'ಫಿದಾ' ಹೀರೊ ವರುಣ್ ತೇಜ್ ಮದುವೆ ಸುಳಿವು ನೀಡಿದ ತಂದೆ ನಾಗಬಾಬು

ಮೆಗಾ ಫ್ಯಾಮಿಲಿಯಿಂದ ಹೆಚ್ಚು ಕಮ್ಮಿ ಡಜನ್ ಹೀರೊಗಳು ತೆಲುಗು ಚಿತ್ರರಂಗದಲ್ಲಿದ್ದಾರೆ. ಚಿರು ಸಹೋದರ ನಾಗಬಾಬು ಪುತ್ರ ವರುಣ್ ತೇಜ್ ಕೂಡ ಅದರಲ್ಲಿ ಒಬ್ಬರು. 'ಫಿದಾ' ಸಿನಿಮಾ ಸಿನಿರಸಿಕರ ಮನಗೆದ್ದ ಈ ಆರಡಿ ಸುಂದರಾಂಗನ ಮದುವೆಗೂ ಕಾಲ ಕೂಡಿ ಬಂದಿದೆ. ಖುದ್ದು ತಂದೆ ನಾಗಬಾಬು ವರುಣ್ ತೇಜ್ ಮದುವೆ ಬಗ್ಗೆ ಸುಳಿವು ಕೊಟ್ಟಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟ ನಾಗಬಾಬು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕೆಲವೇ ವರ್ಷಗಳ ಹಿಂದೆ ಮುದ್ದಿನ ಮಗಳ ಮದುವೆಯನ್ನು ಬಹಳ ಅದ್ಧೂರಿಯಾಗಿ ನಾಗಬಾಬು ಮಾಡಿದ್ದರು. ಈ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಮೆಗಾ ಫ್ಯಾಮಿಲಿ ಜೊತೆ ಟಾಲಿವುಡ್ ಗಣ್ಯರು ಹಾಜರಾಗಿದ್ದರು. ಇದೀಗ ಮಗ ವರುಣ್ ತೇಜ್ ಮದುವೆ ಬಗ್ಗೆ ನಾಗಬಾಬು ಮಾತನಾಡಿದ್ದಾರೆ. ಶೀಘ್ರದಲ್ಲೇ ವರುಣ್ ಮದುವೆ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡುತ್ತಾನೆ. ಕಾದು ನೋಡಿ ಎಂದು ಹೇಳಿದ್ದಾರೆ. ಕೆಲ ದಿನಗಳಿಂದ ವರುಣ್ ತೇಜ್ ಲವ್, ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಗುಸು ಗುಸು ಶುರುವಾಗಿದೆ. ಇದೀಗ ಸ್ವತಃ ತಂದೆ ನಾಗಬಾಬು ಈ ಬಗ್ಗೆ ಆಸಕ್ತಿಕರ ಅಂಶಗಳನ್ನು ಬಚ್ಚಿಟ್ಟಿದ್ದಾರೆ.

Fidaa Actor Varun Tej to get married this year, says his Father Nagababu

ಶೀಘ್ರದಲ್ಲೇ ವರುಣ್ ಮದುವೆ ನಡೆಯಲಿದೆ. ತನ್ನ ಮದುವೆ ಬಗ್ಗೆ ಖುದ್ದು ವರುಣ್ ಮಾಹಿತಿ ನೀಡುತ್ತಾನೆ. ಆದರೆ ಹುಡುಗಿ ಯಾರು ಎನ್ನುವ ಸೀಕ್ರೆಟ್ ಅನ್ನು ನಾಗಬಾಬು ರಿವೀಲ್ ಮಾಡಿಲ್ಲ. ಹುಡುಗಿ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಆ ವಿಚಾರವನ್ನು ಕೂಡ ವರುಣ್ ಹೇಳ್ತಾನೆ. ಸದ್ಯ ವರುಣ್ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾನೆ. ಮದುವೆ ನಂತರ ಕೂಡ ಹೆಂಡತಿ ಜೊತೆ ಅದೇ ಮನೆಯಲ್ಲಿ ಇರುತ್ತಾನೆ ಎಂದು ನಾಗಬಾಬು ತಿಳಿಸಿದ್ದಾರೆ.

Fidaa Actor Varun Tej to get married this year, says his Father Nagababu

ನಾವು ಬೇರೆ ಬೇರೆ ಇದ್ದೀವಿ ಅಂದ ಮಾತ್ರಕ್ಕೆ ನಾನು ದೂರ ಇದ್ದೀವಿ ಅಂತ ಅರ್ಥ ಅಲ್ಲ. ಮಾನಸಿಕವಾಗಿ ನಾವು ಬಹಳ ಹತ್ತಿರ ಇರುತ್ತೇವೆ. ಮದುವೆ ನಂತರ ಚಿರಂಜೀವಿ, ಪವನ್, ನಾನು ಕೂಡ ಬೇರೆ ಬೇರೆ ವಾಸಿಸುತ್ತಿದ್ದೇವೆ. ಹಾಗಂತ ನಮ್ಮ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಅರ್ಥ ಅಲ್ಲ. ಹಬ್ಬ ಅಥವಾ ಯಾವುದಾದರೂ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಸೇರುತ್ತಿರುತ್ತೇವೆ. ಸದ್ಯ ಟಾಲಿವುಡ್‌ನfಲೀಗ ವರುಣ್ ತೇಜ್ ಮದುವೆ ವಿಚಾರ ಭಾರೀ ಚರ್ಚೆ ಹುಟ್ಟಾಕಿದೆ.

More from Filmibeat

English summary
Fidaa Actor Varun Tej to get married this year, says his Father Nagababu. Mega brother Nagababu Intresting Comments on Varun Marriage. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X