twitter
    For Quick Alerts
    ALLOW NOTIFICATIONS  
    For Daily Alerts

    'ಐರನ್ ಲೆಗ್' ಎನ್ನುತ್ತಿದ್ದ ವಿಮರ್ಶಕರಿಗೆ, ಮಂತ್ರಿಯಾಗಿ 'ನಾನು ಗೋಲ್ಡನ್ ಲೆಗ್' ಎಂದ ನಟಿ ರೋಜಾ!

    |

    ಆಂಧ್ರದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ತಮ್ಮ ಸಚಿವ ಸಂಪುಟವನ್ನು ಪುನಾರಚನೆ ಮಾಡಿದ್ದಾರೆ. 25 ಮಂತ್ರಿ ಸ್ಥಾನಗಳನ್ನು ಹೊಂದಿರುವ ಆಂಧ್ರದ ಸಚಿವ ಸಂಪುಟದ ಎಲ್ಲಾ ಸಚಿವರ ರಾಜೀನಾಮೆಗಳನ್ನು ಪಡೆದು ಹಳೆಯ ಸಚಿವ ಸಂಪುಟದ 11 ಮಂತ್ರಿಗಳನ್ನು ಉಳಿಸಿಕೊಂಡು ಹೊಸದಾಗಿ 14 ಮಂದಿಗೆ ಮಂತ್ರಿಸ್ಥಾನವನ್ನು ನೀಡಿದ್ದಾರೆ. ಜಾತಿ -ಪ್ರಾದೇಶಿಕ ಲೆಕ್ಕಾಚಾರಗಳನ್ನು ಅಳೆದು-ತೂಗಿ ನೂತನ ಸಚಿವ ಸಂಪುಟ ರಚನೆ ನಡೆಸಲಾಗಿದ್ದು ಸಚಿವ ಸಂಪುಟದಲ್ಲಿ ಅತ್ಯಂತ ಗಮನಸೆಳೆದಿರುವುದು ಚಲನಚಿತ್ರ ನಟಿ- ನಗರಿ ಕ್ಷೇತ್ರ ಶಾಸಕಿ ಆರ್. ಕೆ.ರೋಜಾ.

    ಒಬ್ಬ ಜನಪ್ರಿಯ ನಾಯಕನಟಿಯಾಗಿ-ಪೋಷಕ ಕಲಾವಿದೆಯಾಗಿ ಚಲನಚಿತ್ರ ಹಾಗೂ ಕಿರುತರೆಗಳಲ್ಲಿ ಮಿಂಚುತ್ತಿರುವ ನಟಿ ರೋಜಾ ಅವರು ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ನಿರ್ಮಾಪಕಿಯಾಗಿ ಕೂಡ ಒಂದಷ್ಟು ಚಿತ್ರಗಳ ನಿರ್ಮಾಣ ಕೂಡ ಮಾಡಿದ್ದಾರೆ. ಸಿನಿಮಾ ನಟಿಯಾಗಿ, ಸ್ಕ್ರೀನ್ ಪ್ರೆಸೆಂಟರ್ ಆಗಿ ಹೆಸರು ಮಾಡಿದ್ದ ರೋಜಾ ರಾಜಕೀಯದಲ್ಲೂ ತಮ್ಮದೇ ಶೈಲಿಯಲ್ಲಿ ಛಾಪು ಮೂಡಿಸಿದ್ದಾರೆ.

    Prakash Raj: ರಾಜ್ಯಸಭೆಗೆ ಪ್ರಕಾಶ್ ರೈ! ರೇಸ್‌ನಲ್ಲಿ ಇನ್ನೂ ಕೆಲವರುPrakash Raj: ರಾಜ್ಯಸಭೆಗೆ ಪ್ರಕಾಶ್ ರೈ! ರೇಸ್‌ನಲ್ಲಿ ಇನ್ನೂ ಕೆಲವರು

    ಇನ್ನು ಅವರ ಕೌಟಂಬಿಕ ಹಿನ್ನೆಲೆಯನ್ನು ನೋಡುವುದಾದರೆ ರೋಜಾ ಅವರ ನಿಜವಾದ ಹೆಸರು ಶ್ರೀಲತಾ ಮತ್ತು 16/11/1971 ರಂದು ಜನಿಸಿದರು. ಆಕೆಯ ತಂದೆ ಕುಮಾರಸ್ವಾಮಿ ರೆಡ್ಡಿ ಚಿತ್ತೂರು ಜಿಲ್ಲೆಯಿಂದ ಹೈದರಾಬಾದ್‌ಗೆ ವಲಸೆ ಬಂದವರು. ರೋಜಾ 'ನಾಗಾರ್ಜುನ ವಿಶ್ವವಿದ್ಯಾಲಯ'ದಿಂದ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಕೆಲವು ವರ್ಷಗಳ ಕಾಲ ಕೂಚಿಪುಡಿ ನೃತ್ಯ ಕಲಿತಿದ್ದಾರೆ. ರೋಜಾ ಅವರು ಮೊದಲ ವರ್ಷದ ಡಿಗ್ರಿ ಓದುತ್ತಿದ್ದಾಗ 'ಪ್ರೇಮ ತಪಸ್ಸು' ಚಿತ್ರದ ಮೂಲಕ ತೆಲುಗು ಸಿನಿಮಾ ರಂಗಕ್ಕೆ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು.

    ಮೊದಲ ಚಿತ್ರ ನಿರ್ದೇಶನ ಮಾಡಿದ ನಿರ್ದೇಶಕನನ್ನೇ ವರಿಸಿದರು

    ಮೊದಲ ಚಿತ್ರ ನಿರ್ದೇಶನ ಮಾಡಿದ ನಿರ್ದೇಶಕನನ್ನೇ ವರಿಸಿದರು

    ರೋಜಾ ಮೂಲತಃ ತೆಲುಗು ಭಾಷೆಗೆ ಸೇರಿದ ನಟಿ. 'ಪ್ರೇಮ ತಪಸ್ಸು' ಮಾಡುವುದಕ್ಕೆ ಮೊದಲೇ ಆಕೆ ಮತ್ತೊಂದು ತಮಿಳು ಚಿತ್ರದಲ್ಲಿ ಅಭಿನಯಿಸಿದ್ರು. ಆರ್ ಕೆ ರೋಜಾ ತಮಿಳಿನ 'ಚಂಬರತಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವು ಕಾಲಿವುಡ್‌ನಲ್ಲಿ ಮ್ಯೂಸಿಕಲ್ ಹಿಟ್ ಆಗಿತ್ತು ಮತ್ತು 'ಚೆಮಂತಿ'ಎಂಬ ಶೀರ್ಷಿಕೆಯೊಂದಿಗೆ ತೆಲುಗಿಗೆ ಡಬ್ ಆಗಿತ್ತು. ಈ ಚಿತ್ರವನ್ನು ಖ್ಯಾತ ಛಾಯಾಗ್ರಾಹಕ ಮತ್ತು ನಿರ್ದೇಶಕ ಆರ್.ಕೆ.ಸೆಲ್ವಮಣಿ ನಿರ್ಮಿಸಿ- ನಿರ್ದೇಶಿಸಿದ್ದರು. ಅದೇ ಸಮಯದಲ್ಲಿ ಅವರಿಬ್ಬರ ನಡುವೆ ಪ್ರೇಮಾಂಕುರವಾಯಿತು. ಮುಂದೆ ರೋಜಾ ದೊಡ್ಡ ನಟಿಯಾಗಿ ದಕ್ಷಿಣ ಭಾರತದಲ್ಲಿ ಹೆಸರು ಮಾಡಿದರು. ಮುಂದೆ ರೋಜಾ ತನ್ನ ಜೀವನದ ನಾಯಕನಟನಾದ ಸೆಲ್ವಮಣಿ ಅವರನ್ನು ವಿವಾಹವಾದರು. ಅವರಿಗೆ ಮಗಳು ಅಂಶು ಮಲಿಕಾ ಮತ್ತು ಮಗ ಕೃಷ್ಣ ಕೌಶಿಕ್ ಇದ್ದಾರೆ.

    ಚಿಕ್ಕಬಳ್ಳಾಪುರ: RRR ಕಾರ್ಯಕ್ರಮದಲ್ಲಿ ರಾಜಕೀಯ ಜಗಳ, ಸ್ವಲ್ಪದರಲ್ಲಿ ತಪ್ಪಿತು ಅನಾಹುತ!ಚಿಕ್ಕಬಳ್ಳಾಪುರ: RRR ಕಾರ್ಯಕ್ರಮದಲ್ಲಿ ರಾಜಕೀಯ ಜಗಳ, ಸ್ವಲ್ಪದರಲ್ಲಿ ತಪ್ಪಿತು ಅನಾಹುತ!

    ತೆಲುಗುದೇಶಂ ಪಾರ್ಟಿಯಿಂದ ರಾಜಕೀಯ ಪ್ರವೇಶ

    ತೆಲುಗುದೇಶಂ ಪಾರ್ಟಿಯಿಂದ ರಾಜಕೀಯ ಪ್ರವೇಶ

    ಒಂದಡೆ ನಾಯಕ ನಟಿಯಾಗಿ ದೊಡ್ಡ ಹೆಸರು ಪಡೆದಿದ್ದ ರೋಜಾ ಇತರ ಸಿನಿಮಾರಂಗದವರಂತೆ ರಾಜಕೀಯದ ಕಡೆ ಒಲವು ಹೊಂದಿದ್ದರು. ಹೀಗಾಗಿ 2004ರಲ್ಲಿ ಅಧಿಕೃತವಾಗಿ ತೆಲುಗುದೇಶಂ ಪಕ್ಷ ಸೇರುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. ರೋಜಾ 2004ರಲ್ಲಿ ನಗರಿ ಕ್ಷೇತ್ರದಿಂದ TDP ಅಭ್ಯರ್ಥಿಯಾಗಿ ಚೇoಗಾರೆಡ್ಡಿ ವಿರುದ್ಧ ಸ್ಪರ್ಧಿಸಿದರು. ಆದರೆ ಚುನಾವಣೆಯಲ್ಲಿ ಸೋತರು. 2009ರಲ್ಲಿ ಮತ್ತೆ ಚಂದ್ರಗಿರಿ ಕ್ಷೇತ್ರದಿಂದ ಸ್ಪರ್ಧಿಸಿದರೂ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಡಾ. ವೈಎಸ್ ರಾಜಶೇಖರ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ರೋಜಾ ಕಾಂಗ್ರೆಸ್ ಸೇರಿದರು. ಮುಂದೆ ವೈಎಸ್ ಜಗನ್ ಅವರ ಜೊತೆಯಲ್ಲಿ ಕಾಂಗ್ರೆಸ್ ತೊರೆದು ವೈಎಸ್ಆರ್ ಸಿಪಿ ಪಾರ್ಟಿಯಲ್ಲಿ ಸಕ್ರಿಯರಾದರು.

    'ಐರನ್ ಲೆಗ್ ರೋಜಾ...'ವಿಮರ್ಶಕರಿಂದ ಕಟುಟೀಕೆ

    'ಐರನ್ ಲೆಗ್ ರೋಜಾ...'ವಿಮರ್ಶಕರಿಂದ ಕಟುಟೀಕೆ

    ಆಂಧ್ರಪ್ರದೇಶದ ರಾಜಕೀಯ ಪಡಸಾಲೆಯಲ್ಲಿ ಸದಾ ಕೇಳಿಬರುತ್ತಿದ್ದ ಒಂದು ಮಾತು 'ಐರನ್ ಲೆಗ್ ರೋಜಾ'. ಆಕೆ ಯಾವ ರಾಜಕೀಯ ಪಕ್ಷದಲ್ಲಿ ಇರುತ್ತಾರೊ ಆ ರಾಜಕೀಯ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮಾತು ಜನಜನಿತವಾಗಿತ್ತು. ಅಲ್ಲದೆ ಅವರು ಕೂಡ ಸತತವಾಗಿ ಚುನಾವಣೆಗಳಲ್ಲಿ ಸೋಲುತ್ತಿದ್ದರು. ಆದರೆ ಇದಕ್ಕೆ ತದ್ವಿರುದ್ಧವಾಗಿ ರೋಜಾ ಅವರು 2014 ಮತ್ತು 2019 ರ ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಟಿಕೆಟ್‌ನಲ್ಲಿ ನಗರಿಯಿಂದ ಶಾಸಕಿಯಾಗಿ ಎರಡು ಬಾರಿ ಗೆದ್ದಿದ್ದಾರೆ. 2014ಲ್ಲಿ ಆಕೆ ಗೆದ್ದರೂ ಕೂಡ ಪಕ್ಷ ಅಧಿಕಾರಕ್ಕೆ ಬರಲಿಲ್ಲ. 2004, 2009,2014 ಹೀಗೆ ಪ್ರತಿ ಬಾರಿ ಕೂಡ ರೋಜಾ ಇದ್ದ ಪಕ್ಷ ಅಧಿಕಾರಕ್ಕೆ ಬರಲೇ ಇಲ್ಲ. 2014 ರಲ್ಲಿ ರೋಜಾ ಗೆದ್ದರೂ ಕೂಡ ವೈಎಸ್ಆರ್ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಆಗಲೂ ಸಹ ರೋಜಾ ಐರನ್ ಲೆಗ್ ಅದಕ್ಕೆ ಪಕ್ಷ ಅಧಿಕಾರಕ್ಕೆ ಬರಲಿಲ್ಲ ಅಂತ ಆಕೆಯ ವಿರೋಧಿಗಳು ಮತ್ತು ವಿಮರ್ಶಕರು ಕೊಂಕು ಮಾತುಗಳಿಂದ ಆಕೆಯನ್ನು ಅವಮಾನಿಸಿದರು.

    'ನಾನು ಐರನ್ ಲೆಗ್ ಅಲ್ಲ ಗೋಲ್ಡನ್ ಲೆಗ್' ಅಂತ ಭಾವುಕರಾಗಿ ನುಡಿದಿದ್ದರು ರೋಜಾ

    'ನಾನು ಐರನ್ ಲೆಗ್ ಅಲ್ಲ ಗೋಲ್ಡನ್ ಲೆಗ್' ಅಂತ ಭಾವುಕರಾಗಿ ನುಡಿದಿದ್ದರು ರೋಜಾ

    2014 ರ ಅಸೆಂಬ್ಲಿ ಚುನಾವಣೆಯಲ್ಲಿ ವಿರೋಧ ಪಕ್ಷದ ತೆಲುಗು ದೇಶಂ ಪಕ್ಷದ ಹಿರಿಯ ನಾಯಕ ಗಾಲಿ ಮುದ್ದುಕೃಷ್ಣ ನಾಯ್ಡು ಅವರ ವಿರುದ್ಧ ರೋಜಾ ಗೆದ್ದು ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾದರು. 2019 ರ ಚುನಾವಣೆಯಲ್ಲಿ ಅವರು ಅವರ ಮಗ ಗಾಲಿ ಭಾನುಪ್ರಕಾಶ್ ವಿರುದ್ಧ ಗೆದ್ದರು. 2019ರಲ್ಲಿ ವೈಎಸ್ಆರ್ ಪಾರ್ಟಿ 175 ಕ್ಷೇತ್ರಗಳ ಪೈಕಿ 151 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ರಾಜಕೀಯ ಸಂಚಲನವನ್ನು ಉಂಟು ಮಾಡಿತು. ವೈಎಸ್‌ಆರ್‌ ಕಾಂಗ್ರೆಸ್‌ನ ಫೈರ್‌ಬ್ರಾಂಡ್‌ ಶಾಸಕಿ ಹಾಗೂ ಮಹಿಳಾ ಅಧ್ಯಕ್ಷೆ ರೋಜಾ 'ಈ ದಿನದ ಯಶಸ್ಸು ನಾನು ಐರನ್ ಲೆಗ್ ಅಲ್ಲ ಬದಲಾಗಿ ನನ್ನ ಪಾರ್ಟಿಗೆ ಗೋಲ್ಡನ್ ಲೆಗ್ ಅಂತ ಸಾಬೀತುಪಡಿಸಿದೆ' ಅಂತ ಭಾವುಕವಾಗಿ ಹೇಳಿದರು.

    ಇನ್ನು ಮುಂದೆ ಚಲನಚಿತ್ರ ಮತ್ತು ಕಿರುತೆರೆಯಲ್ಲಿ ನಟಿಸುವುದಿಲ್ಲ

    ಇನ್ನು ಮುಂದೆ ಚಲನಚಿತ್ರ ಮತ್ತು ಕಿರುತೆರೆಯಲ್ಲಿ ನಟಿಸುವುದಿಲ್ಲ

    2019ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗಲೇ ರೋಜಾ ಮಂತ್ರಿಯಾಗುತ್ತಾರೆ ಜೊತೆಗೆ ಅವರನ್ನು ರಾಜ್ಯದ ಗೃಹಮಂತ್ರಿ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಆ ಸಮಯದಲ್ಲಿ ಅವರಿಗೆ ಮಂತ್ರಿಸ್ಥಾನವನ್ನು ನೀಡಲಿಲ್ಲ ಬದಲಾಗಿ APIIC ಅಧ್ಯಕ್ಷರಾಗಿ ನೇಮಿಸಲಾಗಿತ್ತು, ಈಗ ಸಚಿವ ಸಂಪುಟದ ಪುನಾರಚನೆ ಸಮಯದಲ್ಲಿ ರೋಜಾ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ. ಮಂತ್ರಿಸ್ಥಾನ ಸಿಕ್ಕಿರುವುದಕ್ಕೆ ಅಪಾರವಾದ ಸಂತಸವನ್ನು ವ್ಯಕ್ತಪಡಿಸಿರುವ ರೋಜಾ 'ಇನ್ನುಮುಂದೆ ತಾನು ಸಂಪೂರ್ಣವಾಗಿ ಮಂತ್ರಿ ಸ್ಥಾನದಲ್ಲಿದ್ದು ಜನಸೇವೆ ಮಾಡುತ್ತೇನೆ. ಇದುವರೆಗೆ ತಾನು ಕೇವಲ ಶಾಸಕಿಯಾಗಿದ್ದು ಹೀಗಾಗಿ ತನ್ನ ಕ್ಷೇತ್ರದ ಜೊತೆಗೆ ಸಿನಿಮಾ ಮತ್ತು ಕಿರುತೆರೆಯಲ್ಲಿ ಜೀವನ ಪೋಷಣೆಗಾಗಿ ಅಭಿನಯವನ್ನು ಮುಂದುವರಿಸಿದ್ದೆ. ಆದರೆ ಈಗ ನಾನು ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದೇನೆ ಹಾಗೂ ಇನ್ನು ಮುಂದೆ ಸಂಪೂರ್ಣವಾಗಿ ಅದಕ್ಕೆ ನ್ಯಾಯವನ್ನು ಒದಗಿಸುವ ಕೆಲಸದಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ' ಅಂತ ಹೇಳಿದ್ದಾರೆ ಮಂತ್ರಿ ರೋಜಾ. ಮೊನ್ನೆಯವರೆಗೂ ಐರನ್ ಲೆಗ್ ಎನ್ನುತ್ತಿದ್ದವರು ಈಗ ರೋಜಾ ಗೋಲ್ಡನ್ ಲೆಗ್ ಎಂದು ಹೇಳುವಂತೆ ಕಾಲ ಈಗ ಬದಲಾಗಿದೆ.

    English summary
    Film actress Roja says 'I am the golden leg' in reply to a minister to critics who use to say her as an'Iron leg'. Roja said that she will not going to act in cinema and serials as a minister.
    Monday, April 11, 2022, 15:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X