ಸಮಂತಾಗೆ ಫೆ.26 ಅತಿ ಮುಖ್ಯವಾದ ದಿನ: ನಾಗಚೈತನ್ಯ ಮೊದಲ ಭೇಟಿ ಅದು!
ನಟಿ ಸಮಂತಾ ಸದ್ಯ ತೆಲುಗು ಸಿನಿಮಾರಂಗದಲ್ಲಿ ಹೆಚ್ಚು ಬೇಡಿಕೆಯ ನಟಿ ಆಗಿದ್ದಾರೆ. ಮದುವೆಯ ಬಳಿಕ ಸಮಂತಾ ಕೊಂಚ ದಿನ ಸಿನಿಮಾಗಳಲ್ಲಿ ಸಕ್ರಿಯವಾಗಿ ಇರಲಿಲ್ಲ. ಆದರೆ ವಿಚ್ಛೇದನದ ಬಳಿಕ ಸಮಂತಾ ಅವರು ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ ಅವರ 'ಶಾಕುಂತಲಂ' ಸಿನಿಮಾ ರಿಲೀಸ್‌ಗೆ ರೆಡಿ ಆಗುತ್ತಿದೆ.
ಆದರೆ ಈಗ ಸಮಂತಾ ಮತ್ತೊಂದು ಕಾರಣಕ್ಕೆ ಸುದ್ದಿ ಆಗಿದ್ದಾರೆ. ಯಾವುದೋ ಸಿನಿಮಾ ಅಥವಾ ಗಾಸಿಪ್ ಸುದ್ದಿ ವಿಚಾರಕ್ಕೆ ಸಮಂತಾ ಸುದ್ದಿ ಆಗಿಲ್ಲ. ಬದಲಿಗೆ ಒಂದು ವಿಶೇಷವಾದ ಸಂಗತಿ ಮೂಲಕ ಸಮಂತಾ ಸುದ್ದಿಯಲ್ಲಿ ಇದ್ದಾರೆ. ಆ ವಿಶೇಷವಾದ ಸಂಗತಿಯನ್ನು ಸ್ವತಃ ಸಮಂತಾ ಅವರೇ ಹೇಳಿಕೊಂಡಿದ್ದಾರೆ.
ಇಂದು ಫೆ.26 ಸಮಂತಾ ಪಾಲಿಗೆ ಅತ್ಯಂತ ವಿಶೇಷವಾದ ದಿನ. ಇದು ಸಮಂತಾ ಸಿನಿಮಾ ಬದುಕಿಗೆ ಬುನಾದಿ ಆದ ದಿನ. ಹಾಗಾಗಿ ಈ ವಿಶೇಷ ದಿನವನ್ನು ತುಂಬಾನೇ ಸ್ಪೆಷನ್ ಆಗಿ ಸಮಂತಾ ಆಚರಿಸುತ್ತಾರೆ. ಇದು ಸಮಂತಾ ಮಾಜಿ ಪತಿ ನಾಗಚೈತನ್ಯ ಅವರಿಗೂ ಸಂಬಂಧ ಪಟ್ಟ ವಿಚಾರ ಆಗಿದೆ.

ಚಿತ್ರರಂಗದಲ್ಲಿ 12 ವರ್ಷ ಪೂರೈಸಿದ ಸಮಂತಾ!
ನಟಿ ಸಮಂತಾ ಸಿನಿಮಾರಂಗದಲ್ಲಿ ತಮ್ಮ ಪಯಣ ಶುರು ಮಾಡಿ, 12 ವರ್ಷ ಕಳೆದಿದೆ. ಹೌದು ಪ್ರತಿಯೊಬ್ಬ ತಾರೆಯರಿಗೂ ತಮ್ಮ ಮೊದಲ ಹೆಜ್ಜೆ ಅತಿ ಮುಖ್ಯ ಆಗಿರುತ್ತದೆ. ಅದರಲ್ಲೂ ಮೊದಲನೆ ಪ್ರಯತ್ನದಲ್ಲೇ ಅವರು ಗೆದ್ದರೆ, ಮೊದಲ ಸಿನಿಮಾವೇ ಹಿಟ್ ಲಿಸ್ಟ ಸೇರಿದರೆ ಅದು ಅವರಿಗೆ ಅತ್ಯಂತ ವಿಶೇಷ ಆಗಿರುತ್ತದೆ. ಅಂತೆಯೇ ಸಮಂತಾ ಅಭಿನಯದ ಮೊದಲ ಸಿನಿಮಾ 'ಏ ಮಾಯಾ ಚೇಸಾವೆ' ಸಿನಿಮಾ ರಿಲೀಸ್ ಆಗಿ ಇಂದಿಗೆ (ಫೆ.26) 12 ವರ್ಷ ಆಗುತ್ತೆ. ಮತ್ತೊಂದು ವರ್ಷವನ್ನು ಸಮಂತಾ ಸಿನಿಮಾರಂಗದಲ್ಲಿ ಯಶಸ್ವಿಯಾಗಿ ಕಳೆದಿದ್ದಾರೆ.
ಸಮಂತಾ ಬರೆದರು ಭಾವನಾತ್ಮಕ ನುಡಿ!
ಈ ವಿಶೇಷದಿನದಂದು ನಟಿ ಸಮಂತಾ ಭಾವನಾತ್ಮಕ ಸಂದೇಶವನ್ನು ಬರೆದಿದ್ದಾರೆ. ತಮ್ಮ ಒಂದು ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಮೊದಲ ಹೆಜ್ಜೆಯನ್ನು ನೆನೆದಿದ್ದಾರೆ. "ನಾನು ಇಂದು ಬೆಳಗ್ಗೆ ಎದ್ದಾಗ ಗೊತ್ತಾಯಿತು, ನಾನು ಚಿತ್ರೋದ್ಯಮದಲ್ಲಿ 12 ವರ್ಷಗಳನ್ನು ಪೂರೈಸಿದ್ದೇನೆ ಎಂದು. ಲೈಟ್ಸ್, ಕ್ಯಾಮೆರಾ, ಆಕ್ಷನ್ ಮತ್ತು ಹಲವು ಕ್ಷಣಗಳ ಸುತ್ತ ಸುತ್ತುವ 12 ವರ್ಷಗಳ ನೆನಪುಗಳು. ಈ ಆಶೀರ್ವಾದದ ಪ್ರಯಾಣ ಮತ್ತು ವಿಶ್ವದ ಅತ್ಯುತ್ತಮ, ಅತ್ಯಂತ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದ್ದಕ್ಕಾಗಿ ನಾನು ಕೃತಜ್ಞನಾಳಗಿದ್ದೇನೆ! ಸಿನಿಮಾದೊಂದಿಗಿನ ನನ್ನ ಪ್ರೇಮಕಥೆಯು ಎಂದಿಗೂ ಕೊನೆಗೊಳ್ಳುವುದಿಲ್ಲ ಮತ್ತು ಶಕ್ತಿಯಿಂದ ಸಮೃದ್ಧವಾಗಿದೆ ಎಂದು." ಎಂದು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಮೊದಲ ಚಿತ್ರದಲ್ಲೇ ನಾಗಚೈತನ್ಯ ಭೇಟಿ!
'ಏ ಮಾಯಾ ಚೇಸಾವೆ' ಸಿನಿಮಾ ಸಮಂತಾ ಸಿನಿಮಾ ಬದುಕಿಗೆ ಬೆಳಕು ಚೆಲ್ಲುವುದರ ಜೊತೆಗೆ ಆಕೆಯ ಲವ್ ಲೈಫ್‌ಗೂ ಕೂಡ ಬೆಳಕಾಗಿತ್ತು. ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಈ ಚಿತ್ರದ ಮೂಲಕವೇ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದು. ಇಬ್ಬರ ಮೊದಲ ಪರಿಚಯ ಆಗಿದ್ದು ಕೂಡ ಇದೇ ಚಿತ್ರದೊಂದಿದೆ. ಇನ್ನು ಟಾಲಿವುಡ್ ಗಾಪಿಸ್ ಪ್ರಕಾರ. ಈ ಚಿತ್ರ ಮಾಡುವಾಗಲೇ ಸಮಂತಾ ಮತ್ತು ನಾಗಚೈತನ್ಯ ನಡುವೆ ಪ್ರೀತಿ ಚಿಗುರೊಡೆದಿತ್ತು ಎನ್ನಲಾಗಿದೆ. ಆದರೆ ಮದುವೆ ಆದ ಈ ಜೋಡಿ ವಿಚ್ಛೇದನ ಪಡೆದು ದೂರಾಗಿದೆ.

ಹಲವು ಹಿಟ್ ಸಿನಿಮಾಗಳನ್ನು ಕೊಟ್ಟ ಸಮಂತಾ!
ನಟಿ ಸಮಂತಾ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿ ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಮೊದಲ ಚಿತ್ರಕ್ಕೆ ಸಮಂತಾ ಫಿಲ್ಮ್ ಫೇರ್ ಪ್ರಸಸ್ತಿ ಬಾಕಿಕೊಂಡರು. ಇನ್ನು ಸಮಂತಾ ಅಭಿನಯದ 'ಈಗ', 'ಮನಂ', '24', 'ದೂಕುಡು', 'ಬೃಂದಾವನಂ', 'ಅತ್ತಾರಿಂಟಿಕಿ ದಾರೆದಿ' ಚಿತ್ರಗಳು ಸೇರಿದಂತೆ ಹಲವು ಸಿನಿಮಾಗಳು ಸೂಪರ್ ಹಿಟ್ ಲಿಸ್ಟ್ ಸೇರಿವೆ. ಇನ್ನು ಕೂಡ ಸಮಂತಾ ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಈಗ ಹಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ.


Click it and Unblock the Notifications











