For Quick Alerts
  ALLOW NOTIFICATIONS  
  For Daily Alerts

  ದಕ್ಷಿಣ ಭಾರತದ ಖ್ಯಾತ ಸಂಕಲನಕಾರ ಕೋಲ ಭಾಸ್ಕರ್ ನಿಧನ

  |

  ದಕ್ಷಿಣ ಚಿತ್ರರಂಗದ ಖ್ಯಾತ ತಂತ್ರಜ್ಞ, ಸಂಕಲನಕಾರ ಕೋಲ ಭಾಸ್ಕರ್ (55) ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ತೆಲುಗು ಮತ್ತು ತಮಿಳಿನ ಹಲವು ಚಿತ್ರಗಳಲ್ಲಿ ಸಂಕಲನಕಾರನಾಗಿ ಕಾರ್ಯನಿರ್ವಹಿಸಿದ್ದ ಭಾಸ್ಕರ್ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

  ಹಲವು ಸಮಯದಿಂದ ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೋಲ ಭಾಸ್ಕರ್ ಇಂದು ಬೆಳಗ್ಗೆ 8 ಗಂಟೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

  ಹಿರಿಯ ರಂಗಕರ್ಮಿ, ನಟ ಎಚ್.ಜಿ ಸೋಮಶೇಖರ್ ರಾವ್ ನಿಧನಹಿರಿಯ ರಂಗಕರ್ಮಿ, ನಟ ಎಚ್.ಜಿ ಸೋಮಶೇಖರ್ ರಾವ್ ನಿಧನ

  ಕೋಲ ಭಾಸ್ಕರ್ ತಮ್ಮ ಪತ್ನಿ ಮತ್ತು ಮಗನನ್ನು ಬಿಟ್ಟು ಅಗಲಿದ್ದಾರೆ. ಖ್ಯಾತ ತಂತ್ರಜ್ಞನನ್ನು ಕಳೆದುಕೊಂಡ ಸಿನಿಉದ್ಯಮ ಸಂತಾಪ ಸೂಚಿಸಿದ್ದು, 2020ನೇ ವರ್ಷದಲ್ಲಿ ಮತ್ತೊಬ್ಬ ಕಲಾಬಂಧುವನ್ನು ಕಳೆದುಕೊಂಡು ದುಃಖ ವ್ಯಕ್ತಪಡಿಸಿದೆ.

  ಪವರ್ ಸ್ಟಾರ್ ಪವನ್ ಕಲ್ಯಾಣ್ ನಟಿಸಿದ್ದ ಸೂಪರ್ ಹಿಟ್ ಚಿತ್ರ 'ಖುಷಿ' ಚಿತ್ರಕ್ಕೆ ಸಂಕಲನ ಮಾಡಿದ್ದು ಇದೇ ಭಾಸ್ಕರ್, 7ಜಿ ಬೃಂದಾವನ ಕಾಲೋನಿ, ಆಡವಾರಿ ಮಾಟಲಕೂ ಅರ್ಥಾಲೇ ವೇರೆಲೆ, ಕಂಡೇನ್ ಕಾದಲೈ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

  ಅಂದ್ಹಾಗೆ, ಕೋಲ ಭಾಸ್ಕರ್ ಅವರ ಏಕೈಕ ಮಗ ಕೋಲ ಬಾಲಕೃಷ್ಣ ಸಹ ತೆಲುಗು ಇಂಡಸ್ಟ್ರಿಯಲ್ಲಿ ಹೀರೋ ಆಗಿ ಪರಿಚಯವಾಗಿದ್ದರು. '7 ಜಿ ಬೃಂದಾವನ ಕಾಲೋನಿ' ನಿರ್ದೇಶಕ ತಯಾರಿಸಿದ್ದ 'ನನ್ನ ವದುಲಿ ನುವ್ವು ಪೋಲೆವುಲೆ' ದ್ವಿಭಾಷ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು.

  English summary
  Leading Editor in South Indian Movie industry Kola Bhaskar passed away. He worked Editor of Kanden Kaadhalai, 7G Rainbow colony etc.
  Wednesday, November 4, 2020, 12:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X