twitter
    For Quick Alerts
    ALLOW NOTIFICATIONS  
    For Daily Alerts

    ಥಿಯೇಟರ್‌ನಲ್ಲಿ 100% ಅವಕಾಶ ನೀಡುವಂತೆ ಆಂಧ್ರ-ತೆಲಂಗಾಣ ಸಿಎಂಗೆ ಮನವಿ

    |

    ತಮಿಳುನಾಡಿನಲ್ಲಿ ಥಿಯೇಟರ್‌ಗೆ ಶೇಕಡಾ 100ರಷ್ಟು ಅನುಮತಿ ನೀಡಿದ ಹಿನ್ನೆಲೆ ತೆಲುಗು ನಿರ್ಮಾಪಕರು ಸಹ '100 ರಷ್ಟು ಆಸನ ಭರ್ತಿಯೊಂದಿಗೆ ಪ್ರದರ್ಶನ ಮಾಡಲು ಅವಕಾಶ ಕೊಡಿ ಎಂದು' ಎರಡು ರಾಜ್ಯಗಳ ಸಿಎಂಗೆ ಮನವಿ ಮಾಡಿದ್ದಾರೆ.

    ತೆಲುಗು ಚಲನಚಿತ್ರ ನಿರ್ಮಾಪಕ ಸಂಘದ ವತಿಯಿಂದ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಚಿತ್ರಮಂದಿರದಲ್ಲಿ 100 ಪರ್ಸೆಂಟ್ ಅವಕಾಶ ಕೊಡುವಂತೆ ಮನವಿ ಮಾಡಲಾಗಿದೆ.

    ಚಿತ್ರಮಂದಿರಗಳಲ್ಲಿ ಶೇ. 100 ಆಸನ ಭರ್ತಿಗೆ ಸರ್ಕಾರದ ಅನುಮತಿಚಿತ್ರಮಂದಿರಗಳಲ್ಲಿ ಶೇ. 100 ಆಸನ ಭರ್ತಿಗೆ ಸರ್ಕಾರದ ಅನುಮತಿ

    ಇತ್ತೀಚಿಗಷ್ಟೆ ತಮಿಳುನಾಡು ಸರ್ಕಾರ ತಮಿಳುನಾಡಿನಲ್ಲಿ ಶೇಕಡಾ 100ರಷ್ಟು ಆಸನಕ್ಕೆ ಅವಕಾಶ ನೀಡಿ ಪ್ರದರ್ಶನ ಮಾಡಬಹುದು ಎಂದು ಆದೇಶಿಸಿತ್ತು. ಈ ಆದೇಶವನ್ನು ಮುಂದಿಟ್ಟುಕೊಂಡು ತೆಲುಗು ನಿರ್ಮಾಪಕರು ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳ ಬಳಿ ಅನುಮತಿಗಾಗಿ ಒತ್ತಾಯಿಸಿದ್ದಾರೆ.

    Telugu Film Producers Council requests CMs of Andhra and Telangana for allowing 100% occupancy in cinemas

    ತಮಿಳುನಾಡಿನಲ್ಲಿ ಶೇಕಡಾ 100 ರಷ್ಟು ಅವಕಾಶ ಕೊಟ್ಟಿರುವ ಆದೇಶವನ್ನು ಚಿತ್ರರಂಗ ಸ್ವಾಗತಿಸಿದೆ. ಚಿತ್ರೋಧ್ಯಮದ ದೃಷ್ಟಿಯಿಂದ ಇದು ಒಳ್ಳೆಯ ನಿರ್ಧಾರ ಎಂದು ಸಮರ್ಥಿಸಿಕೊಳ್ಳಲಾಗಿದೆ. ಮತ್ತೊಂದೆಡೆ ಥಿಯೇಟರ್‌ಗಳಿಗೆ 100 ಪರ್ಸೆಂಟ್ ಅವಕಾಶ ಕೊಟ್ಟಿದ್ದಕ್ಕೆ ವಿರೋಧ ಸಹ ವ್ಯಕ್ತವಾಗಿದೆ.

    ತಮಿಳುನಾಡಿನಲ್ಲಿ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಮ್ಮತಿ ಸಿಕ್ಕ ಬಳಿಕ, ಕರ್ನಾಟಕದಲ್ಲೂ ನಿರ್ಮಾಪಕರು 100 ಪರ್ಸೆಂಟ್ ಅವಕಾಶಕ್ಕಾಗಿ ಮನವಿ ಮಾಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಥಿಯೇಟರ್‌ನಲ್ಲಿ 100ರಷ್ಟು ಅನುಮತಿ: ವಿರೋಧಿಸಿದ ತಮಿಳು ನಟ ಅರವಿಂದ್ ಸ್ವಾಮಿಥಿಯೇಟರ್‌ನಲ್ಲಿ 100ರಷ್ಟು ಅನುಮತಿ: ವಿರೋಧಿಸಿದ ತಮಿಳು ನಟ ಅರವಿಂದ್ ಸ್ವಾಮಿ

    ಜನವರಿ 13ನೇ ತಾರೀಖು ವಿಜಯ್ ನಟನೆಯ ಮಾಸ್ಟರ್ ಸಿನಿಮಾ ತೆರೆಕಾಣುತ್ತಿದೆ. ತಮಿಳುನಾಡಿನಲ್ಲಿ ಚಿತ್ರಮಂದಿರದಲ್ಲಿ 100 ಪರ್ಸೆಂಟ್ ಪ್ರದರ್ಶನಕ್ಕೆ ಅವಕಾಶ ಕೊಡಿ ಎಂದು ಸಿಎಂ ಬಳಿ ವಿಜಯ್ ಮನವಿ ಮಾಡಿದ್ದರು. ಈ ಭೇಟಿ ಬಳಿಕ ಸರ್ಕಾರ ಆದೇಶ ಮಾಡಿತ್ತು. ಈಗ ಆಂಧ್ರ ಹಾಗೂ ತೆಲಂಗಾಣ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿದ್ದಲ್ಲಿ ಮಾಸ್ಟರ್ ಚಿತ್ರಕ್ಕೆ ಸಹಕಾರಿಯಾಗಲಿದೆ.

    English summary
    After Tamilnadu now Telugu Film Producers Council requests CMs of Andhra Pradesh & Telangana for allowing 100% occupancy in cinemas.
    Tuesday, January 5, 2021, 14:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X