ಕೊನೆಗೂ ಆ ವಿಶೇಷ ವ್ಯಕ್ತಿಯ ಆಗಮನ; ಬುಜ್ಜಿಯನ್ನು ಪರಿಚಯಿಸಿದ ಪ್ರಭಾಸ್
ಇತ್ತೀಚೆಗೆ ನಟ ಪ್ರಭಾಸ್ ತಮ್ಮ ಡಾರ್ಲಿಂಗ್ಸ್(ಫ್ಯಾನ್ಸ್)ಗೆ ಸರ್‌ಪ್ರೈಸ್ ನ್ಯೂಸ್ ಕೊಟ್ಟಿದ್ದರು. ನಮ್ಮ ಜೀವನಕ್ಕೆ ತುಂಬಾ ವಿಶೇಷವಾದ ವ್ಯಕ್ತಿ ಬರ್ತಿದ್ದಾರೆ ಎಂದು ಹೇಳಿದ್ದರು. ಇದನ್ನು ಕೇಳಿ ಕೆಲವರು ಪ್ರಭಾಸ್ ಮದುವೆ ಫಿಕ್ಸ್ ಆಯ್ತಾ? ಯಾರಪ್ಪಾ ಆ ವಿಶೇಷ ವ್ಯಕ್ತಿ ಎಂದು ತಲೆ ಕೆಡಿಸಿಕೊಂಡಿದ್ದರು.
ಇನ್‌ಸ್ಟಾ ಸ್ಟೋರಿಯಲ್ಲಿ ಹೀಗೊಂದು ಗೂಡಾರ್ಥದ ಪೋಸ್ಟ್ ಮಾಡಿ ಯಂಗ್ ರೆಬಲ್ ಸ್ಟಾರ್ ಸೈಲೆಂಟ್ ಆಗಿದ್ದರು. ಇದು ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ವಯಸ್ಸು 40 ದಾಟಿದರೂ ಪ್ರಭಾಸ್ ಮದುವೆ ಬಗ್ಗೆ ಯೋಚಿಸುತ್ತಿಲ್ಲ. ಅಂತೂ ಇಂತೂ ಸದ್ದಿಲ್ಲದೇ ಮದುವೆ ಫಿಕ್ಸ್ ಆಗಿಬಿಡ್ತಾ? ಎಂದು ಕೆಲವರು ಹುಬ್ಬೇರಿಸಿದ್ದರು.

ಪ್ರಭಾಸ್ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಇದು ಮದುವೆ ಮ್ಯಾಟರ್ ಅಲ್ಲ. ಯಾವುದೋ ಸಿನಿಮಾ ಪ್ರಮೋಷನ್ ಗಿಮಿಕ್ ಅನ್ನೋದು ಅರ್ಥವಾಗಿ ಹೋಗಿತ್ತು. ಯಾಕಂದ್ರೆ ಪ್ರಭಾಸ್ ನನ್ನ ಜೀವನಕ್ಕೆ ವಿಶೇಷ ವ್ಯಕ್ತಿ ಎನ್ನುವ ಬದಲು ಅಭಿಮಾನಿಗಳನ್ನು ಸೇರಿಸಿಕೊಂಡು ನಮ್ಮ ಜೀವನಕ್ಕೆ ಎಂದು ಬರೆದಿದ್ದರು. ಅಂತೂ ಇಂತೂ ಆ ವಿಶೇಷ ವ್ಯಕ್ತಿ ಯಾರು ಎನ್ನುವುದು ಈಗ ರಿವೀಲ್ ಆಗಿದೆ.
ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಕಲ್ಕಿ 2898 AD'. 'ಮಹಾನಟಿ' ಸಿನಿಮಾ ಖ್ಯಾತಿಯ ನಾಗ್ ಅಶ್ವಿನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಕಲ್ಕಿ ಆರ್ಭಟ ನಡೆಯಲಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್‌ರಂತಹ ಘಟಾನುಘಟಿಗಳು ಬಣ್ಣ ಹಚ್ಚಿದ್ದಾರೆ.
ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಸಿನಿಮಾ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಜೂನ್ 27ಕ್ಕೆ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಭೈರವ ಎನ್ನುವ ಪಾತ್ರದಲ್ಲಿ ಪ್ರಭಾಸ್ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಕಥೆ ದ್ವಾಪರ ಯುಗದಿಂದ ಹಿಡಿದು ಕಲಿಯುಗದ ಅಂತ್ಯದಲ್ಲಿ ಕಲ್ಕಿಯ ಅವತಾರವಾಗುವವರೆಗೆ ಇರಲಿದೆ. ಸದ್ಯ ಚಿತ್ರದ ಬುಜ್ಜಿ ಎನ್ನುವ ಪಾತ್ರವನ್ನು ಪರಿಚಯಿಸಲಾಗಿದೆ.
ಬುಜ್ಜಿ ಎನ್ನುವುದು ಒಂದು ಸಣ್ಣ ರೋಬೊ. ಸದಾ ಚಿತ್ರದ ನಾಯಕ ಭೈರವನ ಜೊತೆಗಿರುವ ಪಾತ್ರ. ಬುಜ್ಜಿಗೆ ನಟಿ ಕೀರ್ತಿ ಸುರೇಶ್ ವಾಯ್ಸ್ ಕೊಟ್ಟಿದ್ದಾರೆ. ಸದ್ಯ ಹೊಸ ಮೇಕಿಂಗ್ ವಿಡಿಯೋವೊಂದು ರಿಲೀಸ್ ಆಗಿದೆ. ಅದಲ್ಲಿ ಬುಜ್ಜಿ "ನನ್ನ ಜೀವನವೇನು? 'ದೇಹ ಇಲ್ಲದೇ ಹೀಗೆ ಬದುಕಬೇಕಾ?" ಎಂದು ಕೇಳುತ್ತದೆ. ಅಷ್ಟರಲ್ಲಿ ಪ್ರಭಾಸ್ ಎಂಟ್ರಿ ಆಗುತ್ತದೆ. ಬುಜ್ಜಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮೇ 22 ರವರೆಗೆ ಕಾಯಬೇಕು ಎಂದು ಚಿತ್ರತಂಡ ಟ್ವಿಸ್ಟ್ ಕೊಟ್ಟಿದೆ.
ಬಹಳ ಸ್ಮಾರ್ಟ್ ಆಗಿರುವ ಬುಜ್ಜಿಗೆ ಪವರ್‌ಫುಲ್ ವಾಹನ ಇರಲಿದೆ. ಭೈರವ ಬುಜ್ಜಿ ಇಬ್ಬರೂ ಈ ವಾಹನ ಏರಿ ಸುತ್ತಾಡಲಿದ್ದಾರೆ. ಆ ವಾಹನವನ್ನು ಬಹಳ ವಿಶೇಷವಾಗಿ ತಯಾರಿಸಲಾಗುತ್ತಿದೆ. ಅದರ ಮೇಕಿಂಗ್ ಹೇಗಿತ್ತು ಎನ್ನುವುದನ್ನು ಮೇಕಿಂಗ್ ವೀಡಿಯೋದಲ್ಲಿ ತೋರಿಸಲಾಗಿದೆ. ಈ ವಾಹನ ಸಿದ್ಧಪಡಿಸಲು, ಡಿಸೈನ್ ಮಾಡಲು ಚಿತ್ರತಂಡ ಎಷ್ಟೆಲ್ಲಾ ಶ್ರಮ ವಹಿಸಿತ್ತು? ಏನೆಲ್ಲಾ ಸರ್ಕಸ್ ಮಾಡಿತ್ತು? ಎನ್ನುವುದನ್ನು ನೋಡಬಹುದು. ಮೇ 22ಕ್ಕೆ ಆ ವಾಹನದ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ.
ನಟಿ ಕೀರ್ತಿ ಸುರೇಶ್ ವಾಯ್ಸ್ ಬುಜ್ಜಿಗೆ ಚೆನ್ನಾಗಿ ಹೊಂದಿಕೆ ಆಗುತ್ತಿದೆ. ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ನಟಿಯರು ವಾಯ್ಸ್ ಕೊಡಲಿದ್ದಾರೆ. ಕನ್ನಡದಲ್ಲಿ ಯಾರು ಡಬ್ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











