"ಶ್ರೀವಲ್ಲಿಯಾಗಿ ನಾನು ಚೆನ್ನಾಗಿ ನಟಿಸ್ತಿದ್ದೆ ಎನ್ನುವ ಐಶ್ವರ್ಯ ಹೇಳಿಕೆ": "ನನಗೆಲ್ಲಾ ಗೊತ್ತುಬಿಡು" ಎಂದ ರಶ್ಮಿಕಾ

ಸೂಪರ್ ಹಿಟ್ 'ಪುಷ್ಪ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಆಗಿ ಮೋಡಿ ಮಾಡಿದ್ದು ಗೊತ್ತೇಯಿದೆ. ಹಳ್ಳಿ ಹುಡುಗಿಯಾಗಿ ಚಾಲೆಂಜಿಂಗ್ ರೋಲ್‌ನಲ್ಲಿ ಕೊಡಗಿನ ಕುವರಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಇದೇ ವಿಚಾರವಾಗಿ ಇತ್ತೀಚೆಗೆ ತಮಿಳು ನಟಿ ಐಶ್ವರ್ಯ ರಾಜೇಶ್ ನೀಡಿದ್ದ ಹೇಳಿಕೆವೊಂದು ಬೇರೆ ಅರ್ಥದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಆಕೆ ಸ್ಪಷ್ಟನೆ ನೀಡಿದ್ದಾರೆ.

ಐಶ್ವರ್ಯ ರಾಜೇಶ್ ನಟನೆಯ 'ಫರ್ಹಾನಾ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಪ್ರಚಾರದ ವೇಳೆ ಸಾಕಷ್ಟು ಸಂದರ್ಶನಗಳಲ್ಲಿ ಆಕೆ ಮಾತನಾಡುತ್ತಿದ್ದಾರೆ. ಇದೇ ವೇಳೆ 'ಪುಷ್ಪ' ಚಿತ್ರದ ಶ್ರೀವಲ್ಲಿ ಪಾತ್ರದ ಬಗ್ಗೆ ಕೂಡ ಚರ್ಚಿಸಿದ್ದರು. ಚೆನ್ನೈನಲ್ಲಿ ತೆಲುಗು ಕುಟುಂಬದಲ್ಲಿ ಹುಟ್ಟಿ ಬೆಳೆದ ಐಶ್ವರ್ಯ ರಾಜೇಶ್‌ಗೆ ಟಾಲಿವುಡ್‌ನಲ್ಲಿ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ. ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ಇದೇ ವಿಚಾರವಾಗಿ ಮಾತನಾಡುತ್ತಾ ರಶ್ಮಿಕಾ ಟಾಪಿಕ್ ಬಂದಿತ್ತು.

Finally Rashmika Mandanna Responds On Aishwarya Rajeshs Pushpa movie Srivall role statement

"ತೆಲುಗಿನಲ್ಲಿ ಯಾಕೋ ಒಳ್ಳೆ ಅವಕಾಶಗಳು ಸಿಗಲಿಲ್ಲ. ಅಭಿನಯಕ್ಕೆ ಅವಕಾಶ ಇರುವ ಪಾತ್ರಗಳಲ್ಲಿ ನಟಿಸೋ ಆಸೆ. ಉದಾಹರಣೆಗೆ 'ಪುಷ್ಪ' ಚಿತ್ರದ ಶ್ರೀವಲ್ಲಿ ರೀತಿಯ ಪಾತ್ರ ಸಿಕ್ಕಿದ್ದರೆ ನಾನು ಮಾಡುತ್ತಿದ್ದೆ. ಅಂತಹ ಪವರ್‌ಫುಲ್ ಪಾತ್ರಗಳು ಬೇಕು. ಖಂಡಿತ ರಶ್ಮಿಕಾ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಅದರಲ್ಲಿ ದೂಸ್ರಾ ಮಾತಿಲ್ಲ. ಅಂತಹ ಪಾತ್ರಗಳು ಸಿಕ್ಕಿದ್ದರೆ ಹೆಚ್ಚು ತೆಲುಗಿನಲ್ಲಿ ನಟಿಸುತ್ತಿದ್ದೆ. ನನಗೆ ಶ್ರೀವಲ್ಲಿ ಪಾತ್ರ ಹೇಳಿ ಮಾಡಿಸಿದಂತೆ ಇರುತ್ತಿತ್ತು. ರಶ್ಮಿಕಾ ಚೆನ್ನಾಗಿ ಮಾಡಿದ್ದಾರೆ. 'ದಸರಾ'ದಲ್ಲಿ ಕೀರ್ತಿ ಮಾಡಿರುವ ಪಾತ್ರ, ಅಂತಹ ಪಾತ್ರಗಳು ನನಗೂ ಸೂಟ್ ಆಗುತ್ತದೆ ಅನ್ನಿಸುತ್ತದೆ" ಎಂದಿದ್ದರು.

ಆದರೆ ಐಶ್ವರ್ಯ ರಾಜೇಶ್ ಹೇಳಿಕೆ ಬೇರೆ ಸ್ವರೂಪವನ್ನೇ ಪಡೆದುಕೊಂಡಿತ್ತು. "ಪುಷ್ಪ' ಚಿತ್ರದಲ್ಲಿ ಶ್ರೀವಲ್ಲಿ ಪಾತ್ರ ನನಗೆ ಕೊಟ್ಟಿದ್ದರೆ ರಶ್ಮಿಕಾಗಿಂತ ನಾನು ಚೆನ್ನಾಗಿ ನಟಿಸುತ್ತಿದ್ದೆ" ಎಂದು ಆಕೆ ಹೇಳಿದ್ದಂತೆ ಅದು ಪ್ರಚಾರವಾಯಿತು. ಇದನ್ನು ಕೇಳಿ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಗರಂ ಆಗಿದ್ದರು. ಕೂಡಲೇ ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಐಶ್ವರ್ಯ ರಾಜೇಶ್ ತಮ್ಮ ಪಿಆರ್‌ಓ ಮೂಲಕ ಒಂದು ಪ್ರಕಟನೆ ನೀಡಿದ್ದಾರೆ. ಅದರಲ್ಲಿ ತಮಗೆ ಎದುರಾದ ಪ್ರಶ್ನೆ ಏನು? ನಾನು ಕೊಟ್ಟ ಉತ್ತರ ಏನು? ಆಮೇಲೆ ಏನಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.

"ಇತ್ತೀಚೆಗೆ ಒಂದು ಸಂದರ್ಶನದಲ್ಲಿ ತೆಲುಗಿನಲ್ಲಿ ಎಂತಹ ಪಾತ್ರಗಳ ನಿರೀಕ್ಷೆಯಲ್ಲಿದ್ದೀರಾ? ಎನ್ನುವ ಪ್ರಶ್ನೆ ಎದುರಾಯಿತು. ಅದಕ್ಕೆ ಉತ್ತರಿಸುತ್ತಾ, ತೆಲುಗು ಚಿತ್ರರಂಗ ಅಂದ್ರೆ ನನಗೆ ಬಹಳ ಇಷ್ಟ. ನನಗೆ ಇಷ್ಟವಾಗುವಂತಹ ಪಾತ್ರಗಳು ಸಿಕ್ಕರೆ ಖಂಡಿತ ನಟಿಸುತ್ತೇನೆ. ಉದಾಹರಣೆಗೆ 'ಪುಷ್ಪ' ಚಿತ್ರದ ಶ್ರೀವಲ್ಲಿ ಪಾತ್ರ ನನಗೆ ಬಹಳ ಇಷ್ಟವಾಯಿತು ಎಂದು ಹೇಳಿದೆ. ಆದರೆ ದುರಾದೃಷ್ಟವಶಾತ್ ನನ್ನ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ರಶ್ಮಿಕಾ ನಟನೆ ಬಗ್ಗೆ ನಾನು ಏನು ಹೇಳಲಿಲ್ಲ. ಸಹನಟಿಯಾಗಿ ಆಕೆಯ ಬಗ್ಗೆ ಬಹಳ ಗೌರವ ಇದೆ" ಎಂದು ಪ್ರಕಟನೆ ನೀಡಿದ್ದಾರೆ.

Finally Rashmika Mandanna Responds On Aishwarya Rajeshs Pushpa movie Srivall role statement

ಸದ್ಯ ಈ ಪ್ರಕಟನೆಗೆ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದು, "ಹಾಯ್ ಲವ್, ಈಗಷ್ಟೇ ಇದೆಲ್ಲಾ ಗೊತ್ತಾಯಿತು. ನಿನ್ನ ಮಾತಿನ ಹಿಂದಿನ ಭಾವವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನೀನು ಅದಕ್ಕೆ ವಿವರಣೆ ನೀಡುವ ಅಗತ್ಯ ಇಲ್ಲ. ನಿನ್ನ ಮೇಲೆ ನನಗೆ ಎಷ್ಟು ಪ್ರೀತಿ, ಗೌರವ ಇದೆ ಅನ್ನೋದು ನಿನಗೂ ಗೊತ್ತು. 'ಫರ್ಹಾನಾ' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದೀಯಾ ಅಲ್ವಾ? ಅದಕ್ಕೆ ಆಲ್‌ ದಿ ಬೆಸ್ಟ್" ಎಂದು ಹಾರ್ಟ್ ಎಮೋಜಿ ಜೊತೆ ರಿಪ್ಲೇ ಮಾಡಿದ್ದಾರೆ. ಅಲ್ಲಿಗೆ ಈ ವಿವಾದಕ್ಕೆ ತೆರೆ ಬಿದ್ದಂತಾಗಿದೆ.

ಸದ್ಯ ರಶ್ಮಿಕಾ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಬಾಲಿವುಡ್‌ನ 'ಅನಿಮಲ್' ಚಿತ್ರದಲ್ಲಿ ರಣ್‌ಬೀರ್ ಕಪೂರ್‌ಗೆ ಜೋಡಿಯಾಗಿದ್ದಾರೆ. 'ಪುಷ್ಪ'- 2 ಜೊತೆ ನಿತಿನ್ ನಟನೆಯ ಹೊಸ ಚಿತ್ರಕ್ಕೂ ನಾಯಕಿ ಆಗಿದ್ದಾರೆ. ಇನ್ನು 'ರೈನ್‌ಬೋ' ಎನ್ನುವ ಒಂದು ಮಹಿಳಾ ಪ್ರಧಾನ ಚಿತ್ರದಲ್ಲಿ ರೋಶ್ ಬಣ್ಣ ಹಚ್ಚಿದ್ದಾರೆ.

More from Filmibeat

English summary
Finally Rashmika Mandanna Responds On Aishwarya Rajesh's Pushpa movie Srivall role statement. She puts a full stop to the controversy. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X