'ಆಚಾರ್ಯ' ಕೊನೆಯ ಹಂತದ ಶೂಟಿಂಗ್ ಪ್ರಾರಂಭ

ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಬ್ರೇಕ್ ತೆಗೆದುಕೊಂಡಿದ್ದ ಆಚಾರ್ಯ ಮತ್ತೆ ಕೆಲಸ ಶುರು ಮಾಡಿದೆ. ಬಹಳ ದಿನಗಳ ನಂತರ ಶೂಟಿಂಗ್‌ಗೆ ಮರುಚಾಲನೆ ನೀಡಿದ್ದು, ಇಂದಿನಿಂದ ಕೊನೆಯ ಹಂತದ ಕೆಲಸ ಪ್ರಾರಂಭವಾಗಿದೆ.

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ ಅವರ ಹೊಸ ಪೋಸ್ಟರ್‌ವೊಂದನ್ನು ಅನಾವರಣ ಮಾಡುವ ಮೂಲಕ ಕೊನೆಯ ಹಂತದ ಚಿತ್ರೀಕರಣ ಶುರುವಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಸುಮಾರು 90 ರಷ್ಟು ಚಿತ್ರೀಕರಣ ಲಾಕ್‌ಡೌನ್‌ಗೆ ಮುಂಚಿತವಾಗಿಯೇ ಮುಗಿದಿತ್ತು. ಇದೀಗ, ಬಾಕಿ ಉಳಿದಿರುವ ಶೂಟಿಂಗ್ ಆರಂಭಿಸಿದ್ದು, ಶೀಘ್ರದಲ್ಲಿ ಕುಂಬಳಕಾಯಿ ಹೊಡೆಯುವ ನಿರೀಕ್ಷೆಯಲ್ಲಿದೆ ಚಿತ್ರತಂಡ.

final-shooting-schedule-of-acharya-has-commenced

ಆಚಾರ್ಯ ಔಟ್ ಅಂಡ್ ಔಟ್ ಆಕ್ಷನ್ ಎಂಟರ್‌ಟೈನ್‌ಮೆಂಟ್. ಮೆಗಾಸ್ಟಾರ್ ಚಿರಂಜೀವಿ ನಾಯಕರಾಗಿದ್ದು, ರಾಮ್ ಚರಣ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಕಾಜಲ್ ಅಗರ್‌ವಾಲ್, ಪೂಜಾ ಹೆಗ್ಡೆ, ಸೋನು ಸೂದ್ ಸೇರಿದಂತೆ ಹಲವರು ನಟಿಸಿದ್ದಾರೆ.

ಸ್ವತಃ ರಾಮ್ ಚರಣ್ ಈ ಚಿತ್ರ ನಿರ್ಮಾಣ ಮಾಡಿದ್ದು, ಕೊರಟಾಲ ಶಿವ ನಿರ್ದೇಶನ ಮಾಡ್ತಿದ್ದಾರೆ. ಇನ್ನು ಮಣಿ ಶರ್ಮಾ ಸಂಗೀತ ಒದಗಿಸಿದ್ದಾರೆ.

ಈ ಹಿಂದೆ ಪ್ರಕಟಿಸಿದಂತೆ ಮೇ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಬೇಕಿತ್ತು. ಕೊರೊನಾ ಕಾರಣದಿಂದ ಅದು ಸಾಧ್ಯವಾಗಿರಲಿಲ್ಲ. ಈಗ ದಸರಾ ಹಬ್ಬಕ್ಕೆ ಪ್ರೇಕ್ಷಕರೆದುರು ಬರಲು ಚಿಂತಿಸಲಾಗಿದೆ ಎಂಬ ವಿಚಾರ ಹೊರಬಿದ್ದಿದೆ. ಆದರೆ, ಅಧಿಕೃತವಾಗಿಲ್ಲ.

Recommended Video

ಶಿವಣ್ಣನ ಅಭಿಮಾನಿಗಳಿಗೆ ಭರ್ಜರಿ ಸುದ್ದಿ

More from Filmibeat

English summary
Final shooting schedule of Acharya starring Chiranjeevi and Ram Charan has commenced.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X