಟ್ರೈಲರ್ ನೋಡಿದ ಕೆಲವರು ಬಹಳ ಬೇಸರಗೊಂಡಿದ್ದಾರೆ.

ಇದೀಗ ಅಭಿಮಾನಿಯೊಬ್ಬ ವಿಡಿಯೋ ಮಾಡಿ ಯಾಕೆ ಹೀಗೆಲ್ಲಾ ಮಾಡುತ್ತಿದ್ದೀರಾ ಅನುಪಮಾ? ಎಂದು ಕೇಳಿದ್ದಾನೆ. ಆತನ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. "ನನ್ನ ಆಟೋದಲ್ಲಿ ನಿನ್ನ ಫೋಟೋ ಹಾಕಿದ್ದು ಯಾಕೆ ಗೊತ್ತಾ? ನೀವು ಒಂದ್ಕಾಲದಲ್ಲಿ ಮಾಡಿದ ಚಿತ್ರಗಳು ಆ ತರ ಇದ್ದವು. 'ಪ್ರೇಮಂ', 'ಅಆ', 'ಶತಮಾನಂಭವತಿ' ಸಿನಿಮಾಗಳು ಮಾಡಿದ್ದಿರಿ ನೀವು. ಅಂದಹಾಗೆ 'ಹಲೋ ಗುರು ಪ್ರೇಮಕೋಸಮೆ' ಚಿತ್ರದಲ್ಲಿ ಕಾಫಿ ಸೀನ್ ಮಾಡಿದ್ದು ನೀವಾ? ಮಾಡಿದ್ದು ಎಂದು ನಮಗೆ ಟೆನ್ಷನ್ ಆಗಿತ್ತು. ಅಂಥಾದ್ರಲ್ಲಿ ಈಗ 'ರೌಡಿ ಬಾಯ್ಸ್', 'ಟಿಲ್ಲು-2' ಸಿನಿಮಾಗಳನ್ನು ಮಾಡುತ್ತಿದ್ದೀರಾ?"

"ಸಾವಿತ್ರಿ, ಸೌಂದರ್ಯ ಅವರು ಮಾಡಿದಂತಹ ಸಿನಿಮಾಗಳನ್ನು ನೀವು ಮಾಡುತ್ತೀರಿ ಅಂದುಕೊಂಡಿದ್ದೆವು. ಆದರೆ ಈಗ ನೀವು ಇಂತಹ ಸಿನಿಮಾಗಳನ್ನು ಮಾಡುತ್ತಿರುವುದು ನಮಗೆ ಇಷ್ಟವಾಗುತ್ತಿಲ್ಲ. ಇನ್ನು ಮುಂದೆ ಆದರೂ ಒಳ್ಳೆ ಒಳ್ಳೆ ಸಿನಿಮಾದಲ್ಲಿ ನಟಿಸಿ ಎಂದು ಕೇಳಿಕೊಳ್ಳುತ್ತೇನೆ" ಎಂದು ಅಭಿಮಾನಿ ಮಾಡಿರುವ ವಿಡಿಯೋ ಭಾರೀ ಸದ್ದು ಮಾಡ್ತಿದೆ. ಸಾಕಷ್ಟು ಜನ ಅನುಪಮಾ ಅಭಿಮಾನಿಗಳು ಆತನ ಮಾತನ್ನು ಮೆಚ್ಚಿ ವಿಡಿಯೋ ಶೇರ್ ಮಾಡುತ್ತಿದ್ದಾರೆ.

More from Filmibeat

English summary
Anupama Parameswaran Shocked Fans With Extremely Bold Scenes in tillu square.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X