ಸ್ಟೀಟಿಯ ನಯವಾದ ಕೆನ್ನೆ ನೆಕ್ಕಿದ ಶ್ವಾನ: ಹ್ಯಾಪು ಮೋರೆ ಹಾಕಿಕೊಂಡ ಫ್ಯಾನ್ಸ್!

'ನಿಶಬ್ಧಂ' ಸಿನಿಮಾ ಸೋಲಿನ ನಂತರ ಕರಾವಳಿ ಬೆಡಗಿ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಕೆಲ ಸಿನಿಮಾಗಳಲ್ಲಿ ಸ್ವೀಟಿ ನಟಿಸೋ ಬಗ್ಗೆ ಗುಸುಗುಸು ಕೇಳಿ ಬರುತ್ತಿದೆಯಾದರೂ ಯಾವುದೂ ಅಧಿಕೃತವಾಗಿಲ್ಲ. ಸದ್ಯ ಸ್ವೀಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ.

17 ವರ್ಷಗಳ ಸಿನಿ ಕರಿಯರ್‌ಯಲ್ಲಿ ಅದ್ಭುತ ಪಾತ್ರಗಳ ಮೂಲಕ ಸೌತ್‌ ಲೇಡಿ ಸೂಪರ್ ಸ್ಟಾರ್ ಪಟ್ಟಕ್ಕೇರಿದ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಸೈಲೆಂಟ್ ಆಗಬಿಟ್ಟಿದ್ದಾರೆ. ಮತ್ತೆ ಸ್ವೀಟಿಯನ್ನು ಸಿಲ್ವರ್ ಸ್ಕ್ರೀನ್ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಅದರಲ್ಲೂ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಜೋಡಿಯನ್ನು ಒಟ್ಟಿಗೆ ನೋಡಲು ಮತ್ತಷ್ಟು ಕಾತುರರಾಗಿದ್ದಾರೆ. ಸಿನಿಮಾಗಳಿಂದ ಕೊಂಚ ಅಂತರ ಕಾಯ್ದುಕೊಂಡಿರುವ 'ಅರುಂಧತಿ' ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸುವುದನ್ನು ಮರೆತ್ತಿಲ್ಲ. ಸದ್ಯ ಅನುಷ್ಕಾ ಶೆಟ್ಟಿ ತಮ್ಮ ಪ್ರೀತಿಯ ಶ್ವಾನದ ಜೊತೆಗಿನ ಕ್ಯೂಟ್ ವಿಡಿಯೋ ಶೇರ್ ಮಾಡಿದ್ದು, ಸಾಕಷ್ಟು ಲೈಕ್ಸ್, ಕಾಮೆಂಟ್ಸ್ ಗಿಟ್ಟಿಸಿಕೊಂಡಿದೆ.

ಪ್ರಾಣಿ ಪ್ರೇಮಿಯಾಗಿರುವ ಅನುಷ್ಕಾ ಶೆಟ್ಟಿ ಶ್ವಾನಗಳನ್ನು ಸಾಕುತ್ತಿದ್ದಾರೆ. ಅವುಗಳ ಜೊತೆಗೆ ಸಾಕಷ್ಟು ಸಮಯ ಕಳೆಯುವ ಸ್ವೀಟಿ ಫೋಟೊ, ವಿಡಿಯೋ ಕ್ಲಿಕ್ಕಿಸಿಸುತ್ತಿರುತ್ತಾರೆ. ತಮ್ಮ ಮುದ್ದಿನ ಶ್ವಾನ ಮುಖವನ್ನು ನೆಕ್ಕುತ್ತಿರುವ ಸಣ್ಣ ಸೆಲ್ಫಿ ವಿಡಿಯೋವನ್ನು ದೇವಸೇನಾ ಲವ್ ಸಿಂಬಲ್ ಜೊತೆ ಶೇರ್‌ ಮಾಡಿದ್ದು ಸಖತ್ ವೈರಲ್ ಆಗಿದೆ. ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್‌ಗಳ ಮೂಲಕ ಕ್ಯೂಟಿ ಅನುಷ್ಕಾ ಶೆಟ್ಟಿಯನ್ನು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಬಗೆ ಬಗೆಯ ಬೇಡಿಕೆಗಳನ್ನು ನೆಚ್ಚಿನ ನಟಿಯ ಮುಂದಿಟ್ಟಿದ್ದಾರೆ.

ಆ ಶ್ವಾನವಾಗಿ ಹುಟ್ಟಿದ್ದರೆ ಚೆನ್ನಾಗಿತ್ತು!

ತಮ್ಮ ಅಂದ ಹಾಗೂ ಅಭಿನಯದಿಂದ ಸ್ವೀಟಿ ಅಭಿಮಾನಿಗಳ ಮನಗೆದ್ದಿದ್ದಾರೆ. ಅನುಷ್ಕಾ ಶೆಟ್ಟಿನ ಒಮ್ಮೆ ನೋಡಬೇಕು, ಮಾತನಾಡಬೇಕು ಅಂತ ಅದೆಷ್ಟೊ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ಸ್ವೀಟಿ ಶ್ವಾನದ ಜೊತೆಗಿರೋ ವಿಡಿಯೋ ನೋಡಿ 'ಅಯ್ಯೋ ನಾನು ಆ ಶ್ವಾನದ ತರ ಹುಟ್ಟಿದ್ದರೆ ಚೆನ್ನಾಗಿತ್ತು' ಅಂತ ಒಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದರೆ ಮತ್ತೊಬ್ಬ 'ಆ ಶ್ವಾನ ನಾನಾಗಬೇಕಿತ್ತು' ಅಂತ ಹ್ಯಾಪಿ ಮೋರೆ ಹಾಕಿಕೊಂಡಿದ್ದಾನೆ. ಮತ್ತೊಬ್ಬರು '777 ಚಾರ್ಲಿ' ಎಂದು ಬರೆದಿದ್ದಾನೆ.

 ದಯವಿಟ್ಟು ಪ್ರಭಾಸ್‌ನ ಮದುವೆ ಮಾಡಿಕೊಳ್ಳಿ!

ದಯವಿಟ್ಟು ಪ್ರಭಾಸ್‌ನ ಮದುವೆ ಮಾಡಿಕೊಳ್ಳಿ!

ಬಿಲ್ಲಾ, ಮಿರ್ಚಿ ಹಾಗೂ ಬಾಹುಬಲಿ ಸರಣಿ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಇವರಿಬ್ಬರು ಮದುವೆ ಆಗಬೇಕು ಅನ್ನುವುದು ಕೆಲ ಅಭಿಮಾನಿಗಳ ಆಸೆ. ಪ್ರನುಷ್ಕಾ ಜೋಡಿ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ನಡೀತಿದೆ. ಇಬ್ಬರೂ ಮದುವೆ ಆಗ್ತಾರೆ ಅನ್ನೋ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಾನೆ ಇರುತ್ತದೆ. ಆದರೆ ಇದರ ಬಗ್ಗೆ ಇಬ್ಬರು ಸ್ಪಷ್ಟನೆ ನೀಡುವ ಗೋಜಿಗೆ ಹೋಗಲಿಲ್ಲ. 'ದಯವಿಟ್ಟು ಪ್ರಭಾಸ್‌ನ ಮದುವೆ ಮಾಡಿಕೊಳ್ಳಿ' ಅಂತ ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿ ಮನವಿ ಮಾಡಿಕೊಂಡಿದ್ದಾನೆ.

 'ಸೈಜ್ ಜೀರೋ'ಗಾಗಿ ತೂಕ ಹೆಚ್ಚಿಸಿಕೊಂಡಿದ್ದ ಸ್ವೀಟಿ!

'ಸೈಜ್ ಜೀರೋ'ಗಾಗಿ ತೂಕ ಹೆಚ್ಚಿಸಿಕೊಂಡಿದ್ದ ಸ್ವೀಟಿ!

ಪಾತ್ರಗಳ ವಿಚಾರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿರುವ ಅನುಷ್ಕಾ ಶೆಟ್ಟಿ 'ಸೈಜ್ ಜೀರೋ' ಚಿತ್ರದ ಸೌಂದರ್ಯ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳುವ ಸಾಹಸ ಮಾಡಿದ್ದರು. ಸಿನಿಮಾ ಮುಗಿದ ಬಳಿಕ ಮತ್ತೆ ಹಳೇ ಫಿಸಿಕ್ ಅನ್ನು ವಾಪಸ್ ಪಡೆಯಲು ಸಾಧ್ಯವಾಗಲೇ ಇಲ್ಲ. ಇದರಿಂದ ಅಭಿಮಾನಿಗಳ ನೆಚ್ಚಿನ 'ಭಾಗಮತಿ' ಸಾಕಷ್ಟು ಅವಕಾಶಗಳನ್ನು ಕಳೆದುಕೊಳ್ಳುವಂತಾಯಿತು.

 ನವೀನ್​ ಪೊಲಿಶೆಟ್ಟಿ ತೆರೆಹಂಚಿಕೊಳ್ಳುತ್ತಾರೆ ಸ್ವೀಟಿ!

ನವೀನ್​ ಪೊಲಿಶೆಟ್ಟಿ ತೆರೆಹಂಚಿಕೊಳ್ಳುತ್ತಾರೆ ಸ್ವೀಟಿ!

ತೆಲುಗಿನ ಯುವನಟ ನವೀನ್​ ಪೊಲಿಶೆಟ್ಟಿ ನಟನೆಯ ಮುಂದಿನ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಬಣ್ಣ ಹಚ್ಚುವ ಬಗ್ಗೆ ಚರ್ಚೆ ನಡೀತಿದೆ. ಈ ಸಿನಿಮಾದಲ್ಲಿ ವಿಭಿನ್ನ ಪ್ರೇಮಕಥೆ ಇರಲಿದ್ದು, 40ರ ಹರೆಯದ ಹುಡುಗಿ ಮತ್ತು 25ರ ಹರೆಯದ ಹುಡುಗನ ನಡುವಿನ ಪ್ರೀತಿಯನ್ನು ಇಲ್ಲಿ ಹೇಳಗುತ್ತಿದೆಯಂತೆ. 'ರಾ ರಾ ಕೃಷ್ಣಯ್ಯ' ಸಿನಿಮಾ ಖ್ಯಾತಿಯ ಮಹೇಶ್ ಆಕ್ಷನ್ ಕಟ್ ಹೇಳುತ್ತಿದ್ದು, ಪ್ರಭಾಸ್ ಸೋದರನ ಯುವಿ ಕ್ರಿಯೇಷನ್ಸ್‌ ಬ್ಯಾನರ್‌ನಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.

More from Filmibeat

English summary
Fans Crazy Comments Goes Viral On Anushka Shetty Video Post. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X