For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ ಶೆಟ್ಟಿ ಹೆಸರೇಳಿ 51 ಲಕ್ಷ ಮೋಸ: ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ಮಾಪಕ

  |

  ಚಿತ್ರರಂಗದಲ್ಲಿ ಮೋಸ ಮಾಡುವವರ ಸಂಖ್ಯೆ ಜಾಸ್ತಿ ಆಗ್ಬಿಟ್ಟಿದೆ. ಯಾರನ್ನು ನಂಬಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ. ಅವಕಾಶ ಸಿಕ್ಕರೆ ಸಾಕು ಟೋಪಿ ಹಾಕುವುದಕ್ಕೆ ಕೆಲವರು ಕಾದು ಕೂತಿದ್ದಾರೆ. ತೆಲುಗು ನಿರ್ಮಾಪಕರೊಬ್ಬರು ಅನುಷ್ಕಾ ಶೆಟ್ಟಿ ಹೆಸರು ಕೇಳಿ ಮೋಸ ಹೋಗಿದ್ದಾರೆ. ನಟ- ನಟಿಯರ ಹೆಸರು ಹೇಳಿ, ಅವರೊಟ್ಟಿಗೆ ಇರುವ ಫೋಟೊಗಳನ್ನು ತೋರಿಸಿ, ಅವರೊಟ್ಟಿಗೆ ಅವರ ಅಪಾಯಿಂಟ್‌ಮೆಂಟ್ ಕೊಡುಸ್ತೀನಿ, ಕಾಲ್‌ಶೀಟ್ ಕೊಡುಸ್ತೀನಿ ಎಂದು ನಾಮ ಹಾಕುವ ಚಾಲಾಕಿಗಳು ಇದ್ದಾರೆ. ಇದೀಗ ನಟಿ ಅನುಷ್ಕಾ ಶೆಟ್ಟಿ ಹೆಸರು ಹೇಳಿ 51 ಲಕ್ಷ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

  ನಟಿ ಅನುಷ್ಕಾ ಶೆಟ್ಟಿ ಡೇಟ್ಸ್ ಕೊಡಿಸುತ್ತೀನಿ ಎಂದು ಹೇಳಿ ನಿರ್ಮಾಪಕ ಲಕ್ಷ್ಮಣ್‌ ಚಾರಿ ಎಂಬುವರಿಂದ ಸಿನಿಮಾ ಮ್ಯಾನೇಜರ್ ಎಲ್ಲಾ ರೆಡ್ಡಿ ಎಂಬಾತ 51 ಲಕ್ಷ ವಸೂಲಿ ಮಾಡಿರುವುದಾಗಿ ವರದಿಯಾಗಿದೆ. ಅಷ್ಟೇ ಅಲ್ಲದೇ ಸಂಗೀತ ನಿರ್ದೇಶಕ ಮಣಿಶರ್ಮ ಭೇಟಿ ಮಾಡಿಸುತ್ತೀನಿ ಎಂದು ಮಾತು ಕೊಟ್ಟಿದ್ದಾನೆ. ಅನುಷ್ಕಾ ಶೆಟ್ಟಿ ಜೊತೆ ಮಾತನಾಡಬೇಕು ಎಂದು ಹೇಳಿ ಹಲವು ಬಾರಿ ಬೆಂಗಳೂರಿಗೂ ಕರೆದುಕೊಂಡು ಬಂದಿದ್ದಾನೆ. ಸ್ವೀಟಿ ಡೇಟ್ಸ್ ಸಿಗುತ್ತೆ ಎಂದು ಹೇಳಿ ಮೊದಲು 26 ಲಕ್ಷ ನಂತರ 25 ಲಕ್ಷ ಹೀಗೆ ಹಣ ಪೀಕಿದ್ದಾನೆ.

  ಗನ್ ಹಿಡ್ದು 'ಸೈಂಧವ'ನಾಗಿ ಕನ್ನಡಕ್ಕೂ ಬರ್ತಿದ್ದಾರೆ ವಿಕ್ಟರಿ ವೆಂಕಟೇಶ್ಗನ್ ಹಿಡ್ದು 'ಸೈಂಧವ'ನಾಗಿ ಕನ್ನಡಕ್ಕೂ ಬರ್ತಿದ್ದಾರೆ ವಿಕ್ಟರಿ ವೆಂಕಟೇಶ್

  ಎಲ್ಲಾ ರೆಡ್ಡಿಯಿಂದ ಮೋಸ ಹೋಗಿದ್ದು ಗೊತ್ತಾಗಿ ಲಕ್ಷ್ಮಣ್‌ ಚಾರಿ ತೆಲುಗು ಫಿಲ್ಮ್‌ ಚೇಂಭರ್ ಮೆಟ್ಟಿಲೇರಿದ್ದಾರೆ. ಇದರ ಬೆನ್ನಲ್ಲೇ ಹಣ ವಾಪಸ್ ಕೊಡುವುದಾಗಿ ಹೇಳಿದ್ದ ಮ್ಯಾಜೇನರ್ ನಂತರ ಉಲ್ಟಾ ಹೊಡೆದಿದ್ದಾನೆ. ಹಣ ಕೇಳಿದ್ರೆ ಮನೆಯಲ್ಲಿರುವ ಹೆಂಗಸರಿಂದ ಕೇಸ್ ಹಾಕಿಸುವುದಾಗಿ ಬೆದರಿಸಿದನಂತೆ. ಇದರಿಂದ ಬೇಸತ್ತ ಲಕ್ಷ್ಮಣ್‌ ಚಾರಿ ಬಂಜಾರ ಹಿಲ್ಸ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅನುಷ್ಕಾ ಶೆಟ್ಟಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸ್ತಿಲ್ಲ. ಸದ್ಯ ಇನ್ನು ಹೆಸರಿಡದ ಚಿತ್ರವೊಂದರಲ್ಲಿ ಶೆಫ್ ಆಗಿ ನಟಿಸುತ್ತಿದ್ದಾರೆ.

  English summary
  Film Manager Yella Reddy cheating in the Name of Actress Anushka shetty And Music Director Manisharma. Banjara hills Police have registered a case against Film Manager Yella Reddy . Know more.
  Wednesday, January 25, 2023, 20:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X