ನಿರ್ದೇಶಕ ರಾಮ್ ಗೋಪಾಲ್ ವಿರುದ್ಧ ದೂರು ದಾಖಲು!
ಸಿನಿಮಾರಂಗದಲ್ಲಿ ಇರುವ ಹಲವು ವಿವಾದಾತ್ಮಕ ವ್ಯಕ್ತಿಗಳಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಒಬ್ಬರು. ರಾಮ್ ಗೋಪಾಲ್ ವರ್ಮಾ ಆಗಾಗ ಯಾರನ್ನಾದರೂ, ಯಾರ ಬಗ್ಗೆ ಆದರೂ ಕಮೆಂಟ್ ಮಾಡುವ ಮೂಲಕ ಸುದ್ದಿ ಆಗುತ್ತಾ ಇರುತ್ತಾರೆ.
ಆದರೆ ಈ ಬಾರಿ ರಾಮ್ ಗೋಪಾಲ್ ವರ್ಮಾ ಗಂಭೀರ ವಿಚಾರದಲ್ಲಿ ಸುದ್ದಿ ಆಗಿದ್ದಾರೆ. ರಾಮ್ ಗೋಪಾಲ್ ವಿರುದ್ಧ ದೂರು ದಾಖಲಿಸಲಾಗಿದೆ. ಚಿತ್ರ ನಿರ್ಮಾಪಕರಿಂದ ರಾಮ್ ಗೋಪಾಲ್ ಮೇಲೆ ವಂಚನೆ ದೂರು ನೀಡಲಾಗಿದೆ.
ನಿರ್ಮಾಪಕ ಶೇಖರ್ ರಾಜು ಎನ್ನುವವರು, ರಾಮ್ ಗೋಪಾಲ್ ವರ್ಮಾ ಇಂದ ವಂಚನೆ ಆಗಿದೆ ಎಂದು ದೂರು ನೀಡಿದ್ದಾರೆ. ಮಿಯಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಣ ಪಡೆದು RGV ವಂಚನೆ?
ನಿರ್ಮಾಪಕರ ದೂರಿನ ಆಧಾರದ ಮೇಲೆ ಮಿಯಾಪುರ ಪೊಲೀಸರು ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅಲಿಯಾಸ್ ಆರ್‌ಜಿವಿ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ತನ್ನಿಂದ ಹಣ ಪಡೆದು, ಸಿನಿಮಾ ರಿಲೀಸ್‌ಗೂ ಮುನ್ನ ಹಣ ಹಿಂದಿರುಗಿಸುವುದಾಗಿ ಹೇಳಿ, ಈಗ ದುಡ್ಡು ಕೊಡುತ್ತಿಲ್ಲ ಎಂದು ನಿರ್ಮಾಕಪ ಕೆ ಶೇಖರ್ ರಾಜು ಆರೋಪಿಸಿದ್ದಾರೆ.

'ದಿಶಾ' ಚಿತ್ರಕ್ಕಾಗಿ ಕಣ ಪಡೆದಿದ್ದ RGV!
'ದಿಶಾ' ಸಿನಿಮಾವನ್ನು ನಿರ್ದೇಶನ ಮಾಡುವಾಗ ನಿರ್ಮಾಪಕ ಶೇಖರ್ ರಾಜು ಅವರಿಂದ ರಾಮ್ ಗೋಪಾಲ್ ವರ್ಮಾ ಹಣ ಪಡೆದಿದ್ದರಂತೆ. ಸಿನಿಮಾ ರಿಲೀಸ್ ಆಗುವ ಮುನ್ನವೇ, ಈ ಹಣವನ್ನು ಹಿಂದಿರುಗಿಸುವುದಾಗಿ ನಿರ್ಮಾಪಕರಿಗೆ ಮಾತು ಕೊಟ್ಟಿದ್ದರಂತೆ. ಆದರೆ ಇನ್ನು ಆ ಹಣವನ್ನು ಹಿಂದಿರುಗಿಸಿ ಕೊಟ್ಟಿಲ್ಲ ಎಂದು ದೂರು ನೀಡಿದ್ದಾರೆ.

56 ಲಕ್ಷ ಪಡೆದಿದ್ದಾರಂತೆ ರಾಮ್ ಗೋಪಾಲ್ ವರ್ಮಾ!
2020 ರಲ್ಲಿ 'ದಿಶಾ' ಸಿನಿಮಾ ನಿರ್ಮಾಣಕ್ಕಾಗಿ ರಾಮ್ ಗೋಪಾಲ್ ವರ್ಮಾ ತನ್ನ ಬಳಿ 56 ಲಕ್ಷ ಸಾಲ ಪಡೆದಿದ್ದಾರೆ. ಸಾಲ ಪಡೆದು ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ನಿರ್ಮಾಪಕ ಕೆ. ಶೇಖರ್ ರಾಜು. ದಿಶಾ 2019ರ ಹೈದರಾಬಾದ್ ಬಳಿ ಪಶುವೈದ್ಯ ವೈದ್ಯೆ ಮೇಲೆ ನಡೆದ ಅತ್ಯಾಚಾರ ದೌರ್ಜನ್ಯದ ಬಗ್ಗೆ ಕಥೆಯನ್ನು ಒಳಗೊಂಡಿತ್ತು.

4 ಕಂತುಗಳಲ್ಲಿ ಹಣ ಪಡೆದಿರುವ RGV!
ನಿರ್ಮಾಪಕ ಕೆ.ಶೇಖರ್ ರಾಜು ಪ್ರಕಾರ, 2020ರ ಜನವರಿ ಮೊದಲ ವಾರ 8 ಲಕ್ಷ, ಜನವರಿ 22 ರಂದು 20 ಲಕ್ಷ ಹಣವನ್ನು ವರ್ಮಾಗೆ ಚೆಕ್ ಮೂಲಕ ನೀಡಿದ್ದಾರಂತೆ. 6 ತಿಂಗಳಲ್ಲಿ ಹಣ ಹಿಂದಿರುಗಿಸುವುದಾಗಿ ಹೇಳಿದ್ದರಂತೆ ಆರ್‌ಜಿವಿ. ಮತ್ತೆ ಫೆಬ್ರವರಿ 2020 ರಲ್ಲಿ 18 ಲಕ್ಷ ರೂ ಕೇಳಿದ್ದು, ನಿರ್ಮಾಪಕರು 28 ಲಕ್ಷವನ್ನು ಕೊಟ್ಟಿದ್ದಾರಂತೆ. ದಿಶಾ ಚಿತ್ರದ ಬಿಡುಗಡೆಯ ಮೊದಲು ಒಟ್ಟು 56 ಲಕ್ಷ ರೂಪಾಯಿಗಳನ್ನು ಮರುಪಾವುದಾಗಿ ರಾಮ್ ಗೋಪಾಲ್ ವರ್ಮಾ ಹೇಳಿದ್ದರಂತೆ.


Click it and Unblock the Notifications











