ಪ್ರಭಾಸ್ ಹೊಸ ಸಿನಿಮಾ ಮುಹೂರ್ತ ಸಮಾರಂಭಕ್ಕೆ ಪ್ರಶಾಂತ್ ನೀಲ್.. ಆದ್ರೆ...

'ಕಲ್ಕಿ 2898AD' ಬ್ಲಾಕ್‌ಬಸ್ಟರ್ ಬೆನ್ನಲ್ಲೇ ನಟ ಪ್ರಭಾಸ್ ಹೊಸ ಸಿನಿಮಾ ಸೆಟ್ಟೇರಿದೆ. ಹೈದರಾಬಾದ್‌ನಲ್ಲಿ ಚಿತ್ರಕ್ಕೆ ಪೂಜೆ ನೆರವೇರಿಸಿ ಚಿತ್ರೀಕರಣಕ್ಕೆ ಚಾಲನೆ ಕೊಡಲಾಗಿದೆ. ಈಗಾಗಲೇ 'ದಿ ರಾಜಾಸಾಬ್' ಎನ್ನುವ ಚಿತ್ರದಲ್ಲಿ ಡಾರ್ಲಿಂಗ್ ನಟಿಸುತ್ತಿದ್ದಾರೆ. ಆ ಸಿನಿಮಾ ಮುಂದಿನ ವರ್ಷ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ.

'ಸೀತಾರಾಮಂ' ಸಿನಿಮಾ ಮಾಡಿ ಗೆದ್ದ ಹನು ರಾಘವಪುಡಿ ಪ್ರಭಾಸ್ ಮುಂದಿನ ಸಿನಿಮಾ ಸಾರಥ್ಯ ವಹಿಸಿಕೊಂಡಿದ್ದಾರೆ. 'ಫೌಜಿ' ಎನ್ನುವ ಟೈಟಲ್ ಅನ್ನು ಚಿತ್ರಕ್ಕಾಗಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. ಕೆಲ ದಿನಗಳ ಹಿಂದೆ ಸಿನಿಮಾ ಸ್ಟಾರ್ ಕಾಸ್ಟ್ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಪಾಕಿಸ್ತಾನಿ ನಟಿ ಚಿತ್ರದ ನಾಯಕಿ ಆಗುತ್ತಾಳೆ ಎನ್ನಲಾಗಿತ್ತು.

Fauji Prabhas and Hanu Raghavapudi s film launched in hyderabad

ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭಕ್ಕೆ ಕನ್ನಡ ನಿರ್ದೇಶಕ ಪ್ರಶಾಂತ್ ನೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ತಂಡಕ್ಕೆ ಶುಭ ಕೋರಿದ್ದಾರೆ. ಪ್ರಭಾಸ್- ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಸಲಾರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. 'ಸಲಾರ್-2' ಸಿನಿಮಾ ಕೂಡ ಬರಬೇಕಿದೆ.

'ದಿ ರಾಜಾಸಾಬ್' ಬಳಿಕ ಪ್ರಭಾಸ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದಷ್ಟು ಬೇಗ 'ಸಲಾರ್-2' ಸಿನಿಮಾ ನೋಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಬಹಳ ಹಿಂದೆ ಜ್ಯೂ. ಎನ್‌ಟಿಆರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಘೋಷಣೆ ಆಗಿತ್ತು. ಹಾಗಾಗಿ ಆ ಚಿತ್ರವನ್ನೇ ಅವರು ಮೊದಲು ಕೈಗೆತ್ತಿಕೊಂಡಿದ್ದಾರೆ.

ಇತ್ತೀಚೆಗಷ್ಟೆ ನೀಲ್- ತಾರಕ್ ಜೋಡಿಯ ಸಿನಿಮಾ ಮುಹೂರ್ತ ಸಮಾರಂಭ ಕೂಡ ನಡೆದಿತ್ತು. ಮೈತ್ರಿ ಮೂವಿ ಮೇಕರ್ಸ್ ಜೊತೆ ಸೇರಿ ಎನ್‌ಟಿಆರ್ ಆರ್ಟ್ಸ್ ಆ ಸಿನಿಮಾ ನಿರ್ಮಾಣ ಮಾಡಲಿದೆ. ಎನ್‌ಟಿಆರ್31 ಸಿನಿಮಾ ಕೆಲಸಗಳಿಗಾಗಿ ನೀಲ್ ಹೈದರಾಬಾದ್‌ನಲ್ಲೇ ಉಳಿದುಕೊಂಡಿದ್ದಾರೆ. ಇನ್ನು ಪ್ರಭಾಸ್ ಜೊತೆಗೆ ಮೈತ್ರಿ ಮೂವಿ ಮೇಕರ್ಸ್ ಜೊತೆಗೂ ಒಳ್ಳೆ ಒಡನಾಟ ಇರುವುದರಿಂದ ನೀಲ್ ಹೊಸ ಸಿನಿಮಾ ಮುಹೂರ್ತ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

Fauji Prabhas and Hanu Raghavapudi s film launched in hyderabad

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಇಮಾನ್ ಎಸ್ಮೇಲ್ 'ಫೌಜಿ' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆಕೆ ಕೂಡ ಮುಹೂರ್ತ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ. ಅಧಿಕೃತವಾಗಿ ಪ್ರಭಾಸ್- ಹನು ರಾಘವಪುಡಿ ಸಿನಿಮಾ ಘೋಷಣೆ ಆಗಿರಲಿಲ್ಲ. ಇದೀಗ ಮುಹೂರ್ತ ನೆರವೇರಿಸಿ ಸಿನಿಮಾ ಘೋಷಿಸಲು ಚಿತ್ರತಂಡ ಮುಂದಾಗಿದೆ. ಚಿತ್ರದಲ್ಲಿ ಒಂದು ಪೀರಿಯಡ್ ಕಥೆ ಹೇಳಲು ನಿರ್ದೇಶಕರು ಮುಂದಾಗಿದ್ದಾರೆ ಎನ್ನಲಾಗ್ತಿದೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಎನ್ನುವ ಚಿತ್ರದಲ್ಲಿ ಕೂಡ ಪ್ರಭಾಸ್ ನಟಿಸಬೇಕಿದೆ. 'ಬಾಹುಬಲಿ' ಸರಣಿ ಬಳಿಕ ಆತ ನಟಿಸಿದ 3 ಸಿನಿಮಾಗಳು ಸೋಲುಂಡಿದ್ದವು. 'ಸಲಾರ್' ಸಿನಿಮಾ ಗೆದ್ದು ಸದ್ದು ಮಾಡಿತ್ತು. ಅದರ ಬೆನ್ನಲ್ಲೇ 'ಕಲ್ಕಿ 2898AD' ಸಿನಿಮಾ ಕೂಡ ಹಿಟ್ ಆಯಿತು. ಆಗಸ್ಟ್ 22ಕ್ಕೆ ಸಿನಿಮಾ ಅಮೇಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇದರ ಬೆನ್ನಲ್ಲೇ ಹೊಸ ಸಿನಿಮಾ ಶುರುವಾಗುತ್ತಿದೆ.

ಮುಂದಿನ ವಾರವೇ 'ಫೌಜಿ' ಸಿನಿಮಾ ಚಿತ್ರೀಕರಣ ಶುರುವಾಗುವ ಸಾಧ್ಯತೆಯಿದೆ. 'ಫೌಜಿ' ಎನ್ನುವ ಟೈಟಲ್‌ನಲ್ಲೇ ಸಿನಿಮಾ ತೆರೆಗೆ ಬರುತ್ತಾ? ಅಥವಾ ಟೈಟಲ್ ಬದಲಾಗುತ್ತಾ ಕಾದು ನೋಡಬೇಕಿದೆ. ಅಭಿಮಾನಿಗಳಂತೂ ಡಾರ್ಲಿಂಗ್ ಹೊಸ ಸಿನಿಮಾ ಶುರು ಮಾಡಿರುವುದಕ್ಕೆ ಖುಷಿಯಾಗಿದ್ದಾರೆ. ಯಾವಾಗ ಸಿನಿಮಾ ತೆರೆಗೆ ಬರಬಹುದು? ಎಂದು ಕಾಯುತ್ತಿದ್ದಾರೆ.

More from Filmibeat

English summary
Prabhas-Hanu Raghavapudi film; prashanth neel Grace the Launch;
Read more about: prabhas prashanth neel telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X