Filmfare Awards South 2019: ತೆಲುಗು ಸಿನಿಮಾಗಳ ವಿಜೇತರ ಪಟ್ಟಿ
2018ನೇ ಸಾಲಿನ ಸಿನಿಮಾಗಳಿಗೆ ಫಿಲ್ಮ್ ಫೇರ್ ಪ್ರಶಸ್ತಿ ನೀಡಲಾಗಿದೆ. ನಿನ್ನೆ (ಡಿಸೆಂಬರ್ 21) ಚೆನ್ನೈನಲ್ಲಿ ಅದ್ದೂರಿ ಕಾರ್ಯಕ್ರಮ ನಡೆದಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ.
ತೆಲುಗಿನಲ್ಲಿ 'ಮಹಾನಟಿ' ಅತ್ಯುತ್ತಮ ಸಿನಿಮಾವಾಗಿದೆ. 'ರಂಗಸ್ಥಳಂ' ಸಿನಿಮಾದ ನಟನೆಗೆ ರಾಮ್ ಚರಣ್ ಅತ್ಯುತ್ತಮ ನಟ ಪ್ರಶಸ್ತಿ ಹಾಗೂ ಕೀರ್ತಿ ಸುರೇಶ್ 'ಮಹಾನಟಿ' ಸಿನಿಮಾಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
'ಮಹಾನಟಿ' ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಕೀರ್ತಿ ಸುರೇಶ್, ಇದೀಗ ಫಿಲ್ಮ್ ಫೇರ್ ಮೇಲೂ ತಮ್ಮ ಹೆಸರನ್ನು ಬರೆಯುವಂತೆ ಮಾಡಿದ್ದಾರೆ. ಆ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಕೂಡ ಅವಾರ್ಡ ಗಳಿಸಿದ್ದಾರೆ.

ಫಿಲ್ಮ್ ಫೇರ್ ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ..
ಅತ್ಯುತ್ತಮ ಸಿನಿಮಾ: ಮಹಾನಟಿ
ಅತ್ಯುತ್ತಮ ನಟ: ರಾಮ್ ಚರಣ್ (ರಂಗಸ್ಥಳಂ)
ಅತ್ಯುತ್ತಮ ನಟಿ: ಕೀರ್ತಿ ಸುರೇಶ್ (ಮಹಾನಟಿ)
ಅತ್ಯುತ್ತಮ ನಿರ್ದೇಶಕ ನಾಗ್ ಅಶ್ವಿನ್ (ಮಹಾನಟಿ)
ಅತ್ಯುತ್ತಮ ನಟ (ಕ್ರಿಟಿಕ್ಸ್): ದುಲ್ಕರ್ ಸಲ್ಮಾನ್ (ಮಹಾನಟಿ)
ಅತ್ಯುತ್ತಮ ನಟಿ (ಕ್ರಿಟಿಕ್ಸ್): ರಶ್ಮಿಕಾ ಮಂದಣ್ಣ (ಗೀತಾ ಗೋವಿಂದಂ)
ಅತ್ಯುತ್ತಮ ಪೋಷಕ ನಟ: ಜಗಪತಿ ಬಾಬು (ಅರವಿಂದ್ ಸಮೇತಾ)
ಅತ್ಯುತ್ತಮ ಪೋಷಕ ನಟಿ: ಅನುಸೂಯ ಭಾರಧ್ವಜ್ (ರಂಗಸ್ಥಳಂ)
ಅತ್ಯುತ್ತಮ ಗಾಯಕ: ಸಿದ್ ಶ್ರೀರಾಮ್- ಇಂಕೇಮ್ ಇಂಕೇಮ್ ಇಂಕೇಮ್ ಕಾವಲೇ (ಗೀತಾ ಗೋವಿಂದಂ)
ಅತ್ಯುತ್ತಮ ಗಾಯಕಿ: ಶ್ರೇಯಾ ಘೋಷಾಲ್- ಮಂದಾರ ಮಂದಾರ ಭಾಗಮತಿ)
ಅತ್ಯುತ್ತಮ ಸಾಹಿತ್ಯ: ಚಂದ್ರಬೊಸ್- ಎಂತ ಸಕ್ಕಾಗುನಾವೆ (ರಂಗಸ್ಥಳಂ)
ಅತ್ಯುತ್ತಮ ಮ್ಯೂಸಿಕ್ ಆಲ್ಬಂ: ದೇವಿ ಶ್ರೀ ಪ್ರಸಾದ್ (ರಂಗಸ್ಥಳಂ)


Click it and Unblock the Notifications











