ಅಮೆರಿಕಾದಲ್ಲಿ ಕೈ ಕೈ ಹಿಡಿದು ನಡೆದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ; ವಿರೋಶ್ ಎಂದು ಕುಣಿದ ಫ್ಯಾನ್ಸ್

ಸಾಮಾನ್ಯವಾಗಿ ಚಿತ್ರರಂಗದಲ್ಲಿನ ನಾಯಕಿಯರು ಯಾವುದೇ ಹುಡುಗನ ಜೊತೆ ಸುಳಿದಾಡಿದರೆ ಸಾಕು, ಅಭಿಮಾನಿಗಳು ತಲೆ ಕೆದರಿಕೊಂಡು ಆ ಹುಡುಗನ ಕುಲ.. ಗೋತ್ರ.. ಜನ್ಮ ಜಾತಕವನ್ನು ಜಾಲಾಡುತ್ತಾರೆ. ಹೀಗಿರುವಾಗ ಪದೇ ಪದೇ ನಾಯಕಿ ಒಬ್ಬ ನಾಯಕನ ಜೊತೆ ಕಾಣಿಸಿಕೊಂಡರೆ ಜನ ಮಾತನಾಡಿಕೊಳ್ಳದೇ ಸುಮ್ಮನೆ ಇರ್ತಾರಾ ? ಇಬ್ಬರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎಂದು ಪುಕಾರು ಹಬ್ಬಿಸದೇ ಇರ್ತಾರಾ ?

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ವಿಚಾರದಲ್ಲಿ ಸದ್ಯಕ್ಕೆ ಆಗಿದೆ. ಹೌದು..ರಶ್ಮಿಕಾ ತೆಲುಗು ಚಿತ್ರರಂಗವನ್ನು ಪ್ರವೇಶ ಮಾಡಿದ ಘಳಿಗೆಯಿಂದಲೇ ವಿಜಯ್ ದೇವರಕೊಂಡ ಮತ್ತು ಇವರ ಸಂಬಂಧದ ಕುರಿತು ಚರ್ಚೆ ನಡೆಯುತ್ತಿದೆ.

Fans Go Wild As Rashmika Mandanna Vijay Deverakonda Spotted Holding Hands In New York

ಇದಕ್ಕೆ ಪೂರಕವಾಗಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡಾವಳಿ ಕೂಡ ಹಾಗೇ ಇದೆ. ಎಷ್ಟೇ ಕದ್ದು ಮುಚ್ಚಿ ಓಡಾಡುವ ಪ್ರಯತ್ನವನ್ನು ಮಾಡಿದರು ಕೂಡ ಇಬ್ಬರು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿಯೇ ಆಗುತ್ತಾರೆ. ಬೇರೆ ಬೇರೆ ಫೋಟೊಗಳನ್ನು ಹಂಚಿಕೊಂಡರೂ ಕೂಡ ಜೊತೆಯಲ್ಲಿರುವ ಸುಳಿವನ್ನು ಅಭಿಮಾನಿಗಳು ಪತ್ತೆ ಮಾಡುತ್ತಾರೆ. ಹೀಗಿರುವಾಗ ಇದೀಗ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕೈ ಕೈ ಹಿಡಿದುಕೊಂಡು ಅಮೆರಿಕಾದ ಬೀದಿಯಲ್ಲಿ ಓಡಾಡಿದ್ದಾರೆ.

ಹೌದು, 79ನೇ ಸ್ವಾತಂತ್ರ್ಯ ದಿನಾಚಾರಣೆಯ ಸುಸಂದರ್ಭದಲ್ಲಿ ನ್ಯೂಯಾರ್ಕ್‌ನಲ್ಲಿರುವ ಭಾರತೀಯರು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರನ್ನು 43ನೇ ಇಂಡಿಯನ್ ಪರೇಡ್‌ಗೆ ಆಮಂತ್ರಣ ನೀಡಿದ್ದರು. ಈ ಹಿನ್ನೆಲೆ ಇಬ್ಬರು ಮುಖ್ಯ ಅತಿಥಿಗಳಾಗಿ ಈ ಪರೇಡ್‌ನಲ್ಲಿ ಭಾಗವಹಿಸಿದ್ದರು. ಅಲ್ಲಿನ ಭಾರತೀಯರ ಜೊತೆ ಮ್ಯಾನ್ ಹಾಟನ್ ರಸ್ತೆಯಲ್ಲಿ ಪರೇಡ್‌ನಲ್ಲಿ ಭಾಗವಹಿಸಿದ್ದರು. ಇದೇ ಸಮಯದಲ್ಲಿ ಇಬ್ಬರು ಕೈ ಕೈ ಹಿಡಿದುಕೊಂಡು ನಡೆದಿದ್ದಾರೆ. ಮನಃಪೂರ್ತಿ ನಕ್ಕಿದ್ದಾರೆ.

ಸದ್ಯ ಈ ಫೋಟೊಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಭಿಮಾನಿಗಳ ಸಂಭ್ರಮವನ್ನು ಕೂಡ ಹೆಚ್ಚಿಸಿವೆ.ಅನೇಕರು ''ವಿರೋಶ್'' ಎಂಬ ಹ್ಯಾಶ್ ಟ್ಯಾಗ್ ನಡಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಜೋಡಿಯ ಮೇಲೆ ಯಾರ ಕಣ್ಣು ಬೀಳದಿರಲಿ ಎಂದು ಹರಸಿ ಹಾರೈಸುತ್ತಿದ್ದಾರೆ. ಆದಷ್ಟು ಬೇಗ ಮದುವೆಯಾಗಿ ಎಂದೆಲ್ಲಾ ಕಮೆಂಟ್‌ ಮಾಡುತ್ತಿದ್ದಾರೆ.

ಇನ್ನುಳಿದಂತೆ 'ಕುಬೇರ'' ಚಿತ್ರ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಅವರ ಕುರಿತು ನಿರೂಪಕಿ ಸುಮಾ ಪ್ರಶ್ನೆ ಕೇಳಿದಾಗ ರಶ್ಮಿಕಾ ನಾಚಿ ನೀರಾಗಿದ್ದರು. ವಿಜಯ್ ಅವರಲ್ಲಿ ನನಗೆ ಎಲ್ಲವೂ ಇಷ್ಟ ಎಂದು ಹೇಳಿದ್ದರು. ನಗೆಯನ್ನು ಬೀರಿದ್ದರು.

fans-go-wild-as-rashmika-mandanna-vijay-deverakonda-spotted-holding-hands-in-new-york

ಇದಕ್ಕೂ ಮುನ್ನ ''ಪುಷ್ಪ 2'' ಚಿತ್ರದ ಬಿಡುಗಡೆ ಸಮಯದಲ್ಲಿ ಕೂಡ ರಶ್ಮಿಕಾಗೆ ನಿರೂಪಕರು ನೀವು ಸಿನಿಮಾ ಇಂಡಸ್ಟ್ರಿಯನ್ನು ಮದುವೆ ಆಗ್ತೀರಾ ಅಥವಾ ಹೊರಗಿನವರನ್ನು ಮದುವೆ ಆಗ್ತೀರಾ? ನೀವು ಕ್ಲ್ಯಾರಿಟಿ ಕೊಟ್ಟರೆ ನಾವು ಹುಡುಗನನ್ನು ಹುಡುಕುತ್ತೇವೆ ಎಂದು ಕೇಳಿದಾಗ ನಸು ನಕ್ಕಿದ್ದ ರಶ್ಮಿಕಾ ಎಲ್ಲರಿಗೂ ಈ ವಿಷಯ ಗೊತ್ತು ಎಂದು ಹೇಳಿದ್ದರು

ಇನ್ನು ಇಬ್ಬರ ಚಿತ್ರಗಳ ವಿಚಾರಕ್ಕೆ ಬಂದರೆ ರಶ್ಮಿಕಾ ಮಂದಣ್ಣ ಕೈಯಲ್ಲಿ ಸದ್ಯ ಹಲವು ಸಿನಿಮಾಗಳಿವೆ. ಆ ಪೈಕಿ ಹಿಂದಿಯಲ್ಲಿ ಆಯುಷ್ಮಾನ್ ಖುರಾನ ಜೊತೆ ಮಾಡಿರುವ ''ಥಾಮಾ'' ಚಿತ್ರದ ಫಸ್ಟ್ ಗ್ಲಿಂಫ್ಸ್ ನಾಳೆ (ಆಗಸ್ಟ್ 19) ಬಿಡುಗಡೆಯಾಗಲಿದೆ. ಮತ್ತೊಂದು ಕಡೆ ರಶ್ಮಿಕಾ ಮಂದಣ್ಣ ತಮ್ಮದೇ ಫರ್ಪ್ಯೂಮ್ ಬ್ರ್ಯಾಂಡ್ ಶುರು ಮಾಡಿದ್ದಾರೆ. ಇತ್ತ ವಿಜಯ್ ದೇವರಕೊಂಡ ಮಾಡಿದ ಸಿನಿಮಾಗಳೆಲ್ಲಾ ತೋಪೆದ್ದು ಹೋಗುತ್ತಿವೆ. ದೇವರಕೊಂಡನ ದೇವರೇ ಕಾಪಾಡಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

More from Filmibeat

English summary
Fans are convinced! Rashmika Mandanna and Vijay Deverakonda were seen holding hands, sparking a massive buzz online. Get the full story behind the 'Virosh' moment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X