ತೆಲುಗಿನ ಮತ್ತೊಂದು ಸ್ಟಾರ್ ಜೋಡಿಯಾದ ವರುಣ್ ತೇಜಾ-ಲಾವಣ್ಯ ತ್ರಿಪಾಠಿ, ಮದುವೆ ಫೋಟೋಗಳು ನೋಡಿ
ತೆಲುಗು ಚಿತ್ರರಂಗದ ಖ್ಯಾತ ತಾರಾ ಜೋಡಿ ವರುಣ್ ತೇಜಾ ಕೊನಿಡೇಲಾ ಮತ್ತು ಲಾವಣ್ಯ ತ್ರಿಪಾಠಿ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಟಲಿಯ ಸುಂದರ ಪಟ್ಟಣವಾದ ಟಸ್ಕಾನಿಯಲ್ಲಿ ತಮ್ಮ ಕುಟುಂಬ ಸದಸ್ಯರು ಮತ್ತು ಕೆಲವೇ ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ನವವಿವಾಹಿತರಾದ ವರುಣ್ ತೇಜಾ ಕೊನಿಡೇಲಾ ಮತ್ತು ಲಾವಣ್ಯ ತ್ರಿಪಾಠಿ ಅವರ ಮೊದಲ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎಲ್ಲರು ಶುಭ ಹಾರೈಕೆಗಳನ್ನು ನೀಡುತ್ತಿದ್ದಾರೆ. ವರುಣ್ ತೇಜಾ ಅವರ ತಂದೆ ನಟ ನಾಗಬಾಬು ಕೊನಿಡೇಲಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್- ಲಾವಣ್ಯ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವರುಣ್ ತೇಜಾ ಕೊನಿಡೇಲಾ ಮತ್ತು ಲಾವಣ್ಯ ತ್ರಿಪಾಠಿ ಅವರ ಮದುವೆಯ ಮೊದಲ ಫೋಟೋದಲ್ಲಿ ನವವಿವಾಹಿತರು ತಮ್ಮ ಮದುವೆಯ ಉಡುಪಿನಲ್ಲಿ ದೇವರಿಗೆ ಕೈ ಮುಗಿಯುತ್ತಿದ್ದಾರೆ. ವಧು ಲಾವಣ್ಯ ತಮ್ಮ ಕಡುಗೆಂಪು ಬಣ್ಣದ ಕಾಂಜೀವರಂ ವಧುವಿನ ರೇಷ್ಮೆ ಸೀರೆಯಲ್ಲಿ ಅಪ್ಸರೆಯಂತೆ ಕಾಣುತ್ತಿದ್ದಾರೆ.
ತುರುಬು ಕಟ್ಟಿ ತಲೆಗೆ ಮಲ್ಲಿಗೆ ಮುಡಿದಿದ್ದಾರೆ. ಭಾರವಾದ ನೆಕ್ಲೇಸ್‌ಗಳು, ಬಳೆಗಳು, ತೋಳುಬಂದಿ, ಸೊಂಟ ಪಟ್ಟಿ, ಸೂರ್ಯ ಮತ್ತು ಚಂದ್ರನ ಆಕಾರದ ಸಾಂಪ್ರದಾಯಿಕ ಒಡವೆಗಳು ಮತ್ತು ಟೆಂಪಲ್ ಡಿಸೈನ್ ಕಿವಿಯೋಲೆ ಧರಿಸಿದ್ದಾರೆ. ವರ ವರುಣ್ ತೇಜಾ ಭಾರವಾದ ಗೋಲ್ಡನ್ ಹ್ಯಾಂಡ್‌ವರ್ಕ್, ಮ್ಯಾಚಿಂಗ್ ಶಾಲು ಮತ್ತು ಪ್ಯಾಂಟ್‌ನೊಂದಿಗೆ ಆಫ್ ವೈಟ್ ಶೆರ್ವಾನಿ ಧರಿಸಿದ್ದಾರೆ.

ಫೋಟೋ ಹಂಚಿಕೊಂಡ ಮೆಗಾ ಸ್ಟಾರ್ ಚಿರಂಜೀವಿ
ಮೆಗಾಸ್ಟಾರ್ ಚಿರಂಜೀವಿ ಕೂಡ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಮದುವೆಯ ಎಲ್ಲಾ ಕಾರ್ಯಗಳಲ್ಲೂ ಮುಂದೆ ಇದ್ದ ನಟ ಚಿರಂಜೀವಿ ಕುಟುಂಬ ಸಮೇತಾ ಮದುವೆಯಲ್ಲಿ ಭಾಗಿಯಾಗಿದ್ದರು. ವರುಣ್ ತೇಜ್ ಕೊನಿಡೇಲಾ ಮತ್ತು ಲಾವಣ್ಯ ತ್ರಿಪಾಠಿ ಜೊತೆಗೆ ಫೋಟೋ ತೆಗೆಸಿಕೊಂಡಿದ್ದು, ಇದರಲ್ಲಿ ಕುಟುಂಬದ ಗಂಡುಮಕ್ಕಳೆಲ್ಲಾ ಸೇರಿದ್ದಾರೆ.
ಚಿರಂಜೀವಿ ಹಂಚಿಕೊಂಡಿರುವ ಫೋಟೋದಲ್ಲಿ ನವವಿವಾಹಿತರಾದ ವರುಣ್ ತೇಜಾ ಕೊನಿಡೇಲಾ ಮತ್ತು ಲಾವಣ್ಯ ತ್ರಿಪಾಠಿ ಜೊತೆಗೆ ಅಲ್ಲು ಅರ್ಜುನ್ , ಪವನ್ ಕಲ್ಯಾಣ್, ರಾಮ್ ಚರಣ್, ನಾಗಬಾಬು ಕೊನಿಡೇಲಾ, ಸಾಯಿ ಧರಮ್ ತೇಜ್, ಅಲ್ಲು ಸಿರೀಶ್, ವೈಷ್ಣವ್ ತೇಜ್ ಕೂಡ ಫೋಟೋಗೆ ಫೋಸ್ ನೀಡಿದ್ದಾರೆ.
ವರುಣ್ ತೇಜ್ ಕೊನಿಡೇಲಾ ಮತ್ತು ಲಾವಣ್ಯ ತ್ರಿಪಾಠಿ ಮದುವೆ
ವರುಣ್ ತೇಜ್ ಕೊನಿಡೇಲಾ ಮತ್ತು ಲಾವಣ್ಯ ತ್ರಿಪಾಠಿ ಅವರ ವಿವಾಹ ಮಹೋತ್ಸವ ಹೈದರಾಬಾದ್‌ನಲ್ಲಿಯೇ ಆರಂಭವಾಗಿತ್ತು. ಈ ಜೋಡಿ ಕೆಲವು ದಿನಗಳ ಹಿಂದೆ ತಮ್ಮ ಇಡೀ ಕುಟುಂಬ ಮತ್ತು ಕೆಲವು ಅತಿಥಿಗಳೊಂದಿಗೆ ಇಟಲಿಯ ಟಸ್ಕನಿಗೆ ಹೋಗಿತ್ತು. ಟಸ್ಕಾನಿಯಲ್ಲಿ ಕಾಕ್ಟೈಲ್ ಪಾರ್ಟಿಗಳು, ಹಳದಿ ಮತ್ತು ಮೆಹೆಂದಿ ಸಮಾರಂಭಗಳು ನಡೆದವು.
ಇನ್ನು, ಇಟಿಲಿಯ ಕಾರ್ಯಕ್ರಮಗಳು ಮುಗಿದ ಬಳಿಕ ಈ ದಂಪತಿ ತಮ್ಮ ಚಿತ್ರರಂಗದ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗಾಗಿ ಹೈದರಾಬಾದ್‌ನಲ್ಲಿ ಅದ್ಧೂರಿ ವಿವಾಹದ ಆರತಕ್ಷತೆಯನ್ನು ಆಯೋಜಿಸಲು ಯೋಜಿಸುತ್ತಿದ್ದಾರೆ. ನವೆಂಬರ್ 5ರ ಭಾನುವಾರದಂದು ಆರತಕ್ಷತೆ ನಡೆಯಲಿದೆ ಎಂದು ವರದಿಗಳಿವೆ.


Click it and Unblock the Notifications











