ಸಮಂತಾರನ್ನು ವ್ಯಂಗ್ಯವಾಡಿದರೇ ಪೂಜಾ ಹೆಗ್ಡೆ?: ಪೂಜಾ ವಿರುದ್ಧ ಮುಗಿಬಿದ್ದ ಫ್ಯಾನ್ಸ್

By Avani Malnad

ಸ್ಟಾರ್‌ಗಳ ನಡುವಿನ ಕಿತ್ತಾಟ ಹೊಸದೇನಲ್ಲ. ಹಾಗೆಯೇ ಪರೋಕ್ಷವಾಗಿ ಒಬ್ಬರೊಬ್ಬರ ವಿರುದ್ಧ ಕಿಡಿಕಾರುವುದು, ವ್ಯಂಗ್ಯದ ಬಾಣ ಬಿಡುವುದು ಇದ್ದೇ ಇದೆ. ಟಾಲಿವುಡ್‌ನಲ್ಲಿ ಕೂಡ ಇಂತಹ ಯುದ್ಧ ನಡೆಯುತ್ತಿದೆ. 'ಅಲಾ ವೈಕುಂಠಪುರಮುಲೂ' ಚಿತ್ರದ ಮೂಲಕ ಖ್ಯಾತಿ ಗಳಿಸಿದ ನಟಿ ಪೂಜಾ ಹೆಗ್ಡೆ, ಸಮಂತಾ ಕಾಳೆಯಲು ಹೋಗಿ ಆಕ್ರೋಶಕ್ಕೆ ತುತ್ತಾಗಿದ್ದಾರೆ.

Recommended Video

ಇಂದು ಚಿತ್ರರಂಗಕ್ಕೆ ಕಾಡುತ್ತಿದೆ ಅಂಬರೀಷ್ ಅನುಪಸ್ಥಿತಿ | Ambareesh We miss You

ಪೂಜಾ ಹೆಗ್ಡೆ ವಿರುದ್ಧ ಸಮಂತಾ ಅಕ್ಕಿನೇನಿ ಅಭಿಮಾನಿಗಳು ಕಿಡಿಕಾರುತ್ತಿದ್ದು, ಸಮಂತಾ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಪೂಜಾ ಮಸ್ಟ್ ಅಪಾಲಜೈಸ್ ಸಮಂತಾ' ಎಂಬ ಹ್ಯಾಷ್ ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಇದಕ್ಕೆ ಕಾರಣವಾಗಿದ್ದು ಪೂಜಾ ಹೆಗ್ಡೆ ಇನ್‌ಸ್ಟಾಗ್ರಾಂ ಪೋಸ್ಟ್. ಮಂದೆ ಓದಿ...

ಪ್ರೆಟಿ ಎನಿಸುತ್ತಿಲ್ಲ

ಪ್ರೆಟಿ ಎನಿಸುತ್ತಿಲ್ಲ

'ಆಕೆ ಸುಂದರವಾಗಿದ್ದಾಳೆ ಎಂದು ನನಗಂತೂ ಅನಿಸುತ್ತಿಲ್ಲ' ಎಂದು ಪೂಜಾ ಹೆಗ್ಡೆ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮೀಮ್ ಒಂದನ್ನು ಶೇರ್ ಮಾಡಲಾಗಿತ್ತು. ಇದರಲ್ಲಿ ಸಮಂತಾ ಅವರ ಹೆಸರು ಅಥವಾ ಫೋಟೊ ಬಳಸದೆ ಇದ್ದರೂ, ಇಬ್ಬರ ಸಮರ ತಿಳಿದವರು, ಇದು ಸಮಂತಾ ಅವರನ್ನು ಉಲ್ಲೇಖಿಸಿಯೇ ಮಾಡಿರುವುದು ಎಂದು ಹೇಳಿದ್ದಾರೆ.

ಹತ್ತು ಮಿಲಿಯನ್ ಸಾಧನೆ

ಹತ್ತು ಮಿಲಿಯನ್ ಸಾಧನೆ

ಇತ್ತೀಚೆಗೆ ಸಮಂತಾ ಇನ್‌ಸ್ಟಾಗ್ರಾಂನಲ್ಲಿ 10 ಮಿಲಿಯನ್ ಫಾಲೋವರ್‌ಗಳನ್ನು ಪಡೆದಿದ್ದ ಖುಷಿಯನ್ನು ಹಂಚಿಕೊಂಡಿದ್ದರು. ಪೂಜಾ ಹೆಗ್ಡೆ ಹಾಕಿರುವ ಮೀಮ್ ಸಮಂತಾ ಈ ಸಾಧನೆಯನ್ನೇ ಉಲ್ಲೇಖಿಸಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಪೂಜಾ ಹೆಗ್ಡೆ ಕೂಡ ಇನ್‌ಸ್ಟಾಗ್ರಾಂನಲ್ಲಿ 10.5 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ.

ಹ್ಯಾಕ್ ಆಗಿದೆ ಎಂದ ಪೂಜಾ

ಹ್ಯಾಕ್ ಆಗಿದೆ ಎಂದ ಪೂಜಾ

ಆದರೆ ಪೂಜಾ, ತಮ್ಮ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ನನ್ನ ಖಾತೆ ಹ್ಯಾಕ್ ಆಗಿದೆ ಎಂದು ನನ್ನ ತಂಡ ತಿಳಿಸಿದ್ದು, ನನ್ನ ಡಿಜಿಟಲ್ ತಂಡ ಅದನ್ನು ಸರಿಪಡಿಸಲು ಸಹಾಯ ಮಾಡುತ್ತಿದೆ. ನನ್ನ ಖಾತೆಯಿಂದ ಬರುವ ಯಾವುದೇ ಆಹ್ವಾನಗಳನ್ನು ಸ್ವೀಕರಿಸಬೇಡಿ ಮತ್ತು ಆ ವ್ಯಕ್ತಿ ಕೇಳುವ ಯಾವುದೇ ಖಾಸಗಿ ಮಾಹಿತಿಯನ್ನು ನೀಡಬೇಡಿ ಎಂದು ಪೂಜಾ ಮಧ್ಯರಾತ್ರಿಯೇ ಟ್ವೀಟ್ ಮಾಡಿದ್ದರು.

ಕೊನೆಗೆ ಖಾತೆ ವಾಪಸ್

ಕೊನೆಗೆ ಖಾತೆ ವಾಪಸ್

ನನ್ನ ಇನ್‌ಸ್ಟಾಗ್ರಾಂ ಖಾತೆಯ ಸುರಕ್ಷತೆಗಾಗಿ ಒಂದು ಗಂಟೆ ಶ್ರಮಿಸಬೇಕಾಯಿತು. ಕೂಡಲೇ ಸಹಾಯ ಮಾಡಿದ್ದಕ್ಕಾಗಿ ನನ್ನ ತಾಂತ್ರಿಕ ತಂಡಕ್ಕೆ ಧನ್ಯವಾದಗಳು. ಕೊನೆಗೂ ನನ್ನ ಖಾತೆಯನ್ನು ಮರಳಿ ಪಡೆದಿದ್ದೇನೆ. ಕಳೆದ ಗಂಟೆಗಳಲ್ಲಿ ನನ್ನ ಖಾತೆಯಿಂದ ಬಂದಿರಬಹುದಾದ ಯಾವುದೇ ಸಂದೇಶ ಅಥವಾ ಪೋಸ್ಟ್ ಅನ್ನು ಅಳಿಸಲಾಗುವುದು ಎಂದು ರಾತ್ರಿ 1 ಗಂಟೆಗೆ ಮತ್ತೊಂದು ಟ್ವೀಟ್ ಮಾಡಿದ್ದರು.

ಕ್ಷಮೆ ಕೇಳಲು ಆಗ್ರಹ

ಕ್ಷಮೆ ಕೇಳಲು ಆಗ್ರಹ

ಪೂಜಾ ಹೆಗ್ಡೆ, ಸಮಂತಾ ಕುಳಿತು ಮಾಡಿದ್ದರನ್ನೆಲಾದ ಮೀಮ್ ಸೇರಿದಂತೆ ಕೆಲವು ಪೋಸ್ಟ್‌ಗಳನ್ನು ಡಿಲೀಟ್ ಮಾಡಲಾಗಿದೆ. ಮೂರು ದಿನಗಳ ಹಿಂದೆ ಅವರು ಹಾಕಿಕೊಂಡಿದ್ದ ವಿಡಿಯೋದಿಂದ ಉಳಿದ ಪೋಸ್ಟ್‌ಗಳನ್ನು ಉಳಿಸಿಕೊಳ್ಳಲಾಗಿದೆ. ಆದರೆ ಇದು ಸಮಂತಾ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಪೂಜಾ ಹೆಗ್ಡೆ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯದ ಪೋಸ್ ನೀಡಿದ ಸಮಂತಾ

ವಿಜಯದ ಪೋಸ್ ನೀಡಿದ ಸಮಂತಾ

ಈ ನಡುವೆ ಸಮಂತಾ ಟ್ವಿಟ್ಟರ್‌ನಲ್ಲಿ ವಿಜಯದ ಸಂಕೇತ ತೋರಿಸುವ ಪೋಸ್‌ನ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಇದು ಪೂಜಾ ಹೆಗ್ಡೆಗೆ ಅವರು ನೀಡಿರುವ ಉತ್ತರ ಎಂದೇ ಹೇಳಲಾಗುತ್ತಿದೆ. ಅನೇಕರು ಪೂಜಾ ಹೆಗ್ಡೆ ಬೆಂಬಲಕ್ಕೂ ನಿಂತಿದ್ದಾರೆ. ಪೂಜಾ ಹೇಳಿರುವುದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.

More from Filmibeat

English summary
Samantha Akkineni fans asks Pooja Hegde to apologize for her remark 'I don't find her pretty at all'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X