"ಪ್ರಭಾಸ್ ಸಿನಿಮಾ ಬಂದ್ರೆ ಥಿಯೇಟರ್‌ಗೆ ಹೋಗಿ ಪುಸ್ತಕಗಳನ್ನು ಹರಿದು ಹಾಕುತ್ತಿದ್ದೆ"; ಈ ಜಾನಪದ ಕಲಾವಿದೆ ಹೀಗ್ಯಾಕಂದ್ರು?
ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ಜಾನಪದ ನೃತ್ಯ ಕಲಾವಿದೆ ನಾಗದುರ್ಗ ಸದಾ ಸುದ್ದಿಯಲ್ಲಿರುತ್ತಾರೆ. ಅವರೀಗ ಬಿಗ್ ಬಾಸ್ ತೆಲುಗು ಸೀಸನ್ 9ರ ಸ್ಪರ್ಧಿಯಾಗಿ ಸ್ಪರ್ಧಿಸುವ ಸಾಧ್ಯತೆ ಕೂಡ ಇದೆ. ಸೆಪ್ಟೆಂಬರ್ 7ರಂದು ಪ್ರಾರಂಭವಾಗಲಿರುವ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಈಗಾಗಲೇ ಅವರನ್ನು ಅವರನ್ನು ಸಂಪರ್ಕಿಸಿವೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ನಾಗ ದುರ್ಗ ಅವರ ಮೆಚ್ಚಿನ ನಾಯಕ ಪ್ರಭಾಸ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹೊರ ಹಾಕಿದ್ದಾರೆ.
ನಾಗದುರ್ಗ ಸಾಮಾಜಿಕ ಜಾಲತಾಣಗಳಲ್ಲಿ ಜನಪದ ಗೀತೆಗಳು ಹಾಗೂ ನೃತ್ಯಗಳ ಮೂಲಕ ಜನಪ್ರಿಯರಾಗಿದ್ದಾರೆ. "ತಿನ್ನತಿರಮ್ ಪಡತಳೆ", "ಎರ್ರಾ ಎರ್ರಾ ರುಮಾಲ್ ಕಟ್ಟಿ", "ದಾರಿಪೊಂಟತ್ತುಂಡು", "ನಾ ಪೆರೇ ಎಲ್ಲಮ್ಮ" ಮುಂತಾದ ಹಾಡುಗಳ ಮೂಲಕ ತೆಲುಗು ರಾಜ್ಯಗಳಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ನಾಗದುರ್ಗ ನಾಲ್ಕನೇ ವಯಸ್ಸಿನಲ್ಲಿ ಕೂಚಿಪುಡಿ ಮತ್ತು 14ನೇ ವಯಸ್ಸಿನಲ್ಲಿ ಪೆರಿಣಿ ನೃತ್ಯ ಕಲಿತು, ದೇಶಾದ್ಯಂತ ಪ್ರದರ್ಶನಗಳನ್ನು ನೀಡಿದ್ದಾರೆ. ತಮ್ಮ ಸ್ವಂತ ಸ್ಥಳ ನಲ್ಗೊಂಡದಲ್ಲಿ "ನಾಗದುರ್ಗ ನೃತ್ಯಾಲಯ"ವನ್ನು ಸ್ಥಾಪಿಸಿ ಮಕ್ಕಳಿಗೆ ನೃತ್ಯ ತರಬೇತಿ ನೀಡುತ್ತಿದ್ದಾರೆ.

"ತಿನ್ನತಿರಮ್ ಪಡತಳೆ" ಹಾಡು ನಾಗದುರ್ಗ ಅವರಿಗೆ ಯೂಟ್ಯೂಬ್‌ನಲ್ಲಿ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಇದರಿಂದ ಸಾಕಷ್ಟು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿವೆ. ವಿವಿಧ ಟಿವಿ ಚಾನೆಲ್‌ಗಳಲ್ಲಿ ಡ್ಯಾನ್ಸ್ ಮಾಡಿ ಸ್ಟಾರ್‌ಡಮ್ ಗಳಿಸಿದರು. ಹಲವಾರು ಚಲನಚಿತ್ರಗಳಲ್ಲಿ ಅವಕಾಶಗಳು ಬಂದರೂ, ನಾನಾ ಕಾರಣಗಳಿಂದ ಅವುಗಳನ್ನು ತಿರಸ್ಕರಿಸಿದರು. ನೃತ್ಯದಲ್ಲಿ ಡಾಕ್ಟರೇಟ್ ಪಡೆಯುವುದು ತಮ್ಮ ಕನಸು ಎಂದು ನಾಗದುರ್ಗ ಹೇಳಿದ್ದಾರೆ. ಆ ನಂತರವಷ್ಟೇ ಸಿನಿಮಾಗಳ ಬಗ್ಗೆ ಯೋಚಿಸುವುದಾಗಿ ಅವರು ತಿಳಿಸಿದ್ದಾರೆ.
ಪ್ರಭಾಸ್ ಕುರಿತಂತೆ ತಮ್ಮ ಅಭಿಮಾನದ ಬಗ್ಗೆ ಮಾತನಾಡಿದ ನಾಗದುರ್ಗ, "ನನಗೆ ಪ್ರಭಾಸ್ ಅಂದರೆ ಬಹಳ ಇಷ್ಟ. ಅವರ ಸಿನಿಮಾ ಬಂದರೆ ಸಾಕು, ಥಿಯೇಟರ್‌ಗೆ ಪುಸ್ತಕ ತೆಗೆದುಕೊಂಡು ಹೋಗಿ ಅದನ್ನು ಹರಿದು ಪರದೆಗೆ ಎಸೆಯುತ್ತಿದ್ದೆ. ನನ್ನ ಬಾಲ್ಯದಲ್ಲಿ ನಲ್ಗೊಂಡದಲ್ಲಿ ಗಣೇಶ ಮೂರ್ತಿಗಳನ್ನು ಇಟ್ಟು ಹಬ್ಬ ಮಾಡುತ್ತಿದ್ದೆವು. ಆಗ ನಾನು ನಾಲ್ಕನೇ ತರಗತಿಯಲ್ಲಿದ್ದೆ. ಅಲ್ಲಿ ಗಣೇಶ ವಿಗ್ರಹಗಳನ್ನು ಇಡುವವರೆಲ್ಲರೂ ಪ್ರಭಾಸ್ ಅಭಿಮಾನಿಗಳು. ಅವರಿಂದಲೇ ನನಗೆ ಪ್ರಭಾಸ್ ಮೇಲಿನ ಹುಚ್ಚು ಹಿಡಿದಿದೆ." ಎಂದು ಹೇಳಿದ್ದಾರೆ.
"ಅದಾಗಲೇ ನಾನು ಜಾನಪದ ನೃತ್ಯ ಮಾಡುತ್ತಿದ್ದೆ. ಆದರೆ ಪ್ರಭಾಸ್ ಅಭಿಮಾನಿಗಳು ನನ್ನಿಂದ ಪ್ರಭಾಸ್ ಹಾಡುಗಳಿಗೆ ನೃತ್ಯ ಮಾಡಿಸುತ್ತಿದ್ದರು. ನಾನು ಬೇರೆ ಯಾವುದೇ ಹಾಡಿಗೆ ನೃತ್ಯ ಮಾಡುತ್ತಿರಲಿಲ್ಲ. ಪ್ರಭಾಸ್ ಹಾಡುಗಳಿಗೆ ಒಪ್ಪಿಕೊಳ್ಳುತ್ತಿದ್ದೆ" ಎಂದು ನಾಗದುರ್ಗ ನೆನಪಿಸಿಕೊಂಡಿದ್ದಾರೆ. ಆ ಪ್ರಭಾಸ್ ಅಭಿಮಾನಿಗಳು ಆಡಿಯೋ ಲಾಂಚ್‌ಗಳಿಗೆ ಹೋದಾಗ ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದರು. ಚಿತ್ರ ಬಿಡುಗಡೆಯಾದ ಎರಡನೇ ದಿನ ನನಗೆ ಟಿಕೆಟ್ ಕೊಡುತ್ತಿದ್ದರು. ಪ್ರಭಾಸ್ ಟಿ-ಶರ್ಟ್‌ಗಳು, ಕಾರ್ಡ್‌ಗಳು ಮತ್ತು ಪೋಸ್ಟರ್‌ಗಳನ್ನು ಕೊಡುತ್ತಿದ್ದರು ಎಂದು ವಿವರಿಸಿದರು.
"ಆ ವಸ್ತುಗಳನ್ನು ನಾನು ಶಾಲೆಗೆ ತೆಗೆದುಕೊಂಡು ಹೋಗಿ ಸ್ನೇಹಿತರಿಗೆ ಕೊಡುತ್ತಿದ್ದೆ. ಹೊಸ ವರ್ಷಕ್ಕೆ ಗ್ರೀಟಿಂಗ್ ಕಾರ್ಡ್‌ಗಳ ಬದಲಿಗೆ ದೊಡ್ಡ ಪೋಸ್ಟರ್‌ಗಳನ್ನು ಕೊಡುತ್ತಿದ್ದೆ. ಹತ್ತನೇ ತರಗತಿ ತನಕ ನನ್ನ ರೂಮ್ ತುಂಬ ಪ್ರಭಾಸ್ ಪೋಸ್ಟರ್‌ಗಳೇ ಇರುತ್ತಿದ್ದವು. 'ರೆಬೆಲ್' ಸಿನಿಮಾ ಬಿಡುಗಡೆಯಾದ ನಂತರ ಪ್ರಭಾಸ್ ಔಟ್‌ಫಿಟ್‌ಗಳು ಬಿಡುಗಡೆಯಾಗುತ್ತಿದ್ದವು. ನಾನು ಅವುಗಳನ್ನು ಧರಿಸುವುದಲ್ಲದೆ, ಬೇರೆಯವರಿಗೆ ಕೊಂಡುಕೊಟ್ಟು ಅವರು ಧರಿಸುವುದನ್ನು ನೋಡಿ ಸಂತೋಷಪಡುತ್ತಿದ್ದೆ" ಎಂದು ನಾಗದುರ್ಗ ಪ್ರಭಾಸ್ ಮೇಲಿನ ತಮ್ಮ ಅಭಿಮಾನವನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











