'ಕೆಜಿಎಫ್ 2' ಮತ್ತೊಂದು ರೆಕಾರ್ಡ್: 'ಬಾಹುಬಲಿ 2' ದಾಖಲೆ ಉಡೀಸ್!

ಕನ್ನಡದ 'ಕೆಜಿಎಫ್ 2' ಸಿನಿಮಾಗೆ ದಾಖಲೆಗಳು ಹೊಸದೇನಲ್ಲ. ಸಿನಿಮಾ ರಿಲೀಸ್ ಆಗುವ ಮೊದಲೆ ದಾಖಲೆಗಳನ್ನು ಮಾಡಿದಂತಹ ಸಿನಿಮಾ ಇದು. ಇನ್ನು ರಿಲೀಸ್ ಆಗಿ 50 ದಿನಗಳು ಹತ್ತಿರ ಆಗುತ್ತಿದ್ದರೂ ಕೂಡ ದಾಖಲೆಯ ಭರಾಟೆ ನಿಂತಿಲ್ಲ.

'ಕೆಜಿಎಫ್ 2' ರಿಲೀಸ್ ಆಗಿ 43 ದಿನಗಳು ಕಳೆದಿವೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ 'ಕೆಜಿಎಫ್ 2' ದಾಖಲೆಯ ಪಟ್ಟಿಗೆ ಒಂದೊಂದೇ ಹೊಸ ವಿಚಾರಗಳು ಸೇರಿಕೊಳ್ಳುತ್ತಿವೆ.

ಇದೀಗ 'ಕೆಜಿಎಫ್ 2' ಮತ್ತೊಂದು ದಾಖಲೆಯನ್ನು ಬರೆದಿದೆ. ಅದು ಯಾವ ಮಟ್ಟಿಗೆ ಎಂದರೆ ಬಾಹುಬಲಿ 2 ಸಿನಿಮಾವನ್ನು ಮೀರಿಸಿ ಬಿಟ್ಟಿದೆ. 'ಬಾಹುಬಲಿ 2' ಗಳಿಕೆಯನ್ನು 'ಕೆಜಿಎಫ್ 2' ಸಿನಿಮಾ ಇನ್ನು ಮುಟ್ಟಿಲ್ಲ. ಆದರೆ, ಟಿಕೆಟ್ ವಿಚಾರದಲ್ಲಿ 'ಬಾಹುಬಲಿ 2' ಸಿನಿಮಾದ ದಾಖಲೆಯನ್ನು ಮುರಿದಿದೆ.

'ಬುಕ್ ಮೈ ಶೋ' ನಲ್ಲಿ 'ಕೆಜಿಎಫ್ 2' ರೆಕಾರ್ಡ್!

'ಬುಕ್ ಮೈ ಶೋ' ನಲ್ಲಿ 'ಕೆಜಿಎಫ್ 2' ರೆಕಾರ್ಡ್!

'ಕೆಜಿಎಫ್ 2' ದಾಖಲೆಯ ಪಟ್ಟಿಗೆ ಹೊಸ ದಾಖಲೆ ಸೇರಿಕೊಂಡಿದೆ. ಹೌದು 'ಕೆಜಿಎಫ್ 2' ಟಿಕೆಟ್ ಮಾರಾಟ ಆಗಿರುವ ಬಗ್ಗೆ ಹೊಸದೊಂದು ಸಮೀಕ್ಷೆ ಹೊರಬಿದ್ದಿದೆ. ಸಿನಿಮಾ ಟಿಕೆಟ್ ಬುಕ್ ಮಾಡುವಂತಹ 'ಬುಕ್ ಮೈ ಶೋ'ನಲ್ಲಿ 'ಕೆಜಿಎಫ್ 2' ನಂಬರ್ 1 ಸ್ಥಾನ ಗಿಟ್ಟಿಸಿಕೊಂಡಿದೆ. ಎಲ್ಲಿ ತನಕ ತೆರೆ ಕಂಡಂತಹ ಸಿನಿಮಾಗಳಲ್ಲಿ ಬುಕ್ ಮೈ ಶೋ ನಲ್ಲಿ ಅತಿ ಹೆಚ್ಚು ಮಾರಾಟ ಟಿಕೆಟ್ ಮಾರಾಟವಾರುವುದು 'ಕೆಜಿಎಫ್ 2'ನದ್ದು. ಇಲ್ಲಿ ತನಕ 17.1 ಮಿಲಿಯನ್ ಟಿಕೆಟ್ 'ಬುಕ್ ಮೈ ಶೋ' ಮೂಲಕ ಮಾರಾಟವಾಗಿವೆ.

'ಬಾಹುಬಲಿ'ಯನ್ನು ಹಿಂದಿಕ್ಕಿದ 'ಕೆಜಿಎಫ್ 2'!

'ಬಾಹುಬಲಿ'ಯನ್ನು ಹಿಂದಿಕ್ಕಿದ 'ಕೆಜಿಎಫ್ 2'!

ಇದೇ ವಿಚಾರದಲ್ಲಿ 'ಬಾಹುಬಲಿ 2' ಸಿನಿಮಾದ ದಾಖಲೆಯನ್ನ 'ಕೆಜಿಎಫ್ 2' ನಿರಾಯಾಸವಾಗಿ ಮುರಿದುಬಿಟ್ಟಿದೆ. ಬುಕ್ ಮೈ ಶೋ ನಲ್ಲಿ 'ಬಾಹುಬಲಿ 2' ಸಿನಿಮಾದ 16 ಮಿಲಿಯನ್ ಟಿಕೆಟ್‌ಗಳು ಮಾತ್ರ ಮಾರಾಟ ಆಗಿದ್ದವು. ಬಾಹುಬಲಿ 2 ಸಿನಿಮಾ ಬಿಟ್ಟರೆ, ಬುಕ್ ಮೈ ಶೋ ಮೂಲಕ ಅತಿ ಹೆಚ್ಚು ಟಿಕೆಟ್ ಮಾರಟ ಆಗಿರುವುದು 'ಕೆಜಿಎಫ್ 2' ಸಿನಿಮಾದ ಟಿಕೆಟ್.

3ನೇ ಸ್ಥಾನದಲ್ಲಿ 'RRR' ಸಿನಿಮಾ!

3ನೇ ಸ್ಥಾನದಲ್ಲಿ 'RRR' ಸಿನಿಮಾ!

ಇನ್ನು RRR ಸಿನಿಮಾ, 'ಕೆಜಿಎಫ್ 2'ಗಿಂತಲೂ ಕಡಿಮೆ ಮಾರಾಟವಾಗಿದೆ. RRR ಸಿನಿಮಾದ ಟಿಕೆಟ್‌ಗಳು 'ಬುಕ್ ಮೈ ಶೋ'ನಲ್ಲಿ ಒಟ್ಟು 13.4 ಮಿಲಿಯನ್ ಮಾರಾಟ ಆಗಿವೆ. ಇನ್ನು ಹಾಲಿವುಡ್‌ನ 'ಡಾಕ್ಟರ್ ಸ್ಟ್ರೇಂಜ್' ಚಿತ್ರದ 2.5 ಮಿಲಿಯನ್ ಟಿಕೆಟ್ ಮಾರಟ ಆಗಿವೆ. 'ಬೀಸ್ಟ್' ಸಿನಿಮಾದ 2 ಮಿಲಿಯನ್ ಟಿಕೆಟ್ ಮಾರಟ ಆಗಿರುವುದಾಗಿ ವರದಿ ಆಗಿದೆ.

'ಕೆಜಿಎಫ್ 2' ದಾಖಲೆ ಮುಂದುವರಿಕೆ!

'ಕೆಜಿಎಫ್ 2' ದಾಖಲೆ ಮುಂದುವರಿಕೆ!

ಸದ್ಯ 'ಕೆಜಿಎಫ್ 2' ಚಿತ್ರದ ದಾಖಲೆ ಮುಂದೆವರೆದಿದೆ. ಸಿನಿಮಾ 50 ದಿನದತ್ತ ಓಟ ಮುಂದುವರೆದಿದೆ. ಇನ್ನೂ ಕೂಡ ಕೋಟಿ ಲೆಕ್ಕದಲ್ಲಿ ವಿಶ್ವಾದಾದ್ಯಂತ ಗಳಿಕೆ ಕಾಣುತ್ತಾ ಇದೆ. ಸದ್ಯ 1229 ಕೋಟಿ ಕಲೆ ಹಾಕಿರುವ 'ಕೆಜಿಎಫ್ 2'ದ ಗಳಿಕೆ ಮತ್ತಷ್ಟು ಹೆಚ್ಚಾಗಿತ್ತು. ಈ ಚಿತ್ರದ ಕ್ಲೋಸಿಂಗ್ ಕಲೆಕ್ಷನ್ ಎಷ್ಟಾಗಬಹುದು ಎನ್ನುವ ಕುತೂಹಲ ಮೂಡಿದೆ.

More from Filmibeat

English summary
Finally KGF 2 Break Baahubali 2 Record, At BookMyShow,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X