ನೋವಿನಲ್ಲಿರುವ ಪ್ರಭಾಸ್ ಬಗ್ಗೆ ಹೀಗೊಂದು ಗಾಸಿಪ್: ಫ್ಯಾನ್ಸ್‌ಗೆ ಆ ಟೀಂ ಮೇಲೆ ಅನುಮಾನ?
ಬಾಹುಬಲಿ ಪ್ರಭಾಸ್ ಮನೆಯಲ್ಲಿ ಸೂತಕ ಮನೆ ಮಾಡಿದೆ. ಇತ್ತೀಚೆಗಷ್ಟೆ ಪ್ರಭಾಸ್ ದೊಡ್ಡಪ್ಪ ನಟ ಕೃಷ್ಣಂರಾಜು ನಿಧನರಾಗಿದ್ದರು. ಅವರ ಹುಟ್ಟೂರಿನಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಕುಟುಂಬ ಸದಸ್ಯರು ಸಿದ್ಧತೆ ನಡೆಸ್ತಿದ್ದಾರೆ. ಇಂತಹ ಹೊತ್ತಲ್ಲೇ ಬಾಲಿವುಡ್‌ನಲ್ಲಿ ಅದೊಂದು ಗಾಸಿಪ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಪ್ರಭಾಸ್ ನೋವಿನಲ್ಲಿ ಇರುವಾಗ ಏನಿದೆಲ್ಲಾ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
'ಸಲಾರ್' ಹಾಗು 'ಪ್ರಾಜೆಕ್ಟ್- K' ಸಿನಿಮಾಗಳಲ್ಲಿ ಪ್ರಭಾಸ್ ಸದ್ಯ ಬಣ್ಣ ಹಚ್ಚಿದ್ದಾರೆ. ದೊಡ್ಡಪ್ಪನ ಅಗಲಿಕೆ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ಶೂಟಿಂಗ್ ಮುಂದೂಡಿದ್ದಾರೆ. ಮತ್ತೆ ಸಿನಿಮಾಗಳ ಶೂಟಿಂಗ್ ಯಾವಾಗ ಶುರುವಾಗುತ್ತದೆ ಎನ್ನುವುದು ಗೊತ್ತಿಲ್ಲ. ಮತ್ತೊಂದ್ಕಡೆ 'ಆದಿಪುರುಷ್' ಸಿನಿಮಾ ಟೀಸರ್ ದಸರಾ ಸಂಭ್ರಮದಲ್ಲೇ ರಿಲೀಸ್ ಆಗುತ್ತದೆ ಎನ್ನಲಾಗುತ್ತಿದೆ. ಓಂ ರಾವುತ್ ನಿರ್ದೇಶನದ ಈ ಪೌರಾಣಿಕ ಕಥಾಹಂದರದ ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ.
'ಆದಿಪುರುಷ್' ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ನಟಿಸ್ತಿದ್ರೆ, ಕೃತಿ ಸನೂನ್ ಸೀತಾದೇವಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇದೀಗ ಪ್ರಭಾಸ್ ಹಾಗೂ ಕೃತಿ ಸನೂನ್ ಡೇಟಿಂಗ್ ನಡೆಸ್ತಿದ್ದಾರೆ ಎನ್ನುವ ಗುಸುಗುಸು ಬಾಲಿವುಡ್‌ನಲ್ಲಿ ಶುರುವಾಗಿದೆ.

ಗಾಸಿಪ್ ಹರಡಲು ಕಾರಣ ಯಾರು?
ಪ್ರಭಾಸ್- ಕೃತಿ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗಾಸಿಪ್ ಕೇಳಿ ಪ್ರಭಾಸ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇದು ಕೇವಲ ಗಾಸಿಪ್ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ದೊಡ್ಡಪ್ಪನನ್ನು ಕಳೆದುಕೊಂಡ ನೋವಿನಲ್ಲಿರುವ ನಟನ ಬಗ್ಗೆ ಹೀಗೆಲ್ಲಾ ಸುದ್ದಿ ಹಬ್ಬಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಇದಕ್ಕೆಲ್ಲಾ 'ಆದಿಪುರುಷ್' ಚಿತ್ರತಂಡವೇ ಕಾರಣ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಪ್ರಭಾಸ್ ಇಮೇಜ್ ಡ್ಯಾಮೇಜ್ ಮಾಡ್ಬೇಡಿ!
ಸಿನಿಮಾ ಬಿಡುಗಡೆಗೆ ಸಿದ್ಧವಾಗ್ತಿದೆ. ಆದರೆ ಸಿನಿಮಾ ಬಗ್ಗೆ ಬಝ್ ಇಲ್ಲ. ಅದೇ ಕಾರಣಕ್ಕೆ ಹೈಪ್ ಕ್ರಿಯೇಟ್ ಮಾಡಲು ಪ್ರಮೋಷನ್ ಶುರು ಮಾಡಲು ಪಿಆರ್ ಟೀಂ ಇಂತಾದೊಂದು ಟ್ರಿಕ್ ಉಪಯೋಗಿಸಿದ್ದಾರೆ ಎಂದು ಪ್ರಭಾಸ್ ಅಭಿಮಾನಿಗಳು ಗರಂ ಆಗಿದ್ದಾರೆ. 'ಶೇಮ್ ಆನ್ ಆದಿಪುರುಷ್ ಪಿಆರ್ ಟೀಂ' ಎನ್ನುವ ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡ್ತಿದ್ದಾರೆ. ಒಂದು ವೇಳೆ ಪ್ರಭಾಸ್ ಹಾಗೂ ಕೃತಿ ಡೇಟಿಂಗ್ ಮಾಡ್ತಿದ್ದರೆ ನಮಗೂ ಖುಷಿ. ಆದರೆ ಸಿನಿಮಾ ಪ್ರಮೋಷನ್‌ಗಾಗಿ ಇಂತಹ ಟ್ರಿಕ್ಸ್ ಬೇಡ. ಅದರಲ್ಲೂ ಪ್ರಭಾಸ್ ನೋವಿನಲ್ಲಿ ಇರುವಾಗ ಏನಿದೆಲ್ಲಾ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ಪ್ರಭಾಸ್ ಇಮೇಜ್ ಡ್ಯಾಮೇಜ್ ಮಾಡುವ ಕೆಲಸ ಮಾಡಬೇಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಒಳ್ಳೆ ಚಿತ್ರದ ಬಗ್ಗೆ ಕೆಟ್ಟ ರೂಮರ್ಸ್ ಸರಿಯಲ್ಲ
'ರಾಮಾಯಣ' ಮಹಾಕಾವ್ಯ ಆಧರಿಸಿ 'ಆದಿಪುರುಷ್' ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಇಂತಾದೊಂದು ಅದ್ಭುತ ಸಿನಿಮಾ ಮಾಡುವಾಗ ಬಹಳ ಒಳ್ಳೆಯ ರೀತಿಯಲ್ಲಿ ಪ್ರಮೋಷನ್ ಮಾಡಬೇಕು. ಅದುಬಿಟ್ಟು ಇಂತಹ ಚೀಪ್ ರೂಮರ್ಸ್ ಹಬ್ಬಿಸೋದು ಎಷ್ಟರಮಟ್ಟಗೆ ಸರಿ ಎಂದು ಕಾಮೆಂಟ್ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಈಗ ಭಾರೀ ಚರ್ಚೆ ಹುಟ್ಟಾಕ್ಕಿದೆ.

ಸಂಕ್ರಾಂತಿಗೆ 'ಆದಿಪುರುಷ್' ರಿಲೀಸ್
'ಆದಿಪುರುಷ್' ಮಾಮೂಲಿ ಸಿನಿಮಾ ಅಲ್ಲ. ಬದಲಿಗೆ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿ ಓಂ ರಾವುತ್ ಸಿನಿಮಾ ಸೆರೆ ಹಿಡಿದಿದ್ದಾರೆ. ಲಕ್ಷ್ಮಣನಾಗಿ ಸನ್ನಿ ಸಿಂಗ್ ಹಾಗೂ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಮಿಂಚಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಟಿ-ಸೀರಿಸ್ ಹಾಗೂ ರೆಟ್ರೊಫ್ಲಿಸ್ ಸಂಸ್ಥೆಗಳು ಚಿತ್ರವನ್ನು ನಿರ್ಮಾಣ ಮಾಡಿವೆ.


Click it and Unblock the Notifications











