ನಟ ಅಲ್ಲು ಅರ್ಜುನ್ ವಿರುದ್ಧ ಎಫ್‌ಐಆರ್

'ಪುಷ್ಪ' ಸಿನಿಮಾದ ಮೂಲಕ ನಟ ಅಲ್ಲು ಅರ್ಜುನ್ ಸ್ಟಾರ್ ಆಗಿದ್ದಾರೆ. ಪ್ಯಾನ್ ಇಂಡಿಯಾ ನಟರಾಗಿ ಹೊರಹೊಮ್ಮಿದ್ದಾರೆ. ದಕ್ಷಿಣ ಭಾರತಕ್ಕೆ ಸೀಮಿತವಾಗಿದ್ದ ತಮ್ಮ ಜನಪ್ರಿಯತೆಯನ್ನು ದೇಶದೆಲ್ಲೆಡೆ ಪಸರಿಸಿದ್ದಾರೆ.

'ಪುಷ್ಪ' ಸಿನಿಮಾ ದೊಡ್ಡ ಹಿಟ್ ಆಗಿದೆ. ಅದಕ್ಕಿಂತಲೂ ದೊಡ್ಡ ಹಿಟ್ ಕೊಡುವ ತಯಾರಿಯಲ್ಲಿದ್ದಾರೆ ಅಲ್ಲು ಅರ್ಜುನ್. ಇದೀಗ 'ಪುಷ್ಪ 2' ಸಿನಿಮಾಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಶುರುವಾಗಲಿದೆ.

ಆದರೆ ಈ ನಡುವೆ ಅಲ್ಲು ಅರ್ಜುನ್‌ಗೆ ಸಂಕಷ್ಟವೊಂದು ಎದುರಾಗಿದೆ. ನಟ ಅಲ್ಲು ಅರ್ಜುನ್ ವಿರುದ್ಧ ಎಫ್‌ಐಆರ್ ಒಂದು ದಾಖಲಾಗಿದೆ. ಅಲ್ಲು ಅರ್ಜುನ್ ನಟಿಸಿದ ಜಾಹೀರಾತೊಂದರ ಕಾರಣವಾಗಿ ಈ ಎಫ್‌ಐಆರ್ ದಾಖಲಾಗಿದೆ.

'ಪುಷ್ಪ' ಸಿನಿಮಾದ ಬಳಿಕ ಅಲ್ಲು ಅರ್ಜುನ್ ಬೇಡಿಕೆ ಗಗನ ಮುಟ್ಟಿದ್ದು, ಸಿನಿಮಾಗಳ ಜೊತೆಗೆ ಸಾಕಷ್ಟು ಜಾಹೀರಾತುಗಳಲ್ಲಿಯೂ ನಟಿಸುತ್ತಿದ್ದಾರೆ. ಇತ್ತಿಚೆಗೆ ಶಿಕ್ಷಣ ಸಂಸ್ಥೆಯೊಂದರ ಜಾಹೀರಾತಿನಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದು, ಈ ಜಾಹೀರಾತಿನಿಂದಾಗಿ ಇದೀಗ ಅವರು ಸಂಷಕ್ಟಕ್ಕೆ ಸಿಲುಕಿದ್ದಾರೆ.

ದೂರು ನೀಡಿರುವ ಉಪೇಂದ್ರ ರೆಡ್ಡಿ

ದೂರು ನೀಡಿರುವ ಉಪೇಂದ್ರ ರೆಡ್ಡಿ

ಶ್ರೀ ಚೈತನ್ಯ ಹೆಸರಿನ ಶಿಕ್ಷಣ ಸಂಸ್ಥೆಯ ಜಾಹೀರಾತಿನಲ್ಲಿ ಅಲ್ಲು ಅರ್ಜುನ್ ಇತ್ತೀಚೆಗೆ ನಟಿಸಿದ್ದರು. ಆದರೆ ಈ ಜಾಹೀರಾತಿನ ವಿರುದ್ಧ ಸಾಮಾಜಿಕ ಕಾರ್ಯಕರ್ತ ಉಪೇಂದ್ರ ರೆಡ್ಡಿ ಎಂಬುವರು ದೂರು ದಾಖಲಿಸಿದ್ದು, 'ಅಲ್ಲು ಅರ್ಜುನ್ ನಟಿಸಿರುವ ಜಾಹೀರಾತಿನಲ್ಲಿ ತಪ್ಪು ಮಾಹಿತಿಗಳನ್ನು ಪ್ರಕಟಿಸಲಾಗಿದೆ. ಹಾಗಾಗಿ ಶಿಕ್ಷಣ ಸಂಸ್ಥೆ ಹಾಗೂ ಅಲ್ಲು ಅರ್ಜುನ್ ವಿರುದ್ಧ ಕ್ರಮ ಕೈಗೊಳ್ಳಬೇಕು'' ಎಂದು ಆರೋಪಿಸಿದ್ದಾರೆ.

ಶಿಕ್ಷಣ ಸಂಸ್ಥೆಯ ಜಾಹೀರಾತಿನಲ್ಲಿ ನಟಿಸಿರುವ ಅಲ್ಲು ಅರ್ಜುನ್

ಶಿಕ್ಷಣ ಸಂಸ್ಥೆಯ ಜಾಹೀರಾತಿನಲ್ಲಿ ನಟಿಸಿರುವ ಅಲ್ಲು ಅರ್ಜುನ್

ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ ಜಾಹೀರಾತಿನಲ್ಲಿ ನಟಿಸಿದ್ದ ಅಲ್ಲು ಅರ್ಜುನ್, ಶಿಕ್ಷಣ ಸಂಸ್ಥೆಯ ಬಗ್ಗೆ ಮಾತನಾಡುತ್ತಾ, ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಂದಿರುವ ರ್ಯಾಂಕುಗಳ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಜಾಹೀರಾತಿನಲ್ಲಿ ಅಲ್ಲು ಅರ್ಜುನ್ ಹೇಳಿರುವ ರ್ಯಾಂಕುಗಳ ಸರಿಯಲ್ಲ. ಅಲ್ಲು ಅರ್ಜುನ್ ತಪ್ಪು ರ್ಯಾಂಕುಗಳನ್ನು ಹೇಳಿದ್ದಾರೆ. ಆ ಮೂಲಕ ತಪ್ಪು ಮಾಹಿತಿಯನ್ನು ಜಾಹೀರಾತಿನ ಮೂಲಕ ನೀಡಿದ್ದಾರೆ ಎಂದು ಉಪೇಂದ್ರ ರೆಡ್ಡಿ ಆರೋಪ ಮಾಡಿದ್ದಾರೆ. ಉಪೇಂದ್ರ ರೆಡ್ಡಿ ದೂರಿನ ಅನ್ವಯ ನಟ ಅಲ್ಲು ಅರ್ಜುನ್ ಹಾಗೂ ಶಿಕ್ಷಣ ಸಂಸ್ಥೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಅಲ್ಲು ಅರ್ಜುನ್‌ಗೆ ನೊಟೀಸ್ ಕಳಿಸಿದ್ದ ಸಜ್ಜನರ್

ಅಲ್ಲು ಅರ್ಜುನ್‌ಗೆ ನೊಟೀಸ್ ಕಳಿಸಿದ್ದ ಸಜ್ಜನರ್

ಇದು ಮಾತ್ರವಲ್ಲ, ಈ ಹಿಂದೆ ರ್ಯಾಪಿಡೋ ಜಾಹೀರಾತಿನಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಾಗಲು ಆ ಬಗ್ಗೆ ವಿವಾದ ಎದ್ದಿತ್ತು. ಅಲ್ಲು ಅರ್ಜುನ್‌ಗೆ ನೊಟೀಸ್ ಸಹ ನೀಡಲಾಗಿತ್ತು. ರ್ಯಾಪಿಡೋ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಅಲ್ಲು ಅರ್ಜುನ್, ಸರ್ಕಾರಿ ಬಸ್ಸುಗಳ ಬಗ್ಗೆ ತುಚ್ಛವಾಗಿ ಮಾತನಾಡಿದ್ದರು. ತೆಲಂಗಾಣ ಸಾರಿಗೆ ಸಂಸ್ಥೆಯ ಮುಖ್ಯಸ್ಥ ವಿಸಿ ಸಜ್ಜನರ್ (ತೆಲಂಗಾಣ ಎನ್‌ಕೌಂಟರ್ ರೂವಾರಿ) ಅಲ್ಲು ಅರ್ಜುನ್‌ಗೆ ನೊಟೀಸ್ ನೀಡಿದ್ದರು. ಸರ್ಕಾರಿ ಸಾರಿಗೆ ಬಗ್ಗೆ ತಪ್ಪು ಮಾಹಿತಿಯನ್ನು ಜನರಿಗೆ ತಲುಪಿಸ ಕಾರ್ಯ ಮಾಡಬಾರದು ಎಂದು ಎಚ್ಚರಿಸಿದ್ದರು.

ಸುಕುಮಾರ್ ನಿರ್ದೇಶನ

ಸುಕುಮಾರ್ ನಿರ್ದೇಶನ

ಅಲ್ಲು ಅರ್ಜುನ್ ಪ್ರಸ್ತುತ 'ಪುಷ್ಪ 2' ಸಿನಿಮಾಕ್ಕೆ ತಯಾರಿ ನಡೆಸಿದ್ದಾರೆ. 'ಪುಷ್ಪ' ಸಿನಿಮಾದ ಮೊದಲ ಭಾಗ ಭರ್ಜರಿ ಹಿಟ್ ಆಗಿದೆ. 'ಪುಷ್ಪ' ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಲುಕ್ ಹೇಗಿರಲಿದೆ ಎಂಬುದು ಶೀಘ್ರದಲ್ಲಿಯೇ ಗೊತ್ತಾಗಲಿದೆ. ಈ ಸಿನಿಮಾವನ್ನೂ ಸಹ ಮೈತ್ರಿ ಮೂವಿ ಮೇಕರ್ಸ್‌ನವರೇ ನಿರ್ಮಾಣ ಮಾಡಲಿದ್ದು, ಸುಕುಮಾರ್ ನಿರ್ದೇಶನ ಮಾಡಲಿದ್ದಾರೆ.

More from Filmibeat

English summary
FIR filled against actor Allu Arjun. Social activist Upendra Reddy gave complaint against Allu Arjun for telling lie in an advertisement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X