Fauzi Release Date: 'ಫೌಜಿ' ರಿಲೀಸ್ ಡೇಟ್ ಘೋಷಣೆ: ಡಿಸೆಂಬರ್ ಲಕ್ಕಿ ವೀಕೆಂಡ್ ಪ್ರಭಾಸ್ ಎಂಟ್ರಿ

ಈ ವರ್ಷ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್ ನಟನೆಯ 'ಫೌಜಿ' ಸಿನಿಮಾ ಮರೆಯುವಂತಿಲ್ಲ. ಈ ವರ್ಷದ ಆರಂಭದಲ್ಲಿ 'ರಾಜಾಸಾಬ್' ಆಗಿ ಬಂದು ಯಂಗ್ ರೆಬಲ್ ಸ್ಟಾರ್ ಸೋಲುಂಡಿದ್ದರು. ಇದೇ ವರ್ಷ ಮತ್ತೊಂದು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಐತಿಹಾಸಿಕ ಕಥಾಹಂದರದ ಸಿನಿಮಾ ನಿರ್ಮಾಣವಾಗ್ತಿದೆ. ಅಧಿಕೃತವಾಗಿ ರಿಲೀಸ್ ಡೇಟ್ ಘೋಷಣೆಯಾಗಿದೆ.

'ಸೀತಾರಾಮಂ' ಸಿನಿಮಾ ಕಟ್ಟಿಕೊಟ್ಟು ಸಕ್ಸಸ್ ಕಂಡಿದ್ದ ಹನು ರಾಘವಪುಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇಮಾನ್ವಿ ಇಸ್ಮಾಯಿಲ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಜಯಪ್ರದ, ರಾಹುಲ್ ರವಿಂದ್ರನ್ ಸೇರಿ ದೊಡ್ಡ ತಾರಾಗಣ 'ಫೌಜಿ' ಚಿತ್ರದಲ್ಲಿದೆ. ಪ್ರಭಾಸ್ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಸ್ವಾತಂತ್ರ್ಯ ಪೂರ್ವ ಕಾಲಘಟ್ಟದ ಕಥೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ. ಡಿಸೆಂಬರ್ 3ರಂದು ಸಿನಿಮಾ ತೆರೆಗೆ ಬರಲಿದೆ.

Fauzi Release Date Announced Prabhas Film To Hit Theatres On December 3rd

ಖಡಕ್ ಪೋಸ್ಟರ್ ಜೊತೆಗೆ 'ಫೌಜಿ' ರಿಲೀಸ್ ಬಗ್ಗೆ ಚಿತ್ರತಂಡ ಅಪ್‌ಡೇಟ್ ಕೊಟ್ಟಿದೆ. ರಕ್ತಸಿಕ್ತವಾದ ಉಡುಪಿನಲ್ಲಿ, ಸುತ್ತಲೂ ಶವಗಳ ನಡುವೆ ಕಲ್ಲಿನ ಮೇಲೆ ಕುಳಿತು ಗನ್ ಹಿಡಿದಿರುವ ಪ್ರಭಾಸ್ ಅವರ ಲುಕ್‌, ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡ್ತಿದೆ. ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.

ಬಹುನಿರೀಕ್ಷಿತ ಸಿನಿಮಾ

ಎರಡು ವರ್ಷಗಳ ಹಿಂದೆ 'ಕಲ್ಕಿ 2898 AD' ಸಿನಿಮಾ ಮೂಲಕ ಪ್ರಭಾಸ್ ಪ್ರೇಕ್ಷಕರನ್ನು ರಂಜಿಸಿದ್ದರು. ಬಳಿಕ 'ರಾಜಾಸಾಬ್' ಸಿನಿಮಾ ಮೂಲಕ ಪ್ರಯೋಗ ಮಾಡಿ ಸೋಲುಂಡರು. ಸದ್ಯ 'ಸ್ಪಿರಿಟ್', 'ಕಲ್ಕಿ 2898 AD' ಸೀಕ್ವೆಲ್, 'ಸಲಾರ್' ಸೀಕ್ವೆಲ್ ಹೀಗೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಯಂಗ್ ರೆಬಲ್ ಸ್ಟಾರ್ ನಟಿಸುತ್ತಿದ್ದಾರೆ. 'ಅಜ್ಞಾತಪರ್ವ ಎಂಡ್ಸ್, 'ದಿ ರೆಬೆಲಿಯನ್ ಬಿಗಿನ್ಸ್' ಎಂದು ಕ್ಯಾಪ್ಷನ್ ಕೊಟ್ಟು ಚಿತ್ರತಂಡ 'ಫೌಜಿ' ಚಿತ್ರದ ಅಪ್‌ಡೇಟ್ ಕೊಟ್ಟಿದೆ. ಸಾರಿದ್ದಾರೆ. 'ಬಾಹುಬಲಿ'ಯ ನಂತರ ಪ್ರಭಾಸ್ ಮತ್ತೊಮ್ಮೆ ಒಂದು ಬೃಹತ್ ಪೀರಿಯಡ್ ಡ್ರಾಮಾ ಕಥೆಯೊಂದಿಗೆ ಬೆಳ್ಳಿಪರದೆಗೆ ಮರಳುತ್ತಿದ್ದಾರೆ. "ಎ ಬೆಟಾಲಿಯನ್‌ ಹೂ ಫೈಟ್ಸ್‌ ಅಲೋನ್‌" ಎಂಬ ಟ್ಯಾಗ್‌ಲೈನ್ ಇರುವ ಸಿನಿಮಾ ಭಾವನಾತ್ಮಕ ಹಾಗೂ ಅದ್ಭುತ ದೃಶ್ಯ ವೈಭವದ ಅನುಭವವನ್ನು ನೀಡುವ ಭರವಸೆ ನೀಡಿದೆ. ಈ ಚಿತ್ರವು ಪ್ರಭಾಸ್ ಅವರ ವೃತ್ತಿಜೀವನದಲ್ಲಿ ಅತ್ಯಂತ ಮಹತ್ವದ ಮತ್ತು ದೊಡ್ಡ ಪ್ರಾಜೆಕ್ಟ್ ಎನಿಸಿಕೊಂಡಿದೆ.

ಬಹುಕೋಟಿ ವೆಚ್ಚ ಸಿನಿಮಾ

'ಫೌಜಿ' ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯರ್ನೇನಿ ಮತ್ತು ವೈ. ರವಿ ಶಂಕರ್ ಅವರು ಟಿ-ಸೀರೀಸ್ ಫಿಲ್ಮ್ಸ್‌ನ ಭೂಷಣ್ ಕುಮಾರ್ ಅವರೊಂದಿಗೆ ಜಂಟಿಯಾಗಿ ನಿರ್ಮಿಸಿದ್ದಾರೆ. ವಿಶಾಲ್ ಚಂದ್ರಶೇಖರ್ ಸಂಗೀತ, ಸುದೀಪ್ ಚಟರ್ಜಿ ಛಾಯಾಗ್ರಹಣ ಚಿತ್ರಕ್ಕಿದೆ. ಎರಡು ದೈತ್ಯ ಚಿತ್ರ ನಿರ್ಮಾಣ ಸಂಸ್ಥೆಗಳು ಕೈಜೋಡಿಸಿ ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗೆ ತರ್ತಿವೆ. 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಡಿಸೆಂಬರ್ ಫಸ್ಟ್ ವೀಕೆಂಡ್

'ಫೌಜಿ' ಸಿನಿಮಾ ರಿಲೀಸ್ ಡೇಟ್ ಇದೀಗ ಗೊತ್ತಾಗಿದೆ. ಡಿಸೆಂಬರ್ ಮೊದಲ ವಾರ ಸಿನಿಮಾ ತೆರೆಗೆ ಬರ್ತಿದೆ. ಇದು ಲಕ್ಕಿ ವೀಕೆಂಡ್ ಎಂದೇ ಕೆಲವರು ಭಾವಿಸಿದ್ದಾರೆ. ಆ ವಾರ ಬಿಡುಗಡೆ ಆಗಿರುವ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿವೆ. ಅದೇ ಸಾಲಿಗೆ 'ಫೌಜಿ' ಕೂಡ ಸೇರುತ್ತಾ ಕಾದು ನೋಡಬೇಕಿದೆ. 'ಪುಷ್ಪ'-2, 'ಧುರಂಧರ್', 'ಅನಿಮಲ್' ಸಿನಿಮಾ ಕೂಡ ಡಿಸೆಂಬರ್ ಮೊದಲ ವಾರವೇ ತೆರೆಗೆ ಬಂದು ಸಂಚಲನ ಸೃಷ್ಟಿಸಿತ್ತು.

Read more about: prabhas tollywood theater
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X