ಲೈಂಗಿಕ ಕಿರುಕುಳ ಆರೋಪ; 'ಅಪ್ಪು ಡ್ಯಾನ್ಸ್ ಡ್ಯಾನ್ಸ್' ಕೊರಿಯೋಗ್ರಫರ್ ವಿರುದ್ಧ FIR ದಾಖಲು

ಖ್ಯಾತ ಡ್ಯಾನ್ಸ್ ಕೊರಿಯೋಗ್ರಫರ್ ಜಾನಿ ಮಾಸ್ಟರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮಹಿಳೆ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಹೈದರಾಬಾದ್ ರಾಯದುರ್ಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕ್ರಿಮಿನಲ್ ಬೆದರಿಕೆ (506) ಮತ್ತು ನೋವುಂಟು ಮಾಡುವುದು (323) ಕಲಂ (2) ಜೊತೆಗೆ ಸೆಕ್ಷನ್ 376 ಅತ್ಯಾಚಾರದ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಜ್ಯೂನಿಯರ್ ಡ್ಯಾನ್ಸರ್ ಆಗಿರುವ ಸಂತ್ರಸ್ತ ಯುವತಿ(21) ಕೆಲ ತಿಂಗಳಿನಿಂದ ಜಾನಿ ಮಾಸ್ಟರ್ ತಂಡದಲ್ಲಿ ಸೇರಿಕೊಂಡಿದ್ದಳು. ಔಟ್‌ಡೋರ್ ಚಿತ್ರೀಕರಣಕ್ಕೆ ಹೋದಾಗ ತನಗೆ ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ. ಯುವತಿಯ ಹೇಳಿಕೆ ಆಧರಿಸಿ ಪೊಲೀಸರು ಜೀರೊ ಎಫ್‌ಐಆರ್ ದಾಖಲಿಸಿಕೊಂಡು ಹೆಚ್ಚಿನ ತನಿಖೆಗೆ ಪ್ರಕರಣವನ್ನು ನರ್ಸಿಂಗಿ ಪೊಲೀಸ್‌ ಠಾಣೆಗೆ ವರ್ಗಾಯಿಸಿದ್ದಾರೆ.

FIR filed against famous choreographer Jani Master for Sexual Assault

ಚೆನ್ನೈ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ಚಿತ್ರೀಕರಣದ ಹೋದ ಸಮಯದಲ್ಲಿ ಜಾನಿ ಮಾಸ್ಟರ್ ತನ್ನ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತ ದೂರದಾರ ಯುವತಿ ಹೇಳಿದ್ದಾರೆ. ನರಸಿಂಗಿಯಲ್ಲಿರುವ ತನ್ನ ನಿವಾಸದಲ್ಲಿ ಆತ ತನ್ನ ಮೇಲೆ ಹಲವು ಬಾರಿ ಹಲ್ಲೆ ನಡೆಸಿದ್ದಾಗಿಯೂ ಆಕೆ ತಿಳಿಸಿದ್ದಾಳೆ. ಮಹಿಳೆ ನಾರ್ಸಿಂಗಿ ನಿವಾಸಿಯಾಗಿರುವುದರಿಂದ ಪ್ರಕರಣವನ್ನು ಅಲ್ಲಿನ ಪೊಲೀಸರಿಗೆ ವರ್ಗಾಯಿಸಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಜಾನಿ ಮಾಸ್ಟರ್ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 2015ರಲ್ಲಿ ಕಾಲೇಜಿನಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ನ್ಯಾಯಾಲಯ ಆತನಿಗೆ ಜೈಲು ಶಿಕ್ಷೆ ವಿಧಿಸಿತ್ತು. ಜಾನಿ ಮಾಸ್ಟರ್ ಜನಸೇನಾ ಪಕ್ಷದಲ್ಲೂ ಗುರ್ತಿಸಿಕೊಂಡಿದ್ದಾರೆ. 'ತಿರು' ಚಿತ್ರದ ಡ್ಯಾನ್ಸ್ ಕೊರಿಯಗ್ರಫಿಗಾಗಿ ಜಾನಿ ಮಾಸ್ಟರ್‌ಗೆ ರಾಷ್ಟ್ರಪ್ರಶಸ್ತಿ ಘೋಷಣೆ ಆಗಿದೆ.

ಶೇಕ್ ಜಾನಿ ಬಾಷಾ ಎನ್ನುವುದು ಜಾನಿ ಮಾಸ್ಟರ್ ಪೂರ್ಣ ಹೆಸರು. ತೆಲುಗು ಕಿರುತೆರೆಯ 'ಢೀ' ಡ್ಯಾನ್ಸ್‌ ಶೋನಲ್ಲಿ ಡ್ಯಾನ್ಸರ್ ಆಗಿ ಮೊದಲು ಕುಣಿಯಲು ಆರಂಭಿಸಿದ್ದರು. ಬಳಿಕ ಹಂತ ಹಂತವಾಗಿ ಜನಪ್ರಿಯ ಕೊರಿಯೋಗ್ರಫರ್ ಆಗಿ ಬೆಳೆದು ಬಂದಿದ್ದರು. 'ದ್ರೋಣ' ಚಿತ್ರದಲ್ಲಿ ಮೊದಲಿಗೆ ಕೊರಿಯೋಗ್ರಫಿ ಅವಕಾಶ ಸಿಕ್ಕಿತ್ತು. ಬಳಿಕ ರಾಮ್‌ಚರಣ್ ನಟನೆಯ 'ರಚ್ಚ' ಚಿತ್ರಕ್ಕೆ ಡ್ಯಾನ್ಸ್ ಕಂಪೋಸ್ ಮಾಡಿದ್ದರು.

FIR filed against famous choreographer Jani Master for Sexual Assault

'ರಚ್ಚ' ಸಿನಿಮಾ ಸಾಂಗ್ಸ್‌ ಹಿಟ್ ಆಗಿತ್ತು. ಅದರಲ್ಲಿ ಜಾನಿ ಮಾಸ್ಟರ್ ಕೊರಿಯೋಗ್ರಫಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಮುಂದೆ 'ಜುಲಾಯಿ', 'ನಾಯಕ್', 'ಬಾದ್ಶಾ', 'ಯವಡು', 'ರೇಸುಗುರಂ' ಹೀಗೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತ್ತು. ಅದೇ ಸಮಯದಲ್ಲಿ ಸಲ್ಮಾನ್ ಖಾನ್ ನಟನೆಯ 'ಜೈಹೋ' ಚಿತ್ರಕ್ಕೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡಲು ಬುಲಾವ್ ಬಂದಿತ್ತು.

ಕನ್ನಡದ ಕೆಲ ಸಿನಿಮಾ ಹಾಡುಗಳಿಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. 'ಅಕಿರಾ' ಚಿತ್ರದ 'ಎತ್ತಾಕ್ಕೊಂಡ್ ಹೋಯ್ತಾ ಇರೋದೇ' ಮೊದಲ ಸಾಂಗ್. ಮುಂದೆ 'ರಾಜಕುಮಾರ' ಚಿತ್ರದಲ್ಲಿ 'ಅಪ್ಪು ಡ್ಯಾನ್ಸ್ ಡ್ಯಾನ್ಸ್' ಅಂತ ಪವರ್ ಸ್ಟಾರ್‌ನ ಕುಣಿಸಿದ್ದರು. 'ನಟಸಾರ್ವಭೌಮ' ಚಿತ್ರದಲ್ಲಿ 'ಓಪನ್‌ ದ ಬಾಟಲ್' ಸಾಂಗ್‌ಗೆ ಕೊರಿಯೋಗ್ರಫಿ ಮಾಡಿದ್ದರು. ಸೂಪರ್ ಹಿಟ್ 'ರಾರಾ ರಕ್ಕಮ್ಮ' ಸಾಂಗ್‌ಗೂ ಡ್ಯಾನ್ಸ್ ಕಂಪೋಸ್ ಮಾಡಿ ಸಕ್ಸಸ್ ಕಂಡಿದ್ದರು.

More from Filmibeat

English summary
Appu Dance Dance Choreographer Jani Master Accused of Sexual Assault by a Woman;
Read more about: dance tollywood choreographer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X